June 9, 2026

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

ಸುಳ್ಯ : ಆಲೆಟ್ಟಿ ಗ್ರಾಮದ ಕೋಲ್ಚಾರ್ ಪೈಂಬಚಾಲ್ ಸಮೀಪದ ತೋಟಕೊಚ್ಚಿ ಎಂಬಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮೃತ ವ್ಯಕ್ತಿಯನ್ನು ಪೈಂಬಚಾಲ್ ತೋಟಕೊಚ್ಚಿ ನಿವಾಸಿ ಮಹಮ್ಮದ್ ಶರೀಫ್ (35) ಎಂದು ಗುರುತಿಸಲಾಗಿದೆ.ವಿದ್ಯುತ್ ಕಂಬಕ್ಕೆ ಮರ ಬಿದ್ದ ಪರಿಣಾಮ ಲೈನ್ ಆಫ್ ಮಾಡಲು ಹೋಗುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ದಾರುಣವಾಗಿ ಮೃತಪಟ್ಟರು ಎಂದು ತಿಳಿದು ಬಂದಿದೆ‌.ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಶರೀಫ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ […]

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು Read More »

ಸುಳ್ಯ : ಟಿಬಿ ನಿರ್ಮೂಲನೆ ಮುಟ್ಟಿನ ನೈರ್ಮಲ್ಯ ದಿನ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕುರಿತು ಮಾಹಿತಿ ಕಾರ್ಯಗಾರ

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸುಳ್ಯ ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜೂ.8ರಂದುಟಿಬಿ ನಿರ್ಮೂಲನೆ ಮುಟ್ಟಿನ ನೈರ್ಮಲ್ಯ ದಿನ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕುರಿತು ಮಾಹಿತಿ ಕಾರ್ಯಗಾರ ತಾಲೂಕು ಪಂಚಾಯತ್ ಸಭಾಂಗಣ ಸುಳ್ಯದಲ್ಲಿನಡೆಯಿತು.ತಾಲೂಕು ಪಂಚಾಯತ್ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಅಧ್ಯಕ್ಷತೆಯನ್ನು ವಹಿಸಿದ್ದರು‌ಪಯಸ್ವಿನಿ ಸಂಜೀವಿನಿ

ಸುಳ್ಯ : ಟಿಬಿ ನಿರ್ಮೂಲನೆ ಮುಟ್ಟಿನ ನೈರ್ಮಲ್ಯ ದಿನ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕುರಿತು ಮಾಹಿತಿ ಕಾರ್ಯಗಾರ Read More »

ಅರಂತೋಡು : ನೂತನ ಮದರಸಕ್ಕೆ ಶಿಲಾನ್ಯಾಸ ಮತ್ತು ಮಸೀದಿಯ ಮೇಲಂತಸ್ತು ಕಟ್ಟಡಕ್ಕೆ ಜಿಪ್ರಿ ತಂಙಳ್ ರಿಂದ ಶಂಕುಸ್ಥಾಪನೆ

ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಮೇಲಂತಸ್ತು ನಿರ್ಮಾಣ ಕಾಮಗಾರಿಗೆ ಮತ್ತು ನುಸ್ರತುಲ್ ಇಸ್ಲಾಂ ಮದರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜೂ.9 ರಂದು ಸಮಸ್ತ ಕೇರಳ ಜಂಇತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಪ್ರಿ ಮುತ್ತುಕೊಯ ತಂಙಳ್ ನೆರವೇರಿಸಿದರು. ಅವರು ಮಾತನಾಡಿ ಕಟ್ಟಡಕ್ಕೆ ವಸ್ತು ರೂಪದಲ್ಲಿ, ಹಣದ ರೂಪದಲ್ಲಿ ಸಹಾಯ, ಸಹಕಾರ ನೀಡಿದ ದಾನಿಗಳನ್ನು, ವಕ್ಪ್ ಇಲಾಖೆಯನ್ನು  ಮತ್ತು ಅನುದಾನ ತರಿಸಿದ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಅಭಿನಂಧಿಸಿ ವಿಶೇಷ ದುವಾ ಮಾಡಿದರು.

ಅರಂತೋಡು : ನೂತನ ಮದರಸಕ್ಕೆ ಶಿಲಾನ್ಯಾಸ ಮತ್ತು ಮಸೀದಿಯ ಮೇಲಂತಸ್ತು ಕಟ್ಟಡಕ್ಕೆ ಜಿಪ್ರಿ ತಂಙಳ್ ರಿಂದ ಶಂಕುಸ್ಥಾಪನೆ Read More »

ಪಿಕಪ್ – ಸ್ಕೂಟರ್ ಭೀಕರ ಅಪಘಾತ ; ಇಬ್ಬರು ಸಾವು

ಬೆಳ್ತಂಗಡಿ ತಾಲೂಕಿನ ಬಳ್ಳಮಂಜ-ಪಣಕಜೆ ರಸ್ತೆಯ ಪಾಲ್ಯರದಲ್ಲಿ ನಿನ್ನೆ ಸಂಜೆ ಪಿಕಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಕ್ಟಿವಾ ಸವಾರ ಡಾಕಯ್ಯ ಗೌಡ ಹಾಗೂ ಹಿಂಬದಿ ಸವಾರ ಚಂದಪ್ಪ ಮೂಲ್ಯ ಅವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಕಪ್ – ಸ್ಕೂಟರ್ ಭೀಕರ ಅಪಘಾತ ; ಇಬ್ಬರು ಸಾವು Read More »

ಮಹಿಳೆಯರಿಗೆ ಹಲಸು,ಮಾವು,ಗೇರು ಉತ್ಪನ್ನಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ

ಜೂ. 12ರಿಂದ 14ರ ವರೆಗೆ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರಲ್ಲಿ ನಡೆಯಲಿರುವ ಮಾವು ಮತ್ತು ಹಲಸು ಮೇಳದಲ್ಲಿ ಜೂ.14 ಆದಿತ್ಯವಾರ ಅಪರಾಹ್ನ 3 ರಿಂದ 4ರ ವರೆಗೆ ಮಹಿಳೆಯರಿಗಾಗಿ ಹಲಸು, ಮಾವು, ಗೇರು ಉತ್ಪನ್ನಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಭಾಗವಹಿಸುವ ಮಹಿಳೆಯರು ಜೂ. 11ರ ಸಂಜೆಯೊಳಗೆ ತಮ್ಮ ಹೆಸರನ್ನು ಸುಳ್ಯ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಹರೀಶ್ ಕೊಡಿಯಾಲರವರಲ್ಲಿ ( ಮೊ : 9740507219) ನೀಡಬೇಕಾಗಿ ಸಂಘಟಕರು ತಿಳಿಸಿದ್ದಾರೆ.

ಮಹಿಳೆಯರಿಗೆ ಹಲಸು,ಮಾವು,ಗೇರು ಉತ್ಪನ್ನಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ Read More »

ಅಡ್ತಲೆ ಪರಮೇಶ್ವರ ಗೌಡ ನಿಧನ

ಅಡ್ತಲೆ ಕುಟುಂಬದ ಹಿರಿಯರು,ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಅಡ್ತಲೆ ಪರಮೇಶ್ವರ ಗೌಡ(70 ವರ್ಷ) ಜೂ.9ರಂದು ಬೆಳಗ್ಗೆ 7.30 ಸುಮಾರಿಗೆ ಅಸೌಖ್ಯದಿಂದ ನಿಧನರಾದರು‌.ಮ್ರತರು ಪತ್ನಿ ಒಂದು ಗಂಡು,ಒಂದು ಹೆಣ್ಣು ಮಕ್ಕಳನ್ನು ಕುಟುಂಬಸ್ಥರನ್ನು,ಬಂಧು,ಬಳಗವನ್ನು,ಅಗಲಿದ್ದಾರೆ‌.

ಅಡ್ತಲೆ ಪರಮೇಶ್ವರ ಗೌಡ ನಿಧನ Read More »

ಅರಂತೋಡು : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿ!

ಅರಂತೋಡು ಗ್ರಾಮದ ಬಿಳಿಯಾರು ಮಾಣಿ ಮೈಸೂರು ರಸ್ತೆಯಲ್ಲಿ ಜೂ.9ರಂದು ಬೆಳಿಗ್ಗೆ ಬೈಕೊಂದಕ್ಕೆ ಕಾರು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ವರದಿಯಾಗಿದೆ.ವೇಗವಾಗಿ ಬಂದ ಇನೋವಾ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಢಿಕ್ಕಿಯ ಪರಿಣಾಮ ಬೈಕ್‌ ಸವಾರ ರಸ್ತೆಗಪ್ಪಳಿಸಿ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡು : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿ! Read More »

error: Content is protected !!
Scroll to Top