February 2023

ಸಂಪಾಜೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಸಂಪಾಜೆ ಗ್ರಾಮದ ನೆಲ್ಲಿಕುಮೆರಿ ಎಂಬಲ್ಲಿ ಬಳಿ ವಿದ್ಯುತ್ ಸಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡು ಎರಡು ತೆಂಗಿನ‌ ಮರಗಳು ಸುಟ್ಟು ಹೋದ ಘಟನೆ ಫೆ.27 ರಂದು ನಡೆದಿದೆ.ನೆಲ್ಲಿಕುಮೇರಿಯ ದೈವಸ್ಥಾನದ ಗೋಡನ್ ಪಕ್ಕ ಇದ್ದ ತೆಂಗಿನ ಮರಗಳಿಗೆ ಬೆಂಕಿ‌ ಹತ್ತಿಕೊಂಡಿತ್ತು.ಬಳಿಕ‌ ಸ್ಥಳೀಯರು ಸೇರಿ ಬೆಂಕಿ ನಂದಿಸಿದರು.ಇದರಿಂದ ಮುಂದೆ ನಡೆಯಬಹುದಾದ ಅನಾಹುತ ತಪ್ಪಿದೆ.

ಸಂಪಾಜೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ Read More »

ಪುಸ್ತಕಗಳನ್ನು ಕೊಂಡು ಓದಿ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಇಲ್ಲಿಯ ಸ್ವಾಮಿಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 191 ಕೃತಿ ಮಾಲೆ ಸತ್ಯಮೇವ ಜಯತೇ ಇದರ ಬಿಡುಗಡೆ ಕಾರ್ಯಕ್ರಮ ಆಶ್ರಮದಲ್ಲಿ ನಡೆಯಿತು.ಇಂಜಿನಿಯರ್ ಭರತ್ .ಪಿ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಎಲ್ಲಾರು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು.ನಾನು ಪುಸ್ತಕ ಓದುತ್ತೇನೆ.ಪುಸ್ತಕ ಓದಿದ ತಕ್ಷಣ ಸತ್ಯ ಎಂದು ತಿಳಿದುಕೊಳ್ಳಬಾರದು ನಾವು ಅದನ್ನು ವಿಮರ್ಶೆ ಮಾಡಬೇಕೆಂದು ಹೇಳಿದರು.ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.ಡಾಕ್ಟರ್ ಸಾಯಿ ಗೀತಾ ಮಾತನಾಡಿ ನಾವು ಸಮಾಜದಲ್ಲಿಯ

ಪುಸ್ತಕಗಳನ್ನು ಕೊಂಡು ಓದಿ Read More »

ಹೃದಯಘಾತದಿಂದ ನವ ವಿವಾಹಿತ ಸಾವು

ಕಡಬ ತಾಲೂಕಿನ ನರಿಮೊಗರು ಗ್ರಾಮದ ಧರ್ಮನಗರ ನಿವಾಸಿ ಬೆಂಗಳೂರು ಗ್ಲೋಬಲ್ ಲಿಫ್ಟ್ ಸರ್ವಿಸ್ ಕಂಪೆನಿಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ( 30) ವಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ .ಮೃತ ಸುರೇಶ್ ಅವರು 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು . ಮೃತರು ಪತ್ನಿ ಶಾರದಾ , ತಂದೆ ಗುರುವಪ್ಪ , ತಾಯಿ ಜಾನಕಿ ಸಹೋದರರಾದ ಸುರೇಂದ್ರ ಹಾಗೂ ಸಂದೇಶ್ ಅವರನ್ನು ಅಗಲಿದ್ದಾರೆ.

ಹೃದಯಘಾತದಿಂದ ನವ ವಿವಾಹಿತ ಸಾವು Read More »

ಸರ್ವ ಧರ್ಮ ಸಮ್ಮೇಳನ

ಅರಂತೋಡು, ಫೆ. 21: ಪೇರಡ್ಕದ ವಲಿಯುಲ್ಲಾಹಿ ದರ್ಗಾಶರೀಫ್‌ನ ಉರೂಸ್ ಕಾರ್ಯಕ್ರಮದ ಅಂಗವಾಗಿ ಸರ್ವ ಧರ್ಮ ಸಮ್ಮೇಳನ ನಡೆಯಿತು.ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು.ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ರಿಯಾಝ್ ಫೈಝಿ ದುಃವಾ ನೆರವೇರಿಸಿದರು.ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಸೇವಿಯರ್ ಚರ್ಚ್‌ನ ಧರ್ಮಗುರು ಫಾ.ಫೌಲ್ ಕ್ರಾಸ್ತಾ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ್, ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ, ಕೆ.ವಿ.ಜಿ ಆಯುರ್ವೇದ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ, ಪೇರಡ್ಕ ಜುಮ್ಮಾ ಮಸ್ಜಿದ್

ಸರ್ವ ಧರ್ಮ ಸಮ್ಮೇಳನ Read More »

ತೊಡಿಕಾನದಲ್ಲಿ ಗ್ರಾಮ ವಾಸ್ತವ್ಯ

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡುವುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶವಾಗಿದೆ ಎಂದು ಸುಳ್ಯ ಪ್ರಭಾರ ತಹಶೀಲ್ದಾರ್ ಮಂಜುನಾಥ್ ಹೇಳಿದರು ಅವರು ತಾಲೂಕು ಆಡಳಿತ ಸುಳ್ಯ ಇದರ ನೇತೃತ್ವದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ನಡೆದ ವಿವಿಧ ಇಲಾಖೆಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರತಿಯೊಂದು‌ ಇಲಾಖೆಯ ಅಧಿಕಾರಿಗಳು ಹಾಜರಿರುತ್ತಾರೆ.ಸಂಬಂಧಪಟ್ಟ ಇಲಾಖೆಯ ಸೌಲಭ್ಯಗಳನ್ನು ಸ್ಥಳದಲ್ಲಿ ಪಡೆದುಕೊಳ್ಳಬಹುದು ಮತ್ತು ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಹರಿಸಿಕೊಳ್ಳಬಹುದೆಂದು ಅವರು ಹೇಳಿದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ

ತೊಡಿಕಾನದಲ್ಲಿ ಗ್ರಾಮ ವಾಸ್ತವ್ಯ Read More »

ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಅಗತ್ಯ ಇದೆ

ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸಿ ನಾವು ಒಗ್ಗಟ್ಟಾಗುವ ಅಗತ್ಯ ಇದೆ.ನಮ್ಮ ಮೂಲವನ್ನು ನಾವು ಯಾವತ್ತು ಮರೆಯಬಾರದೆಂದು ನಿವೃತ್ತ ಶಿಕ್ಷಕ ದೇವಯ್ಯ ಮಾಸ್ತರ್ ಉಳುವಾರು ಹೇಳಿದರು.ಅವರು ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ತೊಡಿಕಾನ ಗ್ರಾಮ ಸಮಿತಿಯಿಂದ ಇದರ ಹತ್ತು ಕುಟುಂಬ ಹದಿನೆಂಟು ಗೊತ್ರದ ವ್ಯಾಪ್ತಿಗೆ ಒಳಪ್ಟ 8 ನೇ ವರ್ಷದ ಗ್ರಾಮ ಮಟ್ಟದ ಕ್ರಿಡೋತ್ಸವನ್ನು ತೊಡಿಕಾನ ಸರಕಾರಿ ಹಿರಿಯಶಾಲಾ ವಠಾರದಲ್ಲಿ ಉದ್ಘಾಟಿಸಿ ಮಾತನಾಡಿದರುಹಿರಿಯರಾದ ನಾಗಪ್ಪ ಗೌಡ ಬಾಳಕಜೆ ಮಾತನಾಡಿ ನಮ್ಮ ಗೌಡರ ಮೂಲ ಸಂಪ್ರದಾಯಗಳನ್ನು ನಾವು

ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಅಗತ್ಯ ಇದೆ Read More »

error: Content is protected !!
Scroll to Top