ಪ್ರಚಲಿತ

ಶಾಲಾ ಬಸ್‌ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯ ಬರಿಮಾರು ಸಮೀಪ ಕಲ್ಲಡ್ಕ ಶ್ರೀರಾಮ ಶಾಲೆಯ ಬಸ್‌ ಮೇಲೆ ಬೃಹತ್ ಮರ ಬಿದ್ದು ಐದು ವರ್ಷದ ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ದಾರುಣವಾಗಿ ಮೃತಪಟ್ಟಿದ್ದಾಳೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಆಕಸ್ಮಿಕ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಘಟನೆಯಲ್ಲಿ ಮತ್ತಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಿಳಿಯೂರಿನ ತೋಟ ನಿವಾಸಿ ನಿವಾಸಿ ಚಂದ್ರಹಾಸ್ ಎಂಬವರ ಪುತ್ರಿ ಎಲ್ […]

ಶಾಲಾ ಬಸ್‌ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ಸಾವು Read More »

ಭಾರೀ ಮಳೆ ಸಾಧ್ಯತೆ; ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ,ಪಿಯುಗೆ ರಜೆ

ಭಾರತೀಯ ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಜು.23 ರಂದು ಅಂಗನವಾಡಿ ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಘೋಷಣೆ ಮಾಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಸಾಧ್ಯತೆ; ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ,ಪಿಯುಗೆ ರಜೆ Read More »

ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ ಕಾರ್ಯಕ್ರಮ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಜು. 22 ರಂದು ನಡೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ” ಆಟಿ ಆಚರಣೆಯಿಂದ ಹಿಂದಿನ ಜೀವನದ ಅನುಭವವನ್ನು ಮತ್ತೆ ನೆನಪಿಸಿದಂತಾಗುದೆ.ನಮ್ಮ ಹಿರಿಯರು ಮಾಡುವ ಕಾರ್ಯ ಮೂಢನಂಬಿಕೆಯಲ್ಲ. ಮೂಲ ನಂಬಿಕೆಯಾಗಿದ್ದು, ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳುವುದು ಅಗತ್ಯ” ಎಂದರು. ಸಾಮಾಜಿಕ ಪಿಡುಗಾದ ಲಂಚ ಭ್ರಷ್ಟಾಚಾರವನ್ನು ನಾವೆಲ್ಲರೂ ಸೇರಿ ನಿರ್ಮೂಲನೆ ಮಾಡೋಣ. ನನ್ನಲ್ಲಿಗೆ

ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ Read More »

ಅರಂತೋಡು ಎರಡನೇ ವಾರ್ಡ್ ನಲ್ಲಿ ವೇಗ ಪಡೆದುಕೊಂಡ ಎಸ್.ಐ.ಆರ್ ಪ್ರಕಿಯೆ

ಅರಂತೋಡು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಎಸ್.ಐ.ಆರ್ ಪ್ರಕಿಯೆ ಬಿರುಸುನಿಂದ ಸಾಗುತ್ತಿದ್ದು ಅರಂತೋಡು ಎರಡನೇ ವಾರ್ಡಿನಲ್ಲಿ ಎಸ್.ಐ.ಆರ್ ಪ್ರಕಿಯೆ ಶೇ.97ರಷ್ಟು ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ.ಬಿ.ಎಲ್.ಒ ಹೊನ್ನಮ್ಮ,ಬಿ.ಎಲ್.ಎ ಬಾಲಕೃಷ್ಣ ರೈಎರಡನೇ ವಾರ್ಡಿನಲ್ಲಿ ಸಹಕರಿಸುತ್ತಿದ್ದಾರೆ.

ಅರಂತೋಡು ಎರಡನೇ ವಾರ್ಡ್ ನಲ್ಲಿ ವೇಗ ಪಡೆದುಕೊಂಡ ಎಸ್.ಐ.ಆರ್ ಪ್ರಕಿಯೆ Read More »

ಬನ್ನಡ್ಕದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ತಾತ್ವಿಕ ಒಪ್ಪಿಗೆ:ಸಂಸದ ಕ್ಯಾ.ಚೌಟ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು-ಬಿಕರ್ನಕಟ್ಟೆಯವರೆಗಿನ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಇದೀಗ ಬನ್ನಡ್ಕ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ 5.83 ಕೋಟಿ ರೂ. ವೆಚ್ಚದ ಇತರ ಕಾಮಗಾರಿಗಳಿಗೆ ಹೆದ್ದಾರಿ ಪ್ರಾಧಿಕಾರವು ತಾತ್ವಿಕ ಅನುಮೋದನೆ ನೀಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳ ಮನವಿಗೆ ಸ್ಪಂದಿಸಿ, ಬನ್ನಡ್ಕ ಪ್ರದೇಶದಲ್ಲಿ ಕೈಬಿಡಲಾಗಿದ್ದ ಸರ್ವೀಸ್ ರಸ್ತೆ ಹಾಗೂ ವಾಮಂಜೂರು ಜಂಕ್ಷನ್ ಬಳಿ ನೂತನ ಪಾದಚಾರಿ ಮೇಲ್ಸೇತುವೆ (Foot Over Bridge) ನಿರ್ಮಾಣಕ್ಕೆ ಈಗಾಗಲೇ

ಬನ್ನಡ್ಕದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ತಾತ್ವಿಕ ಒಪ್ಪಿಗೆ:ಸಂಸದ ಕ್ಯಾ.ಚೌಟ Read More »

ನಾಳೆ (ಜು.22): ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಜು. 22 ರಂದು ನಡೆಯಲಿರುವುದು. ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಆಟಿ ಮತ್ತು ಪತ್ರಿಕಾ ದಿನದ ಕುರಿತು ವಿಶೇಷ ಉಪನ್ಯಾಸ ಮಾಡಲಿರುವರು.ಕೆಜೆಯು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಅಶೋಕ್ ಪ್ರಭು, ಕೆಜೆಯು ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ರಂಗಮಯೂರಿ ಕಲಾ

ನಾಳೆ (ಜು.22): ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ Read More »

ಅಜ್ಜಾವರ : ಶಾಲಾ ಶತಮಾನೋತ್ಸವ ಆಚರಣೆಯ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಶತಮಾನೋತ್ಸವ ಆಚರಣೆಯ ಪ್ರಾರಂಭೋತ್ಸವದ ಕರೆಯೋಲೆಯನ್ನು ಜುಲೈ 20 ರಂದು ಬಿಡುಗಡೆಗೊಳಿಸಲಾಯಿತು.ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎ.ಭಾಸ್ಕರ ರಾವ್ ಬಯಂಬು,ಉಪಾಧ್ಯಕ್ಷರುಗಳಾದ ಶಿವರಾಮ ನಾರ್ಕೋಡು, ಅಬ್ದುಲ್ಲ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಲೋಕಯ್ಯ ಮಾಸ್ತರ್‌ ಅತ್ಯಾಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಎ. ಪಿ ಬಶೀರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೆಳ್ಯಪ್ಪ ಗೌಡ ಮುಡೂರು, ಸ. ಹಿ. ಪ್ರಾ ಶಾಲೆ

ಅಜ್ಜಾವರ : ಶಾಲಾ ಶತಮಾನೋತ್ಸವ ಆಚರಣೆಯ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿನಿಲಯಕ್ಕೆ ಪುಸ್ತಕ ವಿತರಣೆ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿ ನಿಲಯ ಅಡ್ಕಾರ್ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಜುಲೈ 18ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೊಂಟಡ್ಕ ವಹಿಸಿದ್ದರು. ಜೇಸಿಐ ಭಾರತ ವಲಯ 15, ನೇತ್ರಾವತಿ (ರಿಜನ್ -ಬಿ) ಇದರ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಜಿತೇಶ್ ಪಿರೆರಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಅತಿಥಿಗಳಾಗಿವನವಾಸಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಡಾ. ಚಂದ್ರಶೇಖರ ಭಟ್, ಜೇಸಿಐ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿನಿಲಯಕ್ಕೆ ಪುಸ್ತಕ ವಿತರಣೆ Read More »

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ

ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕು ಹಾಗೂ ತೋಟಗಾರಿಕಾ ಮಿಷನ್ (MIDH) ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ನಿಯಮ 377ರಡಿ ಒತ್ತಾಯಿಸಿದ್ದಾರೆ. ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳು ಪುನರಾವರ್ತಿತವಾಗಿ ಬರುವ ವಿವಿಧ

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ Read More »

ಪೂಜಾ ಬೋರ್ಕರ್ ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ಇವರ ವತಿಯಿಂದ ಸನ್ಮಾನ

ಸುಳ್ಯ ಕಸಬಾ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ರರಿಗೆ ದಿನಾಂಕ 19-07-2026 ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ದಲ್ಲಿ ಶ್ರೀ ಶಿವಪ್ರಕಾಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.ಈಗಾಗಲೇ “IBR Achiever” ಪಟ್ಟಿಯನ್ನು ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯನ್ನು ನಿರ್ಮಿಸಿರುವ ಇವರು ಬೆಟ್ಟಂಪಾಡಿ ದಿ| ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಯ ಪುತ್ರಿ, ಮನೋಜ್ ಆನಡ್ಕ ಇವರ ಪತ್ನಿ.

ಪೂಜಾ ಬೋರ್ಕರ್ ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ಇವರ ವತಿಯಿಂದ ಸನ್ಮಾನ Read More »

error: Content is protected !!
Scroll to Top