Author name: Tejas

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಮೇಲಿನ ಅವ್ಯವಹಾರದ ಆರೋಪ ಸತ್ಯಕ್ಕೆ ದೂರವಾದುದು

ಸುಳ್ಯ : ಸುಳ್ಯ ಮತ್ತು ಕಡಬ ತಾಲೂಕಿನ ಸುಮಾರು 57 ಗ್ರಾಮಗಳ ಭಕ್ತರು ನಂಬಿಕೊಂಡು ಬರುವ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಮೇಲೆ ಅವ್ಯವಹಾರದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಲೋಕೇಶ್ ಅಕ್ರಿಕಟ್ಟೆ ಹೇಳಿದರು.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಮಿತಿಯು ಅತ್ಯಂತ ಒಳ್ಳೆಯ ಕೆಲಸಗಳು ಮಾಡಿಕೊಂಡು ಬರುತ್ತಿರುವ ಸಮಯದಲ್ಲಿ ಇದನ್ನು ಸಹಿಸಲಾರದ ಭಕ್ತರ ಹೆಸರಿನಲ್ಲಿ […]

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಮೇಲಿನ ಅವ್ಯವಹಾರದ ಆರೋಪ ಸತ್ಯಕ್ಕೆ ದೂರವಾದುದು Read More »

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ತರಬೇತಿ ಕಾರ್ಯಾಗಾರ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಜೇಸಿಐ ಸಪ್ತಾಹ ಸುಸ್ನಿಲ 2026 ಅಂಗವಾಗಿ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಗೆ ಮುಟ್ಟು ಗುಟ್ಟಲ್ಲ ಹದಿಹರೆಯದ ಹೆಜ್ಜೆಗೆ ಆರೋಗ್ಯದ ಮಾಹಿತಿ ಕಾರ್ಯಾಗಾರ ಸೆ. 05 ರಂದು ನಡೆಯಿತು. ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ ಹೆಚ್ ಜಿ ಎಪ್ ರಂಜಿತ್ ಕುಕ್ಕೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ತರಬೇತಿ ಕಾರ್ಯಾಗಾರ Read More »

ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಇಲಾಖಾ ಅಧಿಕಾರಿಗಳು ಖಡ್ಡಾಯ ಹಾಜರಿರಬೇಕು : ಶಾಸಕಿ ಭಾಗೀರಥಿ

ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಜಾ ಸೇವೆ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚಿಸಿದ್ದಾರೆ.ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ, ಅವುಗಳನ್ನು ಸಕಾಲದಲ್ಲಿ ಪರಿಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಜಾಸೇವೆ ಅಭಿಯಾನ’ ಕ್ಕೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅವರು ಚಾಲನೆ ನೀಡಿ ಮಾತನಾಡಿದರು.ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹೀದ್ ತೆಕ್ಕಿಲ್, “ಈ ಪ್ರಜಾಸೇವೆ ಅಭಿಯಾನ

ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಇಲಾಖಾ ಅಧಿಕಾರಿಗಳು ಖಡ್ಡಾಯ ಹಾಜರಿರಬೇಕು : ಶಾಸಕಿ ಭಾಗೀರಥಿ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ ಹಾಗೂ ಗುರುವಂದನಾ ಕಾರ್ಯಕ್ರಮ

ಸುಳ್ಯ, ಸೆ. 5: ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ “ನಂದಗೋಕುಲ” ಹಾಗೂ “ಗುರುವಂದನಾ” ಕಾರ್ಯಕ್ರಮವನ್ನು ಶನಿವಾರ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮವು ಪುಟಾಣಿ ಬೇಬಿ ಪ್ರಿಯನ್ವಿಕಾ ಅವರ ಸುಂದರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀಮತಿ ಸಂಗೀತಾ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಮುಖ್ಯ ಅತಿಥಿಗಳಾಗಿ JCI Sullia Payaswini ಅಧ್ಯಕ್ಷೆ ಶ್ರೀಮತಿ ಲತಾ ಸುಪ್ರೀತ್ ಮೊಂಟಡ್ಕ, ಶ್ರೀಮತಿ ತಾರಾ ಚೂಂತಾರ ಹಾಗೂ ಜೆಸಿಐ ಸದಸ್ಯ ಶ್ರೀ ವಿನೋದ್ ಮುಡಗದ್ದೆ ಅವರು ಭಾಗವಹಿಸಿ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ ಹಾಗೂ ಗುರುವಂದನಾ ಕಾರ್ಯಕ್ರಮ Read More »

ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾದ ವಿಷಯದ ಬಗ್ಗೆ ಶಿಕ್ಷಣ ನೀಡುವುದೇ ನಿಜವಾದ ಶಿಕ್ಷಣ : ಶಾಸಕಿ ಭಾಗೀರಥಿ ಮುರುಳ್ಯ

ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾದ ವಿಷಯದ ಬಗ್ಗೆ ಶಿಕ್ಷಣ ನೀಡುವುದೇ ನಿಜವಾದ ಶಿಕ್ಷಣ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ತಾಯಪಟ್ಟರು.ಶಾಲಾ ಶಿಕ್ಷಣ ಇಲಾಖೆ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಶ್ರೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪದನಿಮಿತ್ತ ತಾಲೂಕು ಯೋಜನಾಧಿಕಾರಿಯವರ ಕಚೇರಿ ಸುಳ್ಯ ತಾಲೂಕು,ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಯ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ಜೂನಿಯರ್ ಕಾಲೇಜು‌ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿಕ್ಷಕ ಪಠ್ಯವನ್ನು ಹೊರತುಪಡಿಸಿ ಇತರ

ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾದ ವಿಷಯದ ಬಗ್ಗೆ ಶಿಕ್ಷಣ ನೀಡುವುದೇ ನಿಜವಾದ ಶಿಕ್ಷಣ : ಶಾಸಕಿ ಭಾಗೀರಥಿ ಮುರುಳ್ಯ Read More »

ಅರಂತೋಡು ಜಮಾಅತ್ ವತಿಯಿಂದ ಉಮ್ರಾ ಯಾತ್ರಾರ್ಥಿ ಮನ್ಸೂರ್ ಪಾರೆಕ್ಕಲ್ ಗೆ ಬೀಳ್ಕೊಡುಗೆ

ಅರಂತೋಡು ಬದ್ರಿಯಾ ಜಮಾಅತ್ ಸಮಿತಿಯ ನಿರ್ದೇಶಕರಾದ ಮನ್ಸೂರ್ ಪಾರೆಕ್ಕಲ್ ರವರು ಪವಿತ್ರ ಮಕ್ಕಾಕ್ಕೆ ಉಮ್ರಾ ಯಾತ್ರೆ ತೆರಳಲಿರುವುದರಿಂದ ಅವರನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ ವತಿಯಿಂದ ಸೆ.4 ರಂದು ಬೀಳ್ಕೊಡಲಾಯಿತು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ದುವಾವನ್ನು ಖತೀಬರಾದ ಬಹು| ಆಸಿಫ್ ಅಝ್ ಹರಿ ನೆರವೇರಿಸಿದರು. ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವದರ್ಜೆ ) ಟಿ.ಎಂ ಶಹೀದ್ ತೆಕ್ಕಿಲ್ ಮನ್ಸೂರ್

ಅರಂತೋಡು ಜಮಾಅತ್ ವತಿಯಿಂದ ಉಮ್ರಾ ಯಾತ್ರಾರ್ಥಿ ಮನ್ಸೂರ್ ಪಾರೆಕ್ಕಲ್ ಗೆ ಬೀಳ್ಕೊಡುಗೆ Read More »

ಕುಕ್ಕುಜಡ್ಕ : ಚಿರತೆ ಪ್ರತ್ಯಕ್ಷ

ಕುಕ್ಕುಜಡ್ಕ: ಪೈಲೂರು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ನಿವಾಸಿ ಜಗದೀಶ್ ಪೈಲೂರು ಅವರು ಚಿರತೆಯನ್ನು ಗಮನಿಸಿರುವುದಾಗಿ ತಿಳಿದುಬಂದಿದೆ.ಗ್ರಾಮ ಪಂಚಾಯತ್ ಸಿಬ್ಬಂದಿ ಯಶವಂತ ಚಾಮಡ್ಕರ ಅವರು ವಾಟ್ಸಾಪ್ ಮೂಲಕ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಎರಡು–ಮೂರು ದಿನಗಳ ಹಿಂದೆ ಓಡ್ಯಪ್ಪ ನಾಯ್ಕ್ ಅವರ ನಾಯಿಗೆ ಚಿರತೆ ಕಚ್ಚಿರುವುದಾಗಿಯೂ ವರದಿಯಾಗಿದೆ. ಸಂಜೆ ಹಾಗೂ ರಾತ್ರಿ ವೇಳೆ ಒಂಟಿಯಾಗಿ ಸಂಚರಿಸದಂತೆ ಮತ್ತು ಮಕ್ಕಳು, ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿರಿಸುವಂತೆ ಸೂಚಿಸಲಾಗಿದೆ. ಚಿರತೆ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಕುಕ್ಕುಜಡ್ಕ : ಚಿರತೆ ಪ್ರತ್ಯಕ್ಷ Read More »

ಕಿಶೋರ್ ಕುಮಾರ್ ಕಿರ್ಲಾಯ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಅರಂತೋಡು : ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಕಿಶೋರ್ ಕುಮಾರ್ ಕೆ. ಅವರು ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆರಂತೋಡು ಗ್ರಾಮದ ಕಿರ್ಲಾಯ ನಿವಾಸಿಯಾಗಿರುವ ಕಿಶೋರ್ ಕುಮಾರ್ ಅವರು ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ

ಕಿಶೋರ್ ಕುಮಾರ್ ಕಿರ್ಲಾಯ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ Read More »

ಸೆ.13 ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಪಾಜೆ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಪಾಜೆ ವಲಯದ ನಾಲ್ಕು ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆಪ್ಟಂಬ‌ರ್ 13ರಂದು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸೆಪ್ಟೆಂಬರ್ 4ರಂದು ಅರಂತೋಡು ದುರ್ಗಾ ಮಾತ ಭಜನಾ ಮಂದಿರದಲ್ಲಿ ನಡೆಯಿತು.ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಹರೀಶ್ ಆಚಾರ್ಯ, ಭಜನಾ ಪರಿಷತ್ ವಲಯ ಅಧ್ಯಕ್ಷರಾದ ಭಾರತಿ ಉಳುವಾರು, ಭಜನಾ ಮಂಡಳಿ ಕಾರ್ಯದರ್ಶಿ ಸುರೇಶ್ ಉಳುವಾರು, ಪದಾಧಿಕಾರಿಗಳಾದ ಶ್ರೀ ಕುಶಾಲಪ್ಪ ಟೈಲರ್ ಬೆಟ್ಟನ ಹಾಗೂ ಪುಂಡರೀಕ

ಸೆ.13 ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಪಾಜೆ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ Read More »

ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ, ಅಮೆಚೂರು ಎ.ಎಸ್.ಮಹಾಬಲ ಗೌಡ ನಿಧನ

ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ, ಪೆರಾಜೆ ಗ್ರಾಮದ ಅಮೆಚೂರು ನಿವಾಸಿ ಎ.ಎಸ್.ಮಹಾಬಲ ಗೌಡ(82) ಸೆ.3 ರಂದು ನಿಧನರಾದರು.ಭೂ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದರು.ನಿವೃತ್ತಿಯ ನಂತರ 24 ವರ್ಷ ವಿಜಯ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ್ದರು.

ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ, ಅಮೆಚೂರು ಎ.ಎಸ್.ಮಹಾಬಲ ಗೌಡ ನಿಧನ Read More »

error: Content is protected !!
Scroll to Top