ಸುಳ್ಯದಲ್ಲಿ ಸುಮನರವರ ವಿಜಯದ ಮೂಲಕ ಕ್ಷೇತ್ರದ ಮತದಾರರು ಅಭಿವೃದ್ಧಿಯ ರಾಜಕೀಯಕ್ಕೆ ಮುನ್ನುಡಿ ಬರೆಯಲಿದ್ದಾರೆ: ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ
“ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಅದರಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು ಸುಶಿಕ್ಷಿತ, ಸಮರ್ಥ ಅಭ್ಯರ್ಥಿ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ, ಅದನ್ನು ಪರಿಹರಿಸುವ ಚಿಂತನೆ ಮತ್ತು ಯೋಜನೆಯಿದೆ, ಅದನ್ನು ಸರ್ಕಾರಿ ಆಡಳಿತದ ಮಟ್ಟದಲ್ಲಿ ಸಮರ್ಥವಾಗಿ ಮಂಡಿಸಿ ಅನುಷ್ಠಾನಗೊಳಿಸುವ ಸಾಮರ್ಥ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಆಮ್ […]