September 2024

ಮೂಡ ಹಗರಣ : ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು

ಮೈ ಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಈ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆ‌ರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಕೋರ್ಟ್‌ ಆದೇಶದಂತೆ ಸಿಎಎಂ ಸಿದ್ಧರಾಮಯ್ಯ ವಿರುದ್ಧ ಎ1 ಆರೋಪಿಯಾಗಿ ಮುಡಾ ಹಗರಣದಲ್ಲಿ ಎಫ್‌ಐಆ‌ರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಅವರ ಪತ್ನಿ ಪಾರ್ವತಿ ಎ.2 ಆರೋಪಿಯಾಗಿದ್ದಾರೆ.ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜನ ಸ್ವಾಮಿ ಎ3 ಆರೋಪಿಯಾದರೇ, ಎ.4 ಆರೋಪಿಯನ್ನಾಗಿ ಭೂ ಮಾಲೀಕ ದೇವರಾಜು ಹಾಗೂ ಇತರರು […]

ಮೂಡ ಹಗರಣ : ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು Read More »

ಭಾರತೀಯ ಸೇನೆಯ ಯೋಧ ಶರತ್ ಕುಮಾರ್ ನಾರ್ಕೋಡು 30ಕ್ಕೆ ಸೇವಾ ನಿವೃತ್ತಿ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಶರತ್ ಕುಮಾರ್ ನಾರ್ಕೋಡು ಭಾರತೀಯ ಸೇನೆಯ ಯೋಧನಾಗಿದ್ದು ಸೆ. 30ರಂದು ನಿವೃತ್ತಿಯಾಗುತ್ತಿದ್ದಾರೆ.2007ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಬಳಿಕ ಮದ್ರಾಸ್‌ ಇಂಜಿನಿಯರಿಂಗ್ ಗ್ರೂಪಿನಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಜಮ್ಮು ಕಾಶ್ಮೀರ, ಕಲ್ಕತ್ತಾ ಸಿಕ್ಕಿಂ, ಶ್ರೀ ನಗರ, ಅರುಣಾಚಲ ಪ್ರದೇಶ, ದೆಹಲಿ, ಉತ್ತರಪ್ರದೇಶ, ಪಂಜಾಬ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಇದೀಗ ಕಳೆದ ಮೂರು ತಿಂಗಳಿನಿಂದ ಅಸ್ಸಾಂನಲ್ಲಿ ಸೇವೆಯಲ್ಲಿದ್ದಾರೆ.

ಭಾರತೀಯ ಸೇನೆಯ ಯೋಧ ಶರತ್ ಕುಮಾರ್ ನಾರ್ಕೋಡು 30ಕ್ಕೆ ಸೇವಾ ನಿವೃತ್ತಿ Read More »

ಅರಂತೋಡು: ಕಾಡಾನೆ ದಾಳಿ ಕೃಷಿ ನಾಶ

ಅರಂತೋಡು : ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ಕಬಳೆ ಸಮೀಪ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ನಾಶಗೊಂಡ ಘಟನೆ ವರದಿಯಾಗಿದೆ.ಗುರುವಾರ ರಾತ್ರಿ ಅಡ್ಕಬಳೆಯ ಗಂಗಾಧರ ಗೌಡ, ಲೀಲಾವತಿ ಅಡ್ಕಬಳೆ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿ, ತೆಂಗು, ಅಡಿಕೆ ಹಾಗೂ ಬಾಳೆ ಕೃಷಿ ನಾಶಪಡಿಸಿರುವುದಾಗಿ ತಿಳಿದುಬಂದಿದೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರಂತೋಡು: ಕಾಡಾನೆ ದಾಳಿ ಕೃಷಿ ನಾಶ Read More »

ಎಂ.ಬಿ.ಫೌಂಡೇಶನ್ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್‌ ಅವಾರ್ಡ್’ ಪ್ರಕಟ

ಸುಳ್ಯ : ಸುಳ್ಯದ ಎಂ.ಬಿ.ಫೌಂಡೇಶನ್ ಸುಳ್ಯ ಇದರ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್‌ ಅವಾರ್ಡ್’ಗೆ ಇಬ್ಬರು ಶಿಕ್ಷಿಕಿಯರು ಆಯ್ಕೆಯಾಗಿದ್ದಾರೆ.ಸುಳ್ಯ ಕೋಲ್ಟಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಲಜಾಕ್ಷಿ ಕುಕ್ಕುಜೆ ಹಾಗೂ ಸೈಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕಿ ವಲ್ಸ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಎಂ.ಬಿ.ಫೌಂಡೇಶನ್‌ ಅಧ್ಯಕ್ಷ ಎಂ.ಬಿ.ಸದಾಶಿವ ತಿಳಿಸಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ತಂದೆ ಎಂ.ಬಾಲಕೃಷ್ಣ ಗೌಡ ಹಾಗೂ ತಾಯಿ ದೇವಕಿ ಅವರ

ಎಂ.ಬಿ.ಫೌಂಡೇಶನ್ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್‌ ಅವಾರ್ಡ್’ ಪ್ರಕಟ Read More »

(ಅರೆಭಾಷೆ ಕವನ)ಕಾಲ ಹಾಳಾತ್

ಅಜ್ಜಿ ಹೇಳ್ದೋ,ಮಕ್ಕಳೇ ಕಾಲ ಹಾಳಾತ್, ಬರ್ತಿತ್ ಕಾಲ ಕಾಲಕೆ ಮಳೆ, ಆಗ್ತಿತಿತ್ತ್ ಬೇಕಾದಷ್ಟೇ ಬೆಳೆ, ಪುರುಸೊತ್ ಇಲ್ಲೆ ಕೊಯ್ಲಿನ ಸಮಯ, ಉಂಡರೆ ಉಂಡೊ, ಇಲ್ಲರೆ ಇಲ್ಲೆ., ನೀರ್ನ ಚೇಂಪಿ, ಬೈರಸ್ ಕಟ್ಟಿ, ಸೊಂಟನ ನೆಟ್ಟಗೆ ಮಾಡಿಕೆ ಕಷ್ಟ. ಈಗ ಗಂಜಿ ಕೊಟ್ಟರೆ ಮಕ್ಕಳಿಗೆ ಉಂಬಕೆ ಬಂಙ ಕುರುಕುರೆ ಕೊಡಿ ಅಂತ ಕೇಳ್ದೆ ಮಂಙ, ಬಂದರೆ ಮಳೆ, ಹರ್ದದೆ ಹೊಳೆ ಕೊಚ್ಚಿದೆ ಕಟ್ಟ, ಜರ್ದದೆ ಬೆಟ್ಟ, ಕಾಯುವ ಭೂಮಿ, ಕೊಂದದೆ ನೋಡಿ, ಹೊರಿಕೆ ಬೊತ್ತ್ ಭೂಮಿ ತಾಯಿಗೆ. ಕೊನೆಗೆ

(ಅರೆಭಾಷೆ ಕವನ)ಕಾಲ ಹಾಳಾತ್ Read More »

ಸುಳ್ಯಕ್ಕೆ ನೂತನ ತಹಶೀಲ್ದಾರ್ ಅರವಿಂದ್ ಕೆ .ಎಂ

ಸುಳ್ಯ : ಸುಳ್ಯ ತಾಲೂಕು ನೂತನ ತಹಶೀಲ್ದಾರ್ ಆಗಿ ಕೆ ಎ ಎಸ್ ಅಧಿಕಾರಿ ಅರವಿಂದ್ ಕೆ ಎಂ ಆಗಮಿಸಿದ್ದಾರೆ . ಇವರು ಸುಳ್ಯ ತಹಶೀಲ್ದಾ‌ರ್ ಆಗಿ ಪ್ರಭಾರ ಕರ್ತವ್ಯ ನಿರ್ವಹಿಸಲಿದ್ದು, ಈ ಹಿಂದೆ ಮಂಗಳೂರು ಎ ಸಿ ಕಛೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು ಮೂಲತಃ ಚಿತ್ರದುರ್ಗದವರಾಗಿದ್ದಾರೆ.

ಸುಳ್ಯಕ್ಕೆ ನೂತನ ತಹಶೀಲ್ದಾರ್ ಅರವಿಂದ್ ಕೆ .ಎಂ Read More »

ರೆಂಜಿಲಾಡಿ: ಕಂಬಳ ಸ್ನೇಹಕೂಟ ಕರೆ ನಿರ್ಮಾಣಕ್ಕೆ ಮುಹೂರ್ತ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ-ರೆಂಜಿಲಾಡಿಯ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಅ.20ರಂದು ನಡೆಯಲಿರುವ ಕೆಸರುಗದ್ದೆಯಲ್ಲಿ ಕಂಬಳ ಸ್ನೇಹಕೂಟದ ಕಂಬಳ ಕರೆ ನಿರ್ಮಾಣಕ್ಕೆ ಮುಹೂರ್ತ ಕಾರ್ಯಕ್ರಮ ಗುರುವಾರ ರೆಂಜಿಲಾಡಿ ಗ್ರಾಮದ ದಿ.ಸಾಂತಪ್ಪ ಗೌಡ ಸಾಕೋಟೆಜಾಲು ಅವರ ಗದ್ದೆಯಲ್ಲಿ ನಡೆಯಿತು.ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪರಿಚಾರಕ ವಿಜಯಕುಮಾರ್ ಕೇಪುಂಜ ಅವರು ಕಂಬಳದ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಜಾಗದ ಮಾಲಿಕರಾದ ಚಂದ್ರಾವತಿ ಸಾಕೋಟೆಜಾಲು, ಸ್ಥಳೀಯರಾದ ಪುರುಷೋತ್ತಮ ಗೌಡ ಸಂಕೇಶ, ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷ

ರೆಂಜಿಲಾಡಿ: ಕಂಬಳ ಸ್ನೇಹಕೂಟ ಕರೆ ನಿರ್ಮಾಣಕ್ಕೆ ಮುಹೂರ್ತ Read More »

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪಿಯ ಮೇಲೆ ಹಲ್ಲೆ ನಡೆಸಿದ ಯುವಕನ ಬಂಧನ

ಸುಳ್ಯ : ವಿದ್ಯಾರ್ಥಿನಿ ಬಸ್ಸಲ್ಲಿ ಬರುತ್ರಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ ಅಬ್ದುಲ್ ನಿಯಾಝ್ ಮೇಲೆ ಗುಂಪು ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಗಳಲ್ಲಿ ಓರ್ವನಾದ ಸುಶ್ಮಿತ್ ಎಂಬಾತ ಕುಮಟದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೋಲಿಸರು ಆತನನ್ನು ಬಂಧಿಸಿ ಸುಳ್ಯಕ್ಕೆ ಕರೆ ತಂದಿದ್ದು ನ್ಯಾಯಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪಿಯ ಮೇಲೆ ಹಲ್ಲೆ ನಡೆಸಿದ ಯುವಕನ ಬಂಧನ Read More »

ಬಸ್ಸಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ನ್ಯಾಯಾಂಗ ಬಂಧನ

ಸುಳ್ಯ : ವಿದ್ಯಾರ್ಥಿ ನಿಗೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಥಳಿತಕ್ಕೆ ಒಳಗಾಗಿ ಕೇರಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ನಿಯಾಜ್ ಎಂಬಾತನನ್ನು ಬುಧವಾರ ಸಂಜೆ ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಧೀಶರು ಆರೋಪಿಗೆ 14 ದಿವಸಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಯ ಬಳಿಕ ಆರೋಪಿ ನಿಯಾಜ್ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಬಳಿಕ ತಪ್ಪಿಸಿಕೊಂಡು ಮುಳ್ಳೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.ಈತನನ್ನು ಕೂಡಲೇ ಬಂಧಿಸುವಂತೆ ಹಿಂದೂ ಸಂಘಟನೆ

ಬಸ್ಸಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ನ್ಯಾಯಾಂಗ ಬಂಧನ Read More »

ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಸುಳ್ದ್ರ : ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಥಳಿತಕ್ಕೆ ಒಳಗಾಗಿ ಕೇರಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ನಿಯಾಜ್ ಎಂಬಾತನನ್ನು ಬುಧವಾರ ಸಂಜೆ ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಯ ಬಳಿಕ ಆರೋಪಿ ನಿಯಾಜ್ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಬಳಿಕ ತಪ್ಪಿಸಿಕೊಂಡು ಮುಳ್ಳೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.ಈತನನ್ನು ಕೂಡಲೇ ಬಂಧಿಸುವಂತೆ ಹಿಂದೂ ಸಂಘಟನೆ ವತಿಯಿಂದ ನಿನ್ನೆ ಸುಳ್ಯ ಪೊಲೀಸ್ ಠಾಣಾ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಒತ್ತಾಯಿಸಿದ್ದರು.

ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು Read More »

error: Content is protected !!
Scroll to Top