September 2024

ಪೆರಾಜೆ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್ಸು

ಅರಂತೋಡು : ಪೆರಾಜೆಯ ಕಲ್ಬರ್ಪೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್‌ ಆರ್ ಟಿ ಸಿ ಬಸ್ಸು ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.ಮಂಗಳೂರಿನಿಂದ ಮಂಡ್ಯಕ್ಕೆ ಹೋಗುತ್ತಿದ್ದ ಬಸ್ಸು ಕಲ್ಲುಚರ್ಪೆ ಬಳಿ ತಿರುವುನಲ್ಲಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಸೈಡ್ ಕೊಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಉಂಟಾಗಿದೆ ಎನ್ನಲಾಗಿದೆ.ಬಸ್ಸಿನಲ್ಲಿ ಸುಮಾರು 24 ಮಂದಿ ಪ್ರಯಾಣಿಕರು ಇದ್ದು ಅಪಾಯದಿಂದ ಪಾರಾಗಿದ್ದಾರೆ.

ಪೆರಾಜೆ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್ಸು Read More »

ಗೂನಡ್ಕ ಸ್ಕೂಟಿ ಕಂಟೇನರ್ ಅಪಘಾತ ಗಾಯಾಳುಗಳಿಗೆ ಉಚಿತ ಸೇವೆ ನೀಡಿದ ಸುಳ್ಯ ತಾಲೂಕು ಅಂಬುಲನ್ಸ್ ಚಾಲಕ ಮಾಲಕರ ಸಂಘ

ಗೂನಡ್ಕ ಸೆ: 24 . ಸ್ಕೂಟಿ ಅಪಘಾತದಲ್ಲಿ ತೀವ್ರ ಗಾಯಗೊಂಡ ಕಾಸರಗೋಡು ಮೂಲದ ಯುವಕನ ಪ್ರಥಮ ಚಿಕಿತ್ಸೆಗಾಗಿ ಸುಳ್ಯ KVG ಆಸ್ಪತ್ರೆಗೆ AIKMCC ಸುಳ್ಯ ದ ಅಂಬುಲನ್ಸ್ ನಲ್ಲಿ ತಾಜುದ್ದೀನ್ ಟರ್ಲಿ ಉಚಿತ ಸೇವೆ ನೀಡಿದರು,ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು KMC ಆಸ್ಪತ್ರೆಗೆ ಸುಳ್ಯ ಲೈಫ್ ಕೇರ್ ಅಂಬುಲನ್ಸ್ ಸುಳ್ಯ ದ ರಫೀಕ್ KM ಉಚಿತ ಸೇವೆ ನೀಡಿದರು,ಈ ಸೇವೆಯನ್ನು ನೀಡಿದ ತಂಡಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೂನಡ್ಕ ಸ್ಕೂಟಿ ಕಂಟೇನರ್ ಅಪಘಾತ ಗಾಯಾಳುಗಳಿಗೆ ಉಚಿತ ಸೇವೆ ನೀಡಿದ ಸುಳ್ಯ ತಾಲೂಕು ಅಂಬುಲನ್ಸ್ ಚಾಲಕ ಮಾಲಕರ ಸಂಘ Read More »

(ಕವನ) ಅವಳ ಮುಗುಳ್ನಗು

ಯಾವ ಮೋಡಿಯ ಮಾಡಿದಳುತನ್ನ ಚೆಲುವಿನ ಮೊಗದಲಿಮಿನುಗು ತಾರೆಗಳಕಣ್ಣೊಳಗಡಗಿಸಿತುಟಿಯಲಿ ಬಿರಿದಮುಗುಳ್ನಗೆಯುಮುತ್ತಾ ಚೆಲ್ಲುತ್ತಾಸೂರೆ ಮಾಡಿಹಳುಸದ್ದು ಮಾಡದೆ ನನ್ನೆದೆಯ.. ಸೂರ್ಯನ ಹೊಂಗಿರಣವ ಬೆಚ್ಚಿಸಿಎನ್ನ ಹೃದಯವ ನೆಚ್ಚಿಸಿನನ್ನೆದೆಯ ತಂತಿಗೆ ಸ್ವರವಾದಳು….

(ಕವನ) ಅವಳ ಮುಗುಳ್ನಗು Read More »

(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ

ಅಕ್ಕ ಎತ್ತಿ ಬೆಳ್ಸಿದ ಕೂಸು ದೊಡ್ಡಣ್ಣನ ಮಂಙವರ್ಸ ಕಳ್ದ್ ಹೋತ್ ಮಕ್ಕ ಬೆಳ್ದ್ ಬುಟ್ಟಾಎರಡ್ ಹೆಣ್ಣ್ಮಕ್ಕ ಒಬ್ಬ ಮಂಙಮೊದ್ವೆ ಮಾತ್ಕತೆ ಸುರಾತ್ ದೊಡ್ಡ ಮಗೊಳು ಲಕ್ಷೀಗೆ ಒಂದು ವರ್ಸಲಿ ಮೊದ್ವೆ ಆತ್  ಅವ ಆಗ ಆರ್ನೆಕ್ಲಾಸ್ಏಳ್ನೆಕ್ಲಾಸಿಗೆ   ಹೋಕನ ಲಕ್ಷೀಗೆ ಒಂದು ಕೂಸಾತ್ಇವಂಗೆ ಬೆಚ್ಚ ಆಕೆ ಸುರಾತ್ ಅಕ್ಕ ನನ್ನ ಮುಟ್ಟುಲೆಂತಾಅಮ್ಮ ‌ಹೇಳ್ದೆ ಗಡ ನೀ ಮಾವಂತಮಾವ ಆದವು ಮಕ್ಕಳಿಗೆ ಏನಾರ್ ಕೊಡಕುಂತಾ ಕ್ರಮ ಏನ್ ಗೊತ್ತಿಲ್ಲದೆ ಸುಮ್ಮನೆ ಕುದ್ದ್ ಯೋಚಿಸಿಕಂಡ್ ಇತ್ತ್ಎಂತಾ ಕಥೆ ಇದ್  ಕೂಸು ಉಡ್ಗಿರೆಂತಾಸಾಲೆಲಿ

(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ Read More »

ತೋಟದ ಕೆರೆಗೆ ವೃದ್ಧ ಬಿದ್ದು ಸಾವು

ಆಲೆಟ್ಟಿ : ತೋಟದ ಕೆರೆಗೆ ವೃದ್ಧರೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ಮಂಗಳವಾರ ಸಂಜೆ ಆಲೆಟ್ಟಿಯಿಂದ ವರದಿಯಾಗಿದೆ.ಆಲೆಟ್ಟಿಯ ಗ್ರಾಮದ ಶಂಕರ ಪಾಟಾಳಿ ಎಂಬವರು ಮೃತಪಟ್ಟ ವ್ಯಕ್ತಿ.ಅವರಿಗೆ 75 ವರ್ಷ ಪ್ರಾಯವಾಗಿತ್ತು.ಮೃತರು ಮನೆಯಿಂದ ತೋಟದ ಕಡೆಗೆ ಹೋದವರು ಬಾರದೆ ಇದ್ದುದರಿಂದ ಪರಿಸರದಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಪಕ್ಕದ ಪರಮೇಶ್ವರ ಗೌಡ ಎಂಬವರ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಯಿತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೋಟದ ಕೆರೆಗೆ ವೃದ್ಧ ಬಿದ್ದು ಸಾವು Read More »

ಅರಂತೋಡಿನಲ್ಲಿ ಎನ್.ಎಸ್. ಎಸ್ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಎನ್ಎಸ್ಎಸ್ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಗಿಡಕ್ಕೆ ನೀರು ಎರೆಯುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಚಾಲನೆ ನೀಡಿ, ಎನ್ಎಸ್ಎಸ್ ಸ್ಥಾಪನೆಯ ಗುರಿ ಉದ್ದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇತಿಹಾಸ ಉಪನ್ಯಾಸಕ ಮೋಹನ್ ಚಂದ್ರ ಎನ್ಎಸ್ಎಸ್ ವಾರ್ಷಿಕ ಶಿಬಿರದ ಆಯೋಜನೆ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಎಂ.ಸ್ವಾಗತಿಸಿ,

ಅರಂತೋಡಿನಲ್ಲಿ ಎನ್.ಎಸ್. ಎಸ್ ದಿನಾಚರಣೆ Read More »

ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮಂಗಳೂರು : ಮಂಗಳೂರಿನ ಮಾರಿಪಳ್ಳ ಎಂಬಲ್ಲಿ ಸೋಮವಾರ ರಾತ್ರಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನೆಡ್ಚಿಲು ವಾಸುದೇವ ಗೌಡ ರವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಸೇವಂತ್ ನೆಡ್ಡಿಲು ಸಾಚನ್ನಪ್ಪಿದ ಘಟನೆ ವರದಿಯಾಗಿದೆ .ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪಿದರು ಎಂದು ತಿಳಿದು ಬಂದಿದೆ. ಮೃತರು ತಂದೆ ವಾಸುದೇವ ಗೌಡ ನೆಡ್ವಿಲು, ತಾಯಿ ಶೋಭಾ ನೆಡ್ಚಿಲು ಹಾಗೂ ಸಹೋದರ ಲೋಚನ್ ಮತ್ತು ಬಂಧು ಮಿತ್ರರನ್ನು,ಕುಟುಂಬಸ್ಥರನ್ನು ಅಗಲಿದ್ದಾರೆ.

ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು Read More »

ಸ್ಕೂಟಿ- ಕಂಟೇನರ್ ಡಿಕ್ಕಿ ಸವಾರನಿಗೆ ಗಂಭೀರ ಗಾಯ

ಸುಳ್ಯ: ಗೂನಡ್ಕದ ಬೈಲೆ ಸಮೀಪದ ಶಿರಾಡಿ ದ್ವಾರದ ಬಳಿ ಸ್ಕೂಟಿ ಮತ್ತು ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡಿನ ಜುನೈದ್ ಎಂದು ತಿಳಿದು ಬಂದಿದೆ.

ಸ್ಕೂಟಿ- ಕಂಟೇನರ್ ಡಿಕ್ಕಿ ಸವಾರನಿಗೆ ಗಂಭೀರ ಗಾಯ Read More »

ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೆ.24 ಸುಳ್ಯದಲ್ಲಿ ಪ್ರತಿಭಟನೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ, ಸುಳ್ಯ ಪ್ರಖಂಡ ಮಾತೃಶಕ್ತಿ ದುರ್ಗಾವಾಹಿನಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸುಳ್ಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ.ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ನಿರಂತರವಾಗಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ದಬ್ಬಾಳಿಕೆ ಹಾಗೂ ಮನಬಂದಂತೆ ಕೇಸುಗಳನ್ನು ದಾಖಲಿಸಿ ಕೊಂಡು ಬಂದಿರುತ್ತಾರೆ, ಸುಳ್ಯದಲ್ಲಿ ವರ್ಷಿತ್ ಚೊಕ್ಕಾಡಿ ಹಾಗೂ ಇನ್ನು ಇತರ ಹಿಂದೂ ಕಾರ್ಯಕರ್ತರನ್ನು ಸೋಮವಾರ ವಿನಾಕಾರಣ

ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೆ.24 ಸುಳ್ಯದಲ್ಲಿ ಪ್ರತಿಭಟನೆ Read More »

ವಿಶ್ವ ಶಾಂತಿ ದಿನಾಚರಣೆ ಕಾರ್ಯಕ್ರಮ

ಸುಳ್ಯ : ವಿಶ್ವ ಶಾಂತಿ ದಿನಾಚರಣೆಯನ್ನು ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಕೆಪಿಸ್ ಗಾಂಧೀನಗರದಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಯಾಗಿ ಲಯನ್ ರಂಗನಾಥ ಭಾಗವಹಿಸಿದ್ದರು. ವಿಶ್ವ ಶಾಂತಿ ಯ ಮಹತ್ವ ದ ಕುರಿತು ವಿದ್ಯಾರ್ಥಿ ಗಳಿಗೆ ಸೂಕ್ತ ಮಾಹಿತಿ ಯನ್ನು ನೀಡಿದರು.ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಲಯನ್ ರಾಮಚಂದ್ರ ಪಲ್ಲತಡ್ಕ, ಆನಂದ ಪೂಜಾರಿ, ರಮೇಶ್ ಶೆಟ್ಟಿ, ಪ್ರಭಾರ ಉಪ ಪ್ರಾಂಶುಪಾಲರಾದ ಜ್ಯೋತಿ ಲಕ್ಷ್ಮೀ, ಹಿರಿಯ ಶಿಕ್ಷಕರಾದ

ವಿಶ್ವ ಶಾಂತಿ ದಿನಾಚರಣೆ ಕಾರ್ಯಕ್ರಮ Read More »

error: Content is protected !!
Scroll to Top