September 2024

ಯುವತಿಯನ್ನ ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪಾಪಿ!

ಯುವತಿಯೋರ್ವಳನ್ನು ಭೀಕರವಾಗಿ ಕೊಂದು ಮೃತದೇಹ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪೈಪ್‌ಲೈನ್‌ ರಸ್ತೆಯ ಬಳಿಯ ಮನೆಯೊಂದರಲ್ಲಿ ಈ ಕೃತ್ಯ ನಡೆದಿದ್ದು, ಮೃತ ಯುವತಿಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. 10 ರಿಂದ 15 ದಿನಗಳ ಹಿಂದೆಯೇ ಈ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ. 30 ಕ್ಕೂ ಹೆಚ್ಚು ಪೀಸ್ ಮಾಡಿ 160 ಲೀಟರ್‌ನ ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿಯನ್ನ ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪಾಪಿ! Read More »

ಬಾಲಕನ ಮಾರ್ಮಾಂಗವನ್ನು ಎಳೆದು ಗಾಯಗೊಳಿಸಿದ ವಿದ್ಯಾರ್ಥಿಗಳು

ಸಂಪಾಜೆ : ವಸತಿ ನಿಲಯದಿಂದ ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗ ಊದಿಕೊಂಡು ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ವರದಿಯಾಗಿದೆ.ದ.ಕ. ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ವಸತಿ ನಿಲಯದಲ್ಲಿ ಶಾಲೆಗೆ ಹೋಗುತ್ತಿದ್ದುಸೆ.14ರಂದು ರಾತ್ರಿ ವಸತಿ ನಿಲಯದಲ್ಲಿ ಇಬ್ಬರು ಸಹಪಾಠಿವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು.ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಪರಿಣಾಮ ಮನಗೆ ಬಂದಿದ್ದನೆನ್ನಲಾಗಿದೆ.ಬಾಲಕ ಮರ್ಮಾಂಗ ಊದಿಕೊಂಡಿದ್ದರಿಂದತಾಯಿಯೊಡನೆ

ಬಾಲಕನ ಮಾರ್ಮಾಂಗವನ್ನು ಎಳೆದು ಗಾಯಗೊಳಿಸಿದ ವಿದ್ಯಾರ್ಥಿಗಳು Read More »

ಹೃದಯಾಘಾತಕ್ಕೆ 11 ವರ್ಷದ ಬಾಲಕ ಸಾವು

ಹಾಸನ : ಹೃದಯಾಘಾತದಿಂದ 11 ವರ್ಷದ ಬಾಲಕ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಚನ್ನಾಪುರ ಗ್ರಾಮದಿಂದ ವರದಿಯಾಗಿದೆ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಚಿನ್‌ಗೆ ನಿನ್ನೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು. ಎದೆ ನೋವಿನಿಂದ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದ. ಮನೆಯಲ್ಲಿರುವಾಗ ಏಕಾಏಕಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾನೆ.ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.

ಹೃದಯಾಘಾತಕ್ಕೆ 11 ವರ್ಷದ ಬಾಲಕ ಸಾವು Read More »

ಪರಿವಾರಕಾನದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ

ಸುಳ್ಯ ಪರಿವಾರಕಾನ ಪರಿಸರದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಕೃಷಿ ನಾಶಗೈದಿರುವ ವರದಿಯಾಗಿವೆ.ಸ್ಥಳೀಯರಾದ ಸುರೇಶ್, ಕೇಪಣ್ಣ ಮಾಸ್ಟರ್, ಸತ್ಯನಾರಾಯಣ ರವರ ಹಾನಿಯಾದ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿ ಕ್ರಷಿ ನಾಶ ಪಡಿಸಿವೆ.ಅಡಿಕೆ,ತೆಂಗು,ಬಾಳೆ ಇತರ ಕ್ರಷಿಯನ್ನು ಕಾಡಾನೆಗಳು ನಾಶ ಮಾಡಿವೆ.ಇದರಿಂದ ರೈತರಿಗೆ ನಷ್ಟ ಉಂಟಾಗಿದೆ.ಈ ಭಾಗಗಳಿಗೆ ಸ್ಥಳೀಯ ನ ಪಂ ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ್, ಮಾಜಿ ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ಜಿನ್ನಪ್ಪ ಪೂಜಾರಿ ಇತರರು ಭೇಟಿ ನೀಡಿದರು.

ಪರಿವಾರಕಾನದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ Read More »

ಲಂಚಕ್ಕೆ ಬೇಡಿಕೆಯಿಟ್ಟು ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ

ಕಿನ್ನಿಗೋಳಿ : ಕೆಲ ವರ್ಷಗಳ ಹಿಂದೆ ಸುಳ್ಯ ನಗರ ನಗರ ಪಂಚಾಯತ್ ನಲ್ಲಿ ಮುಖ್ಯಾಧಿಕಾರಿಯಾಗಿದ್ದ ಪ್ರಸ್ತುತ ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿರುವ ಎಂ.ಆರ್. ಸ್ವಾಮಿ ಹಾಗೂ ಜೂನಿಯರ್ ಇಂಜಿನಿಯರ್ ನಾಗರಾಜ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ.ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 5ನೇ ಹಣಕಾಸು ಯೋಜನೆಯಲ್ಲಿ ಗುತ್ತಿಗೆದಾರರ ಬಿಲ್ಲು ಮಂಜೂರಾತಿ ಬಗ್ಗೆ ಬಿಲ್ ಪಾಸ್ ಮಾಡಲು ಲಂಚ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಲಂಚಕ್ಕೆ ಬೇಡಿಕೆಯಿಟ್ಟು ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ Read More »

ಪೂರ್ಣಿಮಾ ಪೆರ್ಲಂಪಾಡಿಗೆ ಸನ್ಮಾನ

ಬೆಳ್ಳಾರೆ ಜೇಸಿಸ್ ನ ಜೊತೆ ಕಾರ್ಯದರ್ಶಿಕೊಳ್ತಿಗೆ ವಲಯದ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲoಪಾಡಿ ಇವರಿಗೆ ಸೆ.17ರಂದು ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ 65ನೇ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಗೌರವಿಸಲಾಯಿತು. ಪೂರ್ಣಿಮಾರು ಸಾಹಿತ್ಯ ಕ್ಷೇತ್ರ ದಲ್ಲಿ ಮಾಡಿದ ಸಾಧನೆಗಾಗಿ ಅನೇಕ ಪ್ರಶಸ್ತಿ ಗಳನ್ನು ಪಡೆದಿರುತ್ತಾರೆ.

ಪೂರ್ಣಿಮಾ ಪೆರ್ಲಂಪಾಡಿಗೆ ಸನ್ಮಾನ Read More »

ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ದನ ಹಾಗೂ ಇತರ ಪ್ರಾಣಿಗಳ ಎಣ್ಣೆ ಬಳಕೆ !

ತಿರುಪತಿ: ಪ್ರಾಣಿಗಳ ಎಣ್ಣೆ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೆಲ ದಿನಗಳ ಹಿಂದೆ ಆರೋಪ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.ತಿರುಪತಿಯ ಭಕ್ತರ ನಂಬಿಕೆಗೆ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಧಕ್ಕೆ ತಂದಿದೆ ಎಂದು ಟಿಟಿಡಿ ಅಧಿಕಾರಿಗಳು ವಾದಿಸಿದ್ದರು. ಟಿಟಿಡಿ ಮಾಜಿ ಮುಖ್ಯಸ್ಥರು ಚಂದ್ರಬಾಬು ನಾಯ್ಡು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಆರೋಪ ಸತ್ಯ ಎಂಬುದು

ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ದನ ಹಾಗೂ ಇತರ ಪ್ರಾಣಿಗಳ ಎಣ್ಣೆ ಬಳಕೆ ! Read More »

ಸೆ. 20 ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ

ಸುಳ್ಯ : ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ಸೆ ೨೦ ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಹಾಗೂ ಪ್ರವಾದಿ ಸಂದೇಶ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಮಿಲಾದ್ ಸಮಿತಿ ತಿಳಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಲಾದ್ ಸಮಿತಿಯ ಅಧ್ಯಕ್ಷ ಶರೀಫ್ ಕಂಠಿ ಸೆ.20ನೇ ಶುಕ್ರವಾರ ಸಂಜೆ ೪.೦0 ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಮುಭಾಗದಲ್ಲಿ ಜಾಥಾ ಸಮಾಪ್ತಿಗೊಳ್ಳಲಿದೆ.

ಸೆ. 20 ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ Read More »

ಪೆರಾಜೆ : ಹಿರಿಯ ವಿದ್ಯಾರ್ಥಿ ಸಂಘ ರಚನೆ

ಪೆರಾಜೆ :ಕನ್ನಡ ಪೆರಾಜೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನಾ ಸಭೆ ಸೆ.15 ರಂದು ಸಂಘದ ಅಧ್ಯಕ್ಷರಾದ ಉನೈಸ್ ಪೆರಾಜೆ ಇವರ ನೇತೃತ್ವದಲ್ಲಿ ನಡೆಯಿತು.ವೇದಿಕೆಯಲ್ಲಿ ಮಾಜಿ ಪಂಚಾಯತ್ ಸದಸ್ಯರಾದ ಅಬೂಬಕ‌ರ್.ಪಿ.ಎನ್, ಮಹಮ್ಮದ್ ಪೆರಾಜೆ ಉಪಸ್ಥಿತರಿದ್ದರು.ಸಭೆಯಲ್ಲಿ ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಿದ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಬಳಿಕ ಹಿರಿಯ ವಿದ್ಯಾರ್ಥಿ ಸಮಿತಿ ರಚಿಸಲಾಯಿತು.ಸಂಘದ ಅಧ್ಯಕ್ಷರಾಗಿ ಉನೈಸ್ ಪೆರಾಜೆ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರ.ಕೆ.ಜೆ, ಕೋಶಾಧಿಕಾರಿಯಾಗಿ ಅಶೋಕ್ ಪೀಚೆಮನೆ, ಗೌರವಾಧ್ಯಕ್ಷರಾಗಿ ಅಬೂಬಕರ್.ಪಿ.ಎನ್, ಉಪಾಧ್ಯಕ್ಷರುಗಳಾಗಿ ಕಿರಣ್ ಬಿಳಿಯಾರು, ನಾಸಿರ್.ಎನ್.ಎ, ಶಾಹಿನ್.ಪಿ.ಎಂ, ಜೊತೆ

ಪೆರಾಜೆ : ಹಿರಿಯ ವಿದ್ಯಾರ್ಥಿ ಸಂಘ ರಚನೆ Read More »

ರೇಣುಕಾಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್‌ಗೆ ವಕೀಲರಿಂದಲೇ ಎಚ್ಚರಿಕೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರೋ ನಟ ದರ್ಶನ್‌ಗೆ ಈಗ ವಕೀಲರೇ ಎಚ್ಚರಿಕೆ ಸಂದೇಶ ಕಳುಹಿಸಿದ ಘಟನೆ ವರದಿಯಾಗಿದೆ. ಜೈಲು ಸೇರಿದ ದಿನದಿಂದ ನಿತ್ಯವೂ ಕಿರಿಕ್ ಮಾಡಿಕೊಳ್ಳುತ್ತಿರುವ ನಟನಿಗೆ ಜೈಲಲ್ಲಿ ಕಿರಿಕ್ ಮಾಡಿಕೊಳ್ಳಬೇಡಿ ಎಂಬ ಸ್ಪಷ್ಟ ಎಚ್ಚರಿಕೆಯುಳ್ಳ ಪತ್ರವನ್ನು ಪತ್ನಿ ವಿಜಯಲಕ್ಷ್ಮಿ ಮೂಲಕ ಕಳುಹಿಸಿದ್ದಾರೆ. ಸಮಸ್ಯೆ ಮಾಡಿಕೊಂಡರೆ ಮುಂದೆ ಜಾಮೀನಿಗೆ ತೊಂದರೆಯಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನಾದರೂ ಸನ್ನಡತೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್‌ಗೆ ವಕೀಲರಿಂದಲೇ ಎಚ್ಚರಿಕೆ! Read More »

error: Content is protected !!
Scroll to Top