September 2024

ಬಾಲಕಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ!

ಭೋಪಾಲ್ : ಭೋಪಾಲ್ ನಲ್ಲಿ ಭಯಾನಕ ಘಟನೆಯೊಂದು ವರದಿಯಾಗಿದೆ. ಖಾಸಗಿ ಶಾಲೆಯೊಂದರಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಶಿಕ್ಷಕನೊಬ್ಬಅತ್ಯಾಚಾರವೆಸಗಿದ್ದಾನೆ. ಘಟನೆ ಕುರಿತು ಬಾಲಕಿಯ ತಾಯಿ ಸೋಮವಾರ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಸಂತ್ರಸ್ತೆಯ ತಾಯಿ ಶಿಕ್ಷಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗಿದ್ದು, ಶಿಕ್ಷಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಈ ಮಾಹಿತಿಯನ್ನು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಬಾಲಕಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ! Read More »

ಅರಂತೋಡು : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಅರಂತೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸಂಪಾಜೆ ವಲಯ ಇದರ ಆಶ್ರಯದಲ್ಲಿ ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಜನಜಾಗೃತಿ ವೇದಿಕೆ ಇದರ ಅಧ್ಯಕ್ಷರಾದ ಲೋಕನಾಥ ಅಮೆಚೂರು ಅವರು ದೀಪಾ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ

ಅರಂತೋಡು : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಪಯಸ್ವಿನಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಉದ್ಘಾಟನಾ ಸಮಾರಂಭ

ಸುಳ್ಯ: ಆರೋಗ್ಯ ಮತ್ತು ಮಾನಸಿಕ ವೃದ್ಧಿಗೆ ಕ್ರೀಡೆ ಸಹಕಾರಿ ಯಾಗುತ್ತದೆ . ಇದಕ್ಕೆ ಪೂರಕವಾಗಿ ಮನುಷ್ಯ ಹುಟ್ಟಿನಿಂದ ಕ್ರೀಡೆ ಸಹ ಹುಟ್ಟಿಕೊಂಡಿದೆ ಎಂದು ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಜಾಕೆ ಸದಾನಂದ ಅವರು ಹೇಳಿದರು. ದಕ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಹಾಗೂ ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರು ಇವುಗಳ ಆಶ್ರಯದಲ್ಲಿ ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.ವೇದಿಕೆಯಲ್ಲಿ ಲಯನ್ಸ್ ಪ್ರಾಂತ್ಯದ ರಾಯಭಾರಿ

ಪಯಸ್ವಿನಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಉದ್ಘಾಟನಾ ಸಮಾರಂಭ Read More »

ಪರಿವಾರಕಾನದಲ್ಲಿ ಕಾರುಗಳ ನಡುವೆ ಅಪಘಾತ

ಸುಳ್ಯ : ಆಲೆಟ್ಟಿ ಗ್ರಾಮದ ಮಾಣಿ ಮೈಸೂರು ರಾಷ್ಡ್ರೀಯ ಹೆದ್ದಾರಿಯ ಪರಿವಾರ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಸುಳ್ಯ ಕಡೆಗೆ ಬರುತ್ತಿದ್ದ ಆಲ್ಲೋ ಕಾರೊಂದು ಪರಿವಾರಕಾನದ ಬಳಿ ಎಡಭಾಗಕ್ಕೆ ತಿರುಗಿಸಲು ಯತ್ನಿಸಿದ್ದಾಗ ಸುಳ್ಯ ಕಡೆಗೆ ಬರುತ್ತಿದ್ದ ಇನ್ನೊಂದು ಕಾರು ಹಿಂಭಾಗದಿಂದ ಡಿಕ್ಕಿ ಹೊಡೆಯಿತು.ಡಿಕ್ಕಿಯ ರಭಸಕ್ಕೆ ಅಲ್ಟೊ ಕಾರ್ ಮುಂಭಾಗಕ್ಕೆ ಚಲಿಸಿ ಗುಂಡಿಗೆ ಬಿತ್ತು.ಪರಿಣಾಮವಾಗಿಕಾರಿನ ಮುಂಭಾಗ ಜಖಂಗೊಂಡಿದೆ ಈ ಕಾರು ಸಂಪಾಜೆ ಯ ಹೈಸ್ಕೂಲ್ ಮಾಸ್ತರ್ ಅಪ್ಪುಕುಂಞ ಚಲಾಯಿಸುತ್ತಿದ್ದ ವಾಹನವಾಗಿದ್ದು ಅವರು

ಪರಿವಾರಕಾನದಲ್ಲಿ ಕಾರುಗಳ ನಡುವೆ ಅಪಘಾತ Read More »

ಅಡ್ಕಾರು : ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ

ಸುಳ್ಯ : ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜನೆಗೊಂಡ ಪ್ರಧಾನಿ ನರೇಂದ್ರ ಮೋದಿಯವರ 74ನೇ ವರ್ಷದ ಜನ್ಮ ದಿನಾಚರಣೆ ಅಡ್ಕಾರಿನ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ದೇಶವನ್ನು ಮುನ್ನಡೆಸುತ್ತಿರುವ ಅತ್ಯಂತ ಪ್ರಭಾವಶಾಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ವನವಾಸಿ ಕಲ್ಯಾಣ ಆಶ್ರಮದ ಮಕ್ಕಳ ಜತೆ ನಡೆಸುತ್ತಿರುವ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯ ಶ್ಲಾಘನಿಯ , ಇವರುಗಳ

ಅಡ್ಕಾರು : ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ Read More »

ಲೆಬೆನಾನಿನ ಬೈರುತುಲ್ ಉಪನಗರಗಳು,ಸಿರಿಯಾದ ಕೆಲಭಾಗಗಳಲ್ಲಿ ಪೇಜರ್ ಗಳ ಸ್ಪೋಟ : ಹತ್ತು ಮಂದಿ ಸಾವು

ಬೈರುತ್ : ಲೆಬನಾನಿನ ಬೈರುತ್‌ ನ ಉಪನಗರಗಳು, ಸಿರಿಯಾದ ಕೆಲವು ಭಾಗಗಳಲ್ಲಿ ಮಂಗಳವಾರ ಏಕಕಾಲಕ್ಕೆ ಪೇಜರ್‌ಗಳು ಸ್ಫೋಟಗೊಂಡು (Pager Blast) ಸುಮಾರು ಹತ್ತು ಹಿಬ್ಬುಲ್ಲಾ ಬಂಡುಕೋರ ಸಂಘಟನೆ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಇದು ಇಸ್ರೇಲ್ ವಿಶ್ವದಲ್ಲೇ ಏಕಕಾಲಕ್ಕೆ ನಡೆಸಿದ ಅತ್ಯಾಧುನಿಕ ಭೀಕರ ದಾಳಿಇರಾನ್‌ನ ರಾಯಭಾರಿ ಸೇರಿದಂತೆ ಸುಮಾರು 4000 ಜನರು ಗಾಯಗೊಂಡಿದ್ದಾರೆ ಮತ್ತು 300ಕ್ಕೂ ಅಧಿಕ ಮಂದಿ ಕಣ್ಣು ಕಳೆದುಕೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೆಬೆನಾನಿನ ಬೈರುತುಲ್ ಉಪನಗರಗಳು,ಸಿರಿಯಾದ ಕೆಲಭಾಗಗಳಲ್ಲಿ ಪೇಜರ್ ಗಳ ಸ್ಪೋಟ : ಹತ್ತು ಮಂದಿ ಸಾವು Read More »

ದುಂಡುಮೇಜಿನ ಸಭೆಗೆ ತ್ರಿವೇಣಿ ಆಯ್ಕೆ

ಪುತ್ತೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತ್ವದಲ್ಲಿ ಸೆ. 18ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ದುಂಡುಮೇಜಿನ ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಯಾಗಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಆಯ್ಕೆಗೊಂಡಿದ್ದಾರೆ.ತಾಲೂಕಿನಿಂದ ಮಕ್ಕಳ ಪ್ರತಿನಿಧಿಯಾಗಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು.ಹಸ್ತ ಬೆಳ್ಳಿಪ್ಪಾಡಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ನೆಕ್ಕಿಲಾಡಿ 34ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಸ್ ಭಾಗವಹಿಸಲಿದ್ದಾರೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ

ದುಂಡುಮೇಜಿನ ಸಭೆಗೆ ತ್ರಿವೇಣಿ ಆಯ್ಕೆ Read More »

ಐವನ್ ಡಿಸೋಜರಿಗೆ ತೆಕ್ಕಿಲ್ ಪ್ರತಿಷ್ಠಾನದಿಂದ ಸನ್ಮಾನ

ರಾಜ್ಯ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರನ್ನು ಅರಂತೋಡಿನ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸೋಮವಾರ ಅರಂತೋಡಿನಲ್ಲಿ ಸನ್ಮಾನಿಸಲಾಯಿತು.ಡಾಕ್ಟರ್ ರಘು ಮತ್ತು ಟಿ ಎಂ. ಶಹೀದ್ ತೆಕ್ಕಿಲ್ ಅವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಟಾನದ ಕಾರ್ಯದರ್ಶಿ ಹಾಗೂ ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ,ಖಜಾಂಜಿ ಟಿ ಎಂ. ಜಾವೆದ್ ತೆಕ್ಕಿಲ್,ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಇಟ್ಬಾಲ್‌ ಎಲಿಮಲೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮಟ್ಟೆ, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಸಿದ್ದಿಕ್ ಕೊಕೊ, ಅರೀಫ್ ತೆಕ್ಕಿಲ್

ಐವನ್ ಡಿಸೋಜರಿಗೆ ತೆಕ್ಕಿಲ್ ಪ್ರತಿಷ್ಠಾನದಿಂದ ಸನ್ಮಾನ Read More »

ಲಿವರ್ ದಾನ ಮಾಡಿದ ಮಹಿಳೆ ದಿಡೀರ್ ಸಾವು

ಮಂಗಳೂರು : ತನ್ನ ಸಂಬಂಧಿಕರೊಬ್ಬರಿಗೆ (Already)ಲಿವರ್ ದಾನ ಮಾಡಿದ್ದ ನಗರದ ಉಪನ್ಯಾಸಕಿ ಅರ್ಚನಾ ಕಾಮತ್‌ (33) ಅವರು ಮೃತಪಟ್ಟ ಘಟನೆ ವರದಿಯಾಗಿದೆ.ತನ್ನ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್‌ ಕಸಿ ಮಾಡಬೇಕಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು ಹಾಗೂ ಅವರು ಲಿವರ್‌ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅರ್ಚನಾ ಅವರ ಲಿವರ್‌ನ ಸ್ವಲ್ಪ ಭಾಗವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.ಬಳಿಕ ದಿಡೀರ್

ಲಿವರ್ ದಾನ ಮಾಡಿದ ಮಹಿಳೆ ದಿಡೀರ್ ಸಾವು Read More »

ಜಟ್ಟಿಪಳ್ಳ ರಸ್ತೆಯಲ್ಲಿ ಸ್ಕೂಟಿಗಳ ನಡುವೆ ಅಪಘಾತ

ಸುಳ್ಯ ಜಟ್ಟಿಪಳ್ಳ ರಸ್ತೆ ದೀಕ್ಷಾ ಬಟ್ಟೆ ಅಂಗಡಿ ಮುಂಭಾಗ ಎರಡು ಸ್ಕೂಟಿ ವಾಹನ ಪರಸ್ಪರ ಡಿಕ್ಕಿ ಯಾಗಿ ಸವಾರರಿಗೆ ಸಣ್ಣ ಪುಟ್ಟ ಗಾಯ ವಾದ ಘಟನೆ ಇದೀಗ ಸಂಭವಿಸಿದೆ.ಜಟ್ಟಿಪಳ್ಳ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಮತ್ತು ಸುಳ್ಯ ದಿಂದ ಜಟ್ಟಿಪಳ್ಳ ಕಡೆಗೆ ಹೋಗುತ್ತಿದ್ದ ಸ್ಕೂಟಿ ಮುಖಾ ಮುಖಿ ಡಿಕ್ಕಿ ಸಂಭವಿಸಿದೆ.ಘಟನೆ ಯಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಜಟ್ಟಿಪಳ್ಳ ರಸ್ತೆಯಲ್ಲಿ ಸ್ಕೂಟಿಗಳ ನಡುವೆ ಅಪಘಾತ Read More »

error: Content is protected !!
Scroll to Top