October 31, 2024

ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ

ಮಡಿಕೇರಿ ಅ.31(ಕರ್ನಾಟಕ ವಾರ್ತೆ):-ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಮತ್ತು ಅಮರ ಸುಳ್ಯ ದಂಗೆಯ ಹೋರಾಟಗಾರರ ವಿಷಯವನ್ನು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೋಟೆ ಆವರಣದಲ್ಲಿ ಗುರುವಾರ ಏರ್ಪಡಿಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ […]

ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ Read More »

ಕೈ ಕೊಟ್ಟ ವಿದ್ಯುತ್, ಬೆಳಕಿನ ಹಬ್ಬ ದೀಪಾವಳಿ ಕತ್ತಲಲ್ಲಿ ಆಚರಣೆ,ಮೆಸ್ಕಾಂ ಗೆ ಜನರಿಂದ ಹಿಡಿಶಾಪ

ಬೆಳಕಿನ ಹಬ್ಬ ದೀಪಾವಳಿಯನ್ನು‌ ಮೊದಲ ದಿನ ಸುಳ್ಯ ತಾಲೂಕಿನಲ್ಲಿ ಕತ್ತಲಲ್ಲಿ ಆಚರಿಸುವ ಭಾಗ್ಯವನ್ನು ಮೆಸ್ಕಾಂ ಕರುಣಿಸಿದೆ.ಬುಧವಾರ ರಾತ್ರಿ ಹೋಗಿರುವ ವಿದ್ಯುತ್ ಗುರುವಾರ ಬೆಳಿಗ್ಗೆ 7 ಗಂಟೆಗೆ ಮತ್ತೆ ಪಾಪಸ್ ಬಂದಿದೆ.ಇದರಿಂದ ದೀಪಾವಳಿಗೆ ತಯಾರಿ ನಡೆಸುತ್ತಿದ್ದವರು ವಿದ್ಯುತ್ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.ಗುರುವಾರ ಸಂಜೆ 6 ಗಂಟೆಗೆ ಕೈ ಕೊಟ್ಟಿರುವ ವಿದ್ಯುತ್ ರಾತ್ರಿ 10 ಗಂಟೆಯ ತನಕ ಬಂದಿಲ್ಲ.ಬೇರೆ ತಾಲೂಕುಗಳಲ್ಲಿ ಬೆಳಕಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ ಸುಳ್ಯ ತಾಲೂಕಿನಲ್ಲಿ ಬರೇ ಕತ್ತಲ್ಲಿ ಜನರು ದೀಪಾವಳಿ ಆಚರಿಸಿಕೊಂಡಿದ್ದು ಮೆಸ್ಕಾಂಗೆ ಹಿಡಿಶಾಪ

ಕೈ ಕೊಟ್ಟ ವಿದ್ಯುತ್, ಬೆಳಕಿನ ಹಬ್ಬ ದೀಪಾವಳಿ ಕತ್ತಲಲ್ಲಿ ಆಚರಣೆ,ಮೆಸ್ಕಾಂ ಗೆ ಜನರಿಂದ ಹಿಡಿಶಾಪ Read More »

(ಕವನ) ನವರಾಗ ನುಡಿಸು

ಅಂತರಂಗದ ಭಾವ     ವಿರಹದುರಿಯ ಬಂಧನದಿ ಸಿಲುಕಿ     ಮಿಡಿಯುತಿತ್ತು     ಬೇಗೆಯ  ಸೀಳಲು     ಎದೆಯ ಕತ್ತಲನಳಿಸಲು     ನಿನಗಾಗಿ  ತುಡಿಯುತಿತ್ತು .       ಹುಡುಕುತಿತ್ತು ಮನ      ದೀಪ ಹಚ್ಚುವ ಕೈಗಳ     ಮುಡಿ ಹರಡಿ ಮುನಿಸಿದೆ     ಅಮಾವಾಸ್ಯೆ ಕಡುಗತ್ತಲು      ಎದೆ ಸೀಳಿ ಬಗೆದರು      ಸ್ಫುರಣ  ಕಾಣಲೊಲ್ಲವು.       ಎತ್ತ ಸಾಗುತ್ತಿದೆ  ನನ್ನ  ಭವಿಷ್ಯ?     ಹಸುರು ಸೀರೆ ಮಾಸುತ್ತಿದೆ     ನಾರುವ ವಾಸನೆ     ಮುಗಿಲ ಮುಟ್ಟುತ್ತಿದೆ     ಒಮ್ಮೆ ನೀ ಬಂದು     ಬೆಳಕ ಸ್ಫುರಿಸು       ಎಲ್ಲಿ ಮರೆಯಾದೆ      ವರ್ಷದ ಬೆಳಕ ಹೊತ್ತು ?       ನೀ ಬರುವೆ

(ಕವನ) ನವರಾಗ ನುಡಿಸು Read More »

ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಅಕರ್ಷಕ ಆಫರ್‌ಗಳು ಲಭ್ಯ

ಸುಳ್ಯ: ಕಳೆದ 25 ವರ್ಷಗಳಿಂದ ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಗುಣ ಮಟ್ಟದ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಮಾರಾಟ ಮಾಡುವ ಮೂಲಕ ಗ್ರಾಹಕರ ಮನ ಗೆದ್ದ ಸುಳ್ಯದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್‌ನಲ್ಲಿ ಮಳಿಗೆ ಸೋಜಾ ಇಲೆಕ್ಟ್ರಾನಿಕ್ಸ್ ಅತ್ಯುತ್ತಮ ಗುಣಮಟ್ಟದ ಮತ್ತು ಬ್ರಾಂಡೆಡ್ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟಕ್ಕೆ ಹೆಸರುವಾಸಿಯಾಗಿ ಜನರ ಇಲೆಕ್ಟ್ರಾನಿಕ್ಸ್‌ ಹಾಗೂ ಫರ್ನೀಚರ್ಸ್‌ ಸೇರಿದ ಗೃಹೋಪಯೋಗಿ ಉಪಕರಣಗಳ ಬೇಡಿಕೆಯನ್ನುಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಸೋಜಾ ಇಲೆಕ್ಟ್ರಾನಿಕ್ಸ್‌ನದ್ದು.ಸುಳ್ಯ ಮುಖ್ಯ ರಸ್ತೆಯಲ್ಲಿ ಶ್ರೀರಾಮ್ ಪೇಟೆಯಲ್ಲಿ ಕಶ್ಯಪ್ ಕಾಂಪ್ಲೆಕ್ಸ್‌ನಲ್ಲಿರುವ ಸೋಜಾ ಇಲೆಕ್ಟ್ರಾನಿಕ್ಸ್ ಕಳೆದ 25

ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಅಕರ್ಷಕ ಆಫರ್‌ಗಳು ಲಭ್ಯ Read More »

ದೀಪಗಳು ಭರವಸೆಯ ಬೆಳಕಾಗಲಿ

ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಹಿಂದೂ  ಸಂಪ್ರದಾಯದಲ್ಲಿ ಆಚರಿಸುವ ಹಬ್ಬಗಳು ಸಂಸ್ಕೃತಿ,ಸಂಸ್ಕಾರ,ಆಚಾರ ವಿಚಾರ ಮುಂತಾದವುಗಳನ್ನು ಒಳಗೊಂಡು  ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಅಂತಹ ಹಲವಾರು ಹಬ್ಬಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ಹಬ್ಬದ ಹೆಸರನ್ನೇ ಸೂಚಿಸುವಂತೆ ದೀಪದ ಬೆಳಕಲ್ಲಿ ಆಚರಿಸುವ ಹಬ್ಬ ಇದಾಗಿದ್ದು ಮನೆ ಮನೆಗಳಲ್ಲಿ  ದೀಪ ಬೆಳಗಿಸಿ  ಸಂಭ್ರಮಿಸಲಾಗುತ್ತದೆ. ಈ ಹಬ್ಬದಲ್ಲಿ ಸಾಲು ಸಾಲು ದೀಪಗಳು  ಬೆಳಕಿನ ದ್ಯೋತಕವಾಗಿ  ಬೆಳಗುತ್ತವೆ. ಕತ್ತಲೆಯ ಅಂಧಕಾರವನ್ನು ಸರಿಸಿ  ಜಗಜ್ಯೋತಿಯನ್ನು ಬೆಳಗಿಸುವ ಶಕ್ತಿ ಇರುವ ದೀಪಗಳಿಗೆ ಈ

ದೀಪಗಳು ಭರವಸೆಯ ಬೆಳಕಾಗಲಿ Read More »

ದುಷ್ಟದಮನವಾಗಲಿ..ಮನೆ ಮನೆಗಳಲ್ಲಿ ದೀಪಾವಳಿಯ ಬೆಳಕು ತುಂಬಲಿ..

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಸಡಗರದಿಂದ ಆರಂಭಗೊಂಡಿದೆ. ಹಬ್ಬದ ತಯಾರಿಯೂ ಶುರುವಾಗಿದೆ. ಹಬ್ಬಗಳ ದೇಶ ಭಾರತದಲ್ಲಿ ವರ್ಷಪೂರ್ತಿ ಹಬ್ಬಗಳ ಸಂಭ್ರಮ. ಒಂದೊಂದು ರಾಜ್ಯ, ಜಿಲ್ಲೆ, ಪಂಗಡಗಳಲ್ಲಿ ಒಂದೊಂದು ಹಬ್ಬಗಳು ವೈಶಿಷ್ಟ್ಯ ಪಡೆಯುತ್ತದೆ. ಆದರೆ ಎಲ್ಲಾ ಹಬ್ಬಗಳ ಪೈಕಿ ಹಬ್ಬಗಳ ರಾಜ ದೀಪಾವಳಿಯಂತೂ ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.ದೀಪಾವಳಿ ಹೆಸರೇ ಹೇಳುವಂತೆ ದೀಪಗಳ ಹಬ್ಬ. ಮನೆಯಲ್ಲಿ ಸಾಲು ಹಣತೆ ಹಚ್ಚಿ, ಹೊಸ ಬಟ್ಟೆ ಧರಿಸಿ, ವೈವಿಧ್ಯ ಖಾದ್ಯ ತಯಾರಿಸಿ ಮನೆಮಂದಿಯೆಲ್ಲಾ ಜೊತೆ ಸೇರಿ ತಿನ್ನುವ, ಸಂಭ್ರಮಿಸುವ ಹಬ್ಬ ದೀಪಾವಳಿ.

ದುಷ್ಟದಮನವಾಗಲಿ..ಮನೆ ಮನೆಗಳಲ್ಲಿ ದೀಪಾವಳಿಯ ಬೆಳಕು ತುಂಬಲಿ.. Read More »

ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಭಕ್ತ ಸಾವು

ಕಾಸರಗೋಡಿನಿಂದ ಹೊರಟು ದೇಶ ವ್ಯಾಪಕ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೆಲ್ಲಾ ಕಾಲ್ನಡಿಗೆಯಲ್ಲೇ ಸುತ್ತಿ ದೇಶದ ಜನರ ಗಮನ ಸೆಳೆದ ಕಾಸರಗೋಡು ಕೂಡ್ಲುವಿನ ಇಬ್ಬರಲ್ಲಿ ಓರ್ವ ಕಾಲ್ನಡಿಗೆ ಯಾತ್ರೆಯ ಮಧ್ಯೆ ಮೃತಪಟ್ಟ ಘಟನೆ ವರದಿಯಾಗಿದೆ.ಅಯೋಧ್ಯೆಯಿಂದ ಶ್ರೀ ಶಬರಿಮಲೆ ಗುರಿಯಾಗಿಸಿ ನಡೆಯುವ ಮಧ್ಯೆ ಭೋಪಾಲದಲ್ಲಿ ಹೃದಯಾಘಾತ ಸಂಭವಿಸಿ ಕೂಡ್ಲು ನಿವಾಸಿ ಶಿವಪ್ರಕಾಶ್ (45)ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ‌.ಅಯೋಧ್ಯೆಯಿಂದ ಹೊರಟು ಮಧ್ಯಪ್ರದೇಶದ ಸಿಯೋನಿ ತಲುಪಿದಾಗ ಎದೆ ನೋವು ಕಾಣಿಸಿಕೊಂಡವರನ್ನು ಕೂಡಲೇ ಸಿಯೋನಿ ನಗರದ ಆಸ್ಪತ್ರೆಗೆ ಸ್ಥಳೀಯ ಹಿಂದೂ ದೇವಾಲಯಗಳ ಕಾರ್ಯಕರ್ತರ ಸಹಕಾರದಿಂದ

ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಭಕ್ತ ಸಾವು Read More »

error: Content is protected !!
Scroll to Top