October 2024

ಸಹೋದರನಿಂದಲೇ ಗರ್ಭಿಣಿಯಾದ ತಂಗಿ

ಸಹೋದರನೇ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ನೆನ್ನೆ ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ನಡೆದಿದೆ. ಹೌದು, ತಂಗಿಗೆ ಶ್ರೀರಕ್ಷೆಯಾಗಿರಬೇಕಿದ್ದ ಅಣ್ಣ ಈ ಕೃತ್ಯ ಎಸಗಿದ್ದಾನೆ. ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ ತನ್ನ ಅಣ್ಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಕೇಳಿದ್ದಾಗಿ ತಿಳಿಸಿದ್ದಾಳೆ.

ಸಹೋದರನಿಂದಲೇ ಗರ್ಭಿಣಿಯಾದ ತಂಗಿ Read More »

ಮುಂಜಾನೆ ಎಲ್ ಪಿ ಜಿ ಸಿಲಿಂಡರ್ ಸ್ಫೋಟ; 6 ಜನರ ಸ್ಥಿತಿ ಗಂಭೀರ

ಇಂದು ಮುಂಜಾನೆ ದಾವಣಗೆರೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡು, 6 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಸಿಲಿಂಡ‌ರ್ ಸ್ಫೋಟದ ತೀವ್ರತೆಗೆ ಮನೆ ಮೇಲ್ಟಾವಣಿ ಸಂಪೂರ್ಣವಾಗಿ ಕುಸಿತಗೊಂಡಿದೆ. ಬೆಳಿಗ್ಗೆ ಸಿಲಿಂಡ‌ರ್ ಆನ್ ಮಾಡಲು ಹೋದಾಗ ಏಕಾಏಕಿ ಸ್ಪೋಟವಾಗಿದೆ ಎನ್ನಲಾಗಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮುಂಜಾನೆ ಎಲ್ ಪಿ ಜಿ ಸಿಲಿಂಡರ್ ಸ್ಫೋಟ; 6 ಜನರ ಸ್ಥಿತಿ ಗಂಭೀರ Read More »

ಆಕಾಶವಾಣಿ ಕಾರ್ಯಕ್ರಮ ನಿರೂಪಕ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು ಆಕಾಶವಾಣಿಯಲ್ಲಿ, ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಗಳಲ್ಲಿ, ನಿಯೋಜನೆ ಮೇರೆಗೆ ಉದ್ಯೋಷಕರು/ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಯಾವುದೇ ರೀತಿಯ ಉದ್ಯೋಗವಾಗಿರದೇ ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು.ಅಭ್ಯರ್ಥಿಗಳು ಪದವಿ ಉತ್ತೀರ್ಣರಾಗಿರಬೇಕು ಹಾಗೂ 50 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಈ ಕುರಿತು ದಾಖಲೆಗಳ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಆದ್ಯತೆ ನೀಡಲಾಗುವುದು.ಅಭ್ಯರ್ಥಿಗಳು 354 ರೂಪಾಯಿಗಳ

ಆಕಾಶವಾಣಿ ಕಾರ್ಯಕ್ರಮ ನಿರೂಪಕ ಹುದ್ದೆಗೆ ಅರ್ಜಿ ಆಹ್ವಾನ Read More »

ಬಾಗಿಲಿನ ದಾರಂದ ಬಿದ್ದು ಮಗು ಸಾವು

ಬೆಳ್ತಂಗಡಿ : ತಲೆಯ ಮೇಲೆ ಭಾಗಿಲಿನ ದಾರಂದ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾದ ಕೊನಲೆ ಎಂಬಲ್ಲಿ ನಡೆದಿದೆ.ಹಾರೀಸ್ ಮುಸ್ಲಿಯಾ‌ರ್ ಮತ್ತು ಅಸ್ಮಾ ದಂಪತಿ ಪುತ್ರಿ, ಕೇರ್ಯಾ ಸರಕಾರಿ ಶಾಲೆಯ 1 ನೇ ತರಗತಿಯ ಅಲ್ಪಿಯಾ (6) ಮೃತ ಬಾಲಕಿಯಾಗಿದ್ದಾಳೆ. ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲು ಮನೆಯ ಪಕ್ಕದಲ್ಲಿ ದಾರಂದವನ್ನು ಜೋಡಿಸಿದ್ದರು. ಈ ಸಂದರ್ಭದಲ್ಲಿ

ಬಾಗಿಲಿನ ದಾರಂದ ಬಿದ್ದು ಮಗು ಸಾವು Read More »

ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಅದ್ದೂರಿ ಚಾಲನೆ

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ನಾಡೋಜ ಸಾಹಿತಿ ಹಂಪ ನಾಗರಾಜಯ್ಯ ದಸರಾ ಉದ್ಘಾಟನೆಯನ್ನು ಮಾಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ,ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಚಾಮುಂಡಿಬೆಟ್ಟದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ನಾಡೋಜ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಡಿಸಿಎಂ ಡಿಕೆಶಿ ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಅದ್ದೂರಿ ಚಾಲನೆ Read More »

ಅರಂತೋಡು: ದುರ್ಗಾ ಸ್ಟೋರ್ ಶುಭಾರಂಭ

ಅರಂತೋಡು ಗೋಪಾಲಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಮೂಲೆಮಜಲು ಮತ್ತು ಪುಷ್ಪಾಧರ ಕೊಡಂಕೇರಿ ಮಾಲಕತ್ವದ ಶ್ರೀ ದುರ್ಗಾ ಸ್ಟೋರ್ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.ಸುಳ್ಯ ಸೀಮೆ ಮಲ್ಲಿಕಾರ್ಜುನ ದೇವಳದ ಪ್ರಧಾನ ಅರ್ಚಕರಾದ ಕೇಶವಮೂರ್ತಿ ಉದ್ಘಾಟಿಸಿದರು.ಅತಿಥಿಗಳಾಗಿ, ಸಂತೋಷ್ ಕುತ್ತಮೊಟ್ಟೆ, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂತೋಡು ತೊಡಿಕಾನ,ಕೇಶವ ಅಡ್ತಲೆ ಅಧ್ಯಕ್ಷರು, ಗ್ರಾಮ ಪಂಚಾಯತ್ ಅರಂತೋಡು,ಜಿತೇಂದ್ರ ಕುಡ್ಯಮಲೆ, ಅಡಳಿತ ಮೊಕ್ತೇಸರು, ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ, ಕೆ. ಆರ್. ಗಂಗಾಧರ, ನಿವೃತ್ತ ಪ್ರಾಂಶುಪಾಲರು, ನೆ.ಸ್ಮಾ.ಪ.ಪೂ.ಕಾಲೇಜು ಆರಂತೋಡು,ಜನಾರ್ಧನ ನಾಯರ್ ಇರ್ನೆ

ಅರಂತೋಡು: ದುರ್ಗಾ ಸ್ಟೋರ್ ಶುಭಾರಂಭ Read More »

ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ’ ಶೀರ್ಷಿಕೆಯಡಿ ಕಾರ್ಯಕ್ರಮ

ಸಾಂಗ್ಲಿ:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ’ ಶೀರ್ಷಿಕೆಯಡಿ ನಡೆಯುವ ಕರ್ನಾಟಕ ಸುವರ್ಣ ಸಂಭ್ರಮ-50 ಕಾರ್ಯಕ್ರಮದಲ್ಲಿಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ನೆರವೇರಿಸಿದರು.

ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ’ ಶೀರ್ಷಿಕೆಯಡಿ ಕಾರ್ಯಕ್ರಮ Read More »

ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು ಘಟಕದ ವತಿಯಿಂದ ಗಾಂಧಿಜಯಂತಿ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ

ಗಾಂಧಿ ತತ್ವಕ್ಕೆ ತಧ್ವಿರುದ್ಧವಾದ ಕ್ರಿಯೆಗಳು ನಡೆಯುತ್ತಿರುವುದರಿಂದ ಅದನ್ನು ತಿದ್ದಿ ಸರಿಪಡಿಸಿಕೊಳ್ಳಲು ಇಂತಹ ಮಹಾನ್ ವ್ಯಕ್ತಿಗಳ ತತ್ವದರ್ಶಗಳನ್ನು ಯುವಜನತೆಯ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶವನ್ನು ಕಟ್ಟುವಲ್ಲಿ ಹೆಜ್ಜೆಇಡಬೇಕಾಗಿದೆ. ಆಗ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯ ಆಚರಣೆಗಳು ಅರ್ಥವನ್ನು ಪಡೆದುಕೊಳ್ಳುತ್ತದೆ. ಎಂದು ಅಂಬೇಡ್ಕರ್ ರಕ್ಷಣ ವೇದಿಕೆ ಅಧ್ಯಕ್ಷರು ನವೀನ ಕಲ್ಲುಗುಡ್ಡೆ ಹೇಳಿದರು.ಈ ಸಂದರ್ಭದಲ್ಲಿ ಸಂಘಟನೆ ಹಮ್ಮಿಕೊಂಡಿದ್ದ ಗಾಂಧಿಜಯಂತಿ ಕಾರ್ಯಕ್ರಮವನ್ನು ಧಾರ್ಮಿಕ ಮತ್ತು ಹಿರಿಯಾ ಯಕ್ಷಗಾನ ಕಲಾವಿದ ಯುವರಾಜ್ ಜೈನ್, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಮತ್ತು

ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು ಘಟಕದ ವತಿಯಿಂದ ಗಾಂಧಿಜಯಂತಿ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ Read More »

ತೊಡಿಕಾನ : ಮಂಜೂರಾತಿ ಪತ್ರ ಹಸ್ತಾಂತರ

ತೊಡಿಕಾನ : ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಗೆ ಬೆಂಚು ಡಸ್ಕ್ ಗೆ ಮನವಿ ನೀಡಿದ್ದು ಯೋಜನೆಯಿಂದ ಮಂಜುರಾದ ಮಂಜೂರಾತಿ ಪತ್ರವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ್ ಹಾಗೂ ಮುಖ್ಯೋಪಾಧ್ಯರಾದ ಅರುಣ್ ಕುಮಾರ್ ರವರಿಗೆ ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಬಾಳೆಕಜೆ ಯವರ ಮೂಲಕ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಗಂಗಾಧರ್ ನಿಕಟಪೂರ್ವಕ ಅಧ್ಯಕ್ಷರಾದ ತಿಮ್ಮಯ್ಯ ಮೆತ್ತಡ್ಕ ಹಾಗೂ

ತೊಡಿಕಾನ : ಮಂಜೂರಾತಿ ಪತ್ರ ಹಸ್ತಾಂತರ Read More »

ಅರಂತೋಡು : ಗ್ರಾಮ ಪಂಚಾಯತ್ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯಲತಾ ರವರಿಗೆ ಗೌರವಾರ್ಪಣೆ

ಅರಂತೋಡು : ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರ ಸಚಿವಾಲಯ ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರ0ತೋಡು ಗ್ರಾಮ ಪಂಚಾಯತಿನ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯ ಲತಾ ರವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲನ್ ಮುಗಿಲನ್ ಅವರು ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಸ್ವಚ್ಛತಾ ಸಹಾಯಕಿಯರಾದ ಶ್ರೀಮತಿ ವಿಜಯಲಕ್ಷ್ಮಿ

ಅರಂತೋಡು : ಗ್ರಾಮ ಪಂಚಾಯತ್ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯಲತಾ ರವರಿಗೆ ಗೌರವಾರ್ಪಣೆ Read More »

error: Content is protected !!
Scroll to Top