October 2024

ಹೊತ್ತಿ ಉರಿದ ಪಟಾಕಿ ಅಂಗಡಿ,ಮಹಿಳೆ ಗಂಭೀರ

ದೀಪಾವಳಿ ಇನ್ನು ಕೆಲವೇ ದಿನಗಳಲ್ಲಿ ಆಗಮಿಸಲಿದೆ.ಎಲ್ಲೆಲ್ಲೂ ಈಗ ಪಟಾಕಿ ಅಂಗಡಿಗಳು ಸದ್ದು ಮಾಡುತ್ತಿವೆ.ಹೈದರಾಬಾದ್ ಸುಲ್ತಾನ್ ಬಜಾರ್‌ನ ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಪಟಾಕಿ ಬಾಂಬುಗಳಂತೆ ಸಿಡಿದಿದ್ದು, ಅಂಗಡಿಯೊಳಗಿದ್ದ 25ಕ್ಕೂ ಹೆಚ್ಚು ಮಂದಿ ಒಬ್ಬರ ಮೇಲೊಬ್ಬರು ಹತ್ತಿ ಹೊರಗೋಡಿ ಬಂದಿದ್ದಾರೆ. ಪಟಾಕಿ ಅಂಗಡಿಯ ಪಕ್ಕದಲ್ಲೇ ಇದ್ದ ಹೋಟೆಲ್ ಸಹ ಧಗಧಗಿಸಿದ್ದು, ಗ್ರಾಹಕರು ಹೊರಗೋಡಿ ಜೀವ ರಕ್ಷಸಿಕೊಂಡಿದ್ದಾರೆ. 8 ಕಾರುಗಳು, 10ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿವೆ. ಓರ್ವ ಮಹಿಳೆಗೆ ತೀವ್ರ ಗಾಯವಾಗಿದ್ದು, ಅದೃಷ್ಟವಷಾತ್ ಪ್ರಾಣಾಪಾಯ ಸಂಭವಿಸಿಲ್ಲ.

ಹೊತ್ತಿ ಉರಿದ ಪಟಾಕಿ ಅಂಗಡಿ,ಮಹಿಳೆ ಗಂಭೀರ Read More »

ಅ.31ಕ್ಕೆ ತೊಡಿಕಾನ ಮಲ್ಲಿಕಾರ್ಜುನ ದೇವರ ಬಲಿ ಹೊರಡುವ ಕಾರ್ಯಕ್ರಮ

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ದೀಪಾವಳಿ ಅಮವಾಸ್ಯೆ ಪ್ರಯುಕ್ತ ದೇವರ ಬಲಿ ಹೊರಡುವ ಕಾರ್ಯಕ್ರಮ ಅ.31ರಂದು ನಡೆಯಲಿದೆ. ದೀಪಾವಳಿ ಅಮವಾಸ್ಯೆ ಪ್ರಯುಕ್ತ ರಾತ್ರಿ ಶ್ರೀ ದೇವರ ಬಲಿ ಹೊರಡಲಿದೆ ಎಂದು ದೇವಸ್ಥಾನದ ಕಚೇರಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಅ.31ಕ್ಕೆ ತೊಡಿಕಾನ ಮಲ್ಲಿಕಾರ್ಜುನ ದೇವರ ಬಲಿ ಹೊರಡುವ ಕಾರ್ಯಕ್ರಮ Read More »

ಸಾರ್ವಜನಿಕರ ಭೇಟಿಗೆ ನಾಳೆ ಶಾಸಕರು ಲಭ್ಯ

ಸುಳ್ಯ: ವಿಧಾನ ಪರಿಷತ್‌ ಉಪಚುನಾವಣೆಯ ನೀತಿಸಂಹಿತೆಯಿಂದ ಕೆಲವು ಸಮಯದಿಂದ ಸಾರ್ವಜನಿಕ ಭೇಟಿಗೆ ಲಭ್ಯರಿಲ್ಲದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅ.28ರಿಂದ ಕಚೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುತ್ತಾರೆ. ಶಾಸಕರು ಪ್ರತಿ ಸೋಮವಾರ ಸುಳ್ಯ ತಾಲೂಕು ಪಂಚಾಯತ್ ಕಛೇರಿಯಲ್ಲಿ ಮತ್ತು ಪ್ರತಿ ಮಂಗಳವಾರ ಕಡಬ bತಾಲ್ಲೂಕು ಕಛೇರಿಯಲ್ಲಿ 10.30ರಿಂದ 2.30ರ ತನಕ ಲಭ್ಯರಿದ್ದಾರೆ ಎಂದು ಶಾಸಕರ ಕಛೇರಿಯ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರ ಭೇಟಿಗೆ ನಾಳೆ ಶಾಸಕರು ಲಭ್ಯ Read More »

ಬಂದಡ್ಕದಲ್ಲಿ ಅದ್ದೂರಿಯಾಗಿ ನಡೆದ ಅರೆಭಾಷೆ ಗಡಿನಾಡ ಉತ್ಸವ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗಗಳಲ್ಲಿ ನಡೆಯುವ ಅರೆಭಾಷೆ ಗಡಿನಾಡ ಉತ್ಸವದ ಮೊದಲ ಕಾರ್ಯಕ್ರಮ ಅ.27 ರಂದು ಬಂದಡ್ಕದಲ್ಲಿ ಅದ್ದೂರಿಯಾಗಿ ನಡೆಯಿತು.ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ದೀಪ ಬೆಳಗಿಸಿ, ಹಿಂಗಾರ ಅರಳಿಸಿ ಉದ್ಘಾಟಿಸಿದರು. ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಕುತ್ತಿಕೋಲು ಗ್ರಾ.ಪಂ.ಅಧ್ಯಕ್ಷ ಮುರಳಿ ಪಯ್ಯಂಗಾನ, ಕಾರಡ್ಕ ಬ್ಲಾಕ್

ಬಂದಡ್ಕದಲ್ಲಿ ಅದ್ದೂರಿಯಾಗಿ ನಡೆದ ಅರೆಭಾಷೆ ಗಡಿನಾಡ ಉತ್ಸವ Read More »

ಅಂತ‌ರ್ ರಾಜ್ಯ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್ ಶಿಪ್ ಗೆ ಪ್ರಪುಲ್ ಯು. ಎಸ್. ಆಯ್ಕೆ.

2024- 25ರ ದಕ್ಷಿಣ ವಲಯ ಮಟ್ಟದ ಅಂತ‌ರ್ ರಾಜ್ಯ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್ ಶಿಪ್ ಚೆನ್ನೈ ಯಲ್ಲಿ ನಡೆಯಲಿದ್ದು ಅರಂತೋಡಿನ ಪ್ರಪುಲ್ ಯು. ಎಸ್. ಆಯ್ಕೆಯಾಗಿದ್ದಾರೆ.ಈತ ಕುಕ್ಕೆ ಸುಬ್ರಹ್ಮಣ್ಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿದ್ದ ಅರಂತೋಡಿನ ಉಳುವಾರು ದಿ. ಯು.ಡಿ. ಶೇಖರ್ ಹಾಗೂ ಉಪ್ಪಿನಂಗಡಿ ಗ್ರಾ.ಪಂ. ಕಾರ್ಯದರ್ಶಿ ಗೀತಾ ಶೇಖರ್ ದಂಪತಿಯ ಪುತ್ರ. ಪುತ್ತೂರಿನ ವಿವೇಕಾನಂದ ತಾಂತ್ರಿಕ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ವಿವೇಕಾನಂದ ಕಾಲೇಜನ್ನು ಪ್ರತಿನಿಧಿಸಲಿದ್ದಾರೆ.

ಅಂತ‌ರ್ ರಾಜ್ಯ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್ ಶಿಪ್ ಗೆ ಪ್ರಪುಲ್ ಯು. ಎಸ್. ಆಯ್ಕೆ. Read More »

ಅರೆಭಾಷೆ ಗಡಿನಾಡ ಉತ್ಸವ 2024 ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು . ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗಗಳಲ್ಲಿ ಅರೆಭಾಷೆ ಗಡಿನಾಡ ಉತ್ಸವ – 2024 ನಡೆಯಲಿದ್ದು, ಅ.27ರಂದು ಮೊದಲ ಗಡಿನಾಡ ಉತ್ಸವ ಬಂದಡ್ಕದಲ್ಲಿ ನಡೆಯಲಿದೆ. ಇದರ ಆಮಂತ್ರಣ ಬಿಡುಗಡೆ ಸಮಾರಂಭ ಅ.18ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡರು

ಅರೆಭಾಷೆ ಗಡಿನಾಡ ಉತ್ಸವ 2024 ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳನ್ನು ಮತ್ತೆ ಸೆರೆ ಹಿಡಿದ ಪೊಲೀಸರು

: ಸುಳ್ಯ ಸರಕಾರಿ ಆಸ್ಪತ್ರೆ ಬಳಿಯಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳನನ್ನು ಸುಳ್ಯ ಪೊಲೀಸರು ಮತ್ತೆ ಸೆರೆ ಹಿಡಿದಿದ್ದಾರೆ.ಕೆಲ ದಿನಗಳ ಹಿಂದೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿ ತಮಿಳುನಾಡು ಕಡೆಗೆ ತೆರಳಿದ್ದ ಸಂಶಯ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಆತನನ್ನು ಸತ್ಯಮಂಗಲ ಪರಿಸರದಲ್ಲಿ ವಶಕ್ಕೆ ಪಡೆದು ಸುಳ್ಯಕ್ಕೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳನ್ನು ಮತ್ತೆ ಸೆರೆ ಹಿಡಿದ ಪೊಲೀಸರು Read More »

ಅ.27ಕ್ಕೆ ಬಂದಡ್ಕದಲ್ಲಿ ಅರೆಭಾಷೆ ಗಡಿನಾಡ ಉತ್ಸವ 2024 ಕಾರ್ಯಕ್ರಮ : ಸದಾನಂದ ಮಾವಜಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗಗಳಲ್ಲಿ ಅರೆಭಾಷೆ ಗಡಿನಾಡ ಉತ್ಸವ 2024 ಮೊದಲ ಗಡಿನಾಡ ಉತ್ಸವ ಅ.27ರಂದು ಬಂದಡ್ಕದಲ್ಲಿ ನಡೆಯಲಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರ ಬಂದಡ್ಕ ಬಳಿಯಿಂದ ಅದ್ದೂರಿ ಮೆರವಣಿಗೆ ನಡೆಯಲಿದೆ. ಮುಂಜಾನೆಯಿಂದ ಸಂಜೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುವುದು.

ಅ.27ಕ್ಕೆ ಬಂದಡ್ಕದಲ್ಲಿ ಅರೆಭಾಷೆ ಗಡಿನಾಡ ಉತ್ಸವ 2024 ಕಾರ್ಯಕ್ರಮ : ಸದಾನಂದ ಮಾವಜಿ Read More »

ಜಾಂಡೀಸ್ ಗೆ ಯುವಕ ಬಲಿ

ಸುಳ್ಯ ನಗರದ ಹಳೆಗೇಟು ಹೊಸಗದ್ದೆ ನಿವಾಸಿ ಭವಾನಿಯವರ ಪುತ್ರ ರೋಷನ್ ರವರು ಜಾಂಡಿಸ್ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಎರಡು ವಾರಗಳ ಹಿಂದೆ ಜಾಂಡಿಸ್ ರೋಗಗಕ್ಕೆ ಒಳಗಾಗಿದ್ದ ಅವರು ಸುಳ್ಯ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಜಾಂಡೀಸ್ ಗೆ ಯುವಕ ಬಲಿ Read More »

ಕೊಲ್ಲಮೊಗ್ರು : ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ಗ್ರಾಮ ಪಂಚಾಯತ್ ಮುಖಾಂತರ ಸರ್ಕಾರಕ್ಕೆ ಮನವಿ

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಗ್ರಾಮಸ್ಥರು ಅ.24 ರಂದು ಗ್ರಾಮ ಪಂಚಾಯತ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಯವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ, ಉಪಾಧ್ಯಕ್ಷರಾದ ಅಶ್ವಥ್ ಯಳದಾಳು, ಸದಸ್ಯರಾದ ಮಾಧವ ಚಾಂತಾಳ, ಮೋಹಿನಿ ಕಟ್ಟ ಹಾಗೂ ನಿಕಟಪೂರ್ವ ಅಧ್ಯಕ್ಷರು, ಸದಸ್ಯರು ಮತ್ತು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ

ಕೊಲ್ಲಮೊಗ್ರು : ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ಗ್ರಾಮ ಪಂಚಾಯತ್ ಮುಖಾಂತರ ಸರ್ಕಾರಕ್ಕೆ ಮನವಿ Read More »

error: Content is protected !!
Scroll to Top