October 2024

ದೀಪಾವಳಿ ರಜೆ ಯಾವಾಗ ? ಇಲ್ಲಿದೆ ಮಾಹಿತಿ

ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ತಯಾರಿ ನಡೆಯುತ್ತಿದೆ.ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ. ಹಿಂದುಗಳ ಅತಿದೊಡ್ಡ ಹಬ್ಬಕ್ಕೆ ಎಲ್ಲ ರೀತಿಯ ತಯಾರಿಗಳು ನಡೆಯುತ್ತಿವೆ. ದೇಶದೆಲ್ಲಡೆ ಬೆಳಕಿನ ಹಬ್ಬವನ್ನು ಬಹು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲೆಗಳಿಗೆ ದೀಪಾವಳಿ ಹಬ್ಬದ ರಜೆಯನ್ನು ನೀಡಲಾಗಿದೆ. ನವೆಂಬ‌ರ್ ೧ ಶುಕ್ರವಾರ, ನವೆಂಬರ್ ೨ ಶನಿವಾರ, ಸೇರಿದಂತೆ ಒಟ್ಟು ಎರಡು ದಿನಗಳ ರಜೆಯನ್ನು ನೀಡಲಾಗಿದೆ. ನ.೩ ಭಾನುವಾರ ಆದ್ದರಿಂದ ೩ ದಿನಗಳ ರಜೆ ಲಭ್ಯವಾಗಲಿದೆ.

ದೀಪಾವಳಿ ರಜೆ ಯಾವಾಗ ? ಇಲ್ಲಿದೆ ಮಾಹಿತಿ Read More »

ತೊಡಿಕಾನ : ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ನಷ್ಟ

ತೊಡಿಕಾನ ಸಮೀಪದ ಬಂಗಾರಕೋಡಿ ಎಂಬಲ್ಲಿ‌ ಇಲ್ಲಿಯ ತೋಟವೊಂದಕ್ಕೆ ಕಾಡಾನೆಗಳು ದಾಳಿ ನಡೆಸಿ ಅಪಾರ ಕ್ರಷಿ ಬೆಳೆಗಳನ್ನು ನಾಶ ಪಡಿಸಿದ ಘಟನೆ ವರದಿಯಾಗಿದೆ.ಇಲ್ಲಿಯ ವಿದ್ಯಾ ಅವರ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 10 ಅಡಿಕೆ,ಎರಡು ಬಾಳೆ ಮರ,ಒಂದು ಜೀಕುಜ್ಜೆ ಮರಗಳನ್ನು ಮುರಿದು ಹಾಕಿವೆ.ಅಲ್ಲದೆ ಒಂದು‌ ತೆಂಗಿನ ಮರಕ್ಕೆ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ.

ತೊಡಿಕಾನ : ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ನಷ್ಟ Read More »

ವಿಧಾನ ಪರಿಷತ್ ಚುನಾವಣೆ : ಬಿಜೆಪಿಯ ಕಿಶೋರ್ ಕುಮಾರ್ ಗೆ ಗೆಲುವು

ತೆರವಾಗಿದ್ದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿಯ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು ಸಾಧಿಸಿದ್ದಾರೆ.ಕಿಶೋರ್ ಕುಮಾರ್ ರಿಗೆ 3654 ಮತಗಳು, ಕಾಂಗ್ರೆಸ್ ನ ರಾಜು ಪೂಜಾರಿಯವರಿಗೆ 1957 ಮತಗಳು, ಎಸ್.ಡಿ.ಪಿ.ಐ. ಅಭ್ಯರ್ಥಿ ಅನ್ವರ್ ಸಾದಾತ್ ರವರಿಗೆ 195 ಮತಗಳು,ದಿನಕರ ಉಳ್ಳಾಲ್ (ಪಕ್ಷೇತರ)-9 ಮತ, ಅಸಿಂಧು-87 ಮತ ಎಂದು ತಿಳಿದುಬಂದಿದೆ. ಬಿ.ಜೆ.ಪಿ.ಯ ಕಿಶೋರ್ ಕುಮಾರ್ 1697 ಮತಗಳ ಲೀಡ್ ಪಡೆದು ವಿಜಯಶಾಲಿಯಾಗಿದ್ದಾರೆ.

ವಿಧಾನ ಪರಿಷತ್ ಚುನಾವಣೆ : ಬಿಜೆಪಿಯ ಕಿಶೋರ್ ಕುಮಾರ್ ಗೆ ಗೆಲುವು Read More »

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್

ಮಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್ ಟೇಬಲ್ ತನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ದಾಖಲಿಸಿ ಸಮಯಪ್ರಜ್ಞೆ ಮೆರೆದಿರುವ ಕುರಿತು ಘಟನೆ ವರದಿಯಾಗಿದೆ.ಬುಧವಾರದಂದು ಮುಂಜಾನೆ ಸುಮಾರು 3:40ರ ಸುಮಾರಿಗೆ ನಗರದ ಕೆಪಿಟಿ ಬಳಿ ಪಿಕ್ ಅಪ್ ವಾಹನ ಮತ್ತು ಕಂಟೈನ‌ರ್ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕ್ಲೀನರ್ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ಪಡೆದ ಕದ್ರಿ ಠಾಣೆಯ ಮಹಿಳಾ ಪೊಲೀಸ್‌ ಕಾನ್ಸೆಬಲ್ ಮನ್ಶಿದಾ ಬಾನು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ Read More »

ಉಪಚುನಾವಣೆ: ಚನ್ನಪಟ್ಟಣ, ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ

ಮುಂದಿನ ನವೆಂಬರ್ 13ರಂದು ನಡೆಯಲಿರುವ ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಎರಡು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನ ಘೋಷಿಸಿದೆ. ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಸಿಪಿ ಯೋಗೇಶ್ವರ್ ಅವರಿಗೆ ಕಾಂಗ್ರೆಸ್‌ ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ. ಸಂಡೂರು ವಿಧಾನಸಭಾ ಉಪಚುನಾವಣೆಗೆ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಗೊಂದಲ ಬಗೆಹರಿದಿಲ್ಲ.ಈ ಕಾರಣದಿಂದ ಈ ಕ್ಷೇತ್ರಕ್ಕೆ ಇನ್ನಷ್ಟೆ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ.

ಉಪಚುನಾವಣೆ: ಚನ್ನಪಟ್ಟಣ, ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ Read More »

ಸುಳ್ಯದ 108 ಆಂಬ್ಯುಲೆನ್ಸ್ ವಾಹನ ನಿಲ್ಲಿಸಲು ಸ್ಥಳವಾಕಾಶದ ಕೊರತೆ : ಆರೋಗ್ಯ ಸಚಿವರಿಗೆ ಮನವಿ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ 108 ವಾಹನ ಶೆಡ್ ನಲ್ಲಿ ನಿಲ್ಲಿಸಲು ಆಸ್ಪತ್ರೆಯವರು ತಕರಾರು ಮಾಡುತಿದ್ದಾರೆಂದು 108 ವಾಹನ ಸಿಬ್ಬಂದಿಗಳು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಕಳೆದ 8 ವರ್ಷಗಳಿಂದ ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿ 108 ಅಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಈ 108 ಆಂಬುಲೆನ್ಸ್ ನಿಲುಗಡೆಗೆ ತಾತ್ಕಾಲಿಕ ಶೆಡ್ ಒಂದನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿಯೂ ಆಗಾಗ ಅಂಬುಲೆನ್ಸ್ ಅನ್ನು ಆ ಶೆಡ್ ನಲ್ಲಿ ನಿಲ್ಲಿಸಬಾರದೆಂದು ಆಸ್ಪತ್ರೆಯ

ಸುಳ್ಯದ 108 ಆಂಬ್ಯುಲೆನ್ಸ್ ವಾಹನ ನಿಲ್ಲಿಸಲು ಸ್ಥಳವಾಕಾಶದ ಕೊರತೆ : ಆರೋಗ್ಯ ಸಚಿವರಿಗೆ ಮನವಿ Read More »

Master Emotional Intelligence: Elevate Your Leadership and Teamwork Skills

Building on the foundation of effective communication, emotional intelligence (EI) takes your career growth to the next level. While communication helps you connect and convey your ideas clearly, emotional intelligence allows you to understand, manage, and respond effectively to emotions—yours and others’. Mastering EI helps you become a stronger leader and an invaluable team player

Master Emotional Intelligence: Elevate Your Leadership and Teamwork Skills Read More »

ಕೇಂದ್ರ ಸರಕಾರದಿಂದ ತಿಂಗಳಿಗೆ 4,500 ರೂಪಾಯಿ

ಪಿಎಂ ಇಂಟರ್ನ್‌ಶಿಪ್ ಯೋಜನೆಯಲ್ಲಿ ಈವರೆಗೆ 280 ಕಂಪನಿಗಳು ನೊಂದಣಿ ಮಾಡಿಕೊಂಡಿವೆ. ಇದೀಗ ಸ್ಕಿಮ್ ನ ಪೋರ್ಟಲ್‌ನಲ್ಲಿ ಕಂಪನಿಗಳ ನೊಂದಣಿ ನಿಲ್ಲಿಸಲಾಗಿದೆ. ಆದರೆ, ಯುವಜನರು ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವುದನ್ನು ಮುಂದುವರಿಸಬಹುದು. 21ರಿಂದ 24 ವರ್ಷದೊಳಗಿನ ವಯಸ್ಸಿನ ಯುವಕ ಮತ್ತು ಯುವತಿಯರು ಇಂಟರ್ನ್‌ ಶಿಪ್ ಪಡೆಯಬಹುದು.ಒಂದು ವರ್ಷದ ಇಂಟರ್ನ್ ಶಿಪ್ ಅವಕಾಶ ಕೊಡುವ ಈ ಸ್ಕಿಮ್‌ನಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ ವರ್ಷಕ್ಕೆ 66,000 ರೂವರೆಗೆ ಧನಸಹಾಯ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಮಾಸಿಕವಾಗಿ 4,500 ರೂ. ಹಣವನ್ನು ಸ್ಟೈಪೆಂಡ್ ಆಗಿ

ಕೇಂದ್ರ ಸರಕಾರದಿಂದ ತಿಂಗಳಿಗೆ 4,500 ರೂಪಾಯಿ Read More »

ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ನಿಧನ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕೆರೆಮೂಲೆ ದಿ.ಕೃಷ್ಣ ಕೇಕುಣ್ಣಾಯ ರವರ ಪುತ್ರ ಸುಳ್ಯ ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು. ಅವರಿಗೆ 52 ವರ್ಷ ಪ್ರಾಯವಾಗಿತ್ತು.ಮೃತರು ಕೆಲ ಸಮಯಗಳಿಂದ ಕರುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.ಮೃತರು ತಾಯಿ ಸತ್ಯಭಾಮೆ, ಪತ್ನಿ ಶೋಭಾ, ಪುತ್ರ ಮಾ| ಆದಿತ್ಯ, ಪುತ್ರಿಯರಾದ ಶ್ವೇತಾ,ನಂದಿತಾ ಇತರರನ್ನು ಅಗಲಿದ್ದಾರೆ.

ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ನಿಧನ Read More »

ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾ ಬಳಕೆ!

ರಾಂಚಿ: ಝಾರ್ಖಂಡ್‌ನ ಗಡ್ಡಾದಲ್ಲಿ ಪಾನಿಪೂರಿ ವ್ಯಾಪಾರಸ್ಥರು ರುಚಿ ಹೆಚ್ಚಿಸಲು ಯೂರಿಯಾ ಹಾಗೂ ಟಾಯ್ಲೆಟ್ ಸ್ವಚ್ಛ ಮಾಡುವ ಹಾರ್ಪಿಕ್ ಅನ್ನು ಬಳಸುತ್ತಿದ್ದ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಕೊಳಕು ಆಹಾರ ನೀಡಿದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾಲಿನಲ್ಲಿ ಹಿಟ್ಟು ಕಲಸಿದ್ದನ್ನು ಒಪ್ಪಿದರಲ್ಲದೆ, ಪಾನಿಪೂರಿ ಸ್ವಾದ ಹೆಚ್ಚಿಸುವ ಸಲುವಾಗಿ ಅದಕ್ಕೆ ಯೂರಿಯಾ ಹಾಗೂ ಹಾರ್ಪಿಕ್ ಅನ್ನು ಬಳಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಪಾನಿಪೂರಿ ವ್ಯಾಪಾರಸ್ಥರು ಕಾಲಿನಲ್ಲಿ ಹಿಟ್ಟು ಕಲಸುತ್ತಿದ್ದ ವೀಡಿಯೋ ಒಂದು ವೈರಲ್ ಆಗಿತ್ತು.

ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾ ಬಳಕೆ! Read More »

error: Content is protected !!
Scroll to Top