ಅರಂತೋಡು : ಅರಮನೆಗಯ ಶಿಥಿಲಗೊಂಡು ಬಿದ್ದಿರುವ ತೂಗುಸೇತುವೆ ತಕ್ಷಣ ದುರಸ್ತಿ ಮಾಡಿ,ಬಳಿಕ ಶಾಶ್ವತ ಸೇತುವೆ ನಿರ್ಮಾಣ ಮಾಡಲು ಮನವಿ
ಅರಂತೋಡು, ಅ.19 : ಅರಂತೋಡು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಬಲ್ನಾಡ್ ಹೊಳೆಯ ಅರಮನೆಗಯ ಎಂಬಲ್ಲಿ ಶಿಥಿಲಗೊಂಡ ಸೇತುವೆ ಸಹಿತ ಮೂವರು ಹೊಳೆಗೆ ಬಿದ್ದು ಗಾಯಗೊಂಡಿದ್ದು ಈ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿ ಕೊಡಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಸುಳ್ಯ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಗಿದೆ.ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ‘ಹಲವು ವರ್ಷಗಳಿಂದ ಇದ್ದಂತ ತೂಗುಸೇತುವೆ ಈ ಮೊದಲು 30 ವರುಷಗಳಿಂದ ಸಂಬಂಧಪಟ್ಟ ಶಾಸಕರಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿ ವರ್ಗದವರಿಗೂ ಶಾಶ್ವತವಾಗಿ ಇಲ್ಲಿಗೆ ಹೊಸ ಸೇತುವೆ […]