October 2024

ಅರಂತೋಡು : ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗಡೆ ಬಿದ್ದು ಮೂವರಿಗೆ ಗಾಯ

ಅರಂತೋಡು : ಅರಂತೋಡು ಸಮೀಪದ ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಬಿದ್ದು ಮೂವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯ ತೇಜಕುಮಾರ್ ಅವರ ಮನೆಗೆ ಬರುತ್ತಿದ್ದಾಗ ತೂಗು ಸೇತುವೆಯವ ರೋಪ್ ತುಂಡಾಗಿ ಕುಸುಮಾಧರ ಉಳುವಾರು,ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಅರಮನೆಗಯ ಅವರು ಸೇತುವೆಯಿಂದ ಕೆಳಗಡೆ ಬಿದ್ದರು. ಪರಿಣಾಮವಾಗಿ ಕುಸುಮಾಧರ ಉಳುವಾರು ಅವರ ಕೈಗೆ ಗಂಭೀರ ಏಟು ತಗುಲಿದೆ.ತೇಜಕುಮಾರ ಅವರು ರೋಪ್ ನಲ್ಲಿ ನೇತಾಡಿಕೊಂಡು ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ.ಚಂದ್ರಶೇಖರ ಅವರು ಗಾಯಗೊಂಡಿದ್ದಾರೆ.ಮೂವರು […]

ಅರಂತೋಡು : ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗಡೆ ಬಿದ್ದು ಮೂವರಿಗೆ ಗಾಯ Read More »

ಸುಳ್ಯ ದಸರಾ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಜರುಗುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ 2024 ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ

ಸುಳ್ಯ ದಸರಾ ಶೋಭಾಯಾತ್ರೆಗೆ ಅದ್ದೂರಿ ಚಾಲನೆ Read More »

ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳ ಮೇಲಿನ ಆರೋಪ ಸಾಬಿತು

ಕೊಡಗು ಸಂಪಾಜೆಯ ಬಿಜೆಪಿ ನಾಯಕರಾಗಿದ್ದ ಕಳಗಿ ಬಾಲಚಂದ್ರರ ಹತ್ಯೆ ಪ್ರಕರಣದ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯ ತಿಳಿಸಿದೆ. ತಪ್ಪಿತಸ್ಥರಿಗೆ ಅ.19 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ಕೊಡಗಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಘೋಷಿಸಿದ್ದಾರೆ.ಸಂಪಾಜೆ ಗ್ರಾ.ಪಂ. ನ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಅವರನ್ನು ೨೦೧೯ ಮಾರ್ಚ್ ೧೯ ರಂದು ಓಮ್ಮಿ ಕಾರಿಗೆ ಲಾರಿಯಲ್ಲಿ ಗುದ್ದಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು

ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳ ಮೇಲಿನ ಆರೋಪ ಸಾಬಿತು Read More »

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಟ,ಬಜರಂಗದಳದಿಂದ ತಡೆ

ಪುತ್ತೂರು :ಇಲ್ಲಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಬೈಪಾಸ್‌ ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.ಅಕ್ರಮವಾಗಿ ಗೋವನ್ನು ಪುತ್ತೂರು ಬೈಪಾಸ್ ರಸ್ತೆಯ ಮೂಲಕ ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಸಾಗಿಸುತ್ತಿರುವುದರ ಕುರಿತು ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಆಟೋ ರಿಕ್ಷಾದಲ್ಲಿ ಮಹಿಳೆಯರು ಕೂಡ

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಟ,ಬಜರಂಗದಳದಿಂದ ತಡೆ Read More »

ವಯನಾಡು ಉಪಚುನಾವಣೆ- ಪ್ರಿಯಾಂಕಾ ಗಾಂಧಿ ಸ್ಪರ್ಧೆ

ವಯನಾಡ್ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಘೋಷಿಸಿದೆ.ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿಯಲಿದ್ದಾರೆಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ರಾಜೀನಾಮೆಯೊಂದಿಗೆ ವಯನಾಡ್ ಸಂಸದೀಯ ಸ್ಥಾನಕ್ಕೆ ಉಪಚುನಾವಣೆ ಅನಿವಾರ್ಯವಾಯಿತು. ಎರಡು ಸ್ಥಾನ ಗೆದ್ದ ನಂತರ ರಾಹುಲ್ ರಾಜೀನಾಮೆ ನೀಡಿದ್ದು ಗೊತ್ತೇ ಇದೆ. ಇದೀಗ ಆ ಸ್ಥಾನದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ.

ವಯನಾಡು ಉಪಚುನಾವಣೆ- ಪ್ರಿಯಾಂಕಾ ಗಾಂಧಿ ಸ್ಪರ್ಧೆ Read More »

ಸುಳ್ಯ ತಾಲೂಕಿನಲ್ಲಿ ಮೂರನೇ ದಿನವೂ ಹೃದಯಾಘಾತದಿಂದ ಮತ್ತೋರ್ವ ಸಾವು

ಪೋಟೋ ಗ್ರಾಪರ್ ಹರಿಹರ ಪಲ್ಲತ್ತಡ್ಕದಲ್ಲಿ ಸ್ಟುಡಿಯೋ ಹೊಂದಿದ್ದ ಹಾಗೂ ಗ್ರಾ.ಪಂ.ಸದಸ್ಯರಾಗಿದ್ದ ದಿವಾಕರ ಮುಂಡಾಜೆ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನಪತ್ರಿಕೆಗಳ ವಿತರಕರಾಗಿದ್ದ ಅವರು ಮಂಜಾನೆ ಅಂಗಡಿಗೆ ಕಾರಿನಲ್ಲಿ ಬರುತ್ತಿರುವ ವೇಳೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸುಳ್ಯ ತಾಲೂಕಿನಲ್ಲಿ ಮೂರನೇ ದಿನವೂ ಹೃದಯಾಘಾತದಿಂದ ಮತ್ತೋರ್ವ ಸಾವು Read More »

ಕೌಟಂಬಿಕ ಕಲಹದಿಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

ಮಡಿಕೇರಿ: ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಗೃಹಿಣಿಯೋರ್ವರು ವಿಷ ಸೇವಿಸಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿಯ ರಸೂಲ್ ಪುರ ಗ್ರಾಮದಿಂದ ವರದಿಯಾಗಿದೆ.ಇಲ್ಲಿಯ ಆಮೆಮನೆ ಬಾಲಕೃಷ್ಣ ಎಂಬವರ ಪುತ್ರ ರಾಜೇಶ್ ಎಂಬವರ ಪತ್ನಿ ತೇಜಸ್ವಿನಿ ಎಂಬಾಕೆಯೇ (30) ಮೃತ ಮಹಿಳೆಕಳೆದ ನಾಲ್ಕು ದಿನಗಳ ಹಿಂದೆ ಸ್ವಗೃಹದಲ್ಲಿ ಕೌಟುಂಬಿಕ ಸಂಘರ್ಷದಿಂದ ಬೇಸತ್ತ ತೇಜಸ್ವಿನಿ ವಿಷ ಸೇವಿಸಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಲ್ಕು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಮೃತಪಟ್ಟರು ಎನ್ನಲಾಗಿದೆ.

ಕೌಟಂಬಿಕ ಕಲಹದಿಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ Read More »

ಶ್ರೀ ಮಹಾಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ ಮತ್ತು ಅಷ್ಟವಧಾನ ಸೇವೆ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ ಕಾರ್ಯಕ್ರಮದ ಏಳನೇ ದಿನವಾದ ಅ.15ರಂದು ರಾತ್ರಿ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಮತ್ತು ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಶ್ರದ್ದಾ ಭಕ್ತಿಯಿಂದ ನಡೆಯಿತು.ರಾತ್ರಿ ಶ್ರೀದೇವಿಗೆ

ಶ್ರೀ ಮಹಾಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ ಮತ್ತು ಅಷ್ಟವಧಾನ ಸೇವೆ Read More »

ನಾಪತ್ತೆಯಾದ ಬಾಲಕ ಪತ್ತೆ

ಅರಂತೋಡು : ಚೆಂಬು ಗ್ರಾಮದಿಂದ ನಾಪತ್ತೆಯಾದ ಬಾಲಕ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಮಡಿಕೇರಿ ತಾಲೂಕು ಚೆಂಬು ಗ್ರಾಮದ ಊರುಬೈಲು ಹರೀಶ ಹಾಗೂ ಭಾರತಿ ದಂಪತಿಗಳ ಪುತ್ರ ಕುಶಾಂತ್ ಅ. 13ರಂದು ಔಷಧಿಗೆಂದು ತೆರಳಿದವನು ಮನೆಗೆ ಬಾರದೇ ನಾಪತ್ತೆಯಾಗಿದ್ದ. ಮಂಗಳವಾರ ಕುಂಬ್ರದಲ್ಲಿ ಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.

ನಾಪತ್ತೆಯಾದ ಬಾಲಕ ಪತ್ತೆ Read More »

ಬೋಜಪ್ಪ ಗೌಡ ಪಾಲೆಪ್ಪಾಡಿ ಬೈಕ್ ಅಪಘಾತಕ್ಕೆ ಬಲಿಯಾದ ವ್ಯಕ್ತಿ

ಪೈಚಾರ್ : ಸುಳ್ಯದ ಪೈಚಾರ್ ಆರ್ತಾಜೆ ಬಳಿಯಲ್ಲಿ ಬೈಕ್‌ ಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟವರು ಐವರ್ನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಬೊಜಪ್ಪ ಗೌಡ ಪಾಲೆಪ್ಪಾಡಿ ಎಂದು ಗುರುತಿಸಲಾಗಿದೆ. ಬೈಕ್ ಗಳ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆನ್ನಲಾಗಿದೆ. ಬುಲೆಟ್ ಬೈಕ್ ನಲ್ಲಿ ತೆರಳುತ್ತಿದ್ದ ಅರುಣ ಎಲಿಮಲೆ ಹಾಗೂ ವಸಂತ ಸೇವಾಜೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೋಜಪ್ಪ ಗೌಡ ಪಾಲೆಪ್ಪಾಡಿ ಬೈಕ್ ಅಪಘಾತಕ್ಕೆ ಬಲಿಯಾದ ವ್ಯಕ್ತಿ Read More »

error: Content is protected !!
Scroll to Top