November 1, 2024

ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದುಗಳಾಗಿರಬೇಕು

ಹೈದರಾಬಾದ್: ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳಾಗಿರಬೇಕು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಗೆ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಬಿ ಆರ್ ನಾಯ್ಡು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರೆ ಧರ್ಮದ ಸಿಬ್ಬಂದಿಯನ್ನು ಹೇಗೆ ನಿಭಾಯಿಸಬೇಕು, ಅವರನ್ನು ಬೇರೆ ಸರ್ಕಾರಿ ಇಲಾಖೆಗಳಿಗೆ ಕಳುಹಿಸಬೇಕೇ ಅಥವಾ ವಿಆರ್‌ಎಸ್ (ಸ್ವಯಂ ನಿವೃತ್ತಿ ಯೋಜನೆ) ನೀಡಬೇಕೇ ಎಂಬ ಕುರಿತು ಆಂಧ್ರಪ್ರದೇಶ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಹೇಳಿದರು.ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳಾಗಿರಬೇಕು. ಅದು ನನ್ನ ಮೊದಲ ಪ್ರಯತ್ನವಾಗಿದೆ. ಇದರಲ್ಲಿ ಹಲವು ಸಮಸ್ಯೆಗಳಿವೆ. ನಾವು […]

ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದುಗಳಾಗಿರಬೇಕು Read More »

ಅರಂತೋಡು : ಮಹಿಳೆಗೆ ಕಾರು ಡಿಕ್ಕಿ

ಅರಂತೋಡು ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಆಲ್ಲೋ ಕಾರೊಂದು ಢಿಕ್ಕಿ ಹೊಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ಕಾಲು ಮುರಿತವಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ. ಕಲ್ಲುಗುಂಡಿ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಅರಂತೋಡು : ಮಹಿಳೆಗೆ ಕಾರು ಡಿಕ್ಕಿ Read More »

ಸುಳ್ಯದ ಗೋಕುಲದಾಸ್ ಅವರಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ

ಸುಳ್ಯ: ಸುಳ್ಯದ ಕೆ.ಗೋಕುಲ್‌ದಾಸ್ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಕೆ.ಗೋಕುಲ್‌ದಾಸ್ ಅವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಂಘಟನಾ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.ಸುಳ್ಯದ ಶಾರದಾಂಬ ಉತ್ಸವ (ಎಸ್.ಸಿಕ್ಸ್ ನಲ್ಲಿ ಕಳೆದ 50 ವರ್ಷಗಳಿಂದ ಗೋಕುಲ್ ದಾಸ್ ಮುಂಚೂಣಿಯಲ್ಲಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್

ಸುಳ್ಯದ ಗೋಕುಲದಾಸ್ ಅವರಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ Read More »

ಕರಾವಳಿ ಭಾಗದಲ್ಲಿ ತುಳುವರ ತುಡರ ಹಬ್ಬ

ತುಳುನಾಡಿನ ಜನ ಜೀವನದಲ್ಲಿ ಮಹತ್ವವಾದ ಹಬ್ಬ ಈ ತುಡರ ಹಬ್ಬ, ದೀಪಾವಳಿ ಹಬ್ಬವನ್ನು ಈ ಭಾಗದಲ್ಲಿ ತುಡರ ಹಬ್ಬ ಎನ್ನುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬ. ಈ ಹಬ್ಬದ ಹಿಂದೆ ಹಲವಾರು ಪುರಾಣ ಕಥೆಗಳು, ಸಾಂಸ್ಕೃತಿಕ ಆಚರಣೆಗಳಿವೆ .ಈ ದೀಪಾವಳಿಯು ಹಿಂದೂ ಧರ್ಮದ ಪ್ರಕಾರ ರಾಮಾಯಣದ ಕಥೆಗೂ ಸಂಬಂಧಿಸಿದೆ. ಕರಾವಳಿ ಭಾಗದಲ್ಲಿ ಈ ದೀಪಗಳ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತೇವೆ. ಮೊದಲನೆಯ ದಿನ ನರಕ ಚತುರ್ದಶಿ, ಈ ದಿವಸದಂದು ಎಣ್ಣೆ ಸ್ನಾನ ಮಾಡುವಂತಹ ಸಂಪ್ರದಾಯವಿದೆ.

ಕರಾವಳಿ ಭಾಗದಲ್ಲಿ ತುಳುವರ ತುಡರ ಹಬ್ಬ Read More »

ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ

ಹಲವು ಉಪ ಭಾಷೆ, ಸಂಸ್ಕೃತಿ, ವೈವಿಧ್ಯತೆಯಿಂದ ಕೂಡಿದ ರಾಜ್ಯ ನಮ್ಮ ಕರ್ನಾಟಕ. ಒಂದೇ ನಾಡಿನೊಳಗೆ ವೈವಿಧ್ಯತೆಯಿದ್ದರೂ, ರಾಜ್ಯ ಎಂದು ಬಂದಾಗ ಅಲ್ಲಿ ಮೇಳೈಸುವುದು ಶ್ರೀಮಂತಿಕೆಯಿಂದ ಕೂಡಿದ ಕನ್ನಡ. ಅದಕ್ಕೇ ನಮ್ಮ ಕವಿಗಳು ಬಾರಿಸು ಕನ್ನಡ ಡಿಂಡಿಮವ..ಓ ಕರ್ನಾಟಕ ಹೃದಯ ಶಿವ ಎಂದು ಹಾಡಿದರು.ಕರ್ನಾಟಕ ಜನಗಳ ಮಾತೃಭಾಷೆ ಕನ್ನಡ. ವಿಶ್ವದ ಎಲ್ಲೇ ಹೋದರೂ ಅಲ್ಲಿ ಕನ್ನಡಿಗರು ಸಿಗುತ್ತಾರೆ. ವಿಶಾಲ ಹೃದಯಿಗಳಾದ ಕನ್ನಡಿಗರ ಪರಂಪರೆಯೇ ಅಂತಹುದು. ವಿಶ್ವಾದ್ಯಂತ ತಮ್ಮ ಛಾಪು ಮೂಡಿಸಿ ಕರ್ನಾಟಕದ ಹಿರಿಮೆಯನ್ನು ಬಾನೆತ್ತರಕ್ಕೆ ಹಾರಿಸುವಲ್ಲಿ ಕನ್ನಡಿಗರು ಒಂದೆಜ್ಜೆ

ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ Read More »

error: Content is protected !!
Scroll to Top