November 2, 2024

ಮರಬಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಹಿನ್ನಲೆ,ಸಾರ್ವಜನಿಕರಿಂದ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ

ಎಡಮಂಗಲ : ಸ್ಕೂಟಿ ಸವಾರನ ಮೇಲೆ ಪುಳಿಕುಕ್ಕು ಸಮೀಪ ದೂಪದ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ನ.2ರ ಶನಿವಾರ ಸಾರ್ವಜನಿಕರು ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಸಾರ್ವಜನಿಕರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಅದರಿಂದಾಗಿ ಕಡಬ -ಪಂಜ ರಸ್ತೆಯಲ್ಲಿ ಸುಮಾರು […]

ಮರಬಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಹಿನ್ನಲೆ,ಸಾರ್ವಜನಿಕರಿಂದ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ Read More »

ಸ್ಕೂಟಿ ಮೇಲೆ ಮರ ಬಿದ್ದು‌ ಸ್ಕೂಟಿ ಸವಾರ ಸಾವು

ಕಡಬ ತಾಲೂಕಿನ ಎಡಮಂಗಲ ಸೊಸೈಟಿ ಪಿಗ್ನಿ ಕಲೆಕ್ಟರ್ ಸೀತಾರಾಮ ಕೆರೆಮೂಲೆ ಅವರು ಚಲಾಯಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಪುಳಿಕುಕ್ಕು ಸಮೀಪ ನಡೆದಿದೆ.ಎಡಮಂಗಲ ದೇವಶ್ಯ ಕೆರೆಮೂಲೆ ನಿವಾಸಿಯಾಗಿರುವ ಇವರು ಹಲವಾರು ವರ್ಷಗಳಿಂದ ಪಿಗ್ನಿ ಸಂಗ್ರಹಕರಾಗಿ ಮಾಡುತ್ತಿದ್ದರು. ಬೃಹತ್ ಗಾತ್ರದ ದೂಪದ ಮರ ಬಿದ್ದು, ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಕೂಟಿ ಮೇಲೆ ಮರ ಬಿದ್ದು‌ ಸ್ಕೂಟಿ ಸವಾರ ಸಾವು Read More »

(ಕವನ) ನವರಾಗ ನುಡಿಸು

ಅಂತರಂಗದ ಭಾವ     ವಿರಹದುರಿಯ ಬಂಧನದಿ ಸಿಲುಕಿ     ಮಿಡಿಯುತಿತ್ತು     ಬೇಗೆಯ  ಸೀಳಲು     ಎದೆಯ ಕತ್ತಲನಳಿಸಲು     ನಿನಗಾಗಿ  ತುಡಿಯುತಿತ್ತು .       ಹುಡುಕುತಿತ್ತು ಮನ      ದೀಪ ಹಚ್ಚುವ ಕೈಗಳ     ಮುಡಿ ಹರಡಿ ಮುನಿಸಿದೆ     ಅಮಾವಾಸ್ಯೆ ಕಡುಗತ್ತಲು      ಎದೆ ಸೀಳಿ ಬಗೆದರು      ಸ್ಫುರಣ  ಕಾಣಲೊಲ್ಲವು.       ಎತ್ತ ಸಾಗುತ್ತಿದೆ  ನನ್ನ  ಭವಿಷ್ಯ?     ಹಸುರು ಸೀರೆ ಮಾಸುತ್ತಿದೆ     ನಾರುವ ವಾಸನೆ     ಮುಗಿಲ ಮುಟ್ಟುತ್ತಿದೆ     ಒಮ್ಮೆ ನೀ ಬಂದು     ಬೆಳಕ ಸ್ಫುರಿಸು       ಎಲ್ಲಿ ಮರೆಯಾದೆ      ವರ್ಷದ ಬೆಳಕ ಹೊತ್ತು ?       ನೀ ಬರುವೆ

(ಕವನ) ನವರಾಗ ನುಡಿಸು Read More »

ಮಹಿಳೆಯರಿಗೆ ಮೆಸೆಜ್ ಮಾಡಿದ ಆರೋಪ : ಯುವಕನಿಗೆ ತಂಡದಿಂದ ಹಲ್ಲೆ

ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ತಂಡವೊಂದು ನಯಾಜ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.ಹಲ್ಲೆಗೊಳಗಾದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.ಸ್ಥಳೀಯ ನಿವಾಸಿ ರಜತ್ ಎಂಬಾತ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹಲ್ಲೆ ಮಾಡಿ , ಮಹಿಳೆಯರಿಗೆ ಮೆಸೇಜ್ ಮಾಡುವುದೇಕೆಂದು ತನ್ನನ್ನು ಪ್ರಶ್ನಿಸಿದ‌. ತಾನು ಮಹಿಳೆಯರಿಗೆ ಮೆಸೇಜ್ ಮಾಡಿಲ್ಲವೆಂದು ಹೇಳಿದರೂ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾಗಿಯೂ ನಯಾಜ್ ಆರೋಪಿಸಿದ್ದಾರೆ.

ಮಹಿಳೆಯರಿಗೆ ಮೆಸೆಜ್ ಮಾಡಿದ ಆರೋಪ : ಯುವಕನಿಗೆ ತಂಡದಿಂದ ಹಲ್ಲೆ Read More »

error: Content is protected !!
Scroll to Top