November 12, 2024

ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ್ ರವರಿಗೆ ಸಾರ್ವಜನಿಕ ಸನ್ಮಾಕ್ಕೆ ನಿರ್ಧಾರ

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಳ್ಯ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸಂಘಟಕ ಗೋಕುಲದಾಸ್ ರವರಿಗೆ ಸಾರ್ವಜನಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಗೋಕುಲದಾಸ್ ಅಭಿಮಾನಿಗಳ ಸಭೆ ನ.12 ರಂದು ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ನಡೆಯಿತು.ಎನ್.ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ.ಜಯರಾಮ್, ದಿನೇಶ್ ಮಡಪ್ಪಾಡಿ, ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ್, ಕೆ.ಎಂ.ಮುಸ್ತಫಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವಾನಿಶಂಕರ ಕಲ್ಮಡ್ಕ ಪ್ರಸ್ತಾವಿಕವಾಗಿ ಮಾತನಾಡಿದರುಸಭೆಯಲ್ಲಿ ಮಾತನಾಡಿದ ಪ್ರಮುಖರು ಗೋಕುಲದಾಸ್‌ ಅವರಿಗೆ ಅರ್ಹವಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ಅವರಿಗೆ ಸಾರ್ವಜನಿಕ ಸನ್ಮಾನ ಮಾಡಬೇಕಾಗಿರುವುದು ನಮ್ಮಲ್ಲರ […]

ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ್ ರವರಿಗೆ ಸಾರ್ವಜನಿಕ ಸನ್ಮಾಕ್ಕೆ ನಿರ್ಧಾರ Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕಿಶೋರ್ ಶಿರಾಡಿ ಮನವಿ

ನ.15ನೇ ಶುಕ್ರವಾರ ಬೆಳಿಗ್ಗೆ 10:30ಕ್ಕೆ ಗುಂಡ್ಯದಲ್ಲಿ ನಡೆಯುವ ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ನಡೆಯುವ ಪ್ರತಿಭಟನೆ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಭಾದಿತ ಗ್ರಾಮದ ಅಂಗಡಿ ಹೋಟೆಲ್ ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಈ ಕಾರ್ಯಕ್ರಮದಲ್ಲಿ ರೈತರ ಪರವಾಗಿ ಭಾಗವಹಿಸಬೇಕಾಗಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾದ್ಯಮ ಹೇಳಿಕೆಯ ಮೂಲಕ‌ ವಿನಂತಿಸಿಕೊಂಡಿದ್ದಾರೆ.

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕಿಶೋರ್ ಶಿರಾಡಿ ಮನವಿ Read More »

ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಯುವಕ ಸಾವು

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನ.12 ರಂದು ಮೃತ ಪಟ್ಟಿರುವುದಾಗಿ ವರದಿಯಾಗಿದೆ.ಗಾಂಧಿನಗರ ಅಡಿಕೆ ಅಂಗಡಿಯಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಅಭಿಲಾಷ್ ಮೃತ ಪಟ್ಟ ಯುವಕ. ಸುಳ್ಯದ ಗಾಂಧಿನಗರ ಅಡಿಕೆ ಅಂಗಡಿಯಲ್ಲಿ ಮ್ಯಾನೇಜರ್ ಕಮ್ ಅಕೌಂಟ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಭಿಲಾಷ್ ರವರನ್ನು ಚಿಕಿತ್ಸೆ ಗಾಗಿಮಂಗಳೂರಿನ ಖಾಸಗಿ ಆಸ್ಪತ್ರೆಗೆ ನ.5 ರಂದು ದಾಖಲಿಸಲಾಗಿತ್ತು.

ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಯುವಕ ಸಾವು Read More »

ಅರಂತೋಡು-ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ದ ಭಾಗವನ್ನು ತಕ್ಷಣ ಅಭಿವೃದ್ಧಿ ಪಡಿಸಿ : ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಶಾಸಕರಿಗೆ ಮನವಿ

ಅರಂತೋಡು, ನ.12 : ಅರಂತೋಡು-ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ದ ಭಾಗವನ್ನು ತಕ್ಷಣ ಅಭಿವೃದ್ಧಿ ಪಡಿಸಿ ತಪ್ಪಿದಲ್ಲಿ ಮುಂದಿನ ಚುನಾವಣೆಯ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಅರಂತೋಡು ಗ್ರಾಮದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಸುಳ್ಯ ವಿಧಾನ ಸಭಾ ಕ್ಷೇತ್ರರ ಶಾಸಕಿ ಭಾಗೀರಥಿ ಮುರಳ್ಯರಿ ಮನವಿ ಸಲ್ಲಿಸಿದೆ.ಮೈಸೂರು, ಕೊಡಗು ಜಿಲ್ಲಾ ಯಾತ್ರಿಕರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸುವರೇ ಅತೀ ಹತ್ತಿರದ ರಸ್ತೆ ಅರಂತೋಡು-ಎಲಿಮಲೆ ಜಿಲ್ಲಾ ಮುಖ್ಯ ರಸ್ತೆ ಆಗಿದೆ ಎಂಬುದು ತಮಗೆ

ಅರಂತೋಡು-ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ದ ಭಾಗವನ್ನು ತಕ್ಷಣ ಅಭಿವೃದ್ಧಿ ಪಡಿಸಿ : ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಶಾಸಕರಿಗೆ ಮನವಿ Read More »

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ನಾಮಪತ್ರ ಸಲ್ಲಿಕೆ

ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್ ಬೆಂಬಲದ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ಯವರು ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು/ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಶ್ರೀ ಸದಾನಂದ ಮಾವಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಧನುಶ್ ಕುಕ್ಕೆಟ್ಟಿ ಮತ್ತು ಶೇಖರ್ ಮಣಿಯಾಣಿ ಕಣೆಮರಡ್ಕ, ಮಂಡೆಕೋಲು ಗ್ರಾಮ ಪಂಚಾಯತ್ ಹಾಲಿ ಸದಸ್ಯೆ ಗೀತಾ ಮೈಲೆಟ್ಟಿಪಾರೆ, ಪೂರ್ಣಚಂದ್ರ ಕಣೆಮರಡ್ಕ, ಅಬೂಬಕ್ಕರ್

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ನಾಮಪತ್ರ ಸಲ್ಲಿಕೆ Read More »

ಆನೆಗುಂಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು!

ಕನಕಮಜಲು ಗ್ರಾಮದ ಆನೆಗುಂಡಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ನ.12ರಂದು ಕಾಡಾನೆಗಳು ಸಂಚರಿಸಿವೆ.ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿ ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ತಿಳಿದುಬಂದಿದೆಕನಕಮಜಲು ಗ್ರಾಮದ ಕುದ್ಕುಳಿ, ಕುತ್ಯಾಳ, ಕಣಜಾಲು, ಮುಗೇರು ಪರಿಸರದಲ್ಲಿ ಕೃಷಿಕರ ಕೃಷಿ ತೋಟಗಳಿಗೆ ನುಗ್ಗಿ ಪ್ರತಿ ವರ್ಷ ಹಾನಿ ನಡೆಸುತ್ತಿದ್ದ ಕಾಡಾನೆಗಳು ಇದೀಗ ಆನೆಗುಂಡಿ ಪರಿಸರದ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ.ಇದರಿಂದ ಪರಿಸರದ ರೈತರು ಆತಂಕಗೊಂಡಿದ್ದಾರೆ.

ಆನೆಗುಂಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು! Read More »

error: Content is protected !!
Scroll to Top