November 22, 2024

ಮಂಡೆಕೋಲಿನಲ್ಲಿ ನಡೆಯುವ ಅರೆಭಾಷೆ ಗಡಿನಾಡ ಉತ್ಸವಕ್ಕೆ ಡಿ.ವಿ.ಎಸ್ ಗೆ ಅಹ್ವಾನ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಮಾನ್ಯ ಡಿ.ವಿ. ಸದಾನಂದ ಗೌಡರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸದಸ್ಯರು ಹಾಗೂ ಮಂಡೆಕೋಲು ಗ್ರಾಮ ಗೌಡ ಸಮಿತಿಯ ಪದಾಧಿಕಾರಿಗಳು ಅವರ ದೇವರಗುಂಡದ ನಿವಾಸದಲ್ಲಿ ಭೇಟಿಯಾಗಿ ಗೌರವಿಸಿದರು.ಡಿ.ವಿ.ಯವರ ಹುಟ್ಟೂರಾದ ಮಂಡೆಕೋಲಿನಲ್ಲಿ ಡಿಸೆಂಬರ್ 1 ರಂದು ನಡೆಯಲಿರುವ ಅರೆಭಾಷೆ ಗಡಿನಾಡ ಉತ್ಸವ -2024 ಕಾರ್ಯಕ್ರಮಕ್ಕೆ ಅವರನ್ನು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು […]

ಮಂಡೆಕೋಲಿನಲ್ಲಿ ನಡೆಯುವ ಅರೆಭಾಷೆ ಗಡಿನಾಡ ಉತ್ಸವಕ್ಕೆ ಡಿ.ವಿ.ಎಸ್ ಗೆ ಅಹ್ವಾನ Read More »

ನಾಳೆ ಅರಂತೋಡಿನಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ

ಅರಂತೋಡು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು (ನ.23) ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ.ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ

ನಾಳೆ ಅರಂತೋಡಿನಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ Read More »

ರಾಜ್ಯ ಮಟ್ಟದ ಕವಿಗೋಷ್ಠಿಗೆ ಅಕ್ಷತಾ ಆಯ್ಕೆ

ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಇದರ ವತಿಯಿಂದ ಸಾಹಿತ್ಯ ಸಂಭ್ರಮ -100ರ ಪ್ರಯುಕ್ತ ನಡೆಯಲಿರುವ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನದ ಕವಿಗೋಷ್ಠಿಗೆ ಪೆರುವಾಜೆ ಗ್ರಾಮದ ಅಕ್ಷತಾ ನಾಗನಕಜೆ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರಿನ ಸಾಹಿತಿ ರಂಗಭೂಮಿ ಕಲಾವಿದರಾಗಿರುವ ಹೆಚ್. ಎಂ. ನಾಗರಾಜ್ ರಾವ್ ರವರ ಅಧ್ಯಕ್ಷತೆಯಲ್ಲಿ ಮೂಡಿಗೆರೆ ಪಂಚಾಯತ್ ದೀನ್ ದಯಾಳ್ ಸಭಾಂಗಣದಲ್ಲಿ ನ. 24ರಂದು ಕವಿಗೋಷ್ಠಿ ನಡೆಯಲಿದೆಯೆಂದು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಎಸ್.ನಾಗರಾಜ್ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಕವಿಗೋಷ್ಠಿಗೆ ಅಕ್ಷತಾ ಆಯ್ಕೆ Read More »

ಸಂಪಾಜೆ : ಗೇರು ಸಂಶೋಧನ ಮಂಡಳಿಯ ವಿಜ್ಞಾನಿಗಳು ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೇರು ಕ್ರಷಿಗೆ ಪ್ರಸ್ತಾವನೆ ಇರುವ ಹಿನ್ನಲೆಯಲ್ಲಿ ಗೇರು ಸಂಶೋಧನ ಮಂಡಳಿಯ ವಿಜ್ಞಾನಿಗಳು ಸುಳ್ಯ ತಾಲೂಕು ಪಂಚಾಯತ್ ಗೆ ಸಂಪಾಜೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಇಲಾಖೆ (ADPR) ಗೀತಾ , ವಿಷಯ ನಿರ್ವಾಹಕರು ತಾಲೂಕು ಪಂಚಾಯತ್ ರಾಜಲಕ್ಷ್ಮಿ, ಗೇರು ಸಂಶೋಧನಾ ಮಂಡಳಿಯ ವಿಜ್ಞಾನಿಗಳಾದ ಡಾ. ಅಶ್ವತಿ, ಡಾ.ಭಾಗ್ಯ, ಡಾ. ತೊಂಡೈಮಾನ್, NRLM ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ

ಸಂಪಾಜೆ : ಗೇರು ಸಂಶೋಧನ ಮಂಡಳಿಯ ವಿಜ್ಞಾನಿಗಳು ಭೇಟಿ Read More »

ಪೆರುವಾಜೆ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಸುಳ್ಯ ತಾಲೂಕಿನ ಬೆಳ್ಳಾರೆ ವಲಯದಲ್ಲಿ ಪೆರುವಾಜೆ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಣೆಪೆರುವಾಜೆ ಒಕ್ಕೂಟದ ಸದಸ್ಯರಾದ ಶ್ರೀನಿವಾಸ ರವರು ಶೌರ್ಯ ವಿಪತ್ತು ಘಟಕದ ಸದಸ್ಯರಾಗಿದ್ದು ಇವರು ಮೇಲ್ಛಾವಣಿಯಿಂದ ಬಿದ್ದು ಸೊಂಟದಿಂದ ಕೆಳಬಾಗ ಸ್ವಾದಿನ ಕಳೆದು ಕೊಂಡಿದ್ದರು.ಇ ಸಂದರ್ಭದಲ್ಲಿ ಯೋಜನೆಯಿಂದ ಸಹಾಯದನವಾಗಿ 50000/ ಮೊತ್ತ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಪೇರುವಾಜೆ ಜಲದುರ್ಗ ದೇವಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಅವರು ವಿತರಣೆ ಮಾಡಿದರು ಈ ಸಂದರ್ಭದಲ್ಲಿ

ಪೆರುವಾಜೆ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಣೆ Read More »

ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಶಾರೀಕ್ ಮನವಿ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಸಮಯದಲ್ಲಿ ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆರ್.ಟಿ.ಐ ಕಾರ್ಯಕರ್ತ ಡಿ.ಎಂ.ಶಾರೀಕ್ ಅವರು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಅವರಿಗೆ ಮನವಿ ಮಾಡಿದ್ದಾರೆ.ಸುಳ್ಯ ನಗರದಲ್ಲಿ ಈಗಾಗಲೇ ಅನೇಕ ಹೊಸ ಕಟ್ಟಗಳನ್ನು ಕಟ್ಟಲಾಗಿದೆ.ರಾಷ್ಟ್ರೀಯ ಹೆದ್ದಾರಿ ಸುಳ್ಯ ನಗರದಲ್ಲಿ ಹಾದು ಹೋದರೆ ಈ ಕಟ್ಟಗಳನ್ನು ಕೆಡವಿ ಹಾಕುವ ಅನಿವಾರ್ಯ ತೆ ಬರಬಹುದು.ಇದರಿಂದ ಕಟ್ಟಡ ಮಾಲಕರಿಗೆ ನಷ್ಟ ಉಂಟಾಗುತ್ತದೆ ಎಂದು ಎಂದು ಶಾರೀಕ್ ಎ.ಸಿಯವರಿಗೆ ತಿಳಿಸಿದರು.ಇದಕ್ಕೆ ಪೂರಕವಾಗಿ ಸ್ಪಂಧಿಸಿದ ಎ.ಸಿಯವರು

ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಶಾರೀಕ್ ಮನವಿ Read More »

ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾತೃಶ್ರೀ ನಿಧನ

ಚೆಂಬು ಗ್ರಾಮದ ಚೆಂಡೆಡ್ಕ ದಿ.ವೆಂಕಪ್ಪ ಮಾಸ್ತರ್ ಇವರ ಪತ್ನಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳ ಮಾತೃಶ್ರೀ ಗಂಗಮ್ಮ ಚೆಂಡೆಡ್ಕ ಇಂದು ಬೆಳಗ್ಗೆ ದೈವಾದೀನಾರಾಗಿದ್ದಾರೆ.ಇವರು ಮಕ್ಕಳಾದ ನೇತ್ರಾವತಿ ಗುಡ್ಡೆಮನೆದ,ಪುಷ್ಪಾವತಿ ಕುಡೆಕಲ್ಲು,ಮಾಚಯ್ಯ ಚೆಂಡೆಡ್ಕ,ಮನೋಹರ ಚೆಂಡೆಡ್ಕ,ಬೇಶ್ ಕುಮಾರಿ ಅಲೆಕ್ಕಾಡಿ,ಕವಿತಾ ಮಣಿ ಪಾಲೆಪ್ಪಾಡಿ,ಕುಸುಮಾಕರ ಚೆಂಡೆಡ್ಕ ಮತ್ತು ಕುಟುಂಬಸ್ಥರು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.ಇವರಿಗೆ 97 ವರ್ಷ ವಯಸ್ಸಾಗಿತ್ತು.ಇವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ರ ವರೆಗೆ ಸ.ಹಿ.ಪ್ರಾ. ಶಾಲೆ ಕೂಡಡ್ಕದಲ್ಲಿ ಅವಕಾಶ

ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾತೃಶ್ರೀ ನಿಧನ Read More »

ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಗೆ ಕಾಡಾನೆ ದಾಳಿ,ತಂದೆ ಇಬ್ಬರು ಮಕ್ಕಳು ಗಾಯಗೊಂಡು ಅಪಾಯದಿಂದ ಪಾರು

ಮಕ್ಕಳನ್ನು ಶಾಲೆಗೆ ಬೈಕಲ್ಲಿ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆಯೊಂದು ಬೈಕ್ ಮೇಲೆ ದಾಳಿ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ಎಂಬವರು ಗುರುವಾರ ಬೆಳಗ್ಗೆ ತನ್ನ ಮಕ್ಕಳಾದ ಲಾವ್ಯಾ ಹಾಗೂ ಅದ್ವಿತ್‌ರನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬೈಕಿನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಭಯದಿಂದ ಅವರು ತನ್ನ ಬೈಕ್‌ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ರಸ್ತೆಗೆ ಬಿದ್ದ ವಸಂತ

ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಗೆ ಕಾಡಾನೆ ದಾಳಿ,ತಂದೆ ಇಬ್ಬರು ಮಕ್ಕಳು ಗಾಯಗೊಂಡು ಅಪಾಯದಿಂದ ಪಾರು Read More »

error: Content is protected !!
Scroll to Top