November 2024

ಕಾಲೇಜಿನಲ್ಲಿ ಉಪನ್ಯಾಸಕಿ ಕುಸಿದು ಬಿದ್ದು ಸಾವು

ಮಂಗಳೂರು: ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಬುಧ ವಾರ ಮೃತಪಟ್ಟಿದ್ದಾರೆ.ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಮೃತಪಟ್ಟವರು.ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ( ಫುಡ್ ಅಲರ್ಜಿ) ಅವರಿಗೆ ಇತ್ತು. ಇದರಿಂದಾಗಿ ಈ ಹಿಂದೆಯೂ […]

ಕಾಲೇಜಿನಲ್ಲಿ ಉಪನ್ಯಾಸಕಿ ಕುಸಿದು ಬಿದ್ದು ಸಾವು Read More »

ಬಿಳಿಯಾರು : ಯುವಕ ಆತ್ಮಹತ್ಯೆ

ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಸೀತಾರಾಮ ಎಂಬವರ ಪುತ್ರ ಪುನೀತ್‌ (ಗಣೇಶ್‌) (25)ಎಂಬ ಯವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ವರದಿಯಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ,ತಾಯಿ ಹಾಗೂ ಸಹೋದರ ದಿನೇಶ ರನ್ನು ಅಗಲಿದ್ದಾರೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಳಿಯಾರು : ಯುವಕ ಆತ್ಮಹತ್ಯೆ Read More »

ಲೋ ಬಿಪಿ ಮಹಿಳೆ ಸಾವು

ಜಾಲ್ಸೂರು : ಕಡಿಮೆ ರಕ್ತದ ಒತ್ತಡದಿಂದ ಅಸೌಖ್ಯಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಾಲ್ಕೂರು ಗ್ರಾಮದ ಬೇರ್ಪಡ್ಕದಲ್ಲಿ ನ.13ರಂದು ವರದಿಯಾಗಿದೆ.ಬೇರ್ಪಡ್ಕದ ಬಾಲಕೃಷ್ಣ ನಾಯ್ಕ ಅವರ ಪತ್ನಿ ಗೀತ ಅವರು ಮೃತಪಟ್ಟ ಮಹಿಳೆ.ಅವರು ಸಮೀಪದ ಮನೆಯೊಂದಕ್ಕೆ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ದಿಢೀರನೆ ಅಸೌಖ್ಯಕ್ಕೊಳಗಾಗಿ, ತಮ್ಮ ಮನೆಗೆ ಮಧ್ಯಾಹ್ನ ಬಂದಿದ್ದರು. ಆದರೆ ಮನೆಯಲ್ಲಿ ಅಸೌಖ್ಯದಿಂದಾಗಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಲೋ ಬಿಪಿಯಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಲೋ ಬಿಪಿ ಮಹಿಳೆ ಸಾವು Read More »

ಮೀನು ಪ್ರಿಯರಿಗೊಂದು ಗುಡ್ ನ್ಯೂಸ್,ನ.18ರಂದು ಪರಿವಾರಕಾನದಲ್ಲಿ ಸೀಫುಡ್ ಮೀನು ಮಾರುಕಟ್ಟೆ ಶುಭಾರಂಭ

ಮೀನು ಪ್ರಿಯರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ.ನವಂಬರ್ 18ರಂದು ಸುಳ್ಯದ ಪರಿವಾರಕಾನ ಉಡುಪಿ ಗಾರ್ಡನ್ ಹೊಟೇಲ್ ಬಳಿ ಹಮೀದ್ ಮತ್ತು ಶಾಕಿಫ್ ಅವರ ಮಾಲಕತ್ವದಲ್ಲಿ ಸೀಫುಡ್ ಸಮುದ್ರ ಮೀನು ಮಾರ್ಕೆಟ್ ಶುಭಾರಂಭಗೊಳ್ಳಲಿದೆ.ಸುಮಾರು 25 ವರ್ಷಗಳಿಂದ ಮೀನು ಮಾರಾಟದಲ್ಲಿ ಹೆಸರುವಾಸಿಯಾದ ಮಾಲಕರು ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದು ಸುಳ್ಯದ ಪರಿವಾರಕಾನದಲ್ಲಿ ಹೊಸ ಮಾರ್ಕೆಟ್ ಪ್ರಾರಂಭಿಸುತ್ತಿದ್ದಾರೆ. ಗ್ರಾಹಕರ ಸಹಕಾರ ಎಂದಿನಂತೆ ಇರಲಿ. ನಾಡಿನ ಸಮಸ್ತ ಜನತೆಯನ್ನು ಈ ಮಳಿಗೆಗೆ ಸ್ವಾಗತಿಸುತ್ತಿದ್ದೇವೆ.ನಮ್ಮಲ್ಲಿ ಉತ್ತಮವಾದ ಎಲ್ಲ ಬಗೆಯ ಮೀನುಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತದೆ

ಮೀನು ಪ್ರಿಯರಿಗೊಂದು ಗುಡ್ ನ್ಯೂಸ್,ನ.18ರಂದು ಪರಿವಾರಕಾನದಲ್ಲಿ ಸೀಫುಡ್ ಮೀನು ಮಾರುಕಟ್ಟೆ ಶುಭಾರಂಭ Read More »

ತುಳಸಿ ವಿವಾಹ ಯಾಕೆ ಅಷ್ಟೊಂದು ವಿಶೇಷ? ತುಳಸಿಗೂ ವಿಷ್ಣುವಿಗೂ ಸಂಬಂಧ ಹೇಗೆ?

ಕಾರ್ತಿಕ ಮಾಸದ ಹಬ್ಬಗಳಲ್ಲಿ ತುಳಸೀ ವಿವಾಹ ಅಥವಾ ತುಳಸೀ ಪೂಜೆ ವಿಶೇಷ. ಪ್ರತಿ ಭಾರತೀಯರೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಇದು ರಾತ್ರಿ ಆಚರಿಸುವ ಹಬ್ಬ. ಏಕಾದಶೀ ತಿಥಿಯಂದು ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಇದನ್ನು ಉತ್ಥಾನ ದ್ವಾದಶೀ ಎಂದೂ ಕರೆಯುವುದುಂಟು. ಶಯನೈಕಾದಶಿಯಂದು ಮಲಗಿದ ವಿಷ್ಣು ಇಂದು ಏಳುತ್ತಾನೆ.‌ ಹಾಗಾಗಿ ಇದನ್ನು ಪ್ರಬೋಧಿನೀ ಏಕಾದಾಶೀ ಎಂದೂ ಕರೆಯುತ್ತಾರೆ. ಜಲಂಧರ ಎನ್ನುವ ರಾಕ್ಷಸನನ್ನು ವಿವಾಹವಾದವಳು ವೃಂದಾ. ಆಕೆಯೇ ತುಳಸೀ.‌ ಜಲಂಧರನಿಂದ ಲೋಕಕ್ಕೆ ಕಂಟಕವೊದಗಿ ಬಂದಿತು. ಆ ಕಾರಣಕ್ಕೆ

ತುಳಸಿ ವಿವಾಹ ಯಾಕೆ ಅಷ್ಟೊಂದು ವಿಶೇಷ? ತುಳಸಿಗೂ ವಿಷ್ಣುವಿಗೂ ಸಂಬಂಧ ಹೇಗೆ? Read More »

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಭಾಗೀರಥಿ ಮುರುಳ್ಯ

ಸುಳ್ಯ: ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆ.ವಿದ್ಯಾರ್ಥಿಗಳು ಪ್ರತಿಭೆಯನ್ನು ತೋರ್ಪಡಿಸುವ ಮೂಲಕ ವೇದಿಯನ್ನು ಸದುಪಯೋಗಪಡಿಸಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ದ.ಕ.ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳು ವಿನೂಬನಗರ ಇದರ ಸಹಭಾಗಿತ್ವದಲ್ಲಿ ವಿನೂಬನಗರ ವಿದ್ಯಾಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆಯುವ ತಾಲೂಕು ಮಟ್ಟದಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನ.13ರಂದು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಭಾಗೀರಥಿ ಮುರುಳ್ಯ Read More »

ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 12-11-2024ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳದ ವಿನಾಯಕ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರವರು ವಹಿಸಿ ಶಿಬಿರಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ, ಸಮಯ ಪ್ರಜ್ಞೆ ಹಾಗೂ ಸೇವಾ

ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ Read More »

ಕಸಾಪ ಸಾಹಿತ್ಯ ಸಂಭ್ರಮ ಸಮಾರೋಪ ಮತ್ತು ಸನ್ಮಾನ ಸಮಾರಂಭ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ರಾಜ್ಯೊತ್ಸವ- ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಸಮಾರಂಭ ನ.12 ರಂದು ಸುಳ್ಯದ ಹಳೆಗೇಟಿನ ಶಿವಕೃಪಾ ನಿಲಯದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಮಾತನಾಡಿದರು.ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಸಾಧಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ

ಕಸಾಪ ಸಾಹಿತ್ಯ ಸಂಭ್ರಮ ಸಮಾರೋಪ ಮತ್ತು ಸನ್ಮಾನ ಸಮಾರಂಭ Read More »

ಕಲ್ಲುಗುಂಡಿ : ಸಂಪತ್ ಕೊಲೆ ಪ್ರಕರಣದ ಎರಡನೇ ಆರೋಪಿಗೆ ಜಾಮೀನು ಮಂಜೂರು

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಎರಡನೇ ಆರೋಪಿಗೆ ನ್ಯಾಯಾಲಯದ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.2020 ರ ಅಕ್ಟೋಬರ್ 8ರಂದು ಕಲ್ಲುಗುಂಡಿಯ ಸಂಪತ್ ಎಂಬವರನ್ನು ಸುಳ್ಯದ ಶಾಂತಿನಗರ ಅವರ ಬಾಡಿಗೆ ಮನೆಯ ಸಮೀಪ 8 ಮಂದಿಯ ತಂಡ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿತ್ತು. ಬಳಿಕ ಪೋಲೀಸರು ಎಲ್ಲ 8 ಮಂದಿ ಆರೋಪಿಗಳನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ಬಳಿಕ ಆರೋಪಿಗಳು ಜೈಲಿನಲ್ಲಿದ್ದರು.ಅವರಲ್ಲಿ ಎರಡನೇ ಆರೋಪಿಯಾಗಿರುವ ಬಿಪಿನ್ ಎಂಬವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ

ಕಲ್ಲುಗುಂಡಿ : ಸಂಪತ್ ಕೊಲೆ ಪ್ರಕರಣದ ಎರಡನೇ ಆರೋಪಿಗೆ ಜಾಮೀನು ಮಂಜೂರು Read More »

ಕಲ್ಲುಗುಂಡಿ : ಕಾರು ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯ

ಕಲ್ದುಗುಂಡಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಕಲ್ಲುಗುಂಡಿಯ ಕೂಲಿಶೆಡ್ ಸಮೀಪ ತಿರುವಿನಲ್ಲಿ ಪಲ್ಟಿಯಾಗಿರುವ ಘಟನೆ ಕಳೆದ ತಡರಾತ್ರಿ ನಡೆದಿದೆಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ, ಮತ್ತಿಬ್ಬರಿಗೂ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ ಯುವಕರು ಬ್ಯಾಲೆನೊ ಕಾರಿನಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಲ್ಲುಗುಂಡಿ : ಕಾರು ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯ Read More »

error: Content is protected !!
Scroll to Top