November 2024

ಯುವ ವಕೀಲ ಅಸೌಖ್ಯದಿಂದ ನಿಧನ

ಪುತ್ತೂರು: ಪತ್ತೂರು ತಾಲೂಕಿನ ಕುಂಬ್ರ ನಿವಾಸಿ ನ್ಯಾಯವಾದಿ ಚಂದ್ರಕಾಂತ್ ಅಡೂರ್ (38) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರೆಅನಾರೋಗ್ಯದ ಹಿನ್ನಲೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯುವ ವಕೀಲ ಅಸೌಖ್ಯದಿಂದ ನಿಧನ Read More »

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ನ.4ರಂದು ಆಲೆಟ್ಟಿ ಸುಳ್ಯ ರಸ್ತೆಯಲ್ಲಿ ಸಂಭವಿಸಿದಕಾರು ಮತ್ತು ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋಪಾಲ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಂಗಳೂರಿನ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು .ಮೃತರು ಪತ್ನಿ ಜಯಂತಿ ಹಾಗೂ ಇಬ್ಬರು ಪುತ್ರಿಯರಾದ ಕು.ಶರಣ್ಯ ಮತ್ತು ಕು.ಭೂಮಿಕಾ ಮತ್ತು ಸಹೋದರರನ್ನು, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರು ಸುಳ್ಯದಲ್ಲಿ ಕಳೆದ 8 ವರ್ಷಗಳಿಂದ ಅಟೋ ಚಾಲಕರಾಗಿದ್ದರು.ಸುಳ್ಯ ಜೂನಿಯರ್ ಕಾಲೇಜ್ ಬಳಿಯಲ್ಲಿ ವಾಸವಾಗಿದ್ದರು.

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಹಿಂದು ಯುವತಿ ಮುಸ್ಲಿಂ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದು ಸಂಘಟನೆ

ಸೌತಡ್ಕದಲ್ಲಿ‌ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಮುಸ್ಲಿಂ ಯುವಕ ಹಾಗೂ ಹಿಂದು ಯುವತಿಯನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಕೊಪ್ಪಳದ ಮುಸ್ಲಿಂ ಯುವಕ ಸಲೀಮ್ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು ರಿಕ್ಷಾದಿಂದ ಇಳಿದು ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಸಲೀಮ್ ಎಂದು ತಿಳಿದು ಕೂಡಲೇ ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಾಗ ಅನ್ಯ ಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.ಧರ್ಮಸ್ಥಳ

ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಹಿಂದು ಯುವತಿ ಮುಸ್ಲಿಂ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದು ಸಂಘಟನೆ Read More »

ಪೆರ್ಲ : ಕೊಲೆ ಆರೋಪಿಯ ಬಂಧನ

ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಯನ್ನು‌ ಪೊಲೀಸರು ಬಂಧಿಸಿದ್ದಾರೆ.ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿ ಹರೀಶ್ ಗೋಳಿತೊಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪೆರ್ಲ : ಕೊಲೆ ಆರೋಪಿಯ ಬಂಧನ Read More »

ಪೆರ್ಲ : ಕೊಲೆ ಆರೋಪಿ ನಾಪತ್ತೆ,ಪೊಲೀಸರಿಂದ ತೀವ್ರ ಹುಡುಕಾಟ

ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ.ಇದೀಗ ಹರೀಶ್ ನಾಪತ್ತೆಯಾಗಿದ್ದು ಪೊಲೀಸರು ಆತನ ಮೊಬೈಲ್ ಲೊಕೇಶನ್ ಆಧಾರಿಸಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೊಲೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ

ಪೆರ್ಲ : ಕೊಲೆ ಆರೋಪಿ ನಾಪತ್ತೆ,ಪೊಲೀಸರಿಂದ ತೀವ್ರ ಹುಡುಕಾಟ Read More »

ಆಸ್ತಿ ವಿವಾದ : ವ್ಯಕ್ತಿಯ ಬರ್ಬರ ಕೊಲೆ

ಅಕ್ಕ ಪಕ್ಕದ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟುವಿನಲ್ಲಿ ನಡೆದಿದೆ.ಗೋಳಿತ್ತೊಟ್ಟುವಿನ ಅಲಾಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಹರೀಶ್ ಕೊಲೆ ಮಾಡಿದ ಆರೋಪಿ.ಇನ್ನು ಕೊಲೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ಆರೋಪಿಯ ಬಂಧನಕ್ಕೆ ತಯಾರಿ ನಡೆಸತ್ತಿದ್ದಾರೆ.

ಆಸ್ತಿ ವಿವಾದ : ವ್ಯಕ್ತಿಯ ಬರ್ಬರ ಕೊಲೆ Read More »

ಉಬರಡ್ಕದಲ್ಲಿ ಬಸ್ ಸ್ಕೂಟಿ ಅಪಘಾತದಲ್ಲಿ ಮೃತಪಟ್ಟ ಯುವತಿ ರಚನಾ, ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡು ಒಬ್ಬರು ಮೃತಪಟ್ಟಿದ್ದು ಮೃತಪಟ್ಟ ಯುವತಿ ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ನಾರಾಯಣ ಗೌಡ ಎಂಬವರ ಮಕ್ಕಳಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ

ಉಬರಡ್ಕದಲ್ಲಿ ಬಸ್ ಸ್ಕೂಟಿ ಅಪಘಾತದಲ್ಲಿ ಮೃತಪಟ್ಟ ಯುವತಿ ರಚನಾ, ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ Read More »

ಬಸ್ ಸ್ಕೂಟಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು,ಸಹೋದರಿ ಗಂಭೀರ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ವಿದ್ಯಾರ್ಥಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡು ಒಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ಸಹೋದರಿಯರಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅನನ್ಯಳಿಗೆ ಗಂಭೀರ ಗಾಯವಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್ ಸ್ಕೂಟಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು,ಸಹೋದರಿ ಗಂಭೀರ Read More »

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ

ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್‌ ನ. 9 ರಂದು ವಿದ್ಯುತ್ ಕಡಿತ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪ್ಪೋ ತೊಡಿಕಾನ, ಕೊಲ್ಟಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10ರಿಂದ ಸಾಯಂಕಾಲ 6ರ ತನಕ ವಿದ್ಯುತ್‌

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ Read More »

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ತುಷಾರ್ ಗೌಡ ಸಾವು

ಬೈಕ್ ಮತ್ತು ಕಂಟೇನರ್ ನಡುವೆ ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಯುವಕ ಸಾವನ್ನಪ್ಪಿದ್ದ ಘಟನೆ ನ.7 ರಂದು ರಾತ್ರಿ ನಡೆದಿದೆ.ಮೃತ ವ್ಯಕ್ತಿ ಇಂದಬೆಟ್ಟು ಗ್ರಾಮದ ವಸಂತ ಗೌಡ ರವರ ಪುತ್ರ ತುಷಾರ್ (22ವ) ಎಂದು ಗುರುತಿಸಲಾಗಿದೆ.ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ರಾತ್ರಿ ವೇಳೆ ಬೈಕ್ ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಇನೋರ್ವ ವ್ಯಕ್ತಿ ಬೆಳಾಲು ನಿವಾಸಿ ಸೃಜನ್ ಸುರುಳಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ತುಷಾರ್ ಗೌಡ ಸಾವು Read More »

error: Content is protected !!
Scroll to Top