November 2024

ಕು.ಪೂಜಾ ಬೋರ್ಕಾರ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ನೇತಾಜಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನೀಡುವ 68ನೆಯ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 06 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಸುಳ್ಯ ತಾಲೂಕಿನಲ್ಲಿ ಪೆನ್ಸಿಲ್ ಆರ್ಟ್ ಮೂಲಕ ಅಲ್ಲದೆ ವಾಲ್ ಆರ್ಟ್, ಕ್ಯಾನ್ವಾಸ್ ಆರ್ಟ್ , ಆರ್ಕಲಿಕ್ ಆರ್ಟ್, ಬಾಟಲ್ ಆರ್ಟ್, ರಂಗೋಲಿ ಆರ್ಟ್ ಹಾಗೂ ವಿವಿಧ ಪ್ರಕಾರದ ಮುಖವಾಡ ತಯಾರಿಕೆಯ ಮೂಲಕ ಪ್ರಸಿದ್ಧ […]

ಕು.ಪೂಜಾ ಬೋರ್ಕಾರ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ Read More »

ಖ್ಯಾತ ಮಹಾಸ್ವಾಮಿ ಹೃದಯಾಘಾತದಿಂದ ನಿಧನ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಓಲೆಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ರಾತ್ರಿ 9:30 ಕ್ಕೆ ಇಹ ಲೋಕ ತ್ಯಜಿಸಿದ್ದಾರೆ. ಸ್ವಾಮೀಜಿಗಳು ಶುಗರ್, ಬಿಪಿ, ಹೃದಯ ಸಮಸ್ಯೆಯಿಂದ ಕಳೆದ ಎರಡು ವರ್ಷದಿಂದ ಬಳಲುತ್ತಿದ್ದರು. ಬೆಳಗ್ಗೆ 9:30 ರ ನಂತರ ಗೊರವಿನಕೊಳ್ಳ ಸವದತ್ತಿಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ಓಲೆಮಠದ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಸಂಜೆ 7 ಗಂಟೆಗೆ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಖ್ಯಾತ ಮಹಾಸ್ವಾಮಿ ಹೃದಯಾಘಾತದಿಂದ ನಿಧನ Read More »

ಸುಳ್ಯ: ಬೀರಮಂಗಲ ಉದ್ಯಾನವನಕ್ಕೆ ಎ. ಸಿ ಭೇಟಿಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ನಗರ ಪಂಚಾಯತ್ ಗೆ ಸೂಚನೆ

ಸುಳ್ಯದ ಬೀರಮಂಗಲದಲ್ಲಿ ನಾಗರೋಥ್ಥಾನ ಯೋಜನೆಯಡಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಪುತ್ತೂರು ಸಹಾಯಕ ಆಯುಕ್ತರು ಇಂದು ಭೇಟಿ ನೀಡಿದರು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಸುಳ್ಯದ ಪ್ರವಾಸಿ ಮಂದಿರದಲ್ಲಿ ಎ. ಸಿ ಯವರನ್ನು ಭೇಟಿಯಾಗಿ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಾಣದ ಬಗ್ಗೆ ಗಮನಕ್ಕೆ ತಂದ ಸಂದರ್ಭದಲ್ಲಿ ಉದ್ಯಾನವನಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ ಕೂಡಲೇ ಈ ಬಗ್ಗೆ ನಗರ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರತಿಮೆ ನಿರ್ಮಾಣ ಕೈಗೆತ್ತಿಕೊಳ್ಳುವಂತೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರ

ಸುಳ್ಯ: ಬೀರಮಂಗಲ ಉದ್ಯಾನವನಕ್ಕೆ ಎ. ಸಿ ಭೇಟಿಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ನಗರ ಪಂಚಾಯತ್ ಗೆ ಸೂಚನೆ Read More »

ನ.10 ರಂದು ಚೆಯ್ಯಂಡಾಣೆ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸದಾನಂದ ಮಾವಜಿ ಮನವಿ

ಮಡಿಕೇರಿ ನ.07(ಕರ್ನಾಟಕ ವಾರ್ತೆ):-ಕರ್ನಾಟಕ ಅರೆಭಾμÉ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾಲ್ಲೂಕಿನ ಚೆಯ್ಯಂಡಾಣೆ ಗ್ರಾಮದ ನರಿಯಂದಡ ಅಯ್ಯಪ್ಪ ಯುವಕ ಸಂಘ ಇವರ ಸಹಕಾರದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ವು ನವೆಂಬರ್ 10 ರಂದು ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.ನಗರದ ಅಕಾಡೆಮಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಅರೆಭಾಷೆಕರು ಹೆಚ್ಚಿನ ಸಂಖ್ಯೆಯಲ್ಲಿ

ನ.10 ರಂದು ಚೆಯ್ಯಂಡಾಣೆ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸದಾನಂದ ಮಾವಜಿ ಮನವಿ Read More »

ಬಾಟಲಿಯಿಂದ ವ್ಯಕ್ತಿಗೆ ಗಂಭೀರ ಹಲ್ಲೆ

ಪಂಜದ ಬಾರ್ ಸಮೀಪ ಬಾಟಲಿಯಿಂದ ಒರ್ವ ವ್ಯಕ್ತಿ ಇನ್ನೊಬ್ಬನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನ.7 ರಂದು ಸಂಜೆ ಪಂಜದಿಂದ ವರದಿಯಾಗಿದೆ.ಪಂಜ ಬಾರ್ ಸಮೀಪ ಘಟನೆ ನಡೆದಿದ್ದು ಪುರುಷೋತ್ತಮ ಎಂಬವರು ಅವರ ಸಂಬಂಧಿಕ ಜಗನ್ ಎಂಬವರಿಗೆ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಕುತ್ತಿಗೆಗೆ ಜಗನ್ ಅವರಿಗೆ ಹಲ್ಲೆ ನಡೆಸಲಾಗಿದ್ದು ಅವರು ಅಲ್ಲೆ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ.

ಬಾಟಲಿಯಿಂದ ವ್ಯಕ್ತಿಗೆ ಗಂಭೀರ ಹಲ್ಲೆ Read More »

ಕಾನೂನು ವಿದ್ಯಾರ್ಥಿ ನೇಣು ಬಿಗಿದು ಆತ್ಮ ಹತ್ಯ

ಆಲೆಟ್ಟಿ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಕಾನೂನು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆಕಲ್ಲೆಂಬಿ ಸ್ಥಾನದ ಮನೆಯ ರಾಘವ ಬೆಳ್ಳಪ್ಪಾಡ ಎಂಬವರ ಪುತ್ರ ಮಿಥುನ್ ರಾಜ್( 26) ಎಂಬ ಯುವಕ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.ಮನೆಯವರು ಸುಳ್ಯಕ್ಕೆ ಮದುವೆಗೆಂದು ಬಂದಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೋಲಿಸರು ಆಗಮಿಸಿ ಮಹಜರು ನಡೆಸಿ ಸರಕಾರಿ ಆಸ್ಪತ್ರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕೊಂಡೊಯ್ದಿದ್ದಾರೆ.ಯುವಕ ಸುಳ್ಯದ ಕಾನೂನು ಮಹಾವಿದ್ಯಾಲಯದ

ಕಾನೂನು ವಿದ್ಯಾರ್ಥಿ ನೇಣು ಬಿಗಿದು ಆತ್ಮ ಹತ್ಯ Read More »

ಕೋಲ್ಚಾರು ಶಾಲೆಯಲ್ಲಿ ಭೀಮರಾವ್ ವಾಷ್ಠರ್ ತಂಡದಿಂದ ವಿಶೇಷ ಗೀತ ಗಾಯನ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ – ಸಾಹಿತ್ಯ ಸಂಭ್ರಮ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುವಿಚಾರ ವೇದಿಕೆ ವತಿಯಿಂದ ರಾಜ್ಯದಲ್ಲಿ ಮಲೆನಾಡ ಗಾಂಧಿ ದಿ. ಗೋವಿಂದೇಗೌಡ ಸ್ಮರಣಾರ್ಥ ನೀಡುವ ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರು ಶಾಲೆಯ ಸಭಾಂಗಣದಲ್ಲಿ ಸುಳ್ಯದ ಖ್ಯಾತ ಗಾಯಕ, ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್. ಭೀಮರಾವ್ ವಾಷ್ಠರ್ ಮತ್ತು ತಂಡದ ವತಿಯಿಂದ ವಿಶೇಷ ಗೀತ ಗಾಯನ ಕಾರ್ಯಕ್ರಮ ಜರುಗಿತು. ಗೀತ ಗಾಯನ ಕಾರ್ಯಕ್ರಮದಲ್ಲಿ ಕನ್ನಡ

ಕೋಲ್ಚಾರು ಶಾಲೆಯಲ್ಲಿ ಭೀಮರಾವ್ ವಾಷ್ಠರ್ ತಂಡದಿಂದ ವಿಶೇಷ ಗೀತ ಗಾಯನ ಕಾರ್ಯಕ್ರಮ Read More »

ಮಾಜಿ ಸಚಿವ ಅಂಗಾರರು ಬೇಡಿಕೆ ಇಟ್ಟಿದ ರಸ್ತೆಗಳ ಅಭಿವೃದ್ಧಿ ಗೆ ಅನುದಾನ ಮಂಜೂರು

ಎಸ್‌.ಅಂಗಾರರು ಸಚಿವರಾಗಿದ್ದ 2022-23ನೇ ಸಾಲಿನಲ್ಲಿ ಸುರಿದ ಬಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗಾಗಿ ಮಳೆ ಪರಿಹಾರ ಕಾರ್ಯಕ್ರಮದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದ 3 ಕೋಟಿ ರೂ.ಗಳ ಕಾಮಗಾರಿಗಳ ಪಟ್ಟಿಗೆ ಆಗಿನ ಸರಕಾರ ಮಂಜೂರಾತಿ ನೀಡಿತ್ತು. ಆ ಪಟ್ಟಿಯಲ್ಲಿದ್ದ. ಈ ಕೆಳಗೆ ಉಲ್ಲೇಖಿಸಲಾದ ರಸ್ತೆಗಳ ಅಭಿವೃದ್ಧಿಗೆ ಈಗಿನ ಸರಕಾರ ಅನುದಾನ ಬಿಡುಗಡೆಗೊಳಿಸಿ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕಲ್ಲೋಣಿ- ಕುಳ್ಳಂಪಾಡಿ ರಸ್ತೆ ಅಭಿವೃದ್ಧಿಗೆ ರೂ.

ಮಾಜಿ ಸಚಿವ ಅಂಗಾರರು ಬೇಡಿಕೆ ಇಟ್ಟಿದ ರಸ್ತೆಗಳ ಅಭಿವೃದ್ಧಿ ಗೆ ಅನುದಾನ ಮಂಜೂರು Read More »

ಅಜ್ಜಾವರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ದೇವಕಿ ಆಯ್ಕೆ

ಸುಳ್ಯ: ಅಜ್ಜಾವರ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ದೇವಕಿ ಕಾಟಿಪಳ್ಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಜ್ಜಾವರ ಗ್ರಾ.ಪಂ. ಅಧ್ಯಕ್ಷರಾಗಿದ್ದ ಬೇಬಿ ಅವರು ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ನ.7 ರಂದು ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಅಜ್ಜಾವರ ಗ್ರಾ.ಪಂ. ನ ಅಧ್ಯಕ್ಷತೆ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಕಳೆದ ಬಾರಿ ಅಧ್ಯಕ್ಷತೆ ಆಯ್ಕೆ ಸಂದರ್ಭ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾದ ಬೇಬಿ ಮತ್ತು ದೇವಕಿ ಆಕಾಂಕ್ಷಿಗಳಾಗಿದ್ದರು. ಬಳಿಕ ಮಾತುಕತೆ ನಡೆದು ಒಂದೂಕಾಲು ವರ್ಷದಂತೆ ಇಬ್ಬರಿಗೂ ಅಧ್ಯಕ್ಷತೆ ಹಂಚಿಕೊಡಲು ಪಕ್ಷ

ಅಜ್ಜಾವರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ದೇವಕಿ ಆಯ್ಕೆ Read More »

ಮುಸ್ಲಿಂ ಸಮುದಾಯದ ಸಭೆ ನಡೆಸಿದ ಮಾಜಿ ಸಿ.ಎಂ ಬಸವರಾಜ ಬೊಮ್ಮಾಯಿ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಮಗ ಭರತ್ ಅವರ ಗೆಲುವಿಗಾಗಿ ವಿವಿಧ ಸಮುದಾಯಗಳ ಪ್ರಮುಖರನ್ನು ಭೇಟಿಯಾಗಿ ಮಗನನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.ಮುಸ್ಲಿಂ ಸಮುದಾಯದ ಕೆಲವು ಪ್ರಮುಖ ಮುಖಂಡರೊಂದಿಗೆ ಅವರು ಬಂಕಾಪುರ ಪಟ್ಟಣದಲ್ಲಿ ಸಭೆ ನಡೆಸಿದರು.ಬಂಕಾಪುರದ ಪ್ರಮುಖ ಮುಸ್ಲಿಂ ಮುಖಂಡರ ಮನೆಗೆ ಮಂಗಳವಾರ ರಾತ್ರಿ ಭೇಟಿ ನೀಡಿದ ಬೊಮ್ಮಾಯಿ, “ನಾನು ಯಾವಾಗಲೂ ನಿಮ್ಮೊಂದಿಗೆ ನಿಂತಿದ್ದೇನೆ. ನಿಮ್ಮ ವ್ಯಾಪಾರ, ಉದ್ಯಮವನ್ನು ಬೆಳೆಸುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಿ ನೀವು ಬೆಳೆಯಬೇಕು ಎಂದು ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.

ಮುಸ್ಲಿಂ ಸಮುದಾಯದ ಸಭೆ ನಡೆಸಿದ ಮಾಜಿ ಸಿ.ಎಂ ಬಸವರಾಜ ಬೊಮ್ಮಾಯಿ Read More »

error: Content is protected !!
Scroll to Top