November 2024

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುರುಕಲು ಕಬ್ಬಿಣದ ಚೇಯರ್ ನಿಂದ ಬಿದ್ದು ಮಹಿಳೆಗೆ ಗಾಯ

ಸುಳ್ಯ ಕೆ.ಎಸ್.ಆರ್.ಟಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೇಯರ್ ಗಳು ನಾದುರಸ್ತಿಯಲ್ಲಿದ್ದು ಮಂಗಳವಾರ ಮಹಿಳೆಯೊಬ್ಬರು ಕುಳಿತುಕೊಳ್ಳುವ ಸಂದರ್ಭದಲ್ಲಿ ಚೇಯರ್ ಮುರಿದು ಮಹಿಳೆ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ವರದಿಯಾಗಿದೆ.ಮಹಿಳೆಯ ಕೈ ಕಾಲುಗಳಿಗೆ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಕಳೆದ ಕೆಲವು‌ ವರ್ಷಗಳಿಂದ ಚೇಯರ್ ಗಳು ಕಟ್ ಆಗಿ ನಿಂತಿವೆ. ಈ ಸಮಸ್ಯೆಯ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಕಟವಾಗಿತ್ರು ಆದರೂ ಈ ಸಮಸ್ಯೆ ಪರಿಹಾರವಾಗಿಲ್ಲ. ಕಳಪೆ ಗುಣಮಟ್ಟದ ಕಬ್ಬಿಣದ ಚೇಯರ್ ಅಳವಡಿಸಿರುವುದೇ ಇಂತಹ ಘಟನೆಗಳು ಆಗಾಗ ನಡೆಯಲು ಕಾರಣವಾಗಿದೆ.ಕೆ.ಎಸ್.ಆರ್.ಟಿ.ಸಿಯವರು […]

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುರುಕಲು ಕಬ್ಬಿಣದ ಚೇಯರ್ ನಿಂದ ಬಿದ್ದು ಮಹಿಳೆಗೆ ಗಾಯ Read More »

ಪೊಲೀಸ್ ಕಾನ್ಸ್‌ಟೇಬಲ್‌ ನನ್ನು ಕಡಿದು ಬರ್ಬರ ಕೊಲೆ!

ಹಾಸನ: ಹಾಸನದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.ಈ ಘಟನೆ ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ. ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದವರಾದ ಹರೀಶ್.ವಿ (32) ಕೊಲೆಯಾದ ಪೊಲೀಸ್‌ ಕಾನ್ಸ್‌ಟೇಬಲ್.ಹರೀಶ್ ಬೆಂಗಳೂರಿನ KSISFನಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. ಇದೇ ತಿಂಗಳು 11 ರಂದು ಹರೀಶ್ ವಿವಾಹ ನಿಶ್ಚಯವಾಗಿತ್ತು.ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ

ಪೊಲೀಸ್ ಕಾನ್ಸ್‌ಟೇಬಲ್‌ ನನ್ನು ಕಡಿದು ಬರ್ಬರ ಕೊಲೆ! Read More »

ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ

ಬೆಳಗಾವಿಯ ತಹಶೀಲ್ದಾರ ಕಚೇರಿಯ ಕೊಠಡಿಯಲ್ಲಿಯೇ ಎಸ್ ಡಿಎ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ.ದ್ವಿತೀಯ ದರ್ಜೆ ಗುಮಾಸ್ತ ರುದ್ರಣ್ಣ ಯಡವನ್ನವರ ಎಂಬ ಸಿಬ್ಬಂದಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ತಹಶೀಲ್ದಾರರು ಕುಳಿತುಕೊಳ್ಳುವ ಸ್ಥಳದಲ್ಲಿಯ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬರುತ್ತಿದ್ದಂತೆ ವಿಚಾರ ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ Read More »

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರಿಂದ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರಿಗೆ ಗೌರವಾರ್ಪಣೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ. ಗೋಕುಲ್ ದಾಸ್ ರವರಿಗೆ ಇಂದು ತಮ್ಮ ಕಚೇರಿಯಲ್ಲಿ ಶುಭಹಾರೈಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ ಉಪಸ್ಥಿತರಿದ್ದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರಿಂದ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರಿಗೆ ಗೌರವಾರ್ಪಣೆ Read More »

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆ‌ರ್ ದಾಖಲು

ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ತಾರಕಕ್ಕೆ ಏರಿದ್ದು, ಹೆಚ್‌ಡಿಕೆ ಬೆದರಿಸುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎ1 ಆರೋಪಿಯಾಗಿ ಹೆಚ್. ಡಿ. ಕುಮಾರಸ್ವಾಮಿ, ಎ2 ನಿಖಿಲ್, ಹಾಗೂ ಎ3 ಆರೋಪಿ ಜೆಡಿಎಸ್ ಮುಖಂಡ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆ‌ರ್ ದಾಖಲು Read More »

ವಿದ್ಯುತ್ ಕಂಬಕ್ಕೆ ಸ್ಕೋರ್ಪಿಯೊ ಡಿಕ್ಕಿ,ತಪ್ಪಿದ ಭಾರೀ ದುರಂತ

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಸ್ಕೊರ್ಪಿಯೊ ವಾಹನ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಘಟನೆ ನ.5 ರಂದು ನಸುಕಿನ ಜಾವ ನಡೆದಿದೆ.ಮಂಗಳೂರಿಗೆ ತೆರಳುತ್ತಿದ್ದ ಸ್ಕೊರ್ಪಿಯ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

ವಿದ್ಯುತ್ ಕಂಬಕ್ಕೆ ಸ್ಕೋರ್ಪಿಯೊ ಡಿಕ್ಕಿ,ತಪ್ಪಿದ ಭಾರೀ ದುರಂತ Read More »

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ

33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.5 ಮಂಗಳವಾರ ನಡೆಸುವುದರಿಂದ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33 ಕೆ.ವಿ ಕಾವು-ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆವಿ ಕಾವು ಹಾಗೂ ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ Read More »

ಸ್ಕೂಟಿ ಸವಾರ ಮೃತಪಟ್ಟು ಎರಡು ದಿನ ಕಳೆದರೂ ಸ್ಥಳದಿಂದ ಕದಡದ ಮೃತಪಟ್ಟ ವ್ಯಕ್ತಿಯ ಕೋಳಿ

ಕಡಬ: ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಳಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದು ಎರಡು ದಿನ ಕಳೆದರೂ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನೆ ನಡೆದ ಸ್ಥಳದಲ್ಲಿಯೇ ಇದೆ.ಸೀತಾರಾಮ ಅವರು ದೀಪಾವಳಿ ಪ್ರಯುಕ್ತ ಎಡಮಂಗಲದ ತನ್ನ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಡಿಂಬಾಳದಿಂದ ಕೋಳಿ ತೆಗೆದುಕೊಂಡು ಸ್ಕೂಟಿಯಲ್ಲಿ ಎಡಮಂಗಲದತ್ತ ಹೋಗುತ್ತಿದ್ದ ವೇಳೆ ನ. 2

ಸ್ಕೂಟಿ ಸವಾರ ಮೃತಪಟ್ಟು ಎರಡು ದಿನ ಕಳೆದರೂ ಸ್ಥಳದಿಂದ ಕದಡದ ಮೃತಪಟ್ಟ ವ್ಯಕ್ತಿಯ ಕೋಳಿ Read More »

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ

ಗುತ್ತಿಗಾರುವಿನ ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ನಿವೃತ್ತ ಸಿಬ್ಬಂದಿ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ತೀರ್ಥರಾಮ ಎಚ್. ಬಿ ಹೊಸೋಳಿಕೆಯವರು ಸರಳ, ಸಜ್ಜನ, ದಕ್ಷ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತಿ ಹೊಂದಿದ್ದರು ಹೊಸೋಳಿಕೆ ಕಟ್ಟೆಮನೆ ಕುಟುಂಬದ ಮುಖ್ಯಸ್ಥರಾಗಿರುವ ಇವರನ್ನು ಕುಟುಂಬಸ್ಥರು ದೀಪಾವಳಿ ಹಬ್ಬದಲ್ಲಿ ಕುಟುಂಬಸ್ಥರ ಸಮಾಗಮದಲ್ಲಿ ಗೌರವಿಸಿದರುಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಯವರು ಅಧ್ಯಕ್ಷತೆ ವಹಿಸಿದರು, ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಅಧ್ಯಕ್ಷರಾದ ಎಚ್.

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ Read More »

ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಇದರ ನೇತೃತ್ವದಲ್ಲಿ ಶ್ರೀ ಶಾರದ ರಾಮ ಸೇವಾ ಪ್ರತಿಷ್ಠಾನ ಬಯಂಬು ಇಲ್ಲಿ ಬಾಲಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಅಜ್ಜಾವರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ದೀಪ ಪ್ರಜ್ವಲಿಸುವ ಮೂಲಕ ಬಾಲ ಸಂಸ್ಕಾರ ಕೇಂದ್ರವನ್ನು ಉದ್ಘಾಟಿಸಿದರು. ಅಟಲ್ ಜೀ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿಯಾದ ಸುಭೋದ್ ಶೆಟ್ಟಿ ಮೇನಾಲ ಇವರು ಬಾಲ ಸಂಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕ ನಡೆಸಿದರು. ವಿಶ್ವ ಹಿಂದೂ ಪರಿಷತ್ತು

ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ Read More »

error: Content is protected !!
Scroll to Top