November 2024

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ,ಬಿಜೆಪಿ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು

ತೆರವಾಗಿದ್ದ ಮಂಡೆಕೋಲು ಗ್ರಾಮ ಪಂಚಾಯತ್‌ನ 2ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನವೀನ್ ಮುರೂರು ಜಯ ಗಳಿಸಿದ್ದಾರೆ. ನವೀನ್ 301 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.849 ಒಟ್ಡು ಮತದಾನವಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ನವೀನ್ ಮುರೂರು ಅವರಿಗೆ 568 ಮತ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣ ಮಣಿಯಾಣಿ ಅವರಿಗೆ 267 ಮತ ಲಭಿಸಿದೆ. 14 ಮತಗಳು ತಿರಸ್ಕೃತಗೊಂಡವು.ನ.23 ರಂದು ಉಪಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆಸಲಾಯಿತು.

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ,ಬಿಜೆಪಿ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು Read More »

ಹೊಟೇಲ್ ಹಾಗೂ ಅಂಗಡಿಯ ಬೀಗ ಮುರಿದು ಭಾರೀ ಮೊತ್ತದ ನಗದು ಕಳವು

ಅಂಗಡಿ ಮತ್ತು ಹೋಟೆಲ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಣ ಕಳವುಗೈದ ಘಟನೆ ಕನಕಮಜಲು ಗ್ರಾಮದ ಕೋಡಿಯಲ್ಲಿ ನ.25ರಂದು ರಾತ್ರಿ ವರದಿಯಾಗಿದೆ.ಕೋಡಿಯಲ್ಲಿರುವ ಜಗನ್ನಾಥ ಅವರ ಅಂಗಡಿ ಹಾಗೂ ಅದರ ಹಿಂಬದಿಯಲ್ಲಿರುವ ಮೋಹನ ಅವರ ಮಾಲಕತ್ವದ ಶ್ರೀರಾಮ್ ಹೋಟೆಲಿಗೆ ಕಳ್ಳರು ನುಗ್ಗಿದ್ದು ಹಣ ಕಳವುಗೈದಿರುವುದಾಗಿ ತಿಳಿದುಬಂದಿದೆ .ಬೆಳಿಗ್ಗೆ ಹೋಟೆಲ್ ಮಾಲಕ ಮೋಹನ ಹಾಗೂ ಜಗನ್ನಾಥ ಅವರು ಬಂದಾಗ ಘಟನೆ ಬೆಳಕಿಗೆ ಬಂದಿದೆ.ಕನಕಮಜಲ್ಲಿ ಕಳೆದ ಕೆಲವು ತಿಂಗಳಿನಿಂದ ಕಳ್ಳತ ಹಾವಳಿ ಜಾಸ್ತಿಯಾಗಿದ್ದು ಅವರನ್ನು ಮಟ್ಟ ಹಾಕಲು

ಹೊಟೇಲ್ ಹಾಗೂ ಅಂಗಡಿಯ ಬೀಗ ಮುರಿದು ಭಾರೀ ಮೊತ್ತದ ನಗದು ಕಳವು Read More »

ಅರೆಭಾಷೆ ಉಳಿಸಲು ಅಕಾಡೆಮಿಯಿಂದ ನಿರಂತರ ಕಾರ್ಯಕ್ರಮ : ಸದಾನಂದ ಮಾವಜಿ

ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಮೈಸೂರು ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ದೀಪಾವಳಿ ಸಾಂಕೇತಿಕ ಆಚರಣೆ ಕಾರ್ಯಕ್ರಮ ನ. 24ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ನಡೆಯಿತು.ದ.ಕ.ಜಿಲ್ಲಾ ಗೌಡ ಸಂಘ ಮೈಸೂರು ಇದರ ಅಧ್ಯಕ್ಷ ವಿಶ್ವನಾಥ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಭಾಗವಹಿಸಿ ಮಾತನಾಡಿ, “ಭಾಷೆ ಉಳಿಸುವ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಕೆಲಸ ಮಾಡುತ್ತಿದ್ದು, ಮುಂದಿನ

ಅರೆಭಾಷೆ ಉಳಿಸಲು ಅಕಾಡೆಮಿಯಿಂದ ನಿರಂತರ ಕಾರ್ಯಕ್ರಮ : ಸದಾನಂದ ಮಾವಜಿ Read More »

ನಿಂತಿಕಲ್ಲು: ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಮಾಸ್‌ನಿಂದ ಅಡಿಕೆ ಬೆಳೆಗಾರರ ಸಂಕಷ್ಟ ದೂರವಾಗಲಿ; ಭಾಗೀರಥಿ ಮುರುಳ್ಯಸುಳ್ಯ, ನ.೨೫: ಅಡಿಕೆ ಬೆಳೆಗಾರರು ಅಡಿಕೆಯಲ್ಲಿನ ವಿವಿಧ ರೀತಿಯ ರೋಗ ಬಾಧೆಗಳ ಜೊತೆಗೆ ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಹಾಗೂ ಇನ್ನಿತರ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಾಗ ಅವರ ಬದುಕು ಹಸನಾಗುತ್ತದೆ. ಮಾಸ್ ಸಂಸ್ಥೆಯಿAದ ಅಡಿಕೆಗೆ ಉತ್ತಮ ಧಾರಣೆ ನೀಡಿ ಅಡಿಕೆ ಖರೀದಿ ಮಾಡುವ ಮೂಲಕ ಅಡಿಕೆ ಬೆಳೆಗಾರರ ಸಂಕಷ್ಟ ದೂರ ಮಾಡುವ ಕೆಲಸ ಆಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಮಂಗಳೂರು ಕೃಷಿಕರ ಸಹಕಾರಿ

ನಿಂತಿಕಲ್ಲು: ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ Read More »

ನ.25ಕ್ಕೆ ನಿಂತಿಕಲ್ಲಿನಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಸುಳ್ಯ:ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು( ಮಾಸ್ ಲಿಮಿಟೆಡ್ಡ್ ವತಿಯಿಂದ ಮುರುಳ್ಯ ಎಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಇದರ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನ.25ರಂದು ಸೋಮವಾರ ಪೂ.10.30ಕ್ಕೆ ನಿಂತಿಕಲ್ಲು ‘ಸಾಧನಾ ಸಹಕಾರಿ ಸೌಧ’ದಲ್ಲಿ ನಡೆಯಲಿದೆ ಎಂದು ಮಾಸ್ ಲಿಮಿಟೆಡ್‌ನ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ನ.25ಕ್ಕೆ ನಿಂತಿಕಲ್ಲಿನಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ Read More »

ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ.ಸಿ ಗೆ ಮನವಿ

ಸುಳ್ಯ ತಾಲೂಕು ಕಛೇರಿ, ಉಪನೋಂದಣಾಧಿಕಾರಿಗಳ ಕಛೇರಿ ಮತ್ತು ಭೂ ಮಾಪನಾ ಇಲಾಖೆಯ ಕಚೇರಿಗಳು ಸುಳ್ಯ ಮಿನಿ ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎರಡು ಮಹಡಿಗಳನ್ನು ಹೊಂದಿರುತ್ತದೆ. ಇದರಲ್ಲಿ ಲಿಫ್ಟ್ ಸೌಲಭ್ಯವಿಲ್ಲದ್ದರಿಂದ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ತುಂಬಾ ತೊಂದರೆಯಾಗಿರುತ್ತದೆ. ಆದುದರಿಂದ ಸದ್ದಿ ‘ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ ಸಿ ರವರಿಗೆ ಮನವಿ ನೀಡಿದ್ದಾರೆ.

ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ.ಸಿ ಗೆ ಮನವಿ Read More »

ಇದು ಒಳ್ಳ ಸೀರೆ, ಚಿನ್ನ, ತಾಳಿಚೈನ್‌ ಕತೆ

ಈಗೆಲ್ಲಾ ಮೊದುವೆಗಳ್ದೇ ಜಂಬರ. ಒಂದು ಮನೆಲಿ ಮೊದುವೆ ಎದ್ದತ್‌ತೇಳ್ರೆ ಕೇಳೊಕಾ..ಆ ಮನೆವ್ಕೆ, ಅವರ ನೆಂಟ್ರುಗಳಿಗೆ ಸಂಭ್ರಮನೋ ಸಂಭ್ರಮ. ಹೆಣ್ಮಕ್ಕ ಎಲ್ಲ ಎರ್ಡು ತಿಂಗ ಮುಂದೆನೇ ಸೀರೆ ತೆಗೆಕೆ, ಚಿನ್ನ ತೆಗೆಕೆ ಸುರು ಮಾಡುವೆ. ಸೀರೆ ಅಂಗುಡಿಯವ್ಕೆ, ಚಿನ್ನದಂಗುಡಿಯವ್ಕೆ ಈ ಮೊದುವೆ ಸೀಸನ್‌ ಬಾತ್‌ ತೇಳ್ರೆ ದೀಪಾವಳಿ ಹಬ್ಬ ಬಂದ ಹಾಂಗೆನೇ.ಇನ್ನು ಮೊದೊಳಿಗೆಗೆ ಸೀರೆ ತೆಗೆವ ಕತೆ. ಇದರ್ಲಿ ಒಂಥರಾ ಸ್ಟೇಟಸ್‌ ಮೈಂಟೆನ್‌ ಮಾಡುದು ಕೂಡಾ ಸಾಮಾನ್ಯ. ಅದರ್ಲೂ ನಮ್ಮ ಗೌಡ್ರುಗಳಲ್ಲಿ ಒಳ್ಳ ಸೀರೆ ತೆಗಿದು ತೇಳಿ ಉಟ್ಟು.

ಇದು ಒಳ್ಳ ಸೀರೆ, ಚಿನ್ನ, ತಾಳಿಚೈನ್‌ ಕತೆ Read More »

ಅರಂತೋಡಿನಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆ : ಪ್ರಕರಣ ದಾಖಲು

ಅರಂತೋಡು ಅಡ್ಕಬಳೆ ಸಂಪರ್ಕ ರಸ್ತೆಯಲ್ಲಿರುವ ಚಿಕನ್ ಸೆಂಟರ್ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಬಕಾರಿ ಇಲಾಖೆ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದುವ ಬಂದಿದೆ.ನ 23 ರಂದು ರಾತ್ರಿ 9:00ಗಂಟೆಗೆ ಅರಂತೋಡು ಗ್ರಾಮದ ಅರಂತೋಡು ಪೇಟೆಯ ಅಡ್ಕಬಳೆ ರಸ್ತೆಯ ಗುಳಿಗರಾಜ ಚಿಕನ್ ಸೆಂಟರ್ ಎಂಬ ಹೆಸರಿನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ತುಂಬಿದ ಸ್ಯಾಚೇಟ್ ಪ್ಯಾಕೇಟ್ಗಳನ್ನು ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸುಳ್ಯ ಪೊಲೀಸ್‌ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ಬಿ

ಅರಂತೋಡಿನಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆ : ಪ್ರಕರಣ ದಾಖಲು Read More »

ದರ್ಖಾಸ್ : ಆಟೋಟ ಸ್ಪರ್ಧೆ ಉದ್ಘಾಟನೆ

ಸಂಪಾಜೆ ದರ್ಖಾಸ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಹಾಗೂ ಪೋಷಕರಿಗೆ ಆಟೋಟ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೋಷಕರಾದ ಶ್ರೀಮತಿ ಹೇಮಾವತಿ ಲಕ್ಷ್ಮೀನಾರಾಯಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಶ್ರೀಯುತ ಚಿದಾನಂದ ಮಾಸ್ತರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಶ್ರೀ ಅಬೂಸಾಲಿ ಪಿ ಕೆ, ಶ್ರೀ ಶೌವಾದ್ ಗೂನಡ್ಕ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಹರ್ಷಿತಾ, ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ( ನಿಶಾ )

ದರ್ಖಾಸ್ : ಆಟೋಟ ಸ್ಪರ್ಧೆ ಉದ್ಘಾಟನೆ Read More »

ಶಿಕ್ಷಕ ಕೋಟಿಯಪ್ಪ ಪೂಜಾರಿ ನಿಧನ

ಶಿಕ್ಷಕ ಕೋಟಿಯಪ್ಪ ಪೂಜಾರಿ ನ.25ರಂದು ಬೆಳಗ್ಗೆ ಬೊಳುವಾರಿನ ಮನೆಯಲ್ಲಿ ನಿಧನರಾಗಿದ್ದಾರೆ.ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದ ಕೋಟಿಯಪ್ಪ ಪೂಜಾರಿ ಅವರು ಪುತ್ತೂರು ಬೊಳುವಾರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. .

ಶಿಕ್ಷಕ ಕೋಟಿಯಪ್ಪ ಪೂಜಾರಿ ನಿಧನ Read More »

error: Content is protected !!
Scroll to Top