November 2024

ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಗೆ ಕಾಡಾನೆ ದಾಳಿ,ತಂದೆ ಇಬ್ಬರು ಮಕ್ಕಳು ಗಾಯಗೊಂಡು ಅಪಾಯದಿಂದ ಪಾರು

ಮಕ್ಕಳನ್ನು ಶಾಲೆಗೆ ಬೈಕಲ್ಲಿ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆಯೊಂದು ಬೈಕ್ ಮೇಲೆ ದಾಳಿ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ಎಂಬವರು ಗುರುವಾರ ಬೆಳಗ್ಗೆ ತನ್ನ ಮಕ್ಕಳಾದ ಲಾವ್ಯಾ ಹಾಗೂ ಅದ್ವಿತ್‌ರನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬೈಕಿನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಭಯದಿಂದ ಅವರು ತನ್ನ ಬೈಕ್‌ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ರಸ್ತೆಗೆ ಬಿದ್ದ ವಸಂತ […]

ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಗೆ ಕಾಡಾನೆ ದಾಳಿ,ತಂದೆ ಇಬ್ಬರು ಮಕ್ಕಳು ಗಾಯಗೊಂಡು ಅಪಾಯದಿಂದ ಪಾರು Read More »

ಅರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಅರಂತೋಡು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ನ.21ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಮಾರು 14 ಮನೆ ಗಳಿಗೆ ಸಂಪರ್ಕ ಕಲ್ಪಿಸುವ 30ವರ್ಷಗಳಿಂದ ಊರ್ಜಿತ ದಲ್ಲಿರುವ ಆರಂತೋಡು, ಅಳಿಕೆ -ಕಲ್ಲುಗದ್ದೆ ಪಂಚಾಯತ್ ರಸ್ತೆಯನ್ನು ಪಂಚಾಯತಿನ ಅವಾಹಗನೆ ತರದೆ ಖಾಸಗಿ ವ್ಯಕ್ತಿಗಳು ರಸ್ತೆಯನ್ನು ಬಂದ್ ಮಾಡಲು ಯತ್ನಿಸುತ್ತಿರುವುದನ್ನು ಖಂಡಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಅಲ್ಲದೆ ಸಭೆಯಲ್ಲಿ, ಬೀದಿ ದೀಪಗಳ ದುರಸ್ತಿ, ಕೆಟ್ಟು ನಿಂತಿರುವ ಸೋಲಾರ್

ಅರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ಚೆಂಬು: ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊತ್ತಿ ಉರಿದ ಮನೆ

ಚೆಂಬು ಗ್ರಾಮದ ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಗುರುವಾರ ವರದಿಯಾಗಿದೆ.ಉಂಬಳೆಯ ಮಾನ್ಯದ ಎಂ‌.ಟಿ. ಭಾಸ್ಕರ ಅವರ ಮನೆಯಲ್ಲಿ ನ.21ರಂದು ಮಧ್ಯಾಹ್ನ ಮನೆಯವರು ಇಲ್ಲದ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಮನೆಗೆ ಬೆಂಕಿ ತಗುಲಿ ಹೊತ್ತಿ ಉರಿಯಿತು. ಪರಿಣಾಮವಾಗಿಮನೆಯೊಳಗಿದ್ದ ಮನೆಯ ದಾಖಲೆಪತ್ರಗಳು, ಬಟ್ಟೆಗಳು, ನಗದು ಹಣ, ಚಿನ್ನಾಭರಣ, ಗೋಣಿಯಲ್ಲಿ ತುಂಬಿಸಿಟ್ಟಿದ್ದ ಅಡಿಕೆ ಸ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ‌.

ಚೆಂಬು: ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊತ್ತಿ ಉರಿದ ಮನೆ Read More »

ನ.23ಕ್ಕೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದ್ದು ಶತಮಾನೋತ್ಸವ ಕಾರ್ಯಕ್ರಮ ನ.23ರಂದು ನಡೆಯಲಿದೆ. ಬೆಳಿಗ್ಗೆ 10ಕ್ಕೆ ಶತಮಾನೋತ್ಸವ ಸಂಭ್ರಮವನ್ನು ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ‘ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿಶಾಸಕಿ ಭಾಗೀರಥಿ ಮುರುಳ್ಯ ವಿಧಾನ ಪರಿಷತ್‌ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಎಸ್. ಅಂಗಾರ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕರುಗಳಾದ ಶಶಿಕುಮಾ‌ರ್ ರೈ ಬಾಲೊಟ್ಟು,

ನ.23ಕ್ಕೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ Read More »

ಮದುವೆ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮ ಹತ್ಯೆ

ಮದುವೆ ನಿಶ್ವಯವಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಿಂದ ವರದಿಯಾಗಿದೆ.ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ಕೀರ್ತನಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವತಿ.ಮೃತ ಯುವತಿ ಕೀರ್ತನಾವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮದುವೆ ನಿಶ್ಚಯ ಮಾಡಿ, ಒಂದೂವರೆ ತಿಂಗಳ ಹಿಂದೆ ನಿಶ್ಚಿತಾರ್ಥವನ್ನು ಮಾಡಿದ್ದರು. ಮುಂದಿನ ಕೆಲವು ದಿನಗಳಲ್ಲಿ ಯುವತಿಗೆ ಮದುವೆ ಮಾಡುವುದಕ್ಕೆ ಮನೆಯಲ್ಲಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರುಆದರೆ ಯುವತಿ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಮನೆಯವರು ನೋಡಿ

ಮದುವೆ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮ ಹತ್ಯೆ Read More »

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಚಿರತೆಯೊಂದು ಕಾಡಿನಿಂದ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ . ಅರಣ್ಯ ಇಲಾಖೆಗೆ ಸ್ಥಳೀಯರು ತಿಳಿಸಿದ್ದಾರೆ.ಅರಣ್ಯ ಇಲಾಖೆಯವರು ಬೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು Read More »

ಸುಳ್ಯ ಗಾಂಧಿನಗರದಲ್ಲಿ ಬೈಕಲ್ಲಿ ಬಂದು ತಲವಾರು ತೋರಿಸಿ ಗಲಾಟೆ

ಗಾಂಧಿನಗರ ವೈನ್ ಶಾಪ್ ಒಂದರ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರು ತೋರಿಸಿ ಕೆಲವು ಹೊತ್ತು ಆತಂಕ ಸೃಷ್ಟಿಸಿ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ಚೀಲದಿಂದ ಉದ್ದದ ತಲವಾರು ಮಾದರಿಯ ಕತ್ತಿಯನ್ನು ಹೊರಗೆ ತೆಗೆದು ಮತ್ತೆ ಚೀಲದಲ್ಲಿ ಇರಿಸುವ ದೃಶ್ಯ ಕಂಡು ಬಂತು.ಅಲ್ಲಿ ನಿಂತಿರುವ ಓರ್ವರಲ್ಲಿ ಜಗಳ ಮಾಡಿಕೊಂಡು ಅವರಿಗೆ ಥಳಿಸುವ ದೃಶ್ಯ ವಿಡಿಯೋ ವೈರಲ್ ಆಗಿದೆ.ಜನರು ಜಮಾಯಿಸುತ್ತಿದ್ದಂತೆ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.

ಸುಳ್ಯ ಗಾಂಧಿನಗರದಲ್ಲಿ ಬೈಕಲ್ಲಿ ಬಂದು ತಲವಾರು ತೋರಿಸಿ ಗಲಾಟೆ Read More »

ಇನ್ನೋವಾ ಕಾರಿಗೆ ಲಾರಿ ಡಿಕ್ಕಿ ಹೊಡೆದು ಏಳು ಮಂದಿ ಗಂಭೀರ

ಇನ್ನೋವಾ ಕಾರಿಗೆ ವೇಗವಾಗಿ ಬಂದ ಇನ್ಸುಲೇಟರ್ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಇನ್ನೋವಾ ಕಾರಿನಲ್ಲಿದ್ದ ಏಳು ಜನರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇನ್ಸುಲೇಟರ್ ವಾಹನದಲ್ಲಿದ್ದ ಚಾಲಕನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಭಾಸಿ ಸಮೀಪದ ನಡೆದಿದೆ.ಕೇರಳ ಮೂಲದ ಇನ್ನೋವಾ ಕಾರಿನಲ್ಲಿ ಏಳು ಜನ ಪ್ರವಾಸಕ್ಕೆಂದು ಬಂದಿದ್ದರೆನ್ನಲಾಗಿದ್ದು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಕುಂಭಾಸಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರಗೋಪುರದ ಬಳಿ ಪಾಸ್

ಇನ್ನೋವಾ ಕಾರಿಗೆ ಲಾರಿ ಡಿಕ್ಕಿ ಹೊಡೆದು ಏಳು ಮಂದಿ ಗಂಭೀರ Read More »

ಗಾಂಧಿನಗರದಲ್ಲಿ ಕುಸಿದು ಬಿದ್ದ ಯುವತಿ ಆಸ್ಪತ್ರೆಗೆ ದಾಖಲು

ಸುಳ್ಯ ಗಾಂಧಿನಗರದ ಪಿಕಪ್ ಪಾರ್ಕಿಂಗ್ ಎದುರಿನ ರಸ್ತೆಯ ಬದಿಯಲ್ಲಿ ಹಠಾತ್ ಕುಸಿದು ಬಿದ್ದ ಯುವತಿಯೊಬ್ಬಳನ್ನು ಪಿಕಪ್ ಚಾಲಕರು ಆಸ್ಪತ್ರೆಗೆ ದಾಖಲಿಸಿದ ಘಟನೆ ನ.20ರಂದು ವರದಿಯಾಗಿದೆ.ಈ ಯುವತಿ ಕಾಣಿಯೂರುನವಳಾಗಿದ್ದು ವೈದ್ಯರು ವಿಚಾರಿಸಿದ್ದಾಗ ವಿಷ ಸೇವಿಸಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಗಾಂಧಿನಗರದಲ್ಲಿ ಕುಸಿದು ಬಿದ್ದ ಯುವತಿ ಆಸ್ಪತ್ರೆಗೆ ದಾಖಲು Read More »

ಕಾಡು ಹಂದಿ ತಿವಿದು ಮಹಿಳೆ ಗಂಭೀರ

ಕಾಡು ಹಂದಿ ತಿವಿದು ಮಹಿಳೆ ಗಾಯಗೊಂಡ ಘಟನೆ ದುಗ್ಗಲಡ್ಕ ದಲ್ಲಿ ಮಂಗಳವಾರ ಮುಂಜಾನೆ ಬೆಳಿಗ್ಗೆ ನಡೆದಿದೆ.ಕೂಟೇಲು ಸಿಆರ್ ಸಿ ಯ ರಾಮಚಂದ್ರನ್ ಎಂಬವರ ಪತ್ನಿ ಅಂಬಿಕಾ ಎಂಬವರು ದುಗ್ಗಲಡ್ಕ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ನಡೆಸುತ್ತಿದ್ದರು. ಆಗ ಪೊದೆಗಳ ಮಧ್ಯೆಯಿದ್ದ ಕಾಡುಹಂದಿಯೊಂದು ಬಂದು ಮಹಿಳೆಗೆ ತಿವಿಯಿತು.ಇದರಿಂದ ಮಹಿಳೆಯ ಕಾಲಿಗೆ ಗಾಯವಾಗಿದ್ದು,ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತೆಂದು ತಿಳಿದುಬಂದಿದೆ.

ಕಾಡು ಹಂದಿ ತಿವಿದು ಮಹಿಳೆ ಗಂಭೀರ Read More »

error: Content is protected !!
Scroll to Top