December 13, 2024

ಕಲ್ಚೆರ್ಪೆ : ಗುಳಿಗ ದೈವ ಹಾಗೂ ಪರಿವಾರ ದೈವಗಳ ಕೋಲ

ಸುಳ್ಯ ತಾಲೂಕಿನ‌ ಆಲೆಟ್ಟಿ ಗ್ರಾಮದ ಕಲ್ಟಿರ್ಪೆ ಪೆರಾಜೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಗುಳಿಗ ದೈವದ ಕೋಲ ನಡೆಯಿತು.ರಾತ್ರಿ ಸಾನಿಧ್ಯದಲ್ಲಿ ಶ್ರೀ ಗುಳಿಗ ದೈವದ ಕೋಲ ನಡೆದು ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ದೈವದ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ನೂರಾರು ಸಂಖ್ಯೆಯಲ್ಲಿ ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಆಗಮಿಸಿದ್ದರು. ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು […]

ಕಲ್ಚೆರ್ಪೆ : ಗುಳಿಗ ದೈವ ಹಾಗೂ ಪರಿವಾರ ದೈವಗಳ ಕೋಲ Read More »

ಸುಳ್ಯದಲ್ಲಿ ಭೀಕರ ಕಾರು ಅಪಘಾತ ಇಲ್ಲಿದೆ ವಿಡಿಯೋ‌ ಸಮೇತ ವರದಿ

ಸುಳ್ಯ ಆಲೆಟ್ಟಿ ಸಂಪರ್ಕಿಸುವ ರಸ್ತೆಯ ಗುರುಂಪು ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಳಭಾಗದ ಮನೆಯ ಹಿಂಬದಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ವರದಿಯಾಗಿದೆ.ನಿದ್ರೆ ಮಂಪರಿನಲ್ಲಿದ್ದ ಚಾಲಕ ಎದುರಿನ ತಡೆಗೋಡೆಯೊಂದಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.ಬಳಿಕ ಹಿಂದಕ್ಕೆ ಸರಿದ ಕಾರು ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕಾರು ಆಲೆಟ್ಟಿ ರಸ್ತೆಯ ಮೂಲಕ ಕೇರಳದ ಕಣ್ಣೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಸುಳ್ಯದಲ್ಲಿ ಭೀಕರ ಕಾರು ಅಪಘಾತ ಇಲ್ಲಿದೆ ವಿಡಿಯೋ‌ ಸಮೇತ ವರದಿ Read More »

ನಟ ದರ್ಶನ್ ಗೆ ಜಾಮೀನು ಮಂಜೂರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ಜಾಮೀನು ನೀಡಿ ಹೈಕೋರ್ಟ್‌ ಪೀಠ ಆದೇಶಿಸಿದೆ.ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶುಕ್ರವಾರ (ಡಿ.13) ಈ ಆದೇಶ ಹೊರಡಿಸಿದೆ.ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ‌, ನಾಗರಾಜ್‌, ಅನುಕುಮಾರ್‌, ಲಕ್ಷ್ಮಣ್‌, ಜಗದೀಶ್‌, ಪ್ರದೋಷ್ ಗೆ ಇದೀಗ ಜಾಮೀನು ನೀಡಲಾಗಿದೆ.

ನಟ ದರ್ಶನ್ ಗೆ ಜಾಮೀನು ಮಂಜೂರು Read More »

ಮಹಿಳೆ ಅಸೌಖ್ಯದಿಂದ ನಿಧನ

ಸುಳ್ಯ ತಾಲೂಕಿನ ಬೆಳ್ಳಾರೆ ಶ್ರೀ ದುರ್ಗಾ ಜ್ಯುವೆಲ್ಲರಿ ಮಾಲಕ, ಕಲ್ಮಡ್ಕ ಗ್ರಾಮದ ಮಾಳಿಗೆ ನಾರಾಯಣ ಆಚಾರ್ಯ ರವರ ಪತ್ನಿ ಹರಿಣಾಕ್ಷಿ (44)ಅವರು ಅಸೌಖ್ಯದಿಂದ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಹಿಳೆ ಅಸೌಖ್ಯದಿಂದ ನಿಧನ Read More »

ಪಾಲದಿಂದ ಅಯತಪ್ಪಿ ಬಿದ್ದು ವ್ಯಕ್ತಿ ಸಾವು

ಪಾಲದಿಂದ ಆಕಸ್ಮೀಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ವ್ಯಾಪಾರೆಯಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.ವ್ಯಾಪಾರೆಯ ಕುಸುಮಾಧರ(40 )ಎಂಬವರು ರಾತ್ರಿ ಮನೆಗೆ ಬರುತ್ತಿದ್ದ ವೇಳೆ ತೋಟದಲ್ಲಿದ್ದ ಪಾಲದಿಂದ ಕೆಳಗೆ ಬಿದ್ದರು.ಅವರ ತಲೆ ಸೇತುವೆಯ ಕೆಳಭಾಗದಲ್ಲಿದ್ದ ಕಲ್ಲಿಗೆ ಬಡಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಪಾಲದಿಂದ ಅಯತಪ್ಪಿ ಬಿದ್ದು ವ್ಯಕ್ತಿ ಸಾವು Read More »

ಅರಂತೋಡು : ಹಾಜಿ ಅಹಮ್ಮದ್ ಕುಂಞ ಪಟೇಲ್ ರವರು ನಿಧನ

ಅರಂತೋಡು : ಅರಂತೋಡು ನಿವಾಸಿ ಹಾಜಿ ಅಹಮ್ಮದ್ ಕುಂಞ ಪಟೇಲ್ ಶುಕ್ರವಾರ ಮುಂಜಾನೆ ಮನೆಯಲ್ಲಿ ನಿಧನರಾದರು.ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಮತ್ತು ಅರಂತೋಡು ನೆಹರು ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆಗೈದಿದ್ದರು. ಅರಂತೋಡು ನಿವಾಸಿಯಾಗಿರುವ ಬದ್ರುದ್ದೀನ್, ನಾಸೀರುದ್ದೀನ್, ಸೈಫುದ್ದೀನ್, ಹಬೀಬ್ ರಹಿಮಾನ್, ಸಲಾಹುದ್ದೀನ್, ಜಲಾಲುದ್ದೀನ್ ಮತ್ತು ಮರ್ಹೂಮ್ ಅಮೀನ್ , ಮರ್ಹೂಮ್ ಶಿಹಾಬ್ ರವರ ಸಹಿತ ನಾಲ್ಕು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.

ಅರಂತೋಡು : ಹಾಜಿ ಅಹಮ್ಮದ್ ಕುಂಞ ಪಟೇಲ್ ರವರು ನಿಧನ Read More »

ನೀರಿನಲ್ಲಿ ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಶ್ರದ್ಧಾ ಭಕ್ತಿಯೊಂದಿಗೆ ಸಂಪನ್ನ

ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊAಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿತ್ತು. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪ್ತಿಯಾಯಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ

ನೀರಿನಲ್ಲಿ ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಶ್ರದ್ಧಾ ಭಕ್ತಿಯೊಂದಿಗೆ ಸಂಪನ್ನ Read More »

error: Content is protected !!
Scroll to Top