December 2024

ಮೇಯಲು ಬಿಟ್ಟಿದ ದನದ ಕಾಲಿಗೆ ಕಡಿದ ಕಟುಕ

ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ. ಕೊಂಡ್ಯಾಡಿಯ ಮಹಿಳೆಯೋರ್ವೆ ಕಡಬ ಪೊಲೀಸರಿಗೆ ದೂರು ನೀಡಿದ್ದು, ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದೆ. ದನ ಸಂಜೆಯಾದರೂ ಮರಳಿ ಮನೆಗೆ ಬಾರಲಿಲ್ಲ. ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ರ ತೋಟದಲ್ಲಿ ಕಾಲಿಗೆ ಗಂಭೀರ ಗಾಯವಾದ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೇಯಲು ಬಿಟ್ಟಿದ ದನದ ಕಾಲಿಗೆ ಕಡಿದ ಕಟುಕ Read More »

ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ: ಈಗಲೇ ಅರ್ಜಿ ಸಲ್ಲಿಸಿ

ಸರ್ಕಾರ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮದುವೆ ಸಹಾಯಧನವೂ ಒಂದಿದೆ. ಹೌದು, ಈ ಯೋಜನೆಯಡಿ ನೋಂದಾಯಿತ ಕಾರ್ಮಿಕರ ಮೊದಲ ಮದುವೆ ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಬಹುದು. ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹ 60 ಸಾವಿರದವರೆಗೆ ಸಹಾಯಧನ ನೀಡುತ್ತದೆ. ಫಲಾನುಭವಿಯು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ: ಈಗಲೇ ಅರ್ಜಿ ಸಲ್ಲಿಸಿ Read More »

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಸುಳ್ಯದ ಅಮರ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ಅಂಗವಾಗಿ ಸುಳ್ಯದಲ್ಲಿ ಬುಧವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆ ನಡೆಯಿತು.ಸುಳ್ಯದ ಕಾನೂನು ಕಾಲೇಜಿನಲ್ಲಿ ಸ್ಪರ್ಧಾ ಕಾರ್ಯಕ್ರನಕ್ಕೆ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ. ಡಾ.ಎನ್‌.ಎ.ಜ್ಞಾನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೆವಿಜಿ ಸುಳ್ಯ ಹಬ್ಬ ಸಮಾಜ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ Read More »

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಡಾ.ರೇಣುಕಾಪ್ರಸಾದ್ ಅವರಿಗೆ ಗೌರವಾರ್ಪಣೆ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಬಹುಮತದಿಂದ ಆಯ್ಕೆಗೊಂಡ ಕೊಡುಗೈ ಧಾನಿ ಡಾ.ರೇಣುಕಾಪ್ರಸಾದ್ ರವರನ್ನು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಾತೃಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ., ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ಕಾರ್ಯದರ್ಶಿ ಕೆ.ರಾಮಣ್ಣ ಗೌಡ ಕೊಂಡೆಬಾಯಿ, ಆಡಳಿತ ಮಂಡಳಿಯ ಲತಾ ಕುದ್ರಾಜೆ, ತಿಮ್ಮಯ್ಯ ಪಿಂಡಿಮನೆ, ಅನಿತಾ ರಾಮಣ್ಣ ಗೌಡ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಡಾ.ರೇಣುಕಾಪ್ರಸಾದ್ ಅವರಿಗೆ ಗೌರವಾರ್ಪಣೆ Read More »

ಕುರುಂಜಿಭಾಗ್ ನಲ್ಲಿ ಟೋಪ್ ಹೌಸ್ ರೆಸ್ಟೋ ಶುಭಾರಂಭ,ಇಲ್ಲಿ ಹಲವು ವಿಶೇಷತೆಗಳಿವೆ ಇಂದೇ ಭೇಟಿ ನೀಡಿ

ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ ಸರ್ಕಲ್ ನಲ್ಲಿ ಕಳೆದ 21 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿರುವ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪವಿಜಯ್ ಕುಮಾರ್ ರವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ರವರ ನೂತನ ಮಯೂರಿ ಟೋಪ್ ಹೌಸ್ ರೆಸ್ಟೋ ಡಿ.ಎಂ.ಕಾಂಪ್ಲೆಕ್ಸ್‌ ರೂಫ್ ಗಾರ್ಡನ್ ನಲ್ಲಿಡಿ.25ರಂದು ಶುಭಾರಂಭಗೊಂಡಿದೆ.ಇಂದು ಬೆಳಿಗ್ಗೆ ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಉದ್ಘಾಟನೆಗೊಂಡ ಮಯೂರಿ ಟಾಪ್ ಹೌಸ್ ರೆಸ್ಟೋಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರು ಭೇಟಿ ನೀಡಿ ಶುಭ

ಕುರುಂಜಿಭಾಗ್ ನಲ್ಲಿ ಟೋಪ್ ಹೌಸ್ ರೆಸ್ಟೋ ಶುಭಾರಂಭ,ಇಲ್ಲಿ ಹಲವು ವಿಶೇಷತೆಗಳಿವೆ ಇಂದೇ ಭೇಟಿ ನೀಡಿ Read More »

ಮೂಕ ಪ್ರಾಣಿಗಳ ರೋಧನೆಯ ಆಲಿಸುವವರಾರು?

ಮನೆಗಳಲ್ಲಿ ಸಾಕುವಂತಹ ದನ, ನಾಯಿ, ಮೇಕೆ, ಕುರಿ, ಬೆಕ್ಕು, ಹಂದಿ ಮೊದಲಾದ ಪ್ರಾಣಿಗಳನ್ನು ‘ಸಾಕು ಪ್ರಾಣಿಗಳು’ ಎಂದು ಕರೆಯುತ್ತೇವೆ.ನಮ್ಮ ರಕ್ಷಣೆಗಾಗಿ ಹಾಗೂ ವ್ಯವಹಾರದ ಉದ್ದೇಶದಿಂದ ನಾವು ಇವುಗಳನ್ನು ಸಾಕುತ್ತೇವೆ. ಕೇವಲ ನಾಗರೀಕರ ನಡುವೆ ಮಾತ್ರವಲ್ಲದೆ ಸಾಕುಪ್ರಾಣಿಗಳಲ್ಲಿಯೂ ಲಿಂಗ ತಾರತಮ್ಯ ಮಾಡುವ ಏಕೈಕ ಜೀವಿ ಎಂದರೆ ಅದುವೇ ಮಾನವ. ಇತ್ತೀಚಿನಿಂದ ಅದು ಹೆಚ್ಚುತ್ತಲೇ ಹೋಗುತ್ತಿದೆ.ಭಾರತೀಯರಾದ ನಾವು ಹಸುವನ್ನು ‘ಗೋಮಾತೆ’ ಎಂದು ಪೂಜಿಸುತ್ತೇವೆ. ಹಸುವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದರೆ ಎಲ್ಲಿಲ್ಲದ ಸಂಭ್ರಮ. ಆದರೆ ಅದು ಗಂಡು ಕರುವಿಗೆ ಜನ್ಮವನ್ನಿತ್ತರೆ

ಮೂಕ ಪ್ರಾಣಿಗಳ ರೋಧನೆಯ ಆಲಿಸುವವರಾರು? Read More »

ಸಿಟಿ ರವಿ ಪ್ರಕರಣ: ಪೊಲೀಸ್ ಅಧಿಕಾರಿ ಮಂಜುನಾಥ್ ಅಮಾನತು

ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ಸಿಟಿ ರವಿ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಓರ್ವ ಅಧಿಕಾರಿಯ ತಲೆದಂಡವಾಗಿದೆ.ಖಾನಾಪುರದ ಸಿಪಿಐ ಮಂಜುನಾಥ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ನಾಯಕರನ್ನು ಖಾನಾಪುರ ಠಾಣೆಯೊಳಗೆ ಬಿಟ್ಟು, ಬಿಜೆಪಿ ನಾಯಕರು ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ಅಮಾನತು ನಡೆದಿದೆ.

ಸಿಟಿ ರವಿ ಪ್ರಕರಣ: ಪೊಲೀಸ್ ಅಧಿಕಾರಿ ಮಂಜುನಾಥ್ ಅಮಾನತು Read More »

ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ಆಯ್ಕೆ

ಕರ್ನಾಟಕ ಸರಕಾರವು ಹಲವು ಇಲಾಖೆಗಳಿಗೆ ನಾಮನಿರ್ದೇಶಕ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೆಲವರನ್ನು ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.ಸದಸ್ಯರ ವಿವರ ಈ ಕೆಳಗಿನಂತಿದೆ.ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ಇದರ ನಾಮ ನಿರ್ದೇಶನದ ಸದಸ್ಯರಾಗಿ ಸುಳ್ಯದಲ್ಲಿ ವಕೀಲರು ಹಾಗೂ ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ

ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ಆಯ್ಕೆ Read More »

ಸ್ಕೂಟಿ‌ ಅಪಘಾತ ದಂಪತಿ‌ ಸಾವು, ಇಲ್ಲಿದೆ ಹೆಚ್ಚಿನ ಮಾಹಿತಿ

ಕಂಟೈನ‌ರ್ ಲಾರಿ ಸ್ಕೂಟರ್ ಗೆ ಢಿಕ್ಕಿಯಾಗಿ ಸ್ಕೂಟಿ ಸವಾರರಾದ ದಂಪತಿ ಮ್ರತಪಟ್ಟ ಘಟನೆ ಸಂಪಾಜೆ ಬಳಿಯ ಚೆಡಾವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.ಮ್ರತಪಟ್ಟ ದಂಪತಿಯನ್ನು ಎಂ.ಚಿದಾನಂದ ಆಚಾರ್ಯ ಮತ್ತು ಅವರ ಧರ್ಮ ಪತ್ನಿ ನಳೀನಿ (38) ಎಂದು ಗುರುತಿಸಲಾಗಿದೆ.ಅವರ ತಮ್ಮ ಊರಾದ ಕೊಡಗಿನ ನೆಲ್ಲಿಹುದುಕೇರಿಯಿಂದ ಪುತ್ತೂರಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಸ್ಕೂಟಿಗೆ ಸಂಪಾಜೆಯ ಚೆಡಾವು ಬಳಿ ಡಿಕ್ಕಿಯಾಯಿತು. ಪರಿಣಾಮ ಚಿದಾನಂದ ಆಚಾರ್ಯ ಸ್ಥಳದಲ್ಲಿಯೇ ಮೃತಪಟ್ಟರು. ಸಹಸವಾರೆಯಾಗಿದ್ದ ನಳಿನಿಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಸುಳ್ಯದ

ಸ್ಕೂಟಿ‌ ಅಪಘಾತ ದಂಪತಿ‌ ಸಾವು, ಇಲ್ಲಿದೆ ಹೆಚ್ಚಿನ ಮಾಹಿತಿ Read More »

ಸ್ಕೂಟಿ ಲಾರಿ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಹಿಳೆಯೂ ಸಾವು

ಕೊಯನಾಡು ಸಮೀಪದ ಚಡಾವು ಎಂಬಲ್ಲಿ ಲಾರಿ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಇಬ್ಬರು ಇದೀಗ ಮಹಿಳೆಯೂ ಮ್ರತಪಟ್ಟ ಘಟನೆ ವರದಿಯಾಗಿದೆ. ಸ್ಕೂಟಿ ಸವಾರ ಚಿದಾನಂದ ಆಚಾರ್ಯ ಸ್ಥಳದಲ್ಲಿಯೇ ಮಟ್ಟರೆ ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗೊಂಡು , ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ಕೂಟಿ ಲಾರಿ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಹಿಳೆಯೂ ಸಾವು Read More »

error: Content is protected !!
Scroll to Top