January 23, 2025

ಮಹಿಳೆಯಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ,ಮಹಿಳೆ ವಿರುದ್ದ ಪೋಕ್ಸೋ ಪ್ರಕರಣ ದಾಖಲು!

ಅಪ್ರಾಪ್ತ ವಯಸ್ಸಿನ ಬಾಲಕನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿಯಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ವಿಶೇಷ ಘಟನೆ ವರದಿಯಾಗಿದೆ.ಬಂಧಿತ ಮಹಿಳೆಯನ್ನು 28ರ ಹರೆಯದ ವಿನೋಧಿನಿ ಎಂದು ತಿಳಿದು ಬಂದಿದೆ.ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ. ನಾಪತ್ತೆಯಾಗಿದ್ದ 10ನೇ ತರಗತಿ ಹುಡುಗನ್ನು ಆತನ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಮಹಿಳೆ ಜತೆ ಪತ್ತೆ ಹಚ್ಚಿದ ಪೊಲೀಸರು 17 ವರ್ಷದ ಹುಡುಗನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಹಾಗೂ10ನೇ ತರಗತಿ ಹುಡುಗ ಕುಟುಂಬ ಒಂದೇ ಗ್ರಾಮದಲ್ಲಿ ವಾಸಿಸುತ್ತಿತ್ತು. ಗಂಡ ಹಾಗೂ ಇಬ್ಬರು ಮಕ್ಕಳು ಜತೆಗಿದ್ದ ವಿನೋಧಿನಿ […]

ಮಹಿಳೆಯಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ,ಮಹಿಳೆ ವಿರುದ್ದ ಪೋಕ್ಸೋ ಪ್ರಕರಣ ದಾಖಲು! Read More »

ಸಾರ್ವಜನಿಕರ ಭೇಟಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ ಸುಳ್ಯದಲ್ಲಿ ಲಭ್ಯ

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ(ಜ.24) ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯರಿದ್ದಾರೆ.ಪೂರ್ವಾಹ್ನ 11.00 ಗಂಟೆಗೆ ಎಲಿಮಲೆ ಯಲ್ಲಿ ದೇವಚಳ್ಳ ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ 1.00 ಗಂಟೆಗೆ ಕಾರ್ಯಕರ್ತರೊಂದಿಗೆ ಸಹಭೋಜನದ ನಂತರ ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆಯವರೆಗೆ ಸಂಸದ ಕ್ಯಾ. ಚೌಟ ಅವರು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದು, ಸುಳ್ಯ ತಾಲೂಕಿನ ನಾಗರಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಎಂದು ಸಂಸದ ಕ್ಯಾ. ಚೌಟ ಅವರ ಕಚೇರಿ

ಸಾರ್ವಜನಿಕರ ಭೇಟಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ ಸುಳ್ಯದಲ್ಲಿ ಲಭ್ಯ Read More »

ಶ್ರೀ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಪೊಲೀಸರ ವಶ

ಮಸಾಜ್ ಪಾರ್ಲರ್ ಒಂದರ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವ‌ರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಗಳೂರಿನ ಬಿಜೈ ಬಳಿ ಇರುವ ಕಲರ್ಸ್ ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿ ಪಾರ್ಲರ್ ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಮಸೇನೆ ಸಂಘಟನೆಯ ಸಂಸ್ಥಾಪಕನಾಗಿರುವ ಪ್ರಸಾದ ಅತ್ತಾವರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಪೊಲೀಸರ ವಶ Read More »

ಅರಂತೋಡು : ಗ್ರಾಮ ಪಂಚಾಯತ್ ಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೇಟಿ

ದ.ಕ. ಜಿಲ್ಲಾ ಪಂಚಾಯತ್ ನ ನೂತನ ಉಪಕಾರ್ಯದರ್ಶಿ ಶ ಜಯಲಕ್ಷ್ಮಿ ಅವರು ಗುರುವಾರ ಅರಂತೋಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮ ಪಂಚಾಯಿತಿನ ನಲ್ಲಿ ದಾಖಲೆಗಳನ್ನು ಪರಿಶೀಲಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂ.ಅ.ಅ., ಸಿಬ್ಬಂದಿಗಳ ಜೊತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ನಂತರ ಗ್ರಾಮ ಪಂಚಾಯತ್ ಜಿಮ್ ಕೇಂದ್ರ, ಅಮೃತ ಸಭಾಂಗಣ, ಘನ ತ್ಯಾಜ್ಯ ಘಟಕ ಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾಮ ಪಂಚಾಯತ್ ಅಧ್ಯಕ್ಷರಾದ

ಅರಂತೋಡು : ಗ್ರಾಮ ಪಂಚಾಯತ್ ಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೇಟಿ Read More »

ಅರಂತೋಡು : ಫೆ.8ರಿಂದ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ ಫೆಬ್ರವರಿ 8, 9, 10 ಶ್ರದ್ದಾ ಭಕ್ತಿಯಿಂದ ನಡೆಯಲಿದೆ.ಫೆಬ್ರವರಿ 8 ಶನಿವಾರದಂದು ಅಪರಾಹ್ನ 3 ಗಂಟೆಗೆ ಗುಳಿಗನ ಕೋಲ ಮತ್ತು ಪ್ರಸಾದ ವಿತರಣೆ, ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 10 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಅಗಲು ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.ಫೆಬ್ರವರಿ 9 ಭಾನುವಾರ ರಾತ್ರಿ 8 ರಿಂದ ಫೆಬ್ರವರಿ

ಅರಂತೋಡು : ಫೆ.8ರಿಂದ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ Read More »

ವಿಟ್ಲ : ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್

ಡ್ರೋನ್ ಒಂದು ಅಪರೇಟರ್ ನಿಯಂತ್ರಣ ತಪ್ಪಿ ರಥದ ಮೇಲಿದ್ದ ಅರ್ಚಕರ ತಲೆಗೆ ಬಡಿದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ನಡೆದಿದೆ.ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ.ಈ ವೇಳೆ ದೇವರ ಮೂರ್ತಿ ಹೊತ್ತ ಮುಖ್ಯ ಅರ್ಚಕರು ರಥದ ಮೇಲೆ ತೆರಳಿದ್ದರು. ಡ್ರೋನ್ ಹೊಡೆದ ವೇಳೆ ದೇವರ ಮೂರ್ತಿ ಹೊತ್ತಿದ್ದ ಅರ್ಚಕರು ಕೊಂಚ ತಬ್ಬಿಬಾದರೂ ಸಾವರಿಸಿಕೊಂಡರು.

ವಿಟ್ಲ : ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್ Read More »

ಬಸ್ ನಿರ್ವಾಹಕ‌ನಿಂದ ಮಹಿಳೆ ಮೇಲೆ ಹಲ್ಲೆ

ಮೂಡುಬಿದಿರೆಯ ನೀರುಡೆಯಲ್ಲಿ ಬಸ್‌ ನಿರ್ವಾಹಕನೊಬ್ಬ ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರು ಘಟನೆ ನಡೆದಿದ್ದು, ನಿರ್ವಾಹಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಎಂದು ತಿಳಿದು ಬಂದಿದೆ.ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್ ಗೆ ಮುಚೂರಿನಿಂದ ಸುಮಾರು 15 ಮಂದಿ ಮಹಿಳೆಯರು ಶಾಲೊಮ್ ಬಸ್ ನಲ್ಲಿ ನಿತ್ಯ ಕೆಲಸಕ್ಕೆಂದು ಪ್ರಯಾಣಿಸುತ್ತಿದ್ದರು. ತಮ್ಮ ಕೆಲಸ ಬೇಗ ಮುಗಿದರೆ ಮನೆಗೆ ಬೇರೊಂದು ಬಸ್ಸಿನಲ್ಲಿ ತೆರೆಳುತ್ತಿದ್ದರು. ಈ ಕುರಿತಂತೆ ನಿರ್ವಾಹಕನು ಪ್ರತೀ ದಿನ

ಬಸ್ ನಿರ್ವಾಹಕ‌ನಿಂದ ಮಹಿಳೆ ಮೇಲೆ ಹಲ್ಲೆ Read More »

ನಾಪತ್ತೆಯಾಗಿದ್ದ ಶಾಲಾ ಬಾಲಕ ಪತ್ತೆ! ಎಲ್ಲಿ ಪತ್ತೆಯಾದ ಇಲ್ಲಿದೆ ಮಾಹಿತಿ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಪತ್ತೆಯಾಗಿರುವ ವರದಿಯಾಗಿದೆ.ಅಜ್ಜಾವರದ ಭಜನಾ ಮಂದಿರದಲ್ಲಿ ಗುರುವಾರ ಮುಂಜಾನೆ ಈತನು ಪತ್ತೆಯಾಗಿದ್ದಾನೆ. ಅಡ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಈತನು ಕಲಿಯುತ್ತಿದ್ದು ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿತ್ತು.ಅನ್ವಿತ್ ಮೂಲತ ಪುತ್ತೂರು ತಾಲೂಕಿನ‌ ಈಶ್ವರಮಂಗಳ ನಿವಾಸಿಯಾಗಿದ್ದು ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ನಾಪತ್ತೆಯಾಗಿದ್ದ ಶಾಲಾ ಬಾಲಕ ಪತ್ತೆ! ಎಲ್ಲಿ ಪತ್ತೆಯಾದ ಇಲ್ಲಿದೆ ಮಾಹಿತಿ Read More »

ಶಾಲಾ ಬಾಲಕ ನಾಪತ್ತೆ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನ ಅನ್ವಿತ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಈತನು ಅಡ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿದೆ.ಈ ಬಾಲಕ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕೆಂದು ಮನವಿ ಮಾಡಲಾಗಿದೆ.

ಶಾಲಾ ಬಾಲಕ ನಾಪತ್ತೆ Read More »

error: Content is protected !!
Scroll to Top