ತೊಡಿಕಾನ : ಆಯಿರಕೊಡ ಅಭಿಷೇಕ,ಸಿಯಾಳಾಭಿಷೇಕ,ರಂಗಪೂಜೆ,ಜ.27ಕ್ಕೆ ಚಾಕಟಡಿ ನೇಮೋತ್ಸವ,ಜ.28ಕ್ಕೆ ಪಾಷಾಣಮೂರ್ತಿ ಅಮ್ಮನವರ ಕೋಲ
ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶ್ರೀ ದೇವರಿಗೆ ಆಯಿರಕೊಡ ಅಭಿಷೇಕ,ಸಿಯಾಳಭಿಷೇಕ ಮತ್ತು ರಂಗಪೂಜೆ ನಡೆಯಿತು.ದೇವರಗುಂಡಿಯಿಂದ ಬೆಳಿಗ್ಗೆ ತೀರ್ಥ ತರಲಾಯಿತು,ಬಳಿಕ ಗಣಹೋಮ,ಶತರುದ್ರಾಭಿಷೇಕ,ಸಿಯಾಳಾಭಿ಼ಷೇಕ ನಡೆಯಿತು.ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಶ್ರೀ ಭಾರದ್ವಾಜಾಶ್ರಮ ಅರಂಬೂರು ಅವರಿಂದ ವೇದ ಪಾರಾಯಣ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದರು.ಜ.18ಕ್ಕೆ […]