January 2025

ಗೂನಡ್ಕ : ರಾಜ್ಯ ಮಟ್ಟದ ಮತ್ತು ತಾಲೂಕು ಮಟ್ಟದ ದಫ್ ಸ್ಪರ್ಧೆ

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲಿಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ಸಂಪಾಜೆ ದಫ್ ಸ್ಪರ್ಧೆ ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ಜ.5ರಂದು ನಡೆಯಿತು.ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್ ರ್ಯಾಲಿಗೆ ಚಾಲನೆ ನೀಡಿದರು. ಪೇರಡ್ಕ ಜುಮ್ಮಾ ಮಸೀದಿಯ ಖತೀಬರಾದ ನಈಂ ಫೈಝಿ ದುವಾಃ ನೆರವೇರಿಸಿದರು.ಆರಂಭದಲ್ಲಿ ತಾಲೂಕು […]

ಗೂನಡ್ಕ : ರಾಜ್ಯ ಮಟ್ಟದ ಮತ್ತು ತಾಲೂಕು ಮಟ್ಟದ ದಫ್ ಸ್ಪರ್ಧೆ Read More »

ಕರ್ನಾಟಕದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ಪತ್ತೆ !

ಚೀನಾದಲ್ಲಿಜೂನಿಯರ್ ಕೊರೊನೊ ಎಂದು ಕರೆಯಲ್ಪಡುವ ಸೋಂಕು ಎಚ್‌ಎಂಪಿವಿ ಹಬ್ಬುತ್ತಿರುವ ಆತಂಕದ ನಡುವೆ ಕರ್ನಾಟಕದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಟು ತಿಂಗಳ ಮಗುವಿನಲ್ಲಿ ಶಂಕಿತ ಸೋಂಕಿನ ಲಕ್ಷಣಗಳು ಪತ್ತೆಯಾಗಿದೆ.ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ

ಕರ್ನಾಟಕದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ಪತ್ತೆ ! Read More »

ಬಂಗಾರಕೋಡಿಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು,ಅಪಾರ ಪ್ರಮಾಣದ ಬೆಳೆ ನಾಶ

ಪೆರಾಜೆ ಗ್ರಾಮದ ಬಂಗಾರಕೋಡಿ ಪರಿಸರದಲ್ಲಿ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕ್ರಷಿ ಬೆಳೆಗಳನ್ನು ಹಾನಿ ಮಾಡಿರುವ ಘಟನೆ ವರದಿಯಾಗಿದೆ‌.ಬಂಗಾರಕೋಡಿ ಜಯರಾಮ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿರುವ ಕಾಡಾನೆಗಳು ಅಪಾರ ಪ್ರಮಾಣದ ಬಾಳೆಗಿಡಗಳು,ತೆಂಗು,ಅಡಿಕೆ ಗಿಡಗಳನ್ನು ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಬಂಗಾರಕೋಡಿಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು,ಅಪಾರ ಪ್ರಮಾಣದ ಬೆಳೆ ನಾಶ Read More »

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಗಳಿಗೆ ಮಾತ್ರ ಏಕೆ ? : ಪ್ರಭಾಕರ ಭಟ್ ಕಲ್ಲಡ್ಕ ಪ್ರಶ್ನೆ

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಕ್ಕೆ ಮಾತ್ರ ಏಕೆ ? ಪ್ರಾಣತ್ಯಾಗ ಮಾಡಿದ ತಾಯಂದಿರ ಇತಿಹಾಸ ಜಗತ್ತಿನಲ್ಲಿದ್ದರೆ ಅದು ಭಾರತದಲ್ಲಿ ಮಾತ್ರ, ಅಂತಹ ತಾಯಿಯನ್ನು ಮಹಿಷಮರ್ದಿನಿ ರೂಪದಲ್ಲಿ ಇಂದು ನಾವು ಕಾಣುತ್ತಿದ್ದೇವೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.ಅವರು ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.ವಿಶಾಲ ಧರ್ಮ ಸಂಸ್ಕೃತಿ ನಮ್ಮದು, ಭಾರತದ ಮೇಲೆ ಇಲ್ಲಿಯ

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಗಳಿಗೆ ಮಾತ್ರ ಏಕೆ ? : ಪ್ರಭಾಕರ ಭಟ್ ಕಲ್ಲಡ್ಕ ಪ್ರಶ್ನೆ Read More »

ಸುಳ್ಯ ಗಾಂಧಿನಗರ ಭಾಗದಲ್ಲಿ ಶಂಕಿತ ಹುಚ್ಚು ನಾಯಿ ತಿರುಗಾಟ,ಆತಂಕದಲ್ಲಿ ಜನರು,ವಿದ್ಯಾರ್ಥಿಗಳು !

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಕಾಯರತೋಡಿ ಭಾಗದಲ್ಲಿ ಶಂಕಿತ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿದ್ದು ಜನರು,ವಿದ್ಯಾರ್ಥಿಗಳು ಆತಂಕದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಗಾಂಧಿನಗರದ ಕೆಲವು ಬೀದಿ ನಾಯಿಗಳಿಗೆ ಈ ಹುಚ್ಚು ನಾಯಿ ಕಚ್ಚಿದ್ದು ಇನ್ನಷ್ಟು ಹುಚ್ಚು ನಾಯಿಗಳು ಕಾಣಿಸಿಕೊಳ್ಳಲಿದೆ.ಸುಳ್ಯ ನಗರ ಪಂಚಾಯತ್ ಈ ಬಗ್ಗೆ ಗಮನ ಹರಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುಳ್ಯ ಗಾಂಧಿನಗರ ಭಾಗದಲ್ಲಿ ಶಂಕಿತ ಹುಚ್ಚು ನಾಯಿ ತಿರುಗಾಟ,ಆತಂಕದಲ್ಲಿ ಜನರು,ವಿದ್ಯಾರ್ಥಿಗಳು ! Read More »

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ್ ನವರು ಪ್ರಥಮ ಬಾರಿಗೆ ಕೊಡಮಾಡಿದ ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಜನವರಿ 3 ಮತ್ತು 4 ರಂದು ನಡೆದ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ ನಡೆಯಿತು. ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಭಾಜನರಾದ ಸುಳ್ಯದ ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ನಟಿ ಉಮಾಶ್ರೀಯವರು

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ Read More »

ಕುಕ್ಕುಡೇಲು ಶೀನಪ್ಪ ಗೌಡ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕುಡೇಲು ನಿವಾಸಿ ಶೀನಪ್ಪ ಗೌಡರು ಜ.4ರಂದು ಮುಂಜಾನೆ ನಿಧನರಾದರು.ಅವರಿಗೆ 87 ವರ್ಷ ಪ್ರಾಯವಾಗಿತ್ತು.ಡಿ.4ರಂದು ಮುಂಜಾನೆ ಅಸ್ವಸ್ಥಗೊಂಡ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.ಕೃಷಿಕರಾಗಿದ್ದ ಅವರು ಪತ್ನಿ ಗಿರಿಜಾ, ಪುತ್ರರಾದ ನವೀನ್ ಕುಮಾರ್ ಕುಕ್ಕುಡೇಲು, ಉದಯಕುಮಾರ್ ಕುಕ್ಕುಡೇಲು, ಪುತ್ರಿಯರಾದ ಗೀತಾಂಜಲಿ, ತಾರಕೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕುಕ್ಕುಡೇಲು ಶೀನಪ್ಪ ಗೌಡ ನಿಧನ Read More »

ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ : ಮೋಹನ್ ಆಳ್ವ

ಬೆಳ್ಳಾರೆ ಕೆಪಿಎಸ್ ನಲ್ಲಿ ಶಿಕ್ಷಣ ಸಂಸ್ಥೆಗಳ ವಸಂತ ಸಂಭ್ರಮ ಯಶಸ್ವಿಯಾಗಿ ನಡೆದಿದೆ.ಇದೊಂದು ಮಾದರಿ ಕಾರ್ಯಕ್ರಮ.ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಗಟ್ಟಿಯಾಗಬೇಕು.ಆಗ ಮುಂದಿನ ಶಿಕ್ಷಣ ಗಟ್ಟಿಯಾಗುತ್ತದೆ.ಆರೋಗ್ಯ ಮತ್ತು ವಿದ್ಯೆ ಇದ್ದರೆ ಜನರು ನಾಡಿನಲ್ಲಿ ಪ್ರಬುದ್ಧರಾಗಲು ಸಾಧ್ಯ.ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಬಗ್ಗೆ ಮೌನ ಕ್ರಾಂತಿ ನಡೆಯಬೇಕು.ಕನ್ನಡ ಮಾಧ್ಯಮವನ್ನು ಬಲಾಡ್ಯವಾಗಿ ಕಟ್ಟುವ ಅಗತ್ಯ ನಮ್ಮ ನಿಮ್ಮ ನಮ್ಮೇಲ್ಲರ ಹೊಣೆಯಾಗಿದೆ. ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವರವರು ಹೇಳಿದರುಅವರು ಬೆಳ್ಳಾರೆ ಕರ್ನಾಟಕ ಪಬ್ಲಿಕ್

ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ : ಮೋಹನ್ ಆಳ್ವ Read More »

ಹಣ ಮಾಡುವುದೇ ಬದುಕಲ್ಲ !

ಕೋಟಿಗಟ್ಟಲೆ ಆಸ್ತಿ, ಉದ್ಯಮಿ ಮಗ, ಲಾಯರ್‌ ಪುತ್ರಿಯನ್ನು ಹೊಂದಿರುವ ಲೇಖಕರೊಬ್ಬರು ವೃದ್ದಾಶ್ರಮದಲ್ಲಿದ್ದುಕೊಂಡು ಅನಾಥರಾಗಿ ಜೀವ ತೆತ್ತ ಸುದ್ದಿಯೊಂದು ಹಲವರ ಮನಸ್ಸನ್ನು ಘಾಸಿಗೊಳಿಸಿತ್ತು. ಜೊತೆಗೆ ತಮ್ಮ ಮಕ್ಕಳ ಲಕ್ಷ ಲಕ್ಷ ಪ್ಯಾಕೇಜ್‌ಗಳ ಬಗ್ಗೆ ಬಿಲ್ಡಪ್‌ ಕೊಡುವ ಹೆತ್ತವರಿಗೆ ಇದೊಂದು ಎಚ್ಚರಿಕೆ ಗಂಟೆಯೂ.ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತೊಂದಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಮಕ್ಕಳನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುವ ಹೆತ್ತವರು, ಆ ಮಕ್ಕಳಿಗೆ ಹೇಳಿ ಕೊಡುವುದು ಲಕ್ಷ ಎಣಿಸುವ ದಾರಿಗಳ ಬಗ್ಗೆಯೇ ಹೊರತು ಬದುಕುವ ಕಲೆಯ ಬಗ್ಗೆಯಲ್ಲ.

ಹಣ ಮಾಡುವುದೇ ಬದುಕಲ್ಲ ! Read More »

ಸುಳ್ಯ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾದ ಶೌಚಾಲಯಕ್ಕೆ ತೆರಳುವ ಮಹಿಳೆಯರೇ ಎಚ್ಚರ ! ಶೌಚಾಲಯದ ಕಿಟಕಿ ಮೂಲಕ ಪೊಟೋ ತೆಗೆಯುವ ವಿಕ್ರತ ಕಾಮಿಗಳಿದ್ದಾರೆ ಹುಷಾರ್!

ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ಕಿಟಕಿಯ ಗ್ಲಾಸ್ ಸರಿಸಿ ಫೋಟೋವನ್ನು ಕ್ಲಿಕ್ಕಿಸಿದ್ದಾನೆ ಎಂದು ತಿಳಿದು ಬಂದಿದೆ.ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು ಈ ಸಂಧರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.ಮಹಿಳೆ ಸುಳ್ಯಠಾಣೆಗೆ ದೂರು ನೀಡಿದ್ದಾರೆ.

ಸುಳ್ಯ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾದ ಶೌಚಾಲಯಕ್ಕೆ ತೆರಳುವ ಮಹಿಳೆಯರೇ ಎಚ್ಚರ ! ಶೌಚಾಲಯದ ಕಿಟಕಿ ಮೂಲಕ ಪೊಟೋ ತೆಗೆಯುವ ವಿಕ್ರತ ಕಾಮಿಗಳಿದ್ದಾರೆ ಹುಷಾರ್! Read More »

error: Content is protected !!
Scroll to Top