January 2025

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ಧೇಶಕ ಸಂತೋಷ್‌ಕುಮಾರ್ ರೈ ನಿಧನ

ಸುಳ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿದ್ದು, ಪ್ರಸ್ತುತ ವಿಜಯಪುರ ಜಿಲ್ಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ಕುಮಾರ್ ರೈಯವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದುಬಂದಿದೆ. ಸಂತೋಷ್‌ಕುಮಾರ್ ರೈಯವರು ಬೆಳ್ಳಾರೆ ಸಮೀಪದ ಸವಣೂರಿನವರಾಗಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ಧೇಶಕ ಸಂತೋಷ್‌ಕುಮಾರ್ ರೈ ನಿಧನ Read More »

ಕಸ್ತೂರಿ ರಂಗನ್ ವರದಿಗೆ ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡಿರುವುದು ಸೂಕ್ತ ಕ್ರಮವಲ್ಲ : ಶೋಭಾ ಕರಂದ್ಲಾಜೆ

ಕೇರಳ ರಾಜ್ಯ ಹೊರತುಪಡಿಸಿ ಯಾವುದೇ ರಾಜ್ಯ ಕಸ್ತೂರಿ ರಂಗನ್ ವರದಿ ಬಗ್ಗೆ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ ,ಫಿಸಿಕಲ್ ಸರ್ವೆ ನಡೆಸಿದ್ದಾಗ ಮಾತ್ರ ಅದರ ಯಥಾ ಸ್ಥಿತಿ ತಿಳಿಯಲಿದೆ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಾಧ್ಯಮ ಕೈಗಾರಿಕಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಕಡಬ ತಾಲೂಕಿನ ಕೇರ್ಪಡದಲ್ಲಿ ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದರುಇದು ಹಿಂದಿನವರು ಮಾಡಿರುವ ತಪ್ಪು. ಏರಿಯಲ್ ಸರ್ವೆ ಮಾಡಿ ಈ ವರದಿ ಮಾಡಲಾಗಿದೆ. ಫಿಸಿಕಲ್

ಕಸ್ತೂರಿ ರಂಗನ್ ವರದಿಗೆ ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡಿರುವುದು ಸೂಕ್ತ ಕ್ರಮವಲ್ಲ : ಶೋಭಾ ಕರಂದ್ಲಾಜೆ Read More »

ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿಗೆ ತಯಾರು ನಡೆಸುತ್ತಿದ್ದ 30 ಮಂದಿ ಅರಣ್ಯ ಇಲಾಖೆಯ ವಶ,ಬಿಡುಗಡೆ ಯಾರ್ಯರು ಇದ್ರು ಇಲ್ಲಿದೆ ಮಾಹಿತಿ

ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮ ಪ್ರವೇಶ ಮಾಡಿ ಹೊಸ ವರ್ಷ ಆಚರಣೆ ಮಾಡಿ ಪಾರ್ಟಿ ಮಾಡಲು ತಯಾರು ಮಾಡುತ್ತಿದ್ದ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟ ಘಟನೆ ಬುಧವಾರ ವರದಿಯಾಗಿದೆ.ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರು ಅರಣ್ಯ ಇಲಾಖೆಯ ವಶವಾಗಿದ್ದರು ಎನ್ನಲಾಗಿದೆ. ಆಲೆಟ್ಟಿ ಗ್ರಾಮದ ಜಗದೀಶ ಎಂಬರ ಮಗ

ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿಗೆ ತಯಾರು ನಡೆಸುತ್ತಿದ್ದ 30 ಮಂದಿ ಅರಣ್ಯ ಇಲಾಖೆಯ ವಶ,ಬಿಡುಗಡೆ ಯಾರ್ಯರು ಇದ್ರು ಇಲ್ಲಿದೆ ಮಾಹಿತಿ Read More »

ಸುಳ್ಯದ 108 ಆಂಬ್ಯುಲೆನ್ಸ್ ನ ಟಯರ್ ಸವೆದರೂ ಬದಲಾಗದ ಟಯರ್, ಅಪಾಯದಲ್ಲಿ ಸುಳ್ಯದ 108 ಆಂಬ್ಯುಲೆನ್ಸ್

ಸುಳ್ಯ ತಾಲೂಕು ಆಸ್ಪತ್ರೆಯ 108 ಆಂಬುಲೆನ್ಸ್ ಕಳೆದ ಮೂರು ದಿನದಿಂದ ಗಾಡಿಯ ಟೈಯರ್ ಸಮಸ್ಯೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.ಡ್ಯೂಟಿ ರೋಸ್ಟರ್ ಕೂಡ ಚೇಂಜ್ ಆಗಿ ಇನ್ನಷ್ಟು ಸಾರ್ವಜನಿಕ ವಲಯಗಳಲ್ಲಿ ತೊಂದರೆಗಳು ಉಂಟಾಗಿದೆ ಇದರ ಬಗ್ಗೆ ಸಚಿವರು ಆದಷ್ಟು ಬೇಗ ಗಮನ ಹರಿಸಬೇಕಾಗಿದೆ.108 ಆಂಬುಲೆನ್ಸ್ ಜವಾಬ್ದಾರಿ ಹೊತ್ತಿರುವ ಗ್ರೀನ್ ಹೆಲ್ತ್ ಸರ್ವಿಸ್, ಇ ಎಂ ಅರ್ ಐ ಏಕ ಏಕಿಯಾಗಿ ಡ್ಯೂಟಿ ರೂಸ್ಟರ್ ಚೇಂಜ್ ಮಾಡಿದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸಾರ್ವಜನಿಕರಿಗೆ 108 ಸೇವೆಯಲ್ಲಿ

ಸುಳ್ಯದ 108 ಆಂಬ್ಯುಲೆನ್ಸ್ ನ ಟಯರ್ ಸವೆದರೂ ಬದಲಾಗದ ಟಯರ್, ಅಪಾಯದಲ್ಲಿ ಸುಳ್ಯದ 108 ಆಂಬ್ಯುಲೆನ್ಸ್ Read More »

ಪ್ರಿಯಕರನಿಗೆ ಚೂರಿಯಿಂದ ಇರಿದ ಯುವತಿ

ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಚೂರಿಯಿಂದ ಇರಿದ ಘಟನೆ ಬುಧವಾರ ನಡೆದಿದೆ. ಮನುಕುಮಾ‌ರ್ (25) ಚಾಕು ಇರಿತಕ್ಕೊಳಗಾದ ಯುವಕ. ಈತನಿಗೆ ಪ್ರಿಯತಮೆ ಭವಾನಿ ಚಾಕುವಿನಿಂದ ಇರಿದಿದ್ದಾಳೆ. ಪ್ರಿಯತಮೆ ಹಾಗೂ ಮನುಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಅವರು ವೈಮನಸ್ಸಿಂದ ದೂರವಾಗಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿದ ಸಂದರ್ಭದಲ್ಲಿ ಮನುಕುಮಾರ್ ಮನೆಗೆ ತೆರಳುತ್ತಿದ್ದ ವೇಳೆ ಯುವತಿ ಮನುಕುಮಾರಿಗೆ ಚಾಕು ಇರಿದಿದ್ದಾಳೆ.

ಪ್ರಿಯಕರನಿಗೆ ಚೂರಿಯಿಂದ ಇರಿದ ಯುವತಿ Read More »

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಬ್ರಹ್ಮಕಲಶೋತ್ಸವ ಅಂಗವಾಗಿ ಭಕ್ತರಿಂದ ಹಸುರು ಹೊರೆಕಾಣಿಕೆ ಸಮರ್ಪಣೆ

ಕಡಬ ತಾಲೂಕಿನ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬುಧವಾರದಿಂದ ಜ.೭ರ ವರೆಗೆ ನಡೆಯಲಿದ್ದು ಆ ಪ್ರಯುಕ್ತ ಕ್ಷೇತ್ರಕ್ಕೆ ಭಕ್ತರು ಬುಧವಾರ ಹಸುರು ಹೊರೆಕಾಣಿಕೆ ಸಮರ್ಪಿಸಿದರು.ಬೆಳಗ್ಗೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನೆರವೇರಿಸಲಾಯಿತು. ಕ್ಷೇತ್ರಕ್ಕೆ ಭಕ್ತರು ಸಲ್ಲಿಸಿದ ಹೊರೆ ಕಾಣಿಕೆಯನ್ನು ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು. ಅಲೆಕ್ಕಾಡಿ ಮುಖ್ಯದ್ವಾರದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ವ್ಯವಸ್ಥಾಪನಾ

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಬ್ರಹ್ಮಕಲಶೋತ್ಸವ ಅಂಗವಾಗಿ ಭಕ್ತರಿಂದ ಹಸುರು ಹೊರೆಕಾಣಿಕೆ ಸಮರ್ಪಣೆ Read More »

ವಾಟರ್ ಬೆಡ್ ಕೊಡುಗೆ

ಸಂಪಾಜೆ ವಲಯ ತೊಡಿಕಾನ ಕಾರ್ಯಕ್ಷೇತ್ರದ ಆದಿಶಕ್ತಿ ಸಂಘದ ಸದಸ್ಯ ರಾದ ವಸಂತಿ ರವರ ಅತ್ತೆಯವರಾದ ರಾಮಕ್ಕ‍ರವರು ಅನಾರೋಗ್ಯದಿಂದ ಇದ್ದು ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ನ್ನು ವಲಯ ಜನಜಾಗ್ರತಿ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ವಿತರಿಸಿದರು ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು

ವಾಟರ್ ಬೆಡ್ ಕೊಡುಗೆ Read More »

ಹುತಾತ್ಮ ಯೋಧ ದಿವಿನ್‌ರಿಗೆ ಅಂತಿಮ ನಮನ ಸಲ್ಲಿಸಿದ ಸದಾನಂದ ಮಾವಜಿ

ಮಡಿಕೇರಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ಸೈನಿಕ ಪಿ.ಪಿ. ದಿವಿನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಸೂದನ ಈರಪ್ಪ, ಸಿಬ್ಬಂದಿ ಜ್ಯೋತಿ ಅವರುಗಳು ಜೊತೆಯಲ್ಲಿದ್ದು ಹುತಾತ್ಮ ದಿವಿನ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ದಿವಿನ್ ಅವರ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ

ಹುತಾತ್ಮ ಯೋಧ ದಿವಿನ್‌ರಿಗೆ ಅಂತಿಮ ನಮನ ಸಲ್ಲಿಸಿದ ಸದಾನಂದ ಮಾವಜಿ Read More »

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇದರ ಅಡಿಯಲ್ಲಿ ಕರ್ನಾಟಕ ಸಂಭ್ರಮ -50 2024-25 ನೇ ಸಾಲಿನ ಸ್ಮಾರ್ಟ್ ಟಿ.ವಿ.ಯನ್ನು ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ, ಹಿರಿಯ ರಾಜಕಾರಣಿ, ಊರಿನ ಹಿರಿಯರಾದ ಪ್ರೊ.ರಾಧಾಕೃಷ್ಣ ಕೆ.ಇ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಂಬಳಚೇರಿ ಹಿ.ಪ್ರಾ ಶಾಲೆಗೆ ನೀಡಲಾಯಿತು.ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಇದ್ದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ Read More »

ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ

ಕ್ಯಾಪ್ಟನ್ ವಸಂತ ಪೇರಡ್ಕರವರು ಭಾರತೀಯ ಸೇನೆಯಲ್ಲಿ ಸುದೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಡಿ.31 ಸೇವೆಯಿಂದ ನಿವೃತ್ತಿಯಾದರು.1996 ಏಪ್ರಿಲ್ 25 ರಂದು ಸೇನೆಗೆ ಸೇರ್ಪಡೆಗೊಂಡ ಇವರು ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಲಡಾಕ್, ಅರುಣಾಚಲ ಪ್ರದೇಶ, ಕೊಯಮತ್ತೂರು, ಆಂಧ್ರ ಪ್ರದೇಶ ದಲ್ಲಿ ಸೇವೆ ಸಲ್ಲಿಸಿದ್ದರು.ಇವರು ಪೇರಡ್ಕದ ಮಡಪ್ಪಾಡಿ ರಾಮಚಂದ್ರ ಮತ್ತು ದೇವಕಿ ದಂಪತಿಯ ಪುತ್ರ. ವಸಂತ ರವರ ಪತ್ನಿ ಮಮತಾ, ಪುತ್ರಿಯರಾದ ತ್ರಿಶಾ ಪಿ.ವಿ., ದಿಶಾ ಪಿ.ವಿ. ರೊಂದಿಗೆ ನೆಲೆಸಿದ್ದಾರೆ.

ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ Read More »

error: Content is protected !!
Scroll to Top