January 2025

ಅರಂತೋಡು : ಫೆ.8ರಿಂದ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ ಫೆಬ್ರವರಿ 8, 9, 10 ಶ್ರದ್ದಾ ಭಕ್ತಿಯಿಂದ ನಡೆಯಲಿದೆ.ಫೆಬ್ರವರಿ 8 ಶನಿವಾರದಂದು ಅಪರಾಹ್ನ 3 ಗಂಟೆಗೆ ಗುಳಿಗನ ಕೋಲ ಮತ್ತು ಪ್ರಸಾದ ವಿತರಣೆ, ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 10 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಅಗಲು ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.ಫೆಬ್ರವರಿ 9 ಭಾನುವಾರ ರಾತ್ರಿ 8 ರಿಂದ ಫೆಬ್ರವರಿ […]

ಅರಂತೋಡು : ಫೆ.8ರಿಂದ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ Read More »

ವಿಟ್ಲ : ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್

ಡ್ರೋನ್ ಒಂದು ಅಪರೇಟರ್ ನಿಯಂತ್ರಣ ತಪ್ಪಿ ರಥದ ಮೇಲಿದ್ದ ಅರ್ಚಕರ ತಲೆಗೆ ಬಡಿದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ನಡೆದಿದೆ.ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ.ಈ ವೇಳೆ ದೇವರ ಮೂರ್ತಿ ಹೊತ್ತ ಮುಖ್ಯ ಅರ್ಚಕರು ರಥದ ಮೇಲೆ ತೆರಳಿದ್ದರು. ಡ್ರೋನ್ ಹೊಡೆದ ವೇಳೆ ದೇವರ ಮೂರ್ತಿ ಹೊತ್ತಿದ್ದ ಅರ್ಚಕರು ಕೊಂಚ ತಬ್ಬಿಬಾದರೂ ಸಾವರಿಸಿಕೊಂಡರು.

ವಿಟ್ಲ : ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್ Read More »

ಬಸ್ ನಿರ್ವಾಹಕ‌ನಿಂದ ಮಹಿಳೆ ಮೇಲೆ ಹಲ್ಲೆ

ಮೂಡುಬಿದಿರೆಯ ನೀರುಡೆಯಲ್ಲಿ ಬಸ್‌ ನಿರ್ವಾಹಕನೊಬ್ಬ ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರು ಘಟನೆ ನಡೆದಿದ್ದು, ನಿರ್ವಾಹಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಎಂದು ತಿಳಿದು ಬಂದಿದೆ.ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್ ಗೆ ಮುಚೂರಿನಿಂದ ಸುಮಾರು 15 ಮಂದಿ ಮಹಿಳೆಯರು ಶಾಲೊಮ್ ಬಸ್ ನಲ್ಲಿ ನಿತ್ಯ ಕೆಲಸಕ್ಕೆಂದು ಪ್ರಯಾಣಿಸುತ್ತಿದ್ದರು. ತಮ್ಮ ಕೆಲಸ ಬೇಗ ಮುಗಿದರೆ ಮನೆಗೆ ಬೇರೊಂದು ಬಸ್ಸಿನಲ್ಲಿ ತೆರೆಳುತ್ತಿದ್ದರು. ಈ ಕುರಿತಂತೆ ನಿರ್ವಾಹಕನು ಪ್ರತೀ ದಿನ

ಬಸ್ ನಿರ್ವಾಹಕ‌ನಿಂದ ಮಹಿಳೆ ಮೇಲೆ ಹಲ್ಲೆ Read More »

ನಾಪತ್ತೆಯಾಗಿದ್ದ ಶಾಲಾ ಬಾಲಕ ಪತ್ತೆ! ಎಲ್ಲಿ ಪತ್ತೆಯಾದ ಇಲ್ಲಿದೆ ಮಾಹಿತಿ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಪತ್ತೆಯಾಗಿರುವ ವರದಿಯಾಗಿದೆ.ಅಜ್ಜಾವರದ ಭಜನಾ ಮಂದಿರದಲ್ಲಿ ಗುರುವಾರ ಮುಂಜಾನೆ ಈತನು ಪತ್ತೆಯಾಗಿದ್ದಾನೆ. ಅಡ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಈತನು ಕಲಿಯುತ್ತಿದ್ದು ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿತ್ತು.ಅನ್ವಿತ್ ಮೂಲತ ಪುತ್ತೂರು ತಾಲೂಕಿನ‌ ಈಶ್ವರಮಂಗಳ ನಿವಾಸಿಯಾಗಿದ್ದು ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ನಾಪತ್ತೆಯಾಗಿದ್ದ ಶಾಲಾ ಬಾಲಕ ಪತ್ತೆ! ಎಲ್ಲಿ ಪತ್ತೆಯಾದ ಇಲ್ಲಿದೆ ಮಾಹಿತಿ Read More »

ಶಾಲಾ ಬಾಲಕ ನಾಪತ್ತೆ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನ ಅನ್ವಿತ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಈತನು ಅಡ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿದೆ.ಈ ಬಾಲಕ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕೆಂದು ಮನವಿ ಮಾಡಲಾಗಿದೆ.

ಶಾಲಾ ಬಾಲಕ ನಾಪತ್ತೆ Read More »

ಪೆರಾಜೆ ಸಮೀಪ ಭೀಕರ ಬೈಕ್ ಕಾರು ಅಪಘಾತ ಬೈಕ್ ಸವಾರ ಗಂಭೀರ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ವೆರ್ಪೆಯಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ವರದಿಯಾಗಿದೆ.ಬೈಕ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆ ತೆರಳುತ್ತಿತ್ತು.ಕಾರು ಸುಳ್ಯದಿಂದ ಸಂಪಾಜೆ ಕಡೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ‌.ಗಾಯಾಳು ಬೈಕ್ ಸವಾರನನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪೆರಾಜೆ ಸಮೀಪ ಭೀಕರ ಬೈಕ್ ಕಾರು ಅಪಘಾತ ಬೈಕ್ ಸವಾರ ಗಂಭೀರ Read More »

ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕಿಯಾಗಿ ವಿದ್ಯಾರ್ಥಿನಿ ಆಯ್ಕೆ

ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ ಗೆ ಮೊದಲ ಬಾರಿಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬ್ಯಾಂಕ್ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಸಹಕಾರಭಾರತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಈಕೆ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಅಂತಿಮ ಬಿಬಿಎ ವಿದ್ಯಾರ್ಥಿನಿ. ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಅವರು ಇಲ್ಲಿ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ. ವಿದ್ಯಾರ್ಥಿನಿ ಸ್ವಾತಿ ರೈ ಆರ್ತಿಲ.ಕಡಬ ತಾಲೂಕಿನ ಆರ್ತಿಲ ದಿ.ಆನಂದ ರೈ ಮತ್ತು ತಾರಾ ರೈ ಅವರ ಪುತ್ರಿಯಾದ ಸ್ವಾತಿ ರೈ ಅವರಿಗೆ ಈ ಅವಕಾಶ

ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕಿಯಾಗಿ ವಿದ್ಯಾರ್ಥಿನಿ ಆಯ್ಕೆ Read More »

ತಪ್ಪಿದ ಮಗ್ಗಿ ,ವಿದ್ಯಾರ್ಥಿಗೆ ಶಿಕ್ಷಕನಿಂದ ಬೆತ್ತದಿಂದ ಹೊಡೆತ

ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮಗ್ಗಿ ತಪ್ಪು ಹೇಳಿದ್ದಾನೆ ಎಂದು ಆರೋಪಿಸಿ ಶಿಕ್ಷಕರೊಬ್ಬರು ಹೊಡೆದಿರುವ ಘಟನೆ ವರದಿಯಾಗಿದೆ. ಪುತ್ತೂರು ತಾಲೂಕು ಪಾಪೆಮಜಲು ಸರಕಾರಿ ಶಾಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.8ನೇ ತರಗತಿ ವಿದ್ಯಾರ್ಥಿ ಗಾಯಗೊಂಡವನು.ಶಿಕ್ಷಕರು ನಾಗರಬೆತ್ತದಿಂದ ಹೊಡೆದಿರುವುದಾಗಿ ವಿದ್ಯಾರ್ಥಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈದರಿಂದ ಬಾಲಕನ ಎಡ ಕೈಗೆ ಗಾಯವಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ತಪ್ಪಿದ ಮಗ್ಗಿ ,ವಿದ್ಯಾರ್ಥಿಗೆ ಶಿಕ್ಷಕನಿಂದ ಬೆತ್ತದಿಂದ ಹೊಡೆತ Read More »

ನಾಟಕ ಸ್ಪರ್ಧೆಯಲ್ಲಿ ಹಾರಾಡಿ ಶಾಲೆ ರಾಜ್ಯ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತುತರಬೇತಿ ಸಂಸ್ಥೆ ಡಯಟ್ ಮಂಗಳೂರು ಇಲ್ಲಿ ಜ.20ರಂದು ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ನಡೆದ ಶ್ರೀಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಕೇಂದ್ರದ ಅನುಮೋದಿತ ಕ್ರೀಯಾ ಯೋಜನೆಯ ಪಠ್ಯಪುಸ್ತಕ ಆಧಾರಿತ ನಾಟಕ ಸ್ಪರ್ಧೆಯಲ್ಲಿ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಹೈಸ್ಕೂಲ್ ವಿಭಾಗದ ಇಂಗ್ಲೀಷ್ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ನಾಟಕ

ನಾಟಕ ಸ್ಪರ್ಧೆಯಲ್ಲಿ ಹಾರಾಡಿ ಶಾಲೆ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಸಂಚುಕೋರನ ಬಂಧನ

ಬಿಜೆಪಿ ಯುವ ಮೋರ್ಚಾ ಸದಸ್ಯ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರನನ್ನು ಬಂಧಿಸಲಾಗಿದೆ. ನಿಷೇಧಿತ ಪಿಎಫ್‌ಐ ಸದಸ್ಯನಾಗಿದ್ದ ಅತೀಕ್ ಅಹ್ಮದ್ ಎಂಬಾತನನ್ನು ಈ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 21ನೇ ಆರೋಪಿ ಅತೀಕ್. ಈತ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಈ ಕುರಿತು ಎನ್‌ಐಎಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಸಂಚುಕೋರನ ಬಂಧನ Read More »

error: Content is protected !!
Scroll to Top