January 2025

ಫೆ.16ಕ್ಕೆ ಸುಳ್ಯದಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಆಡಿಷನ್,ಅರೆಭಾಷೆ ಪ್ರಿಯರಿಗೊಂದು ವಿನೂತನ ಕೊಡುಗೆ

ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದ ವಿಶೇಷ ಚಾಪನ್ನು ಮೂಡಿಸಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಎಂ.ಬಿ. ಸದಾಶಿವ ಸಹಯೋಗದಲ್ಲಿ “ಅರೆಭಾಷೆ ಕಾಮಿಡಿ”(ಹಾಸ್ಯ) ಎಬಿಸಿ ಆಡಿಷನ್ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಫೆಬ್ರವರಿ 16, 2025ರ ಅದಿತ್ಯವಾರ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, V4 ನ್ಯೂಸ್‌ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದ‌ರ್ […]

ಫೆ.16ಕ್ಕೆ ಸುಳ್ಯದಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಆಡಿಷನ್,ಅರೆಭಾಷೆ ಪ್ರಿಯರಿಗೊಂದು ವಿನೂತನ ಕೊಡುಗೆ Read More »

ಅರಂತೋಡಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಮಾಜ ಸೇವಕರು, ಉದ್ಯಮಿಗಳು ಹಾಗೂ ಸೂರು ಇಲ್ಲದವರಿಗೆ ಸೂರು ನಿರ್ಮಾಣದ ರೂವಾರಿ ಮಹಮ್ಮದ್ ಕುಕ್ಕುವಳ್ಳಿ ಅವರು ಇಂದು ಅರಂತೋಡಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ ವಿಖಾಯತಂಡದ ಸದಸ್ಯ ತಾಜುದ್ಧೀನ್ ಅರಂತೋಡು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಪೆರಾಜೆ ಅಲ್ ಅಮೀನ್ ಚಾರಿಚೇಬಲ್ ಟ್ರಸ್ಟ್ ನ ಅಧ್ಯಕ್ಷ ಉನೈಸ್ ಪೆರಾಜೆ,ಅಶ್ರಫ್ ಕುಂಬ್ರ, ಮಜೀದ್ ಭಾಗಮಂಡಲ,

ಅರಂತೋಡಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸನ್ಮಾನ Read More »

ಟಿ.ಎಂ ಶಹೀದ್ ತೆಕ್ಕಿಲ್ ರವರ 54 ನೇ ಹುಟ್ಟುಹಬ್ಬದ ಪ್ರಯುಕ್ತ ಅರಂತೋಡು ಅಂಗನವಾಡಿ ಕೇಂದ್ರಕ್ಕೆ ಅಭಿಮಾನಿಗಳಿಂದ ಸಿಹಿತಿಂಡಿ ವಿತರಣೆ

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ಕ್ರೀಯಾಶೀಲರಾಗಿರುವ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರ 54 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಅರಂತೋಡು ಅಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ, ಅರಂತೋಡು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ಮಾಜಿ ಅಧ್ಯಕ್ಷ ಎ.ಹನೀಫ್

ಟಿ.ಎಂ ಶಹೀದ್ ತೆಕ್ಕಿಲ್ ರವರ 54 ನೇ ಹುಟ್ಟುಹಬ್ಬದ ಪ್ರಯುಕ್ತ ಅರಂತೋಡು ಅಂಗನವಾಡಿ ಕೇಂದ್ರಕ್ಕೆ ಅಭಿಮಾನಿಗಳಿಂದ ಸಿಹಿತಿಂಡಿ ವಿತರಣೆ Read More »

ಮುಸ್ಲಿಂ ವ್ಯಕ್ತಿ ಹಿಂದು ಧರ್ಮಕ್ಕೆ ಮತಾಂತರ

ಉತ್ತರಪ್ರದೇಶದ ಬಸ್ತಿಯ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.ತನ್ನ ಹಿಂದು ಪ್ರಿಯತಮೆಯನ್ನು ಮದುವೆಯಾಗಲು ವರನಾದ ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಿಸಿಕೊಂಡು, 10 ವರ್ಷಗಳ ಪ್ರಿಯತಮೆ ಅನು ಸೋನಿಯನ್ನು ಹಿಂದೂ ಸಂಪ್ರದಾಯಗಳಂತೆ ವಿವಾಹವಾಗಿದ್ದಾನೆ. ಇದಕ್ಕೂ 3 ದಿನಗಳ ಮುನ್ನ ಮಹಿಳೆಯು ಸದ್ದಾಂ ಮತ್ತು ಆತನ ಕುಟುಂಬದ ವಿರುದ್ಧ ಮದುವೆ ನೆಪದಲ್ಲಿ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಳು. ಆದಾಗ್ಯೂ ಈ ಜೋಡಿಯು ಪರಸ್ಪರ ಒಪ್ಪಿಗೆಯೊಂದಿಗೆ ಭಾನುವಾರ ವಿವಾಹವಾಗಿದ್ದು, ಮಹಿಳೆ ಕೇಸ್ ಹಿಂಪಡೆದಿದ್ದಾಳೆ

ಮುಸ್ಲಿಂ ವ್ಯಕ್ತಿ ಹಿಂದು ಧರ್ಮಕ್ಕೆ ಮತಾಂತರ Read More »

ಗ್ಯಾರೇಜಿನಿಂದ ಕಬ್ಬಿಣದ ವಸ್ತುಗಳನ್ನು ಕಳವುಗೈದ ಕುಡುಕ

ಸುಳ್ಯ ಮೆಸ್ಕಾಂ ಕಚೇರಿ ಬಳಿಯ ಗ್ಯಾರೇಜೊಂದರಿಂದ ಕಬ್ಬಿಣದ ವಸ್ತುವನ್ನು ಕಳವುಗೈದ ಘಟನೆ ವರದಿಯಾಗಿದೆ.ಆ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಎರಡು ಏಟು ಕೊಟ್ಟು ಕೊಟ್ಟು ಕದ್ದ ವಸ್ತುಗಳನ್ನು ವಾಪಾಸು ಗ್ಯಾರೇಜ್ ಗೆ ಅವನಲ್ಲೇ ತಂದು ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.ಕುಡಿದ ನಶೆಯಲ್ಲಿದ್ದು ಕಬ್ಬಿಣದ ವಸ್ತುಗಳನ್ನು ಕಳವು ಗೈದ ವ್ಯಕ್ತಿ ಮಡಿಕೇರಿಯವನೆಂದು ತಿಳಿದು ಬಂದಿದೆ.

ಗ್ಯಾರೇಜಿನಿಂದ ಕಬ್ಬಿಣದ ವಸ್ತುಗಳನ್ನು ಕಳವುಗೈದ ಕುಡುಕ Read More »

ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯ ಕೊಡುಗೆ ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ : ರಮಾನಾಥ ರೈ

ಶಾಲೆಗಳಿಗೆ ಸರಕಾರವೇ ಅನುದಾನ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿ ನೀಡಿದ ಕೊಡುಗೆ ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.ಅವರು ಸುಳ್ಯದ ಮಹತ್ಮಾಗಾಂಧಿ ಮಲ್ನಾಡು ವಿದ್ಯಾಸಂಸ್ಥೆಗೆ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ತನ್ನ ಬೆಳ್ಳಿಹಬ್ಬದ ಸವಿನೆನಪಿಗಾಗಿ 28 ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ 3 ತರಗತಿ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ

ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯ ಕೊಡುಗೆ ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ : ರಮಾನಾಥ ರೈ Read More »

ಜ.24 ಮತ್ತು 25ರಂದು ಎಲಿಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ : ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ ತೀರ್ಥರಾಮ ಹೇಳಿಕೆ

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಎಲಿಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷ ಪೂರೈಸಿದ್ದು ಖಾಸಗಿ ಶಾಲೆಗೂ ಮೀರಿಸಿದ ಅಭಿವೃದ್ದಿ ಕಾಮಾಗಾರಿಗಳು ನಡೆದಿದ್ದು ಈ ಕಾಮಗಾರಿಗಳ ಉದ್ಘಾಟನೆ ಮತ್ತ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಿರಿಯ. ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಜ.24 ಮತ್ತು 25 ರಂದು ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎವಿ ತೀರ್ಥರಾಮ ಹೇಳಿದ್ದಾರೆ ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಜ.24 ರಂದು ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ 9.30

ಜ.24 ಮತ್ತು 25ರಂದು ಎಲಿಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ : ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ ತೀರ್ಥರಾಮ ಹೇಳಿಕೆ Read More »

ಪೆರುವಾಜೆ : ವೈಭವದಿಂದ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ,ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿ

ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಬ್ರಹ್ಮರಥೋತ್ಸವವು ಜ.19 ರಂದು ರಾತ್ರಿ ವೈಭವದಿಂದ ನಡೆಯಿತು.ಕ್ಷೇತ್ರದ ತಂತ್ರಿ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ವಸಂತಕಟ್ಟೆ ಪೂಜೆ ನೆರವೇರಿತು.ವ್ಯಾಘ್ರಚಾಮುಂಡಿ ದೈವ(ಪಿಲಿಭೂತ)ದ ಭಂಡಾರ ಆಗಮಿಸಿತ್ತು. ಅಲ್ಲಿಂದ ದೈವದ ಭಂಡಾರ ಸಹಿತವಾಗಿ ದೇವರ ಬಲಿ ದೇವಾಲಯದ ರಥ ಬೀದಿಯ ಬಳಿಯಲ್ಲಿನ ಅಲಂಕೃತ ಬ್ರಹ್ಮರಥದ ಬಳಿ ಆಗಮಿಸಿತ್ತು. ಈ ವೇಳೆ ದೈವ-ದೇವರ

ಪೆರುವಾಜೆ : ವೈಭವದಿಂದ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ,ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿ Read More »

ಪೈಕ: ಶ್ರದ್ದಾ ಭಕ್ತಿಯಿಂದ ನಡೆದ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನ‌ರ್ ಪ್ರತಿಷ್ಠಾ ಕಲಶೋತ್ಸವ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಪೈಕ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ದಲ್ಲಿ (ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಸ್ಥಳ) ಜ. 19ರಂದು ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನ‌ರ್ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ಆಶ್ವತ್ ಇವರ ನೇತೃತ್ವದಲ್ಲಿ ನಡೆಯಿತು.ಜ. 18 ಶನಿವಾರದಂದು ಸಂಜೆ ತಂತ್ರಿಗಳನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಣಿಯಾನ ಸುಬ್ಬಣ್ಣ ಗೌಡ, ಕ್ಷೇತ್ರದ

ಪೈಕ: ಶ್ರದ್ದಾ ಭಕ್ತಿಯಿಂದ ನಡೆದ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನ‌ರ್ ಪ್ರತಿಷ್ಠಾ ಕಲಶೋತ್ಸವ Read More »

ತೊಡಿಕಾನ : ಚಾಕಟೆಡಿ ನೇಮೋತ್ಸವಕ್ಕೆ ಗೊನೆಮೂಹೂರ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುಜ ದೇವಾಲಯಕ್ಕೆ ಸಂಬಂಧಪಟ್ಟ ಚಾಕಟೆಡಿ ನೇಮೋತ್ಸವಕ್ಕೆ ಗೊನೆ ಮುಹೂರ್ತ ನಡೆಯಿತು.ಚಾಕಟೆಡಿ ನೇಮೋತ್ಸವ ಜ.27 ಮತ್ತು ಪಾಷಾಣಮೂರ್ತಿ ಅಮ್ಮನವರ ಕೋಲ ಜ.28ರಂದು ನಡೆಯಲಿದೆ.

ತೊಡಿಕಾನ : ಚಾಕಟೆಡಿ ನೇಮೋತ್ಸವಕ್ಕೆ ಗೊನೆಮೂಹೂರ್ತ Read More »

error: Content is protected !!
Scroll to Top