February 2025

ದೇವರಕೊಲ್ಲಿ : ಟಿ.ಟಿ ಲಾರಿ ನಡುವೆ ಭೀಕರ ಅಪಘಾತ

ಮಾಣಿ ಮೈಸೂರು ರಾಷ್ಟ್ರಿಯ ಹೆದ್ದಾರಿಯ ದೇವರಕೊಲ್ಲಿಯಲ್ಲಿ ಟಿಟಿ ಹಾಗೂ ಲಾರಿ ನಡುವೆ ಫೆ.19ರಂದು ಬೆಳಿಗ್ಗೆಯ ಸಮಯ ಭೀಕರ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.ತಡರಾತ್ರಿ 2.30ಕ್ಕೆ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ದೇವರಕೊಲ್ಲಿ : ಟಿ.ಟಿ ಲಾರಿ ನಡುವೆ ಭೀಕರ ಅಪಘಾತ Read More »

ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವು

ಕೊಪ್ಪಳ ತಾಲೂಕಿನ ಬಳೂಟಗಿ ಗ್ರಾಮದ ಅಂಗನವಾಡಿಯಲ್ಲಿ 5 ವರ್ಷದ ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಬಾಲಕಿಯನ್ನು ಅಲಿಯಾ ಮಹ್ಮದ್ ರಿಯಾಜ್ (5) ಎನ್ನಲಾಗಿದೆ.ಬಾಲಕಿ ಮಧ್ಯಾಹ್ನದ ವೇಳೆ ಅಂಗನವಾಡಿಯಲ್ಲಿ ಆಟವಾಡುತ್ತಿದ್ದಾಗ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಬಾಲಕಿಯನ್ನು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸುತ್ತಿದ್ದಾಗ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರ ತಪಾಸಣೆಯ ವೇಳೆ ತಿಳಿದು ಬಂದಿದೆ.

ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವು Read More »

ಉಪ್ಪಿನಂಗಡಿ, ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಕೆ

ಪ್ರಸಾದಮ್ ಮತ್ತು ಸ್ವದೇಶಿ ದರ್ಶನ್ ಯೋಜನೆಯಡಿ ದೇವಾಲಯಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಉಪ್ಪಿನಂಗಡಿ, ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದ್ದು, ಇದರಿಂದ ಸಂಗಮ ಕ್ಷೇತ್ರ ಉಪ್ಪಿನಂಗಡಿಯನ್ನು ಅಮೂಲಾಗ್ರ ಅಭಿವೃದ್ಧಿಗೆ ಒಳಪಡಿಸಲು ಸಾಧ್ಯವಾಗುವುದೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಫೆ.17ರಂದು ಸಂಕಲ್ಪಿತ ಅಭಿವೃದ್ಧಿ ಕಾರ್ಯಗಳ ನೀಲ ಸಕಾಶೆಯನ್ನು ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಉಪ್ಪಿನಂಗಡಿ, ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಕೆ Read More »

ಸಹೋದರನ ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಆತ್ಮಹತ್ಯೆ

ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಸಹೋದರನ ಅತ್ತೆಯನ್ನು ಕೊಲೆ ಮಾಡಿದ್ದ ಆರೋಪಿ ಶಶಿಧ‌ರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಶಶಿಧರ್ ಕುಡಿದ ಮತ್ತಿನಲ್ಲಿ ಬುದ್ದಿ ಹೇಳಿದ ಕಾರಣಕ್ಕೆ ಫೆ.16 ರಂದು ಸಹೋದರನ ಅತ್ತೆ ಯಮುನಾ (65) ಅವರನ್ನು ಶಶಿಧರ್ ಎಂಬ ವ್ಯಕ್ತಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಶಶಿಧರ್ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಬಣಕಲ್ ಪೊಲೀಸರು ತನಿಖೆ ಆರಂಭಿಸಿದ್ದರು. ಶಶಿಧರ್ ನನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು,

ಸಹೋದರನ ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಆತ್ಮಹತ್ಯೆ Read More »

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ,ಅಸ್ವಸ್ಥರಾದ ಮಕ್ಕಳು

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸ.ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹೆಚ್ಚೇನು ದಾಳಿ ನಡೆಸಿದ ಘಟನೆ ಫೆ.18 ವರದಿಯಾಗಿದೆ. ಸುಮಾರು 15 ಮಕ್ಕಳು ಹೆಚ್ಚೇನು ದಾಳಿಯಿಂದ ಅಸ್ವಸ್ಥರಾಗಿದ್ದು ಸ್ಥಳೀಯ ಕ್ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಕ್ಕಿಂಜೆ ಮಕ್ಕಳು ಶಾಲೆಯಲ್ಲಿ ಪ್ರೆಯರ್ ಮಾಡಿದ ಬಳಿಕ ಏಕಾಏಕಿ ಹೆಚ್ಚೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಚ್ಚೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹೆಚ್ಚೇನು ಕಚ್ಚಿದ್ದು

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ,ಅಸ್ವಸ್ಥರಾದ ಮಕ್ಕಳು Read More »

ತೊಡಿಕಾನ : ಬಾಳೆಕಜೆ ಕೂಸಕ್ಕ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಬಾಳೆಕಜೆ ಶೇಷಪ್ಪ ಗೌಡರ ಧರ್ಮ ಪತ್ನಿ ಕೂಸಕ್ಕ ಫೆ.18ರಂದು ತಮ್ಮ ಮನೆಯಲ್ಲಿ ಅಸೌಖ್ಯದಿಂದ ನಿಧನರಾದರು.ಅವರಿಗೆ 78 ವರ್ಷ ಪ್ರಾಯವಾಗಿತ್ತು.ಅವರು ಪತಿ ಶೇಷಪ್ಪ ಗೌಡ,ಮಗ ಶಶಿಕಾಂತ,ಸೊಸೆ,ಐದು ಮಂದಿ ಹೆಣ್ಣು ಮಕ್ಕಳು,ಸೇರಿದಂತೆ ಮೊಮ್ಮಕ್ಕಳು ಮರಿಮೊಮ್ಮಕ್ಕಳನ್ನು ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

ತೊಡಿಕಾನ : ಬಾಳೆಕಜೆ ಕೂಸಕ್ಕ ನಿಧನ Read More »

ನದಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ

ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.ಪುದು ಗ್ರಾಮದ ಕುಂತ್ಕಳ ನಿವಾಸಿ ನಿತ್ಯಾನಂದ (65) ಆತ್ಮಹತ್ಯೆ ಮಾಡಿಕೊಂಡವರು. ಹಿಂದೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಅವರು 10 ವರ್ಷಗಳಿಂದ ಕೆಲಸ ಮಾಡದೆ ವಿಪರೀತ ಕುಡಿತದ ಚಟ ಹೊಂದಿದ್ದರು.ಫೆ. 16ರಂದು ಕೂಡ ಮಧ್ಯಾಹ್ನ ಮದ್ಯ ಸೇವಿಸಿ ಬಂದು ನದಿಗೆ ಹಾರಿದ್ದಾರೆ. ಅದನ್ನು ಕಂಡು ಸ್ಥಳೀಯ ದೋಣಿಯವರು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ಅವರ ಪುತ್ರ ಧನಂಜಯ ದೂರಿನಲ್ಲಿ ತಿಳಿಸಿದ್ದಾರೆ.

ನದಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ Read More »

ಅರಂತೋಡು ಗ್ರಾಮ ಸಭೆ,ಗ್ರಾಮ ಸಭೆಗೆ ಗೈರು ಹಾಜರಾದ ಇಲಾಖಾಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ಬರೆಯಲು ನಿರ್ಣಾಯ

ಆರಂತೋಡು ಗ್ರಾಮ ಪಂಚಾಯಿತ್ ನ ದ್ವಿತೀಯ ಹಂತದ 2024-25ನೇ ಸಾಲಿನ ಗ್ರಾಮ ಸಭೆಯು ಆರಂತೋಡು ಗ್ರಾಮ ಪಂಚಾಯತ್ ನ “ಅಮೃತ ಸಭಾಂಗಣ”ದಲ್ಲಿ ಫೆ. 17 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ನಡೆಯುತು.ಸಭೆಯ ನೋಡಲ್ ಅಧಿಕಾರಿಗಳಾಗಿ ಹಿಂದುಳಿದ ವರ್ಗಗಳಕಲ್ಯಾಣ ಅಧಿಕಾರಿ ಗೀತಾ ಭಾಗವಹಿಸಿದ್ದರು. ಗ್ರಾಮಸಭೆಯಲ್ಲಿ ಮುಖ್ಯ ವಾಗಿ ತೊಡಿಕಾನ ಗ್ರಾಮಕ್ಕೆ ಸಂಬಂಧಪಟ್ಟಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ,ಪೋಲಿಸ್ ಇಲಾಖೆ ಯ ಅಧಿಕಾರಿಗಳು ಗೈರು ಹಾಜರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂಸಂಬಂಧಪಟ್ಟ

ಅರಂತೋಡು ಗ್ರಾಮ ಸಭೆ,ಗ್ರಾಮ ಸಭೆಗೆ ಗೈರು ಹಾಜರಾದ ಇಲಾಖಾಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ಬರೆಯಲು ನಿರ್ಣಾಯ Read More »

ಗಂಡನ ಅಕ್ರಮ ಸಂಬಂಧ ಹಿನ್ನಲೆ ಮಗಳನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ನೊಂದ ಮಹಿಳೆ!

ಬೆಂಗಳೂರು ಬಗಲಗುಂಟೆಯ ಮಹಿಳೆಯೊಬ್ಬಳು ಗಂಡನ ಅಕ್ರಮ ಸಂಬಂಧಕ್ಕೆ ನೊಂದು , ತನ್ನ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ಆಕೆಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಆತ್ಮಹತ್ಯೆಮಾಡಿಕೊಂಡ ಮಹಿಳೆ ಪಾವಘಡದ ಗುಂಡಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಶೃತಿ (33) ಎನ್ನಲಾಗಿದೆ. ಮಹಿಳೆ ತನ್ನ ಐದು ವರ್ಷದ ರೋಶಿಣಿಯನ್ನು ಫ್ಯಾನ್‌ಗೆ ನೇಣು ಹಾಕಿ ಬಳಿಕ ಅದೇ ಫ್ಯಾನಿಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಈ ಘಟನೆಯು ಭಾನುವಾರ ಸಂಜೆ ಘಟನೆ ನಡೆದಿದ್ದು, ಶೃತಿ ತನ್ನ ಗಂಡ ಗೋಪಾಲಕೃಷ್ಣನ

ಗಂಡನ ಅಕ್ರಮ ಸಂಬಂಧ ಹಿನ್ನಲೆ ಮಗಳನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ನೊಂದ ಮಹಿಳೆ! Read More »

ರಸ್ತೆ, ಸೇತುವೆಗೆ ಅನುದಾನ, ಸುಳ್ಯಕ್ಕೆ ಬೈಪಾಸ್ ರಸ್ತೆ ಒದಗಿಸಿ: ಸಚಿವ ಸತೀಶ್ ಜಾರಕಿಹೊಳಿಯವರಿಗೆ ಮನವಿ

ಸುಳ್ಯ : ಸುಳ್ಯ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಬೈಪಾಸ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕರ ಸಹಿತ ರಾಜಕೀಯ ಮುಖಂಡರು ಮನವಿ ಮಾಡಿದರು.ಕ್ಷೇತ್ರದಲ್ಲಿ ವಿವಿಧೆಡೆ ಸೇತುವೆಗಳು, ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತಿವೆ. ವಿವಿಧೆಡೆ ರಸ್ತೆ, ಸೇತುವೆಯ ಬೇಡಿಕೆಯಿದ್ದು ಇಲಾಖೆಯಿಂದ ಅನುದಾನ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು. ಎಂಜೀನಿಯರ್ ಅವರನ್ನು ಕರೆಸಿ ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ

ರಸ್ತೆ, ಸೇತುವೆಗೆ ಅನುದಾನ, ಸುಳ್ಯಕ್ಕೆ ಬೈಪಾಸ್ ರಸ್ತೆ ಒದಗಿಸಿ: ಸಚಿವ ಸತೀಶ್ ಜಾರಕಿಹೊಳಿಯವರಿಗೆ ಮನವಿ Read More »

error: Content is protected !!
ಮಾರ್ದನಿ ವಾಟ್ಸಪ್‌ ಗ್ರೂಪ್‌ಗೆ ಸೇರಿ