ಆರಿಕೋಡಿ ಕ್ಷೇತ್ರದ ಅದ್ರಷ್ಟ ಚೀಟಿ ಯೋಜನೆಯಲ್ಲಿ ಸುಳ್ಯದ ಪತ್ರಿಕಾ ವಿತರಕ ಸತೀಶ್ ಭಟ್ ಅವರಿಗೆ ಒಲಿಯಿತು ಬೈಕ್
ಪ್ರಸಿದ್ದ ಧಾರ್ಮಿಕ ಕ್ಷೇತ್ರ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ಅಂಗವಾಗಿ 7ನೇ ವರ್ಷದ ಅದೃಷ್ಟ ಚೀಟಿ ಯೋಜನೆಯಲ್ಲಿ ಸುಳ್ಯದ ಪತ್ರಿಕಾ ವಿತರಕ ಸತೀಶ್ ಭಟ್ ರವರಿಗೆ ಮೂರನೇ ಬಹುಮಾನ ಬೈಕ್ ಲಭಿಸಿದೆ.ಫೆ.13 ರಂದು ತನ್ನ ಸ್ನೇಹಿತರೊಂದಿಗೆ ರಾತ್ರಿ ಆರಿಕೋಡಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಅವರು ಅಲ್ಲಿಯೇ ಅದೃಷ್ಟ ಚೀಟಿ ಪಡೆದುಕೊಂಡಿದ್ದರು.