March 2025

ನಾಳೆ (ಏ.1) ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವದಿ ಜಾತ್ರೋತ್ಸವ ಏ.13ರಿಂದ ಆರಂಭಗೊಳ್ಳಲಿದೆ.ನಾಳೆ (ಏ.1) ಬೆಳಿಗ್ಗೆ 9 ಗಂಟೆಗೆ ಗೊನೆ ಮುಹೂರ್ತ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಸೀಮೆಯ ಹೆಚ್ಚಿನ ಭಕ್ತರು ಭಾಗವಹಿಸಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆ (ಏ.1) ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಸುಳ್ಯದಿಂದ ಹೋಗುತ್ತಿದ್ದಾಗ ಪ್ರಸಿದ್ದ ಭಾಗವತ ಸತೀಶ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವು

ಬೆಳ್ತಂಗಡಿ : ಪ್ರಸಿದ್ಧ ಭಾಗವತರಾದ ಸತೀಶ್ ಆಚಾರ್ಯ(40 ವ) ಇಂದು ಮುಂಜಾನೆ 4 ಗಂಟೆಗೆ ಅಂಡಿಂಜೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ವರದಿಯಾಗಿದೆ.ಅವರು ಮಂಗಳದೇವಿ ಮೇಳದಲ್ಲಿ ಭಾಗತರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರು.ಸತೀಶ್‌ ಆಚಾರ್ಯ ಅವರು ಸುಳ್ಯದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಇಂದು ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಅಂಡಿಂಜೆ ಸಮೀಪ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ

ಸುಳ್ಯದಿಂದ ಹೋಗುತ್ತಿದ್ದಾಗ ಪ್ರಸಿದ್ದ ಭಾಗವತ ಸತೀಶ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವು Read More »

ಅರಂತೋಡು : ಸಂಭ್ರಮದ ಈದುಲ್ ಫಿತರ್ ಆಚರಣೆ

ಅರಂತೋಡು ನಲ್ಲಿ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಭಾಂಧವರು ಬಹಳ ಸಂಭ್ರಮದಿಂದ ಆಚರಿಸಲಾಯಿತು, ಈದ್ ನಮಾಜ್ ನೇತ್ರತ್ವ ವನ್ನು ಖತಿಬ್ ಬಹು, ಇಸ್ಮಾಯಿಲ್ ಪೈಝಿ ಗಟ್ಟಮನೆ ನಿರ್ವಹಿಸಿ, ಈದ್ ಸಂದೇಶ ನೀಡಿದರು, ಜಮಾತ್ ಪದಾಧಿಕಾರಿಗಳು, ಅದೀನ ಸಂಘ ಸಂಸ್ಥೆ ಪದಾಧಿಕಾರಿಗಳು, ಜಮಾತ್ ನ ಸರ್ವ ಸದಸ್ಯರು ಪಾಲ್ಗೊಂಡರು

ಅರಂತೋಡು : ಸಂಭ್ರಮದ ಈದುಲ್ ಫಿತರ್ ಆಚರಣೆ Read More »

ಅರೆಭಾಷೆಯನ್ನು ವಿಸ್ತರಿಸಲು ವಿನೂತನ ಕಾರ್ಯಕ್ರಮ: ಸದಾನಂದ ಮಾವಂಜಿ

ಅರೆಭಾಷೆ ಇಂದು ಜಾತಿ, ಗಡಿ ಮೀರಿ ಬೆಳೆಯುತ್ತಿರುವುದು ಸಂತೋಷದ ವಿಚಾರವಾಗಿದೆ.ಇದನ್ನು ಇನ್ನಷ್ಟು ವಿಸ್ತರಿಸಲು ಗಡಿನಾಡ ಉತ್ಸವ ಸೇರಿದಂತೆ ಇನ್ನಿತರ ವಿನೂತನ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಹೇಳಿದರು. ಅವರು ಮಾ.30ರಂದು ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್ ಮನೆ ವಠಾರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ನಡೆದ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಐನ್ ಮನೆ ಎನ್ನುವುದು ಎಲ್ಲರನ್ನು

ಅರೆಭಾಷೆಯನ್ನು ವಿಸ್ತರಿಸಲು ವಿನೂತನ ಕಾರ್ಯಕ್ರಮ: ಸದಾನಂದ ಮಾವಂಜಿ Read More »

ಅರಂತೋಡು ಕುಲ್ಚಾರ್ ಸೇತುವೆಗೆ ಕಾರು ಡಿಕ್ಕಿ ಹೊಡೆದು ಜಖಂ!ಮೂವರಿಗೆ ಗಾಯ

ಸುಳ್ಯ ತಾಲೂಕಿ ಅರಂತೋಡು ಕುಲ್ಚಾರ್ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸೇತುವೆಯ ತಡೆಗೋಡೆಗೆ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ನಡೆದಿದೆ‌. ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾರಿನ ಮುಂಬಾಗ ಜಖಂಗೊಂಡಿದೆ.

ಅರಂತೋಡು ಕುಲ್ಚಾರ್ ಸೇತುವೆಗೆ ಕಾರು ಡಿಕ್ಕಿ ಹೊಡೆದು ಜಖಂ!ಮೂವರಿಗೆ ಗಾಯ Read More »

ಪೊಲೀಸ್ ಮೂರುಗೋಳಿಯ ಪ್ರವೀಣ್ .ಎಂ ಅವರಿಗೆ ಮುಖ್ಯಮಂತ್ರಿ ಪದಕ

ಬೆಳ್ತಂಗಡಿ : ಪೊಲೀಸ್‌ ಹೆಡ್‌ ಕಾಸ್ಟೇಬಲ್ ಮೂರುಗೋಳಿಯ ಪ್ರವೀಣ್.ಎಂ ಇವರಿಗೆ ಈ ಭಾರಿ ಮುಖ್ಯಮಂತ್ರಿ ಪದಕಕ್ಕೆ ಅಯ್ಕೆ ಅಗಿದ್ದಾರೆ. ಎಪ್ರಿಲ್ 2 ರಂದು ಕರ್ನಾಟಕ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕವನ್ನು ನೀಡಲಿದ್ದಾರೆ.ಬೆಳ್ತಂಗಡಿ ತಾಲೂಕಿನ ಪುತ್ತಿಲ್ಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಮೊದಲ ಮಗ ಪ್ರವೀಣ್.ಎಂ ಇವರು 2002 ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡರು. ಮೊದಲು ಕರ್ತವ್ಯವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಮಾಡಿದ್ದು ಬಳಿಕ ಬೆಳ್ತಂಗಡಿ ವೃತ್ತ ಕಚೇರಿ,

ಪೊಲೀಸ್ ಮೂರುಗೋಳಿಯ ಪ್ರವೀಣ್ .ಎಂ ಅವರಿಗೆ ಮುಖ್ಯಮಂತ್ರಿ ಪದಕ Read More »

ದನ ಸಾಗಾಟ ಮಾಡುತ್ತಿದ್ದವರ ಹಲ್ಲೆ ನಡೆಸಿದ ಆರೋಪಿಗಳ ಬಂಧನ

ದನ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಪ್ರಕರಣ ಮೂಡಬಿದರೆಯಿಂದ ಭಾನುವಾರ ವರದಿಯಾಗಿದೆ.ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ ಸುರತ್ಕಲ್‌ನ ಧನರಾಜ್ ಬಂಧಿತ ಆರೋಪಿಗಳಾಗಿದ್ದು, ಇತರ ಐದು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.ಮೂಡಬಿದಿರೆ ಬಿರಾವಿನ ಕೂಸಪ್ಪ ಪೂಜಾರಿ ಅವರು ತನ್ನ ಪರಿಚಯದ ಕಾರ್ಕಳದ ಬಜಗೋಳಿಯ ಮನೆಯಿಂದ ಗೀರ್ ತಳಿಯ ಹೋರಿಯೊಂದನ್ನು ಸಂಗಬೆಟ್ಟುವಿನ ಅಬ್ದುಲ್ ರಹ್ಮಾನ್ ಅವರ ವಾಹನದಲ್ಲಿ ಶುಕ್ರವಾರ ಸಂಜೆ ಮೂಡಬಿದಿರೆಯತ್ತ ತರುತ್ತಿದ್ದರು. ಗೀರ್ ತಳಿಯ ಹೋರಿಯನ್ನು

ದನ ಸಾಗಾಟ ಮಾಡುತ್ತಿದ್ದವರ ಹಲ್ಲೆ ನಡೆಸಿದ ಆರೋಪಿಗಳ ಬಂಧನ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕುರಿತು ಪೂರ್ವಭಾವಿ ಸಭೆ ಮಾ.29ರಂದು ದೇವಳದ ಅಕ್ಷಯ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಜಾತ್ರೋತ್ಸವ ಉಪ ಸಮಿತಿಗಳ ರಚನೆ ಮಾಡಲಾಯಿತು.ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.ಜಾತ್ರೋತ್ಸವ ಸಮಿತಿಯ ಉಪ ಸಮಿತಿಗಳನ್ನು ರಚಿಸಲಾಯಿತು. ಸಂಪಾಜೆ, ಆಲೆಟ್ಟಿ, ಆರಂತೋಡು, ಉಬರಡ್ಕ, ಮರ್ಕಂಜ ಹಾಗೂ ನೆರೆಯ ಗ್ರಾಮಗಳಲ್ಲಿ ಹಸಿರು ವಾಣಿ ಸಂಗ್ರಹಿಸಲು ಆಯಾ ಗ್ರಾಮದ ಬೈಲುವಾರು ಸಭೆ ಕರೆದು ತಿಳಿಸುವುದು ಹಾಗೂ ಆಮಂತ್ರಣ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಥಳಿತ

ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ ಬಿ ಸಿ ರೋಡ್ ನಲ್ಲಿ ನಡೆದಿದೆ. ನಾವೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೇ ರಿಕ್ಷಾ ಚಾಲಕನಾಗಿರುವ ಮೋನು ಎಂಬಾತನೆ ಕಿರುಕುಳ ನೀಡಿದಾತ.ಮಂಗಳೂರಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಹೋಗುತ್ತಿದ್ದ ಯುವತಿಗೆ ಪುತ್ತೂರಿನಿಂದ ಬಿ ಸಿ ರೋಡ್ ಬರುವ ವೇಳೆ ಮೋನು ಪಕ್ಕದ ಸೀಟಿನಲ್ಲಿ ಕೂತಿದ್ದ ಯುವತಿಗೆ

ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಥಳಿತ Read More »

ಮಹಿಳೆ ಹಾಗೂ ಸಹೋದರನಿಗೆ ತಲ್ವಾರಿನಿಂದ ಹಲ್ಲೆಯತ್ನ

ಪುತ್ತೂರು; ಮಹಿಳೆ ಹಾಗೂ ಆಕೆಯ ಸಹೋದರನಿಗೆ ತಲ್ವಾರಿನಿಂದ ವ್ಯಕ್ತಿಯೊಬ್ಬರು ಹಲ್ಲೆಗೆ ಯತ್ನಿಸಿರುವ ಘಟನೆ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯದ ಮೂಲೆ ಎಂಬಲ್ಲಿ ನಡೆದಿದೆ.ಸಂಪ್ಯದ ಮೂಲೆ ನಿವಾಸಿ ರೇಖನಾಥ ರೈ ಹಾಗೂ ಅವರ ಅಕ್ಕ ಪುಷ್ಪಾವತಿ ರೈಯವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಹಸೈನಾರ್ ಎಂಬಾತ ಹಲ್ಲೆ ನಡೆಸಲು ಮುಂದಾಗಿರುವುದಾಗಿ ರೇಖನಾಥ ರೈಯವರು ತಿಳಿಸಿದ್ದಾರೆ. ಇವರ ಹಾಗಾ ಹಸೈನ‌ರ್ ಮಧ್ಯೆ ಜಾಗದ ತಕರಾರು ಕಳೆದ ಹಲವು ಸಮಯದಿಂದ ಇತ್ತು ಎನ್ನಲಾಗಿದೆ. ಅದು ವಿಕೋಪಕ್ಕೆ ಹೋಗಿ ತಲ್ವಾರಿನಿಂದ

ಮಹಿಳೆ ಹಾಗೂ ಸಹೋದರನಿಗೆ ತಲ್ವಾರಿನಿಂದ ಹಲ್ಲೆಯತ್ನ Read More »

error: Content is protected !!
Scroll to Top