March 2025

ಆರಂತೋಡಿನಲ್ಲಿ ಕರ್ನಾಟಕದ ಮೊತ್ತ ಮೊದಲ ಪ್ರದಾನ ಮಂತ್ರಿ VDVK ಮಾರ್ಟ್ ಉದ್ಘಾಟನೆ

ಭಾರತ ಸರಕಾರದ ಬುಡಕಟ್ಟು ಮಂತ್ರಾಲಯ, ಟ್ರೈಪೆಡ್ ಹಾಗೂ DAY-NRLM( ಸಂಜೀವಿನಿ) ಜೊತೆಗೂಡಿ ಅನುಷ್ಠಾನಗೊಳಿಸುತ್ತಿರುವ PM-VDVK ಯಡಿ ಉತ್ಪಾದಿಸುತ್ತಿರುವ ವಿವಿಧ ಉತ್ಪನ್ನಗಳ ಕರ್ನಾಟಕದ ಮೊತ್ತ ಮೊದಲ ಪ್ರಕೃತಿ VDVK ಮಾರ್ಟ್ ನ್ನು ದಿನಾಂಕ 06.03.2025 ನೇ ಗುರುವಾರದಂದು ಆರಂತೋಡಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ l ಆನಂದ್ ಕೆ. IAS ರವರು ಲೋಕಾರ್ಪಣೆಗೊಳಿಸಿ VDVK ಯ ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಆರಂತೋಡು ಪ್ರಕೃತಿ VDVK ಅಧ್ಯಕ್ಷರಾದ ಶೋಭಲತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ […]

ಆರಂತೋಡಿನಲ್ಲಿ ಕರ್ನಾಟಕದ ಮೊತ್ತ ಮೊದಲ ಪ್ರದಾನ ಮಂತ್ರಿ VDVK ಮಾರ್ಟ್ ಉದ್ಘಾಟನೆ Read More »

ನಾಳೆ(ಮಾ.8) ತೊಡಿಕಾನದಲ್ಲಿ ಗೌಡ ಸಮುದಾಯವರಿಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ಫೆ.8ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೈದಾನ ನಡೆಯಲಿದೆ.ಸಂಜೆ 5 ಗಂಟೆಗೆ ಕಬಡ್ಡಿ ಪಂದ್ಯಾಟ ಆರಂಭವಾಗಲಿದ್ದು ರಾತ್ರಿ ಗಂಟೆ 8ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.ಶ್ರೀ ಅಕ್ಷಯ್ ಕುರುಂಜಿ ಆರ್ಕಿಟೆಕ್ಟ್ಎ.ಓ.ಎಲ್.ಇ.(ರಿ.),ಕುರುಂಜಿಭಾಗ್‌, ಸುಳ್ಯ ಇವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಶ್ರೀ ಬಿ. ರಮಾನಂದ ಗೌಡ

ನಾಳೆ(ಮಾ.8) ತೊಡಿಕಾನದಲ್ಲಿ ಗೌಡ ಸಮುದಾಯವರಿಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ Read More »

ಕಟೀಲು ದುರ್ಗಾಪರಮೇಶ್ವರಿ ದೇವಳಕ್ಕೆ , ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ

ಪ್ರಸಿದ್ದ ದುರ್ಗಾ ದೇವಾಲಯವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಗನೊಂದಿಗೆ ಭೇಟಿ ನೀಡಿದ್ರು.ಈ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಪ್ರಸಾದ,ಶೇಷವಸ್ತ್ರ ನೀಡಿ ಗೌರವಿಸಲಾಯಿತು.ಕಾಂತಾರ ಚಾಪ್ಟರ್ 2 ಚಿತ್ರೀಕರಣ ಭಾಗಶಃ ಮುಗಿದಿರೋ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದು ಚಿತ್ರದ ಯಶಸ್ಸಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ದರ್ಶನ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದು ಚಿತ್ರೀಕರಣ ಕೊನೆಯ ಹಂತದಲ್ಲಿದೆ ಅಕ್ಟೋಬರ್ 2 ರಂದು ಚಿತ್ರ ಬಿಡುಗಡೆ ಮಾಡುವುದಾಗಿ

ಕಟೀಲು ದುರ್ಗಾಪರಮೇಶ್ವರಿ ದೇವಳಕ್ಕೆ , ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ Read More »

ಪಿಕಪ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಮಾಣಿ ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಲ್ಲಿ ದ್ವಿಚಕ್ರವಾಹನಕ್ಕೆ ಪಿಕಪ್ ಡಿಕ್ಕಿಹೊಡೆದು ದ್ವಿಚಕ್ರವಾಹನ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಪಂಜ ಕೂತ್ಕುಂಜ ಗ್ರಾಮದ ಸಂಪ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಭಟ್ ಮೃತಪಟ್ಟ ಬೈಕ್‌ ಸವಾರ.ಕೃಷ್ಣ ಭಟ್‌ ಅವರು ಪಂಜದಿಂದ ಪುತ್ತೂರಿಗೆ ಬೈಕ್‌ ನಲ್ಲಿ ಬೈಕ್‌ ನಲ್ಲಿ ಬರುತ್ತಿದ್ದ ವೇಳೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ ಸವಾರ , ಬೈಕ್‌ ನೊಂದಿಗೆ ನೆಲಕ್ಕೆ ಉರುಳಿ ಬಿದ್ದಿದ್ದು ,

ಪಿಕಪ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು Read More »

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ ಅವರು ಕರ್ನಾಟಕ ಸಂಗೀತ ಗಾಯಕಿ ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ಗುರುವಾರ (ಮಾ.06) ಬೆಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೈ ಹಿಡಿದರು.ಬಿಜೆಪಿ ನಾಯಕರಾದ ಬಿಎಲ್ ಸಂತೋಷ್, ಅಣ್ಣಾಮಲೈ, ಪ್ರತಾಪ್ ಸಿಂಹ, ಅಮಿತ್ ಮಾಳವಿಯಾ, ಬಿ.ವೈ. ವಿಜಯೇಂದ್ರ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಂಸದ ತೇಜಸ್ವಿ ಸೂರ್ಯ Read More »

ಅರಂಬೂರು : ಮಾ.15ರಿಂದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

ಅರಂಬೂರು : ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದೆ ಎಂದು ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ.ಬಿ.ಸುಧಾಕರ‌ ರೈ ಹಾಗೂ ಇತರ ಪದಾಧಿಕಾರಿಳು ತಿಳಿಸಿದ್ದಾರೆ.ಅವರು ಅರಂಬೂರು ವಯನಾಟ್ ಕುಲವಂ ದೈವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಇದೀಗ ದೈವಸ್ಥಾನದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆದು ದೈವಂಕಟ್ಟು ಮಹೋತ್ಸವಕ್ಕೆ ತಯಾರು ನಡೆಸಲಾಗುತ್ತಿದೆ.ಎಲ್ಲರ‌ ಸಹಕಾರದಲ್ಲಿ ಉತ್ಸವ ನಡೆಯಲಿದ್ದು, 4 ದಿನದ ಉತ್ಸವದಲ್ಲಿ ಸುಮಾರು ಎಂಬತ್ತು

ಅರಂಬೂರು : ಮಾ.15ರಿಂದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ Read More »

ಅರಂತೋಡು ಮಸೀದಿಯಲ್ಲಿ ದುಬೈ ಸಮಿತಿ ವತಿಯಿಂದ ಇಪ್ತಾರ್ ಕೂಟ

ಅರಂತೋಡು ಜಮಾಅತ್ ದುಬೈ ಸಮಿತಿ ವತಿಯಿಂದ ಮಾ. 5 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿಯಲ್ಲಿ ಇಪ್ತಾರ್ ಕೂಟ ನಡೆಯಿತು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ.ಎಂ ಮೂಸಾನ್ ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ದುಬೈ ಸಮಿತಿ ಗೌರವಾಧ್ಯಕ್ಷ ಹಾಜಿ ಬದುರುದ್ದೀನ್ ಪಠೇಲ್, ಪಠೇಲ್ ಚಾರಿಟೇಬಲ್ ಟ್ರಸ್ಟೀ ಹಾಜಿ ಅಬ್ದುಲ್ ಖಾದರ್ ಪಠೇಲ್, ದುಬೈ ಸಮಿತಿ ನಿರ್ದೇಶಕರಾದ ಕೆ.ಎಂ ಅನ್ವಾರ್, ರಾಫಿ

ಅರಂತೋಡು ಮಸೀದಿಯಲ್ಲಿ ದುಬೈ ಸಮಿತಿ ವತಿಯಿಂದ ಇಪ್ತಾರ್ ಕೂಟ Read More »

ಸುಳ್ಯದಲ್ಲಿ ಕಂಟೈನರ್ ಲಾರಿ ಪಲ್ಟಿ,ತಪ್ಪಿದ ಅನಾಹುತ

ಸುಳ್ಯ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಬಳಿ ಚಾಲಕನ ನಿಯಂತ್ರಣ ತಪ್ಪಿಪರಿಣಾಮ ಕಂಟೈನರ್ ಲಾರಿ ಪಲ್ಟಿಯಾಗಿ ರಸ್ತೆಯ ಪಕ್ಕದ ಪಿಎಲ್ ಡಿ ಬ್ಯಾಂಕ್ ನ ತಡೆಗೋಡೆಗೆ ಅಪ್ಪಳಿಸಿ ತಡೆಗೋಡೆ ಹಾನಿಯಾದ ಘಟನೆ ಇದೀಗ ವರದಿಯಾಗಿದೆ ಇಂದು ಬೆಳಗಿನ ಜಾವ 6.45 ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು ರಸ್ತೆಯ ಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಸ್ಕೂಟಿಯೊಂದು ಕಂಟೈನರ್ ಅಡಿಗೆ ಸಿಲುಕಿದೆ ಎನ್ನಲಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದು. ಪಕ್ಕದ ನಂದಿನಿ ಸ್ಟಾಲ್ ಗೂ ಹಾನಿಯಾಗಿದೆ.ಕಂಟೈನರ್ ಚಾಲಕನ ನಿದ್ದೆ ಮಂಪರು

ಸುಳ್ಯದಲ್ಲಿ ಕಂಟೈನರ್ ಲಾರಿ ಪಲ್ಟಿ,ತಪ್ಪಿದ ಅನಾಹುತ Read More »

ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ : ಅಪಾರ ಪ್ರಮಾಣದ ರಬ್ಬರ್ ನಾಶ

ಚೆಂಬು ಗ್ರಾಮದ ಊರುಬೈಲಿನಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿ ಸಂಪೂರ್ಣ ನಾಶವಾದ ಘಟನೆ ಬುಧವಾರ ರಾತ್ರಿ ನಡೆದಿದೆ.ಊರು ಬೈಲಿನ ಎಕ್ಕಡ್ಕ ಚರಿತ ಅವರ ಮನೆಯ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ರಬ್ಬರ್ ಸೀಟುಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಸ್ಥಳೀಯರು , ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ : ಅಪಾರ ಪ್ರಮಾಣದ ರಬ್ಬರ್ ನಾಶ Read More »

ನದಿಗೆ ಹಾರಿ ಆತ್ಮ ಹತ್ಯೆಗೆ ಯತ್ನಿಸಿದಾತನನ್ನು ತಡೆದ ಸಾರ್ವಜನಿಕರು

ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾತನನ್ನು ಸಾರ್ವಜನಿಕರು ರಕ್ಷಿಸಿದ ಘಟನೆ ಪಾಣೆಮಂಗಳೂರು ಸೇತುವೆಯಲ್ಲಿ ನಡೆದಿದೆ.ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯ ರಸ್ತೆ ನಿವಾಸಿ ವೆಂಕಟಯ್ಯ ಎಂಬವರ ಪುತ್ರ ಶಂಕರಯ್ಯ (50) ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಶಂಕರಯ್ಯ ಆತ್ಮಹತ್ಯೆ ಉದ್ದೇಶಕ್ಕಾಗಿಯೇ ಬೆಂಗಳೂರಿನಿಂದ ಬಂಟ್ವಾಳಕ್ಕೆ ಬಂದಿದ್ದರು ಎನ್ನಲಾಗಿದೆ. ಮಾಹಿತಿ ಪಡೆದ ಕೂಡಲೇ ಕಾರ್ಯಾಚರಣೆ ನಡೆಸಿದ ಸಿದ್ದೀಕ್ ಎಂ.ಕೆ.ರೋಡ್, ಶಂಕರಯ್ಯ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಉಪವಾಸವಿದ್ದ ಸಂದರ್ಭ ನಡೆಸಿದ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ.ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ಸಮಸ್ಯೆಯೇ ಕಾರಣ

ನದಿಗೆ ಹಾರಿ ಆತ್ಮ ಹತ್ಯೆಗೆ ಯತ್ನಿಸಿದಾತನನ್ನು ತಡೆದ ಸಾರ್ವಜನಿಕರು Read More »

error: Content is protected !!
Scroll to Top