March 2025

ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಸ್ಮರಣಾಂಜಲಿ ಕಾರ್ಯಕ್ರಮ,ಎಂ.ಎ.ಮುಸ್ತಫಾ ಬೆಳ್ಳಾರೆ ಚುಟುಕು ವಾಚನ

ಕಾಸರಗೋಡು ಜಿಲ್ಲೆ ದೇಲಂಪಾಡಿಯ ಬನಾರಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಮಾ 2ರಂದು ನಡೆದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಜರುಗಿದ ಚುಟುಕು ಕವಿಗೋಷ್ಠಿಯಲ್ಲಿ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರು’ಇವರು ಕಹಿ’ಹಾಗೂ’ಯಾಕೆ ನಿಧಾನ ಎಂಬ ಎರಡು ಚುಟುಕು ವಾಚಿಸಿದರು.

ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಸ್ಮರಣಾಂಜಲಿ ಕಾರ್ಯಕ್ರಮ,ಎಂ.ಎ.ಮುಸ್ತಫಾ ಬೆಳ್ಳಾರೆ ಚುಟುಕು ವಾಚನ Read More »

ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರಿಗೆ ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 9 ರಂದು ಬಾಪೂ ಸಭಾಂಗಣ ಗಾಂಧಿ ಭವನ ಬೆಂಗಳೂರಿಲ್ಲಿ ಚೇತನ ಪೌಂಡೇಶನ್ ಕರ್ನಾಟಕ ಸೋಶಿಯಲ್ ಕ್ಲಬ್ ಆಶ್ರಯದಲ್ಲಿ ನಡೆಯುವ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರ ಸಾಹಿತ್ಯ ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ವನಿತಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಚೇತನ ಫೌಂಡೇಶನ್ ಕ್ಲಬ್ ನ ಅಧ್ಯಕ್ಷರು ಚಂದ್ರಶೇಖರ ಮಾಡಲಗೇರಿ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರಿಗೆ ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ Read More »

ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಆತ್ಮ ಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

ಬೆಳಗಾವಿ ನಗರದಲ್ಲಿ ಪಾಗಲ್ಮಿಯೋರ್ವ ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸಹಾಪುರದಿಂದ ಮಂಗಳವಾರ ವರದಿಯಾಗಿದೆ.ಐಶ್ವರ್ಯ ಮಹೇಶ ಲೋಹಾರ (18) ಕೊಲೆಯಾದ ಯುವತಿ. ಕುಳ್ಳೂರು ಗ್ರಾಮದ ಪಾಗಲ್ ಪ್ರೇಮಿ ಪ್ರಶಾಂತ ಯಲ್ಲಪ್ಪ ಮಂಡೇಕರ (29) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪ್ರೇಯಸಿಯ ಚಿಕ್ಕಮ್ಮನ ಮನೆಗೆ ಬಂದ ಪ್ರಶಾಂತ ಪ್ರೇಯಸಿಯನ್ನು ಮದುವೆ ಆಗುವುದಾಗಿ ಕೇಳಿದ್ದಾನೆ. ಇದಕ್ಕೆ ಒಪ್ಪದ ಪ್ರೇಯಸಿಗೆ ವಿಷ ಕುಡಿಸಲು ಯತ್ನಿಸಿದ್ದಾನೆ. ಇದನ್ನು ನಿರಾಕರಿಸಿದ್ದಾಗ ಪ್ರೇಯಸಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನಂತರ ತನ್ನ

ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಆತ್ಮ ಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ Read More »

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ನೇಮಕ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಕೆ ಇವರು ನೇಮಕವಾಗಿದ್ದಾರೆ.ಸದಸ್ಯರಾಗಿ ಹರಿಶ್ಚಂದ್ರ, ಸಿನಿ ಗುರುದೇವನ್, ಗಣೇಶ್ ಕಾಶಿ, ವಿಶ್ವನಾಥ ಕೆ, ಲೋಕೇಶ್ವರಿ ವಿನಯ ಚಂದ್ರ ಗೌಡ, ಪ್ರಮೋದ್ ಕುಮಾರ್ ಶೆಟ್ಟಿ, ಪ್ರಶಾಂತ್ ಮಚ್ಚಿನ, ನೇಮಕವಾಗಿದ್ದಾರೆ. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಅಧಿಕಾರ ಹಸ್ತಾಂತರವನ್ನು ಮಾಡಿದರು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ನೇಮಕ Read More »

ಅಡಿಕೆ ಬೆಳೆಯ ಎಲೆಚುಕ್ಕಿ ರೋಗದಿಂದ ರೈತರಿಗೆ ಆರ್ಥಿಕ ನಷ್ಟ: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪ

ಬೆಂಗಳೂರು: ಅಡಿಯ ಬೆಳೆಯ ಎಲೆಚುಕ್ಕಿ ರೋಗದಿಂದ ಸುಳ್ಯ-ಪುತ್ತೂರು,ಕಡಬ ಭಾಗದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಿದ್ದಾರೆ. ರೋಗಕ್ಕೆ ಸಮರ್ಪಕವಾಗಿ ಔಷದಿಗಳು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪೋಷಕಾಂಶಗಳನ್ನು ನೀಡುತ್ತಿಲ್ಲ. ಔಷಧಿಗಳ ಕೊರತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋ‌ರ್ ಕುಮಾರ್ ಪುತ್ತೂರು ವಿಧಾನ ಪರಿಷತ್ ಕಲಾಪದಲ್ಲಿ ಹೇಳಿದರು.ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಎಲೆ ಚುಕ್ಕಿ ರೋಗದ ಬಗ್ಗೆ ಧ್ವನಿ ಎತ್ತಿ, ಕೇಂದ್ರದಿಂದ ಅನುದಾನ ಬಂದರೂ ರೈತರ ಕೈಗೆ ಸೇರಿಲ್ಲ. ರಾಜ್ಯದಿಂದಲೂ ಅನುದಾನ ಶೀಘ್ರವಾಗಿ

ಅಡಿಕೆ ಬೆಳೆಯ ಎಲೆಚುಕ್ಕಿ ರೋಗದಿಂದ ರೈತರಿಗೆ ಆರ್ಥಿಕ ನಷ್ಟ: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪ Read More »

ಪುತ್ತೂರು ತಾಲೂಕಿನಲ್ಲಿ ಭೂಕಂಪನದ ಅನುಭವ

ಪುತ್ತೂರು ತಾಲೂಕಿನಲ್ಲಿ ಭೂ ಕಂಪನದ ಅನುಭವವಾಗಿದ್ದು, ಆತಂಕಗೊಂಡು ಮನೆಯಿಂದ ಜನ ಓಡಿ ಬಂದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.ಪುತ್ತೂರು ತಾಲೂಕಿನ ಸುಮಾರು ಐದು ಗ್ರಾಮಗಳಲ್ಲಿ ಭೂಮಿ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಕೆಲ ಕಾಲ ಭೂಮಿ ಕಂಪಿಸಿದ್ದರಿಂದಾಗಿ ಜನರು ಭಯದಿಂದ ಮನೆಯಿಂದ ಹೊರಗ ಓಡಿ ಬಂದಿದ್ದಾರೆ. ಆದರೆ ಯಾವ ಕಾರಣಕ್ಕೆ ಭೂಮಿ ಕಂಪಿಸಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಗೊತ್ತಾಗಬೇಕಿದೆ.

ಪುತ್ತೂರು ತಾಲೂಕಿನಲ್ಲಿ ಭೂಕಂಪನದ ಅನುಭವ Read More »

ಹಾಲ್ ಟಿಕೆಟನ್ನು ತಾಯಿಯ ಶವದ ಪಾದದ ಮೇಲೆ ಇಟ್ಟು ನಮಸ್ಕರಿಸಿ ಪಿ.ಯು.ಸಿ ಪರೀಕ್ಷೆ ಬರೆಯಲು ತೆರಳಿದ ವಿದ್ಯಾರ್ಥಿ

ವಿಧಿ ಬಹಳ ಕ್ರೂರವಾದುದು.ಇಲ್ಲೊಂದು ಮನಕಲುಕುವ ಘಟನೆ ನೆಡೆದು ಹೋಗಿದೆ.ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ವಿದ್ಯಾರ್ಥಿಯ ತಾಯಿ ಹಠಾತ್ ಆಗಿ ಸಾವನ್ನಪ್ಪಿದ್ದರು. ಹೀಗಾಗಿ ಕಣ್ಣಲ್ಲಿ ನೀರು ತುಂಬಿಕೊಂಡೇ ವಿದ್ಯಾರ್ಥಿ ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳಿದ ಘಟನೆಯೊಂದು ವರದಿಯಾಗಿದೆ.ಅದಕ್ಕೂ ಮುನ್ನ ತಾಯಿಯ ಮೃತದೇಹಕ್ಕೆ ನಮಸ್ಕರಿಸಿದ್ದಾನೆ.ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲಿಯೂರಿನ ವಿದ್ಯಾರ್ಥಿ ಸುನೀಲ್ ಕುಮಾ‌ರ್ ಅವರ ತಾಯಿ ಸುಬ್ಬಲಕ್ಷ್ಮೀ 12 ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಮೊದಲ ದಿನವಾದ ಮಾರ್ಚ್ 3ರ ಬೆಳಗ್ಗೆ ಹೃದಯಾಘಾತದಿಂದ

ಹಾಲ್ ಟಿಕೆಟನ್ನು ತಾಯಿಯ ಶವದ ಪಾದದ ಮೇಲೆ ಇಟ್ಟು ನಮಸ್ಕರಿಸಿ ಪಿ.ಯು.ಸಿ ಪರೀಕ್ಷೆ ಬರೆಯಲು ತೆರಳಿದ ವಿದ್ಯಾರ್ಥಿ Read More »

ಮಂಜೇಶ್ವರ : ಭೀಕರ ಕಾರು ಅಪಘಾತ ಮೂವರು ಸಾವು

ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ತಾಲೂಕಿನ ಹೊಸಂಗಡಿ ಹಳೆ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೈವಳಿಕೆ ಬಾಯಿಕಟ್ಟೆ ನಿವಾಸಿ ಜನಾರ್ದನ (ತಂದೆ) ಮತ್ತು ಅವರ ಇಬ್ಬರು ಪುತ್ರರಾದ ವರುಣ್, ಕೃಷ್ಣ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.ನಾಲ್ಕನೇ ವ್ಯಕ್ತಿ ರತನ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ

ಮಂಜೇಶ್ವರ : ಭೀಕರ ಕಾರು ಅಪಘಾತ ಮೂವರು ಸಾವು Read More »

ಜ್ವರದಿಂದ ಎರಡು ವರ್ಷದ ಮಗು ಸಾವು

ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಮಗ ಮುಹಮ್ಮದ್ ಅಭಿಯಾನ್ (2) ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಕೊನೆಯುಸಿರೆಳೆದಿದೆ. ಮುಹಮ್ಮದ್ ಅಭಿಯಾನ್ ಗೆ ಕೇವಲ ಒಂದು ದಿನದ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ನಿನ್ನೆಯ ದಿನ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ. ಬಾಲಕನ ತಂದೆ ಹೈದರ್ ಅಲಿ ಅವರು ಬಿಲ್ಡಿಂಗ್‌

ಜ್ವರದಿಂದ ಎರಡು ವರ್ಷದ ಮಗು ಸಾವು Read More »

ರಿಕ್ಷಾ ಚಾಲಕ ಆತ್ಮಹತ್ಯೆ

ಪುತ್ತೂರು ತಾಲೂಕಿನ ರಿಕ್ಷಾ ಚಾಲಕ ಪೆರಿಯತ್ತೋಡಿ ನಿವಾಸಿ ಕೃಷ್ಣ(40ವ)ರವರು ಮನೆಯ ಬಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.3ರಂದು ನಡೆದಿದೆ.ಮನೆಯ ಬಳಿಯ ಮರವೊಂದರ ರೆಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಅವರು ಮಕ್ಕಳನ್ನು ರಿಕ್ಷಾದಲ್ಲಿ ಶಾಲೆಗೆ ಕರೆದೊಯ್ದು, ಬಾಡಿಗೆ ಮುಗಿಸಿ ಬಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ರಿಕ್ಷಾ ಚಾಲಕ ಆತ್ಮಹತ್ಯೆ Read More »

error: Content is protected !!
Scroll to Top