March 2025

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ

ಅರಂತೋಡು : ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಸುಜಯ ಲೋಹಿತ್ ಅವರ ತೊಟಕ್ಕೆ ಕಾಡಾನೆ ದಾಳಿ ಅಪಾರ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.ತೆಂಗಿನ ಮರ ಬಾಳೆ ಇತರ ಕ್ರಷಿ ಬೆಳೆಗಳನ್ನು ನಾಶ ಮಾಡಿದೆ.ಅನೇಕ ತಿಂಗಳಿನಿಂದ ಅಡ್ತಲೆ ಪರಿಸರ ದಲ್ಲಿ ಕಾಡಾನೆಗಳು ಬೀಡು ಬಿಟ್ಟು ಆಗಾಗ್ಗೆ ಕೃಷಿ ನಾಶ ಮಾಡುತ್ತಿದೆ. ಕಾಡು ಕೋಣ ಹಾವಳಿಯು ಹೆಚ್ಚಾಗಿದ್ದು ಅನೇಕ ರೈತರ ಕ್ರಷಿ ಮಾಶ ಮಾಡಿವೆ.ಆನೆ ಹಾಗೂ ಕಾಡು ಕೋಣಗಳ ಹಾವಳಿ ವಿಪರೀತ ಆಗುತ್ತಿದ್ದು, ಜನಪ್ರತಿನಿದಿನಗಳು ದಯವಿಟ್ಟು […]

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ Read More »

ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ

ಸುಳ್ಯ ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿ ಮಳೆ ಸುರಿದಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗುತ್ತಿದೆ.ಅರಂತೋಡಿನಲ್ಲಿ ಸಂಜೆ ಬಿಸಿದ ಗಾಳಿ ಮಳೆ ಗೆ ಅರಂತೋಡು ಶಾಲಾ ಬಳಿ ತೆಂಗಿನ ಮರ ಮುರಿದು ಬಿದ್ದು ಅರಂತೋಡು ಅಂಗಡಿ ಮಜಲು ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ಬಂದ್ ಆಗಿತ್ತು .ಇದನ್ನು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಕೃಷ್ಣ ದಾಸರ ಹಿತ್ಲು,ಹಮೀದ್ ಕುಕ್ಕಂಬಳ,ಮುನೀರ್ ಸಂಟ್ಯಾರ್,ತಾಜುದ್ದೀನ್ ಅರಂತೋಡು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಇನ್ನು ಕೆಲವು ಕಡೆ

ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ Read More »

ಅಜ್ಜಾವರ : ರಿಕ್ಷಾ ಸ್ಕೂಟಿ ಅಪಘಾತ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಇರಂತಮಜಲು ಎಂಬಲ್ಲಿ ಸ್ಕೂಟಿಗೆ ರಿಕ್ಷಾ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರೂ ಗಾಯಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.ಅಜ್ಜಾವರದ ತುದಿಯಡ್ಕದಲ್ಲಿ ಕಾರ್ಯಕ್ರಮ ಮುಗಿಸಿ, ಕಾಸರಗೋಡಿನ ಮಲ್ಲಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಜನಾರ್ದನಾ ಇಂದಿರಾ ದಂಪತಿಗಳ ಸ್ಕೂಟಿಗೆ, ಸುಳ್ಯದ ಕಡೆ ಬರುತ್ತಿದ್ದ ಪೇರಾಲಿನ ಹರಿಪ್ರಸಾದ್ ಎಂಬವರ ರಿಕ್ಷಾ ಢಿಕ್ಕಿಯಾಯಿತು.ಈ ಅಪಘಾತದಿಂದ ರಿಕ್ಷಾ ಪಲ್ಟಿಯಾದರೆ, ಸ್ಕೂಟಿಯಲ್ಲಿದ್ದ ದಂಪತಿಗಳು ರಸ್ತೆಯ ಬದಿಗೆ ಎಸೆಯಲ್ಪಟ್ಟು ಗಾಯಗೊಂಡರು.ರಿಕ್ಷಾ ಸ್ಕೂಟಿ ಜಖಂಗೊಂಡಿದೆ.

ಅಜ್ಜಾವರ : ರಿಕ್ಷಾ ಸ್ಕೂಟಿ ಅಪಘಾತ Read More »

ಕಬಡ್ಡಿ ಆಟಗಾರ ಹೃದಯಾಘಾತಕ್ಕೆ ಬಲಿ

ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.ಪೆರ್ನೆ ನಿವಾಸಿ ವೆಲ್ಡಿಂಗ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಉತ್ತಮ ಕಬಡ್ಡಿ ಆಟಗಾರ ನವೀನ್ ಕುಮಾರ್ (27) ಮೃತ ಯುವಕ.

ಕಬಡ್ಡಿ ಆಟಗಾರ ಹೃದಯಾಘಾತಕ್ಕೆ ಬಲಿ Read More »

ಬಳ್ಪದ ವ್ಯಕ್ತಿ ನಿಗೂಢವಾಗಿ ನಾಪತ್ತೆ

ಕಡಬ ತಾಲೂಕು ಬಳ್ಪ ಗ್ರಾಮದ ಜೋಗಿಮನೆ ಚೆನ್ನಕೇಶವ ಜೋಗಿ ಮಾ.11 ರಂದು ಮನೆಯಿಂದ ತೆರಳಿದವರು ಇದುವರೆಗೆ ಪುನಃ ಹಿಂತಿರುಗಿ ಬಾರದೇ ಇದ್ದುದರಿಂದ ಮನೆಯವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರಿಗೆ 61 ವಯಸ್ಸಾಗಿತ್ತು. ದಿನಾಂಕ 11-03-2025 ಮಂಗಳವಾರದಂದು ಮನೆಯಿಂದ ಕೊಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೋದವರು ಇಲ್ಲಿತನಕ ಮನೆಗೆ ಮರಳಿರುವುದಿಲ್ಲ. ಇವರ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಥವಾ ಈ ಮೊಬೈಲ್ ಸಂಖ್ಯೆಗೆ ದಯವಿಟ್ಟು

ಬಳ್ಪದ ವ್ಯಕ್ತಿ ನಿಗೂಢವಾಗಿ ನಾಪತ್ತೆ Read More »

ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ

ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ(ರಿ) ಅರಂತೋಡು ಇದರ ವತಿಯಿಂದ 20 ನೇ ವರ್ಷದ ಸರ್ವ ಧರ್ಮ ಸೌಹಾರ್ದ ಇಫ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ದುವಾಶೀರ್ವಾಚನವನ್ನು ಅರಂತೋಡು ಬದ್ರಿಯ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಮಾಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಸುಳ್ಯ ಬೀರಮಂಗಲ ಸೈಂಟ್ ಬ್ರಿಜೇಶ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ವಿಕ್ಟರ್ ಡಿ’ಸೋಜ ಹಾಗೂ ಶ್ರೀ ಅನ್ನಪೂರ್ಣೇಶ್ವರಿ

ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ Read More »

ಗಾಂಧಿನಗರ : ಕೆಪಿಎಸ್ ನಲ್ಲಿ ಅಕ್ಷರ ಕೈತೋಟ ಉದ್ಘಾಟನೆ

ಕೆ ಪಿ. ಎಸ್. ಗಾಂಧಿನಗರ ಸುಳ್ಯ ಇಲ್ಲಿ ಲಯನ್ಸ್ ಕ್ಲಬ್ ಇದರ ಸಹಕಾರ ದಲ್ಲಿ ನಿರ್ಮಿಸಲಾದ ಶಾಲಾ ಅಕ್ಷರ ಕೈತೋಟ ವನ್ನು ಜಿಲ್ಲಾ ಲಯನ್ಸ್ ಗವರ್ನರ್ ಭಾರತಿ ಉದ್ಘಾಟಿಸಿದರು. ಲಯನ್ಸ್ ಸುಳ್ಯ ಇದರ ಅಧ್ಯಕ್ಷ ರಾದ ರಾಮಕೃಷ್ಣ ರೈ ಎಲ್ಲರನ್ನು ಸ್ವಾಗತಿಸಿದರು, ಶಿಕ್ಷಕರಾದ ಚಿನ್ನಪ್ಪಗೌಡ ಪತ್ತುಕುಂಜ, ಕೈತೋಟ ನಿರ್ಮಾಣ ಮಾಡಿದ್ದು, ಮಕ್ಕಳಿಗೆ ಸಾವಯವ ತರಕಾರಿ ಬೆಳೆದಿದ್ದು, ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಮುಖ್ಯ ಶಿಕ್ಷಕರಾದ ಜ್ಯೋತಿ ಲಕ್ಷ್ಮೀ, ಎಲ್ಲರನ್ನು ವಂದಿಸಿದರು.

ಗಾಂಧಿನಗರ : ಕೆಪಿಎಸ್ ನಲ್ಲಿ ಅಕ್ಷರ ಕೈತೋಟ ಉದ್ಘಾಟನೆ Read More »

ಅಡ್ತಲೆ: ಉಳ್ಳಾಕುಳು ಮತ್ತು ಮಲೆ ಭೂತಗಳ ಧರ್ಮ ನಡಾವಳಿ

ಸುಳ್ಯ ತಾಲೂಕಿನ ಅಡ್ತಲೆ ಬೆದ್ರುಪಣೆ ಉಲ್ಲಾಕುಳು ಹಾಗೂ ಮಲೆ ಭೂತಗಳ ದೈವಸ್ಥಾನದಲ್ಲಿ ಮಾ.21ರಂದು ಭಂಡಾರ ತೆಗೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಮಾ‌. 22 ರಂದು ಉಲ್ಲಾಕುಳು , ಹಾಗೂ ಪುರುಷ ದೈವ, ರಾಜನ್ ದೈವ ಹಾಗೂ ಮಲೆ ಭೂತಗಳ ಧರ್ಮ ನಡಾವಳಿ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯವರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು‌

ಅಡ್ತಲೆ: ಉಳ್ಳಾಕುಳು ಮತ್ತು ಮಲೆ ಭೂತಗಳ ಧರ್ಮ ನಡಾವಳಿ Read More »

ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುಳ್ಯದ ವೆಬ್ ನ್ಯೂಸ್ ಸಂಪಾದಕ,ವರದಿಗಾರನ ಮೇಲೆ ಪ್ರಕರಣ ದಾಖಲು

ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಸುಳ್ಯದ ವೆಬ್ ನ್ಯೂಸ್‌ ವೊಂದರ ವರದಿಗಾರ ಹಾಗೂ ಸಂಪಾದಕರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಾ.20ರಂದು ರಾತ್ರಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ಧನುಷ್ ಪಿ.ಎಸ್. ಎಂಬಾತನು ಕಲ್ಲುಗುಂಡಿ ಕಡೆಗೆ ಮಾರುತಿ ಆಮ್ಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದವರೊಂದಿಗೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಸುಳ್ಯದ ವೆಬ್‌ಸೈಟೊಂದು, ‘ಹಿಂದೂ ಹುಡುಗಿಯರ ಜತೆ ಅನ್ಯ ಕೋಮಿನ ಯುವಕರು; ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ ಯುವಕ’

ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುಳ್ಯದ ವೆಬ್ ನ್ಯೂಸ್ ಸಂಪಾದಕ,ವರದಿಗಾರನ ಮೇಲೆ ಪ್ರಕರಣ ದಾಖಲು Read More »

ಕಾಡಿನಲ್ಲಿ ಅನಾಥ ಮಗು ಪತ್ತೆ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೋಳುಕೆರೆ ಎಂಬಲ್ಲಿ ದಟ್ಟ ಕಾಡಿನ ಮಧ್ಯೆ ನಾಲ್ಕು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾದ ಘಟನೆ ವರದಿಯಾಗಿದೆ.ಪ್ರಕರಣ ಶನಿವಾರ ಬೆಳಗ್ಗೆ ತಿಳಿದು ಬಂದಿದೆ.ಮಗುವಿನ ಅಳುವ ಶಬ್ದ ಕೇಳಿ ಸ್ಥಳೀಯರು ಆತಂಕಗೊಂಡು ಕಾಡಿಗೆ ಹೋದಾಗ ಅಲ್ಲಿ ಒಂಟಿಯಾಗಿ ಅಳುತ್ತಿದ್ದ ಆ ಮಗುವನ್ನು ಕಂಡು ಆಶ್ಚರ್ಯಚಕಿತರಾದರು. ಮುಂಡೊಟ್ಟು ರಸ್ತೆಯ ಬಳಿಯ ಕೊಡೋಳುಕೆರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಮತ್ತು ಆ ದಾರಿಯಲ್ಲಿ ಹಾದುಹೋಗುತ್ತಿದ್ದ ಒಬ್ಬ ಮಹಿಳೆಗೆ ಮಗುವಿನ ಧ್ವನಿ ಕೇಳಿಸಿತು.

ಕಾಡಿನಲ್ಲಿ ಅನಾಥ ಮಗು ಪತ್ತೆ Read More »

error: Content is protected !!
Scroll to Top