March 2025

ಅರಂಬೂರು : ದೈವಂಕಟ್ಟು ಮಹೋತ್ಸವ ಸಂಪನ್ನ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.19 ರ ಮುಂಜಾನೆ ಸಂಪನ್ನಗೊಂಡಿತು.ಮಾ.15 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ತುಳು ದೈವಗಳ ಕೋಲವು ನಡೆದು .17ರಿಂದ ಕಾರ್ನವನ್ ದೈವ,ಕೋರಚ್ಚನ್ ದೈವ,ಕಂಡನಾರ್ ಕೇಳನ್ ದೈವ, ವಯನಾಟ್ ಕುಲವನ್ ದೈವದ ವೆಳ್ಳಾಟಂ ರಾತ್ರಿ ವೇಳೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೈವಗಳ ವೆಳ್ಳಾಟಂ ವೀಕ್ಷಿಸಲು ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಮರುದಿನ ಬೆಳಗ್ಗೆ ಶ್ರೀ ದೈವಗಳ […]

ಅರಂಬೂರು : ದೈವಂಕಟ್ಟು ಮಹೋತ್ಸವ ಸಂಪನ್ನ Read More »

ಬೂಡು :ಶ್ರದ್ಧಾ ಭಕ್ತಿಯಿಂದ ನಡೆದ ದೈವಗಳ ಕೋಲ

ಸುಳ್ಯದ ಬೂಡು ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಮಾ.15 ಮತ್ತು 16ರಂದು ನಡೆದು ಮಾ.18ರಂದು ರಾತ್ರಿ ದೈವಗಳ ನೇಮೋತ್ಸವ ನಡೆಯಿತು.ನೂರಾರು ಭಕ್ತರು ಸೇರಿ ದೈವಗಳ ದರ್ಶನ ಪಡೆದರು‌.ಈ ಸಂದರ್ಭದಲ್ಲಿಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಕೋಶಾಧಿಕಾರಿ ಶಿವರಾಮ ಕೇರ್ಪಳ, ಆಡಳಿತ ಮೊಕ್ತಸರ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೂಡು, ಕೋಶಾಧಿಕಾರಿ

ಬೂಡು :ಶ್ರದ್ಧಾ ಭಕ್ತಿಯಿಂದ ನಡೆದ ದೈವಗಳ ಕೋಲ Read More »

ದೇಲಂಪಾಡಿಯ ವ್ಯಕ್ತಿ ಕಾಣೆ

ದೇಲಂಪಾಡಿ, ಕುತ್ತಿಮುಂಡ ಮನೆಯ ರಾಧಾಕೃಷ್ಣ ಗೌಡ ಇವರು 3 ದಿನಗಳಿಂದ ಕಾಣೆಯಾಗಿರುತ್ತಾರೆ.ಸೋಮವಾರ ಸುಳ್ಯಪದವು ಪರಿಸರದಲ್ಲಿ ಇದ್ದ ಮಾಹಿತಿ ಸಿಕ್ಕಿರುತ್ತದೆ. ಆದರೆ ಸ್ಪಷ್ಟ ಮಾಹಿತಿ ಇಲ್ಲ.ಈ ವ್ಯಕ್ತಿ ಕಂಡು ಬಂದಲ್ಲಿ 9740797741 ಈ ನಂಬರ್ ಗೆ ಕಾಲ್ ಮಾಡಿ ತಿಳಿಸಿಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ದೇಲಂಪಾಡಿಯ ವ್ಯಕ್ತಿ ಕಾಣೆ Read More »

ಸುರಕ್ಷಿತವಾಗಿ ಭೂಮಿಗೆ ತಲುಪಿದ ಸುನಿತಾ ವಿಲಿಯಮ್ಸ್ ತಂಡ

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ನಾಸಾ ವಿಜ್ಞಾನಿ, ಗಗನಯಾತ್ರಿ ಬುಚ್‌ ವಿಲ್ಮೋರ್ ಅವರು ಕಳೆದ 9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಅವರು ಭೂಮಿಗೆ ಬರಲು ಸಾಧ್ಯವಾಗಿರಲಿಲ್ಲ. ಕಡೆಗೂ ಅವರ ಬಾಹ್ಯಾಕಾಶ ವಾಸ ಮುಗಿದಿದ್ದು ಭೂಮಿಗೆ ಸುರಕ್ಷಿತವಾಗಿ ವಾಪಾಸಾಗಿದ್ದಾರೆ.

ಸುರಕ್ಷಿತವಾಗಿ ಭೂಮಿಗೆ ತಲುಪಿದ ಸುನಿತಾ ವಿಲಿಯಮ್ಸ್ ತಂಡ Read More »

ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್

ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್ಬರೋಬ್ಬರಿ 9 ತಿಂಗಳ ಬಳಿಕ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ ಮತ್ತು ಬುಚ್ ವಿಲ್ಲೋರ್ ಇಂದು ಭೂಮಿಯತ್ತ ಹೊರಟಿದ್ದಾರೆ. ಸ್ಪೇಸ್‌ಎಕ್ಸ್ ಸಂಸ್ಥೆಯ ಸಂಸ್ಥಾಪಕ ಎಲೋನ್ ಮಸ್ಕರ್, ‘ಸ್ಪೇಸ್‌ಎಕ್ಸ್‌ ಡ್ರಾಗನ್‌ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕ್ ಆಗಿದೆ’ ಎಂದು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಕ್ರೂ-10 ಸ್ಪೇಸ್‌ಎಕ್ಸ್‌ ಕ್ರೂ ಡ್ರಾಗನ್ ಕ್ಯಾಪ್ಸುಲ್ ಐಎಸ್‌ಎಸ್‌ಗೆ ತಲುಪಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಬುಧವಾರ (ಮಾ. 19) ಬೆಳಗ್ಗೆ 3.27ಕ್ಕೆ ಭೂಮಿಗೆ ಕಾಲಿಡಲಿದ್ದಾರೆ.

ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್ Read More »

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ಲಿಂಗಪ್ಪ ನಾಯ್ಕ ರವರ ಪತ್ನಿ ರೇವತಿ ಎಂಬವರೇ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಮಹಿಳೆ.ವಿಷ ಸೇವಿಸಿದ ರೇವತಿಯವರನ್ನು ಮನೆಯವರು ಮತ್ತು ಸ್ಥಳೀಯರು ಸೇರಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಮೃತರು ಪತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ Read More »

ಕಾಲೇಜು ಹುಡುಗಿಯರಿಗೆ ಕಿರುಕುಳ ನೀಡಿದ ಯುವಕನಿಗೆ ಊರವರಿಂದ ಗೂಸ

ಪುತ್ತೂರು ನಗರದ ಕಲ್ಲಿಮಾರು ಎಂಬಲ್ಲಿದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಉಪಟಳ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಗೂಸ ನೀಡಿದ ಘಟನೆ ಮಾ.18 ರಂದು ಸಂಜೆ ವರದಿಯಾಗಿದೆ.ಹುಡುಗಿಯರಿಗೆ ಕಿರುಕುಳ ನೀಡಿದ ಗದಗ ಮೂಲದ ಲಿಂಗಪ್ಪ ಎಂಬವನನ್ನು ಊರವರೇ ಹಿಡಿದು ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾಲೇಜು ಹುಡುಗಿಯರಿಗೆ ಕಿರುಕುಳ ನೀಡಿದ ಯುವಕನಿಗೆ ಊರವರಿಂದ ಗೂಸ Read More »

ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ

ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಅರ್ನಾಡಿ ರೈಸ್ ಮಿಲ್ ನ ಮಾಲಕರಾದ ಸದಾನಂದ ಭಟ್( 72 ವರ್ಷ)ಅರ್ನಾಡಿ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾ. 17ರಂದು ನಿಧನರಾದರು. 1983 ರಲ್ಲಿ ರೈಸ್ ಮಿಲ್ಲನ್ನು ಸ್ಥಾಪಿಸುವ ಮೂಲಕ ಭತ್ತ ಬೆಳೆಯುವ ರೈತರಿಗೆ ಪಾಲಿಗೆ ವರದಾನವಾದರು. ಭತ್ತದೊಂದಿಗೆ, ತೆಂಗಿನ ಎಣ್ಣೆ, ಸಾಂಬಾರ ಪದಾರ್ಥಗಳನ್ನು ಕನಿಷ್ಠ ದರದಲ್ಲಿ ಪುಡಿ ಮಾಡಿ ಕೊಡುವುದು ಇತ್ಯಾದಿ ಮಾಡುತ್ತಿದ್ದರು. ಇತ್ತೀಚಿಗೆ ಮಿಲ್ಲನ್ನು ನಡೆಸಲು ಲೀಸ್ ನಲ್ಲಿ ಮನೋಹರ ಗಾಣಿಗರಿಗೆ ನೀಡಿ ತಮ್ಮ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್

ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ Read More »

ಅಪಘಾತದಲ್ಲಿ ಯುವ ವಕೀಲ ನಿಧನ,ಅಂಗಾಂಗ ದಾನ

ಕಳೆದ ವಾರ ಬಿ.ಸಿ.ರೋಡಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಪ್ರಥಮ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬ ಮಾನವೀಯತೆ ಮೆರೆದಿದೆ.ಮೃತರ ಎರಡು ಕಣ್ಣು, ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ

ಅಪಘಾತದಲ್ಲಿ ಯುವ ವಕೀಲ ನಿಧನ,ಅಂಗಾಂಗ ದಾನ Read More »

ಅರಂಬೂರು : ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ದೈವಂಕಟ್ಟು ಮಹೋತ್ಸವ

ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಅಂಗವಾಗಿ ಮಾ.16ರಂದು ಶ್ರೀ ವಿಷ್ಣುಮೂರ್ತಿ ದೈವ,ಶ್ರೀ ಚಾಮುಂಡಿಯಮ್ಮ ಶ್ರೀ ಗುಳಿಗ ದೈವದ ಕೋಲ ನಡೆಯಿತು.ಸಂಜೆ ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಹಪರಿವಾರ ದೈವಗಳಿಗೆ ಕೂಡಲಾಯಿತು.ಮಾ.17ರಂದು ಶ್ರೀ ಕಾರ್ನರ್ ದೈವದ ವೆಳ್ಳಾಟಂ,ಕೊರಚ್ಚನ್ ದೈವದ ವೆಳ್ಳಾಟಂ,ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್ ನಡೆಯಿತು.ನಂತರ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡಲಾಯಿತು.ತದನಂತರ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು.ಕರ್ನಾಟಕ

ಅರಂಬೂರು : ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ದೈವಂಕಟ್ಟು ಮಹೋತ್ಸವ Read More »

error: Content is protected !!
Scroll to Top