November 2025

ಸ್ವರ್ಣಶ್ರೀ ಸೊಸೈಟಿ ಸುಳ್ಯ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ.

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇಲ್ಲಿ ನ.29 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ 2026 ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ಅಧ್ಯಕ್ಷರಾದ ಜನಾರ್ದನ ದೋಳ ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ ನಿರ್ದೇಶಕರಾದ ಪ್ರಭಾಕರನ್ ನಾಯರ್, ರಾಘವ ಗೌಡ ಮದುವೆಗದ್ದೆ, ಪ್ರಕಾಶ್ ಕೇರ್ಪಳ ಸಿಬ್ಬಂದಿ ಜ್ಯೋತ್ಸ್ನಾ ಮಂದ್ರಪ್ಪಾಡಿ ಉಪಸ್ಥಿತರಿದ್ದರು.

ಸ್ವರ್ಣಶ್ರೀ ಸೊಸೈಟಿ ಸುಳ್ಯ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ. Read More »

ಡಿ.7ಕ್ಕೆ ಮರಾಟಿಗರ ಗೋಂದೋಳು ಪೂಜೆ, ಆಚಾರ ವಿಚಾರ ಕುರಿತ ಪುಸ್ತಕ ಬಿಡುಗಡೆ,ವಾರ್ಷಿಕೋತ್ಸವ

ಮರಾಟಿ ಸಮುದಾಯದ ಕುಟುಂಬಗಳಲ್ಲಿ ನಡೆದುಕೊಂಡು ಬರುತ್ತಿರುವ ಪ್ರಮುಖ ಆರಾಧನೆಯಾಗಿರುವ ಶ್ರೀ ಮಹಮಾಯಿ ದೇವಿಯ ಗೋಂದೋಳು ಪೂಜೆ ಸಹಿತ, ಮದುವೆ, ಇನ್ನಿತರ ಆಚಾರ ವಿಚಾರಗಳು ಏಕರೂಪದಲ್ಲಿರಬೇಕೆಂಬ ಕಾರಣಕ್ಕೆ ರಚಿತವಾಗಿರುವ ‘ಗೋಂದೋಳು ಪೂಜೆಯ ಹಿನ್ನಲೆ, ಆಚರಣೆಯ ವಿಧಿವಿಧಾನಗಳು ಮತ್ತು ಇತರ ಪ್ರಮುಖ ಆಚರಣೆಗಳು’ ಪುಸ್ತಕ ಡಿ.7 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕದ ಪ್ರಧಾನ ಸಂಪಾದಕ ಗೋಪಾಲ ನಾಯ್ಕ ದೊಡ್ಡೇರಿ ಮತ್ತು ಮರಾಟಿ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅಜ್ಜಾವರ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.7ಕ್ಕೆ ಮರಾಟಿಗರ ಗೋಂದೋಳು ಪೂಜೆ, ಆಚಾರ ವಿಚಾರ ಕುರಿತ ಪುಸ್ತಕ ಬಿಡುಗಡೆ,ವಾರ್ಷಿಕೋತ್ಸವ Read More »

ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ,ಜಾತಿ ನಿಂದನೆ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು

ಪುತ್ತೂರು: ಸುಳ್ಯ ತಾಲೂಕು ಕೆಮ್ರಾಜೆಯ ಗಿರೀಶ ಎಂಬಾತ 3-11-2017 ರಂದು ಪರಿಶಿಷ್ಟ ಜಾತಿಗೆ ಸೇರಿದ ಮರ್ಕಂಜ ಗ್ರಾಮದ ಗುಂಡಿಮಜಲಿನ ಮಹಿಳೆಯೋರ್ವರು ಕುಡಿಯಲು ಮತ್ತು ಗೃಹ ಬಳಕೆಗಾಗಿ ಶೇಖರಿಸಿಟ್ಟ ನೀರಿನ ಬ್ಯಾರೆಲ್‌ನಲ್ಲಿ ಮಲವಿಸರ್ಜನೆ ಮಾಡಿ ನೀರನ್ನು ಮಲಿನ ಮಾಡಿದ್ದು ಇದನ್ನು ವಿಚಾರಿಸಲು ಬಂದ ಮಹಿಳೆ ಮತ್ತು ಅವರ ಗಂಡನಿಗೆ ಜಾತಿನಿಂದನೆ ಮಾಡಿ, ಬೈದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದರಿಂದ ಆರೋಪಿತನ ವಿರುದ್ಧ ಪ.ಜಾ ಮತ್ತು ಪ.ಪ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್.ಬಿ.ಎಸ್

ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ,ಜಾತಿ ನಿಂದನೆ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು Read More »

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ-ಗೂನಡ್ಕ ಇದರ ವತಿಯಿಂದ ನಾಳೆ ಸುಳ್ಯ ತಾಲೂಕು ಮಟ್ಟದ ದಫ್ ಸ್ಪರ್ಧೆ ಉದ್ಘಾಟನೆ

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ-ಗೂನಡ್ಕ ಇದರ ವತಿಯಿಂದಸುಳ್ಯ ತಾಲೂಕು ಮಟ್ಟದ ದಫ್ ಸ್ಪರ್ಧೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮನ.29ರಂದು ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಮುಂಬಾಗ ಪೇರಡ್ಕ ಇಲ್ಲಿ ರಾತ್ರಿ 6:00 ಗಂಟೆಗೆ ನಡೆಯಲಿದೆ.ಬಹು ನಹೀಂ ಫೈಝಿ ಖತೀಬ್ MIM ಪೇರಡ್ಕ ಉದ್ಘಾಟಿಸಲಿದ್ದಾರೆ.ದಫ್ಫ್ ಸ್ಪರ್ಧೆಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯ ತಂಡ ತಾಜುಲ್ ಹುದಾ ರೆಂಜಾಡಿ ದೇರಳಕಟ್ಟೆಭಾಗವಹಿಸಲಿದೆ. ನವಂಬರ್ 30ಕ್ಕೆ ಧಾರ್ಮಿಕ ಉಪನ್ಯಾಸ ನಡೆಯಲಿದೆ.ಬಹು. ಮುನೀರ್ ಹುದವಿ ಉಸ್ತಾದ್ ವೇಲಾಯಿಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಟಿ ಎಂ. ಶಾಹಿದ್ ತೆಕ್ಕಿಲ್ ಅಧ್ಯಕ್ಷರು

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ-ಗೂನಡ್ಕ ಇದರ ವತಿಯಿಂದ ನಾಳೆ ಸುಳ್ಯ ತಾಲೂಕು ಮಟ್ಟದ ದಫ್ ಸ್ಪರ್ಧೆ ಉದ್ಘಾಟನೆ Read More »

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಯಶ್ವಿತ್ ಕಾಳಮನೆ ಆಯ್ಕೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಅಧ್ಯಕ್ಷತೆಯಲ್ಲಿ ನ.28 ರಂದು ನಡೆಯಿತು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್‌, ಕೆಜೆಯು ತಾಲೂಕು ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯದರ್ಶಿ ಗಣೇಶ್ ಕುಕ್ಕುದಡಿವರದಿ ವಾಚಿಸಿ, ಕೋಶಾಧಿಕಾರಿ ಕುಶಾಂತ್ ಕೊರತ್ಯಡ್ಕ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಮುಂದಿನ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಯಶ್ವಿತ್ ಕಾಳಮನೆ ಆಯ್ಕೆ Read More »

ಸೋಣಂಗೇರಿ : ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡರು ಹಾಗೂ ಸಮಾಜಸೇವಕರಾದ ಕಿರಣ್ ಚಂದ್ರ ಪುಷ್ಪಗಿರಿಯವರು ಇಂದು ಭೇಟಿ ನೀಡಿ ನಿರ್ಮಾಣ ಕಾರ್ಯಗಳ ವೀಕ್ಷಣೆ ನಡೆಸಿದರು. ಮಂದಿರದ ಆಡಳಿತ ಸಮಿತಿಯ ಸದಸ್ಯರೊಂದಿಗೆ ನೂತನ ಮಂದಿರ ನಿರ್ಮಾಣ ಮತ್ತು ಮುಂದಿನ ಅಭಿವೃದ್ಧಿ ಕುರಿತಾಗಿ ಸಮಾಲೋಚನೆ ನಡೆಸಿದ ಅವರು, ಮಂದಿರದ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಮಂದಿರದ ಆಡಳಿತ ಸಮಿತಿಯ ಸದಸ್ಯರುಗಳು ಯಾವುದೇ ಕಾರಣಕ್ಕೂ ಮಂದಿರ ನಿರ್ಮಾಣ ಕೆಲಸದಲ್ಲಿ

ಸೋಣಂಗೇರಿ : ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ Read More »

ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಎಲ್. ಕೆ. ಜಿ. ಯು. ಕೆ. ಜಿ.. ತರಗತಿ ಆರಂಭ

ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಕೇಂದ್ರದಲ್ಲಿ ಐ ಸಿ. ಡಿ ..ಎಸ್ ಯೋಜನೆಯಡಿ ಎಲ್ ಕೆ. ಜಿ. ಯು. ಕೆ. ಜಿ. ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಕ್ಕಳಿಗೆ ಪುಸ್ತಕವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮಕ್ಕಳಿಗೆ ವಿತರಿಸಿದರು. ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ. ಸ್ಮಾರ್ಟ್ ಕ್ಲಾಸ್ ದೂರದರ್ಶನ ಉದ್ಘಾಟಿಸಿದರು ಮಾಜಿ ಪ್ರಧಾನಿ ದಿವಂಗತ ಇಂದಿರಾ

ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಎಲ್. ಕೆ. ಜಿ. ಯು. ಕೆ. ಜಿ.. ತರಗತಿ ಆರಂಭ Read More »

ಕೂತ್ಕೂಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಪಂಜ ವಲಯದ ಕುತ್ಕುಂಜ ಕಾರ್ಯಕ್ಷೇತ್ರದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಾದ ರುಕ್ಮಿಣಿ ಇವರಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡಿದ್ದು, ಮಾತೃ ಶ್ರೀ ಹೇಮಾವತಿ ಅಮ್ಮನವರ ಸಹೋದರಿ ಪ್ರಿಯದರ್ಶಿನಿ ಅಮ್ಮನವರು ಹಾಗೂ ಶ್ರೇಯಂಸ್ ಕುಮಾರ್‌ ದಂಪತಿಗಳ ಉಪಸ್ಥಿತಿಯಲ್ಲಿ ಫಲಾನುಭವಿಗೆ ಮನೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೇಯಂಸ್ ಕುಮಾರ್‌ ರವರು “ಅನೇಕ ಅಸಹಾಯಕ ವ್ಯಕ್ತಿಗಳು ಯಾರ ಪೋಷಣೆಯೂ ಇಲ್ಲದೆ ಹಾಗೂ ಕನಿಷ್ಠ

ಕೂತ್ಕೂಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ Read More »

ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತೇಜ್ ಕುಮಾರ್ ಬಡ್ಡಡ್ಕ ಆಯ್ಕೆ

ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ,ಕಥೆಗಾರ ತೇಜಕುಮಾರ್ ಬಡ್ಡಡ್ಕ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹಾಗೂ ತಾಲೂಕು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.ನ.28ರಂದು ಸುಳ್ಯಕನ್ನಡ ಭವನದಲ್ಲಿ ಜರುಗಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತೇಜ್ ಕುಮಾರ್ ಬಡ್ಡಡ್ಕ ಆಯ್ಕೆ Read More »

ನಿಡ್ಯಮಲೆ ಸಮೀಪ ಗುಂಡು ತಗುಲಿ ಸತ್ತ ಕಡವೆ ಪತ್ತೆ

ಪೆರಾಜೆ ನಿಡ್ಯಮಲೆ ರಸ್ತೆ ಬದಿಯ ಪಾನತ್ತಿಲ್ಲ ಎಂಬಲ್ಲಿ ಕಡೆವೆಯ ಮ್ರತ ದೇಹ ಪತ್ತೆಯಾದ ಘಟನೆ ನ 28ರಂದು ವರದಿಯಾಗಿದೆ.ನ.27ರಂದು ರಾತ್ರಿ ಯಾರೋ ಬೇಟೆಗಾರರು ಗುಂಡು ಹೊಡೆದು ರಸ್ತೆ ಬದಿ ಬಂದು ಕಡವೆ ಬಿದ್ದಿವೆ.ಸಂಪಾಜೆ ಅರಣ್ಯ ಇಲಾಖೆಯವರು ಸತ್ತ ಕಡೆವೆಯನ್ನು ಕೊಂಡೊಯ್ದು ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ.

ನಿಡ್ಯಮಲೆ ಸಮೀಪ ಗುಂಡು ತಗುಲಿ ಸತ್ತ ಕಡವೆ ಪತ್ತೆ Read More »

error: Content is protected !!
Scroll to Top