January 2026

ಸುಳ್ಯ ಕಮಾಲ್ ಜನತಾ ನಿಧನ

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಜನತಾ ಸ್ಟೋರ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯಮಿಯಾಗಿದ್ದ ಕಮಾಲ್ ಜನತಾ ಅಲ್ಪಕಾಲದ ಅಸೌಖ್ಯದಿಂದ ಜ.18 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಹಲವಾರು ವರ್ಷಗಳಿಂದ ಉದ್ಯಮಿಯಾಗಿದ್ದ ಕಮಾಲ್ ಜನತಾ ಅಲ್ಪಕಾಲದ ಅಸೌಖ್ಯದಿಂದ ಜ.18 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಳ್ಯ ಕಮಾಲ್ ಜನತಾ ನಿಧನ Read More »

ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಪಂಜ ದೇವಳಕ್ಕೆ ಭೇಟಿ

ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಗಳಾಗಿ ಅಧಿಕಾರ ವಹಿಸಿರುವ ಶ್ರೀ ಆಂಜನೇಯ ರೆಡ್ಡಿಯವರು ಇಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್,ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ಪವಿತ್ರ ಮಲ್ಲೆಟ್ಟಿ ಹಾಗೂ ಮಾಲಿನಿ kudva ಉಪಸ್ಥಿತರಿಧರು

ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಪಂಜ ದೇವಳಕ್ಕೆ ಭೇಟಿ Read More »

ಪಂಜದಲ್ಲಿ ರಾಜ್ಯ ಯುವ ಸಂಭ್ರಮ : ಆಕರ್ಷಕ ಮೆರವಣಿಗೆಯೊಂದಿಗೆ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ

ಪಂಜದಲ್ಲಿ ನಡೆಯುತ್ತಿರುವ ರಾಜ್ಯ ಯುವ ಸಂಭ್ರಮದಲ್ಲಿ ಜ.18ರಂದು ಬೆಳಗ್ಗೆ ಪಂಜ ಸಿ.ಎ. ಬ್ಯಾಂಕ್ ‌ಬಳಿಯಿಂದ ಅದ್ದೂರಿ‌ ಮೆರವಣಿಗೆ ನಡೆಯಿತು.ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್ ಸದ್ದಿನೊಂದಿಗೆ ಸುಗ್ಗಿ‌ ನೃತ್ಯ, ಕರಗ, ಸಿದ್ಧವೇಶ, ಯಕ್ಷಗಾನ ನೃತ್ಯ, ಕಲ್ಲಡ್ಕ ಗೊಂಬೆ, ಕಂಬಳದ ಮೆರುಗು, ಜನಪದ ಸೊಬಗು, ನವಿಲು ನೃತ್ಯ, ಕೋಳಿ ಕಟ್ಟದ ದೃಶ್ಯ, ಹುಲಿ ವೇಷಗಳೊಂದಿಗೆ ಮಹಿಳೆಯರ ಪೂರ್ಣ ಕುಂಭ ಸ್ವಾಗತ ಮೆರವಣಿಗೆಗೆ ಮೆರುಗು ನೀಡಿತು.ತಾಲೂಕಿನ ಯುವಕ ಯುವತಿ ಮಂಡಲದವರು ಮೆರವಣಿಗೆಯಲ್ಲಿ ತಮ್ಮ ತಂಡಗಳೊಂದಿಗೆ ಭಾಗವಹಿಸಿದ್ದರು. ಯುವಕ -ಯುವತಿ ಮಂಡಲಗಳಿಗೆ ಮೆರವಣಿಗೆಯ

ಪಂಜದಲ್ಲಿ ರಾಜ್ಯ ಯುವ ಸಂಭ್ರಮ : ಆಕರ್ಷಕ ಮೆರವಣಿಗೆಯೊಂದಿಗೆ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ Read More »

ಯುವಜನತೆಯ ಪ್ರತಿಭೆಗನ್ನು ಅರಳಿಸುವ ಕೆಲಸವನ್ನು ಜನಪ್ರತಿಧಿ ಸರಕಾರ ಮಾಡಬೇಕು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್

ಯುವಜನತೆಯ ಪ್ರತಿಭೆಗನ್ನು ಅರಳಿಸುವ ಕೆಲಸವನ್ನು ಜನಪ್ರತಿಧಿ ಸರಕಾರ ಮಾಡಬೇಕು ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು .ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ(ರಿ)ಮಂಗಳೂರು ಇದರ ಸಹಯೋಗದೊಂದಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ( ರಿ) ಸುಳ್ಯ ಸುಳ್ಯ ತಾಲೂಕು ಇವರ ಆಶ್ರಯದಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ‌ ರಾಜ್ಯ ಮಟ್ಟದ ಯುವ ಸಂಭ್ರಮದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ‌ ಅವರು‌ ಮಾತನಾಡಿದರು.ಅನೇಕ ಆಚರಣೆಗಳು ಸಂಸ್ಕೃತಿಗಳು ನಶಿಸಿ ಹೋಗುವ ಹಂತದಲ್ಲಿದ್ದು ಅವುಗಳನ್ನು

ಯುವಜನತೆಯ ಪ್ರತಿಭೆಗನ್ನು ಅರಳಿಸುವ ಕೆಲಸವನ್ನು ಜನಪ್ರತಿಧಿ ಸರಕಾರ ಮಾಡಬೇಕು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ Read More »

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಜ.17ರಂದು ಗ್ರಾಮ ಪಂಚಾಯತ್ ಗ್ರಾಮ ಸ್ವರಾಜ್ ಸಭಾಂಗಣದಲ್ಲಿ ಜರುಗಿತು.ಸಭೆಯಲ್ಲಿ ಗ್ರಾಮಸ್ಥರಿಗೆ ಆರಂತೋಡು ಪೇಟೆಯಲ್ಲಿ ಏಕೈಕ ಹಸಿ ಮೀನು ಮಾರುಕಟ್ಟೆ ಇರುವುದರಿಂದ ಸಮಸ್ಯೆಯಾಗಿ, ಮೌಕಿಕವಾಗಿ ಅನೇಕ ದೂರುಗಳ ಬಂದ ಹಿನ್ನಲೆಯಲ್ಲಿ ಇನ್ನೆರಡು ಹಸಿ ಮೀನು ಮಾರುಕಟ್ಟೆ ಸ್ಟಾಲ್ ಗಳ ನಿರ್ಮಾಣ ಮಾಡುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.ಸಭೆಯಲ್ಲಿ ರಸ್ತೆಗಳ ದುರಸ್ಥಿ,ದಾರಿ ದೀಪ ದುರಸ್ಥಿ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಪಂಚಾಯತ್ ಸದಸ್ಯರು ಚರ್ಚೆ ನಡೆಸಿದರು. ಹಾಗೂ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ನೂತನ ಅರ್ಚಕರ ನೇಮಕ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ನೂತನ ಅರ್ಚಕರಾಗಿ ನೇಮಕವಾಗಿರುವ ಶ್ರೀ ಸುಬ್ರಹ್ಮಣ್ಯ ಶರ್ಮ ಇವರಿಗೆ ದೇಗುಲದ ವತಿಯಿಂದ ಪ್ರಾರ್ಥನೆ ಮಾಡಿ ಪ್ರಸಾದ ನೀಡಲಾಯಿತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮೈಲಪ್ಪಗೌಡ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಕುಮಾರ್ ರೈ ಬಳ್ಪ, ಹಾಗೂ ಅರ್ಚಕರಾದ ರಾಮಚಂದ್ರ ಭಟ್ ಉಪಸ್ಥಿತರಿದ್ದರು

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ನೂತನ ಅರ್ಚಕರ ನೇಮಕ Read More »

ಸಂಪಾಜೆ : ಅಕ್ರಮ ಬೀಟಿ ಮರ ಸಾಗಾಟ ಪತ್ತೆ

ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಮಡಿಕೇರಿ ಕಡೆಯಿಂದ ಬರುವ ವಾಹವನ್ನು ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಆಶೋಕ ಲಾಯಿಲಾಂಡ್ ಕಂಪೆನಿಯ ವಾಹನದಲ್ಲಿ (ನೋಂದಣಿ ಸಂಖ್ಯೆ:ಕೆ.ಎ ೧೩ ಎಎ ೦೭೬೯) ಜ.15ರಂದು ಅಕ್ರಮವಾಗಿ ಬೀಟಿ ಮರ ಸಾಗಾಟ ಪತ್ತೆಯಾಗಿದೆ.ವಾಹನದ ಮೇಲ್ಬಾಗದಲ್ಲಿ ಟಾರ್ಪಲ್ ಹಾಕಿ ಭತ್ತದ ಹೊಟ್ಟು ಇರುವ ಚೀಲ ಹಾಕಿ ಅದರ ಅಡಿ ಭಾಗದಲ್ಲಿ ಬೀಟಿ ಮರಗಳ ೨೫ ತುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಆರೋಪಿಗಳನ್ನು ಅರಣ್ಯ ಇಲಾಖೆ ‌ಬಂಧಿಸಿದೆ. ಆರೋಪಿಗಳಾದ ವಾಹನ ಚಾಲಕ ಬಿ.ಎಂ ಸಜನ್ ನಾಪೋಕ್ಲು ಇವರನ್ನು ಬಂಧಿಸಿ

ಸಂಪಾಜೆ : ಅಕ್ರಮ ಬೀಟಿ ಮರ ಸಾಗಾಟ ಪತ್ತೆ Read More »

ಸೋಮಪ್ಪ‌ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಕುಂಟುಕಾಡು ಮನೆಯ ಸೋಮಪ್ಪ ಗೌಡ ಜ.16ರಂದು ಬೆಳಿಗ್ಗೆ ನಿಧನರಾದರು.ಅವರಿಗೆ 94 ವರ್ಷ ಪ್ರಾಯವಾಗಿತ್ತು.ಮೃತರು ಪುತ್ರ ಸತ್ಯನಾರಾಯಣ, ಜಗದೀಶ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಸೋಮಪ್ಪ‌ ಗೌಡ ನಿಧನ Read More »

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ವಿಶೇಷ ಮುತುವರ್ಜಿಯಡಿ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌ ಸರ್ಕಾರದಿಂದ ಸ್ಮಾರ್ಟ್‌ ಬೋರ್ಡ್‌ಗಳ ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್‌ ಚೌಟ ಅವರ ವಿಶೇಷ ಆಸಕ್ತಿ ಹಾಗೂ ಸತತ ಪ್ರಯತ್ನದ ಫಲವಾಗಿ, ಇಸ್ರೇಲ್ ಸರ್ಕಾರದ ‘ಮಾಶಾವ್’ (MASHAV) ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗುತ್ತದೆ. ಈ ಮೂಲಕ ಜಿಲ್ಲೆಯ ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಸದರು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಅದರಂತೆ ಅನಂತಾಡಿಯ ದ.ಕ.ಜಿ.ಪಂ. ಶಾಲೆಯಲ್ಲಿ ಇಂದು ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಇಸ್ರೇಲ್

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ವಿಶೇಷ ಮುತುವರ್ಜಿಯಡಿ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌ ಸರ್ಕಾರದಿಂದ ಸ್ಮಾರ್ಟ್‌ ಬೋರ್ಡ್‌ಗಳ ಕೊಡುಗೆ Read More »

ಜ.18ರಿಂದ ಫೆ.2ರ ತನಕ 14 ಮಂಡಲಗಳಲ್ಲಿ ಬೃಹತ್ ಹಿಂದೂ ಸಂಗಮ ಮತ್ತು‌ ಶೋಭಾಯಾತ್ರೆ

ಸುಳ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷಗಳ ಯಾತ್ರೆಯಲ್ಲಿ ಮುನ್ನಡೆಯುತ್ತಿರುವುದರಿಂದನಮ್ಮಲ್ಲಿ ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಏಕತೆ, ಧಾರ್ಮಿಕ ಮತ್ತು ರಾಷ್ಟ್ರೀಯ ಭಾವನೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸುಳ್ಯ ತಾಲೂಕಿನ 14 ಮಂಡಲಗಳಲ್ಲಿ ಜ.18ರಿಂದ ಫೆ.2ರ ತನಕ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಎಂ.ಬಿ.ಸದಾಶಿವ ಹಾಗೂ ಕಾರ್ಯದರ್ಶಿ ಸುದರ್ಶನ್ ಸೂರ್ತಿಲ ಹೇಳಿದರು.ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹಿಂದೂ ಸಂಗಮ ಆಯೋಜನಾ

ಜ.18ರಿಂದ ಫೆ.2ರ ತನಕ 14 ಮಂಡಲಗಳಲ್ಲಿ ಬೃಹತ್ ಹಿಂದೂ ಸಂಗಮ ಮತ್ತು‌ ಶೋಭಾಯಾತ್ರೆ Read More »

error: Content is protected !!
Scroll to Top