February 17, 2026

ಅಡ್ತಲೆಯಲ್ಲಿ ಕಾಡಾನೆ ಹಾವಳಿಯ ಬಗ್ಗೆ ಡಿ.ಸಿ.ಎಫ್ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಲು ಶಾಸಕರಿಗೆ ಮನವಿ

ಅಡ್ತಲೆ ನಾಗರಿಕ ಹಿತಾರಕ್ಷಣಾ ವೇದಿಕೆಯ ನಿಯೋಗ ಸುಳ್ಯ ಶಾಸಕಿ ಭಾಗೀರಥಿ ಅವರ ಕಛೇರಿಯಲ್ಲಿ ಭೇಟಿ ಮಾಡಿ ನಿರಂತರವಾಗಿ ಆಗುತ್ತಿರುವ ಆನೆ ಹಾವಳಿಯ ಕುರಿತು ಸಂಪೂರ್ಣ ವಿಷಯವನ್ನು ಮನವರಿಕೆ ಮಾಡಿ ಶಾಸಕರು ಹಾಗೂ ಡಿ.ಸಿ.ಎಫ್ ನೇತೃತ್ವದಲ್ಲಿ ಅಡ್ತಲೆಯಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಡೆಸಲು ಮನವಿ ನೀಡಲಾಯಿತು. ಶಾಸಕರು ಆದಷ್ಟು ಬೇಗ ಅಧಿಕಾರಿಗಳ ಜೊತೆ ಮಾತನಾಡಿ ದಿನ ನಿಗದಿ ಮಾಡಿ ಸಭೆ ನಡೆಸುವ ಕುರಿತು ಒಪ್ಪಿಗೆ ಸೂಚಿಸಿದರು.ಅಲ್ಲದೇ ಮುಂದಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅರಣ್ಯ ಸಚಿವರನ್ನು ನಮ್ಮ ನಿಯೋಗದೊಂದಿಗೆ […]

ಅಡ್ತಲೆಯಲ್ಲಿ ಕಾಡಾನೆ ಹಾವಳಿಯ ಬಗ್ಗೆ ಡಿ.ಸಿ.ಎಫ್ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಲು ಶಾಸಕರಿಗೆ ಮನವಿ Read More »

ಅರಣ್ಯ ಇಲಾಖೆಯ ದಿನಗೂಲಿ ನೌಕರ ಕಾಡು ಹಂದಿ ತಿವಿದು ಗಂಭೀರ

ಅಖಿಲ ಭಾರತ ಹುಲಿ ಗಣತಿ-2026ರ ಎರಡನೇ ಹಂತದ ಸಮೀಕ್ಷೆ ಸಂದರ್ಭಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಕಾಡುಹಂದಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.ಉಪ್ಪಿನಂಗಡಿ ವಲಯದ ಮೊಗ್ರು ಅರಣ್ಯ ಬೀಟ್‌ನಲ್ಲಿ ಫೆಬ್ರವರಿ 16ರ ಸೋಮವಾರದಂದು ಎರಡನೇ ಹಂತದ ಸಮೀಕ್ಷಾ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೊಗ್ರು ಬ್ಲಾಕ್‌ನ ಕಲ್ಲಮಾಡು ಆಲಮಟ್ಟಿ ಪ್ಲಾಂಟೇಶನ್ ಸಮೀಪ ಗಸ್ತು ಅರಣ್ಯ ಪಾಲಕಿಯವರೊಂದಿಗೆ ಸಮೀಕ್ಷೆಗೆ ತೆರಳಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಶೇಷಪ್ಪ ಎಂಬವರ ಮೇಲೆ ಕಾಡುಹಂದಿಯೊಂದು ದಾಳಿ

ಅರಣ್ಯ ಇಲಾಖೆಯ ದಿನಗೂಲಿ ನೌಕರ ಕಾಡು ಹಂದಿ ತಿವಿದು ಗಂಭೀರ Read More »

ಅರಂತೋಡು : ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಅಧಿಕಾರ ಸ್ವೀಕಾರ

ಅರಂತೋಡು ಗ್ರಾಮ ಪಂಚಾಯತಿನ ಆಡಳಿತ ಮಂಡಳಿಯ ಅವಧಿಯು ಫೆ.16ಕ್ಕೆ ಪೂರ್ಣಗೊಂಡ ಹಿನ್ನಲೆಯಲ್ಲಿ ಫೆ.17ಅರಂತೋಡು ಗ್ರಾಮ ಪಂಚಾಯತ್ ನ ಆಡಳಿತ ಅಧಿಕಾರಿಯಾಗಿ ತೋಟಗಾರಿಕಾ ಸಹಾಯ ನಿರ್ದೇಶಕ ಪ್ರಮೋದ್ ಸಿ. ಎಂ. ಅಧಿಕಾರವಹಿಸಿ ಕೊಂಡರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಕೇಶವ ಎ, ಸದಸ್ಯರಾದ ವೆಂಕಟರಮಣ ಪೆತ್ತಾಜೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅರಂತೋಡು : ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಅಧಿಕಾರ ಸ್ವೀಕಾರ Read More »

ಸುಳ್ಯ: ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿಯವರ ಅರೋಗ್ಯ ವೃದ್ಧಿಗೆ ಸುಳ್ಯ ಕಾಂಗ್ರೆಸ್ ಮುಖಂಡರಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ.

ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ಅವರಿಗೆ ಅರೋಗ್ಯ ಶೀಘ್ರ ಚೇತರಿಕೆಗಾಗಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸುಳ್ಯ ಕಾಂಗ್ರೆಸ್ ಮುಖಂಡರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಸಾರ್ವಜನಿಕ ಬದುಕಿನಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮನ ಗೆದ್ದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ, ವಿಧಾನ ಪರಿಷತ್ ಶಾಸಕರೂ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಶ್ರೀ. ಮಂಜುನಾಥ ಭಂಡಾರಿ ಅವರು ಶೀಘ್ರವೇ ಸಂಪೂರ್ಣ ಚೇತರಿಸಿಕೊಂಡು, ಹಿಂದಿನಂತೆ

ಸುಳ್ಯ: ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿಯವರ ಅರೋಗ್ಯ ವೃದ್ಧಿಗೆ ಸುಳ್ಯ ಕಾಂಗ್ರೆಸ್ ಮುಖಂಡರಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ. Read More »

ಮರ್ಕಂಜ : ತೋಟಕ್ಕೆ ಕಾಡಾನೆ ದಾಳಿ ಅಪಾರ ಪ್ರಮಾಣದ ಕೃಷಿ ನಾಶ

ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಮಂಜುನಾಥ ರೈ ಅವರ ತೋಟಕ್ಕೆ ಫೆ.16ರಂದು ರಾತ್ರಿ ಕಾಡಾನೆ ದಾಳಿ ಮಾಡಿ ಅಪಾರ ಕೃಷಿ ನಷ್ಟ ಮಾಡಿದೆ. ಇದರಿಂದ ಅವರಿಗೆ ಅಪಾರ ನಷ್ಟ ಉಂಟಾಗಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಅವರಿಗೆ ಮುಂದಿನ ಕ್ರಮದ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಲಾಗಿದೆ.

ಮರ್ಕಂಜ : ತೋಟಕ್ಕೆ ಕಾಡಾನೆ ದಾಳಿ ಅಪಾರ ಪ್ರಮಾಣದ ಕೃಷಿ ನಾಶ Read More »

ಪೆರ್ನಾಜೆ : ನಿರಂತರ ಕಾಡಾನೆ ದಾಳಿ!

ಫೆ.17ರ ಮುಂಜಾನೆ ಜಾಲ್ಸೂರು ಸಮೀಪದ ಪೆರ್ನಾಜೆಗೆ ಕಾಡಾನೆ ಇಲ್ಲಿಯ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನಗ್ಗಿ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಮಾಡಿವೆ.ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ ರೈತರ ತೋಟಕ್ಕೆ ಆನೆ ದಾಳಿ ಮಾಡುತ್ತ ಇರುತ್ತವೆ. ಅಲ್ಲದೆ

ಪೆರ್ನಾಜೆ : ನಿರಂತರ ಕಾಡಾನೆ ದಾಳಿ! Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ‌ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪದಗ್ರಹಣ ಸಮಾರಂಭ

ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಧಾಕೃಷ್ಣ ಬೊಳ್ಳೂರು ಪದಗ್ರಹಣ ಕಾರ್ಯಕ್ರಮ ಫೆ.16ರಂದು ಸುಳ್ಯದ ಲಯನ್ಸ್‌ ಸೇವಾಸದನದಲ್ಲಿ ನಡೆಯಿತು.ಬ್ಲಾಕ್ ಕಾಂಗ್ರೆಸ್ ನಿರ್ಗಮನಾಧ್ಯಕ್ಷ ಪಿ.ಸಿ.ಜಯರಾಮರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ಬ್ಲಾಕ್ ಉಸ್ತುವಾರಿ ಎಂ.ಎಸ್.ಮಹಮ್ಮದ್,ಗ್ರಾಮಾಂತರ

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ‌ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪದಗ್ರಹಣ ಸಮಾರಂಭ Read More »

ಮಂಗಳೂರು : ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿ,7 ವಿದ್ಯಾರ್ಥಿಗಳು ಗಂಭೀರ

ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿಯಾಗಿ 7 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಂಗಳೂರು ಹೊರವಲಯದ ಕಾಪಿಕಾಡು ಬಳಿ ಫೆ.16ರಂದು ನಡೆದಿದೆ. ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್‌ಗೆ ಗೋವಾದಿಂದ ಕೇರಳದ ಕಡೆಗೆ ಹೊರಟಿದ್ದ ಮೀನು ಸಾಗಾಟದ ಕ್ಯಾಂಟರ್ ಹಿಂದಿನಿಂದ ಡಿಕ್ಕಿ ಹೊಡೆದೆದಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಕ್ಯಾಂಟ‌ರ್ ಚಾಲಕ ಸಂಜೀವ್ ನಿದ್ರೆಯ ಮಂಪರಿನಲ್ಲಿದ್ದ ಎನ್ನಲಾಗಿದ್ದು, ಗಾಯಾಳು ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ.

ಮಂಗಳೂರು : ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿ,7 ವಿದ್ಯಾರ್ಥಿಗಳು ಗಂಭೀರ Read More »

error: Content is protected !!
Scroll to Top