February 2026

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಧಾರ್ಮಿಕ ನಂಬಿಕೆಯ ಮೇಲೆ ಸಾಮಾಜಿಕ ಬದಲಾವಣೆ ಮಾಡಿದೆ : ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಅಭಿಮತ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಧಾರ್ಮಿಕ ನಂಬಿಕೆ ಮೇಲೆ ಸಾಮಾಜಿಕ ಬದಲಾವಣೆ ಮಾಡಿದೆ ಎಂದು ಪತ್ರಕರ್ತ ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಅಭಿಪ್ರಾಯ ಪಟ್ಟರು‌.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವ್ರದ್ದಿ ಯೋಜನೆ ಸುಳ್ಯ ತಾಲೂಕು ಸಂಪಾಜೆ ವಲಯ ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೊಡಿಕಾನ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ, ಸಂಪಾಜೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶೌರ್ಯ ವಿಪತ್ತು ನಿರ್ವಹಣಾ ಘಟಕ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಧಾರ್ಮಿಕ ನಂಬಿಕೆಯ ಮೇಲೆ ಸಾಮಾಜಿಕ ಬದಲಾವಣೆ ಮಾಡಿದೆ : ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಅಭಿಮತ Read More »

ಫೆ.9ಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ಪ್ರವರ್ತಿತ ಸಂಸ್ಥೆಯಾದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ದಿನಾಂಕ 09.02.1998ರಂದು ಸ್ಥಾಪನೆಯಾಗಿದ್ದು 09.02.2026 ರಂದು ಸಂಸ್ಥೆ ವತಿಯಿಂದ ಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆಎಂದು ಸೊಸೈಟಿ ಅಧ್ಯಕ್ಷರಾದ ಕೆ ಸಿ ಸದಾನಂದ ರವರು ತಿಳಿಸಿರುತ್ತಾರೆ.ಅವರು ಫೆ. 6ರಂದು ಸೊಸೈಟಿ ಸಭಾವನದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.ಸೊಸೈಟಿ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಕಾರ್ಯದರ್ಶಿಯಾಗಿ ಎ. ವಿ. ತೀರ್ಥರಾಮ, ಕೋಶಾಧಿಕಾರಿಯಾಗಿ ಪಿ

ಫೆ.9ಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ Read More »

ಮೀನಾಕ್ಷಿ ಕೊಯಿಂಗಾಜೆ ನಿಧನ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೊಯಿಂಗಾಜೆ ಮನೆತನದ ಹಿರಿಯರಾದ ಕೃಷ್ಣಪ್ಪ ಕೊಯಿಂಗಾಜೆಯವರ ಪತ್ನಿ ಮೀನಾಕ್ಷಿ ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 6ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪುತ್ರರಾದ ಬಾಲಚಂದ್ರ, ಶ್ರೀಧರ, ವೆಂಕಟರಮಣ, ದಾಸಪ್ಪ, ಪುತ್ರಿಯರಾದ ಇಂದಿರಾವತಿ ಲಿಂಗಪ್ಪ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೀನಾಕ್ಷಿ ಕೊಯಿಂಗಾಜೆ ನಿಧನ Read More »

ಮಾಣಿ -ಸಂಪಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಸಂಸದ ಚೌಟ ಸೂಚನೆ

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಹೆದ್ದಾರಿ ಯೋಜನೆಗಳ ಕಾಮಗಾರಿ ಪ್ರಗತಿ ಬಗ್ಗೆ ಸಂಸದರು ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಈ ಯೋಜನೆಗಳ ಕಾಮಗಾರಿಗಳನ್ನು ಯಾವುದೇ ವಿಳಂಬವಾಗದಂತೆ ಗಮನಹರಿಸುವ ಮೂಲಕ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಮನವಿ

ಮಾಣಿ -ಸಂಪಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಸಂಸದ ಚೌಟ ಸೂಚನೆ Read More »

ಸುಳ್ಯ ನಗರದ ಅಮೃತ್ ಕುಡಿಯುವ ನೀರಿನ ಯೋಜನೆಯ ನೀರಿಗೆ ಅತಿಯಾದ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಬಳಕೆ

ಸುಳ್ಯ ನಗರದ ಅಮೃತ್ ಯೋಜನೆ ಪೈಪಿನಿಂದ ಪೂರೈಕೆಯಾಗುತ್ತಿರುವ ನೀರಿಗೆ ಅತಿಯಾದ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಹಾಕಲಾಗುತ್ತಿದೆ. ಹಾಲಿನ ಬಣ್ಣಕ್ಕೆ ಬಂದಿರುವ ನೀರು ಇಂತಹ ನೀರನ್ನು ನಗರದ ಜನತೆ ಹೇಗೆ ಕುಡಿಯಬೇಕು? ಇದು ಆರೋಗ್ಯಕ್ಕೆ ಹಾನಿಕಾರಕವಾಗುವ ಸಾಧ್ಯತೆ ಇದ್ದು, ತಕ್ಷಣವೇ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಬೇಕು. ಇದಕ್ಕೆ ಕೂಡಲೇ ಆರೋಗ್ಯ ಇಲಾಖೆಯು ತಕ್ಷಣ ಗಮನ ಹರಿಸಬೇಕು ಸುಪ್ರಿತ್ ಮೋಂಟಡ್ಜ ಒತ್ತಾಯಿಸಿದ್ದಾರೆ.

ಸುಳ್ಯ ನಗರದ ಅಮೃತ್ ಕುಡಿಯುವ ನೀರಿನ ಯೋಜನೆಯ ನೀರಿಗೆ ಅತಿಯಾದ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಬಳಕೆ Read More »

ನಿಶ್ಚಿತಾರ್ಥವಾಗಿದ್ದಯುವತಿ ಭೀಕರ ಅಪಘಾತಕ್ಕೆ ಬಲಿ

ಮಂಗಳೂರು ನಗರದ ನಂತೂರು ವೃತ್ತದ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿದ್ದ ಯುವತಿ ದೀಪ್ತಿ (26) ಮೃತಪಟ್ಟ ಘಟನೆ ನಡೆದಿದೆ. ನಿಶ್ಚಿತಾರ್ಥವಾಗಿದ್ದ ದೀಪ್ತಿ, ತನ್ನ ಭಾವಿ ಪತಿಯೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಭಾವಿ ಪತಿ ಪಾರಾಗಿದ್ದಾರೆ. ಬಸ್ ಚಕ್ರ ದೀಪ್ತಿ ಅವರ ದೇಹದ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ನಿಶ್ಚಿತಾರ್ಥವಾಗಿದ್ದಯುವತಿ ಭೀಕರ ಅಪಘಾತಕ್ಕೆ ಬಲಿ Read More »

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ : ಬೆಂಗಳೂರು ತಂಡ ಚಾಂಪಿಯನ್

ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ಕ್ರಿಕೆಟ್ ಪಂದ್ಯವು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ ನಡುವೆ ನಡೆಯಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಬೆಂಗಳೂರು ತಂಡ, ಡೆಲ್ಲಿ ನೀಡಿದ್ದ 204 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ ಬೆಂಗಳೂರು ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ : ಬೆಂಗಳೂರು ತಂಡ ಚಾಂಪಿಯನ್ Read More »

ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ತಾಲೂಕಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಾಸಾಶನ ನೀಡುತ್ತಿರುವ ಕುಟುಂಬಗಳಿಗೆ ಹೇಮಾವತಿ ಹೆಗ್ಗಡೆಯವರು ನೀಡಿದ ದಿನನಿತ್ಯ ಬಳಕೆ ಮಾಡುವ ವಾತ್ಸಲ್ಯ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಹಾಗೂ ಶ್ರೀಗುರು ರಾಘವೇಂದ್ರಭಜನಾ ಮಂದಿರದ ಅಧ್ಯಕ್ಷರಾದ ಜಯರಾಮ ರೈ ಒಕ್ಕೂಟದ ಅಧ್ಯಕ್ಷರು ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ಪದಾಧಿಕಾರಿಗಳು ವಿಪತ್ತು ಘಟಕದ ಸದಸ್ಯರು ಪ್ರಗತಿಬಂಧು ಸದಸ್ಯರು ಮೇಲ್ವಿಚಾರಕರು ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು

ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ Read More »

ಪಂಜ : ವೈಭವದಿಂದ ನಡೆದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ದರ್ಶನ ಬಲಿ

ಪಂಜ ಸೀಮೆ ದೇವಾಲಯವಾದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.5 ರಂದು ಶ್ರೀ ದೇವರ ದರ್ಶನ ಬಲಿ ವೈಭವದಿಂದ ನಡೆಯಿತು.ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ. ನಡೆಯಿತು.ಶ್ರೀ ದೇವರ ಬಲಿಯೊಂದಿಗೆ ವೇದ ಮಂತ್ರ ಘೋಷ ಸ್ಯಾಕ್ಸೋಪನ್ , ಚೆಂಡೆ, ಬ್ಯಾಂಡ್ ವಾಲಗ ಬೇತಾಳಗಳು,ಗೊಂಬೆಗಳು, ಪಾರ್ಚೋಡ್ ಪ್ರಖ್ಯಾತ್ ರೈ ರವರ ಗೂಳಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್

ಪಂಜ : ವೈಭವದಿಂದ ನಡೆದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ದರ್ಶನ ಬಲಿ Read More »

ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ

ಮಾವ ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಸೊಸೆ ದೂರು ನೀಡಿದ ಹಿನ್ನಲೆಯಲ್ಲಿ ಮಾವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.ದಿನಾಂಕ 02.02.2026 ರಂದು ರಾತ್ರಿ ಸುಮಾರು 7.30 ಗಂಟೆಗೆ ತಾನು ಸಂಪಾಜೆ ಕಲ್ಲುಗುಂಡಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಇರುವ ಸಂದರ್ಭದಲ್ಲಿ, ತನ್ನ ಮಾವ ಅಕ್ರಮವಾಗಿ ಕೊಠಡಿ ಪ್ರವೇಶಿಸಿ ತನ್ನ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಪರಚಿ ಕಚ್ಚಿ ಗಾಯಗೊಳಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಸಾಹಿತ್ಯ ರೈ ಎಂಬವರು ಬಂಟ್ವಾಳ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು

ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ Read More »

error: Content is protected !!
Scroll to Top