February 2026

ಅರಂತೋಡು : ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾದ ಕಾರು

ಅರಂತೋಡು ನಯಾರ ಪೆಟ್ರೋಲ್ ಪಂಪ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾಗಿ ವಂಚಿಸಿದ ಘಟನೆ ಫೆ.13ರಂದು ನಡೆದಿದೆ.ಕಾರು ಚಾಲಕ ಕಾರಿಗೆ ರೂ. 2, 510 ಪೆಟ್ರೋಲ್ ಹಾಕಿಸಿ ಪರಾರಿಯಾದ.ಬಳಿಕ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿಗಳು, ಆಟೋ ಚಾಲಕರು, ಜಾಲ್ಲೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಅಡ್ಡ ಗಟ್ಟಿದಾಗ ಕಾರನ್ನು ನಿಲ್ಲಿಸದೇ ಪುತ್ತೂರಿನತ್ತ ಪರಾರಿಯಾದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಅರಂತೋಡು : ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾದ ಕಾರು Read More »

ಪರಿವಾರಕಾನ : ಹೃದಯಾಘಾತದಿಂದ ನಿಧನ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ಚಂದ್ರಶೇಖರ್ (55 ವರ್ಷ)ರವರು ಹೃದಯಾಘಾತದಿಂದ ಫೆ.12ರಂದು ರಾತ್ರಿ ನಿಧನರಾದರುರಾತ್ರಿ ಎದೆನೋವು ಕಾಣಿಸಿಕೊಂಡು ತಕ್ಷಣ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವ ವೇಳೆಗೆ ಹೃದಯಘಾತದಿಂದ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.ಮೃತರು ಪತ್ನಿ , ಪುತ್ರ , ಪುತ್ರಿ ಇಬ್ಬರು ಸಹೋದರರನ್ನು ಒಬ್ಬರು ಸಹೋದರಿಯನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.

ಪರಿವಾರಕಾನ : ಹೃದಯಾಘಾತದಿಂದ ನಿಧನ Read More »

ಅರಂತೋಡು : ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ ಗಳ ಉದ್ಘಾಟನೆ

ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (Record Room)ಗಳ ಉದ್ಘಾಟನೆ ಕಾರ್ಯಕ್ರಮ ಫೆ.12ರಂದು ನಡೆಯಿತು.ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (Record Room)ಗಳ ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರುಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಒಟ್ಟಾಗಿ ಕೆಲಸ ಮಾಡುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ.ಗ್ರಾಮ ಪಂಚಾಯಿತಿಯಲ್ಲಿ ಕಲಿಕಾ ಕೇಂದ್ರ, ಗ್ರಂಥಾಲಯ ಮತ್ತು ಜಿಮ್‌ನಂತಹ ಸೌಲಭ್ಯಗಳನ್ನು

ಅರಂತೋಡು : ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ ಗಳ ಉದ್ಘಾಟನೆ Read More »

ಪೆರ್ನಾಜೆ : ಕಾಡಾನೆ ದಾಳಿಯಿಂದ ರೈತರ ಅಪಾರ ಬೆಳೆ ನಾಶ

ಪೆ.12 ರಂದು ಮತ್ತೆ ಕುಮಾರ್ ಪೆರ್ನಾಜೆ ಯವರ ಕೆರೆಯಲ್ಲಿ ಈಜಾಡಿದ ಗಜರಾಜ ಒಂದು ಅಡಿಕೆ ಮರ ಈಚಲ ಮರ ತಿಂದು ತೇಗಿ ತದನಂತರ ಸಮೀಪದ ರಾಘವೇಂದ್ರ ಭಟ್ರ ತೋಟಕ್ಕೆ ನುಗ್ಗಿ ಹತ್ತಕ್ಕೂ ಹೆಚ್ಚು ಬಾಳೆಯನ್ನು ದ್ವಂಸ ಮಾಡಿ ಬಂದ ದಾರಿಯಲ್ಲೇ ಹಿಂತಿರುಗಿ ಮುಗೇರು ಗುಡ್ಡಡ್ಕ ಆನೆಗುಂಡಿ ಕಡೆ ತೆರಳಿದೆ. ಅರಣ್ಯ ಇಲಾಖೆಯವರು ಸೈರನ್ ಮೊಳಗಿಸಿದರು ಆನೆಗಳು ದಾಂದಲೆ ಮಾಡಿ ಲಕ್ಷಾಂತರ ರೂ ಸರಕಾರ ಖರ್ಚು ಮಾಡಿ ಸೋಲಾರ್ ಬೇಲಿ ಅಳವಡಿಸಿದರೂ ಅದರ ನಿರ್ವಹಣ ಇಲ್ಲದೆ ಊಟಕ್ಕೆ ಇಲ್ಲದ

ಪೆರ್ನಾಜೆ : ಕಾಡಾನೆ ದಾಳಿಯಿಂದ ರೈತರ ಅಪಾರ ಬೆಳೆ ನಾಶ Read More »

ಗುತ್ತಿಗಾರು : ಅಡಿಕೆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಊರವರು

ಗುತ್ತಿಗಾರಿನ ವಳಲಂಬೆ ಬಳಿ ತೋಟವೊಂದರಿಂದ ಫೆ.11 ರ ಸಂಜೆ ಹಣ್ಣಡಿಕೆ ಕದ್ದಿರುವುದಾಗಿ ವರದಿಯಾಗಿದ್ದು ಅವರನ್ನು ಸುಬ್ರಹ್ಮಣ್ಯ ಪೋಲೀಸರಿಗೆ ಸ್ಥಳೀಯರು ಪೆ.12ರಂದು ಒಪ್ಪಿಸಿರುವುದಾಗಿ ತಿಳಿದು ಬಂದಿದೆ.ಇಬ್ಬರು ಗಂಡಸು, ಒಬ್ಬರು ಹೆಂಗಸು ಇದ್ದು ಮೂವರು ಸೇರಿ ಈ ಹಿಂದೆ ಕೂಡ ಇದೇ ರೀತಿ ಕಳ್ಳತನ ನಡೆಸಿ ಸಿಕ್ಕಿ ಬಿದ್ದಿದ್ದರೆನ್ನಲಾಗಿದೆ. ಇದೀಗ ಇಲ್ಲಿನ ನಿವಾಸಿಗಳು ಕಾದು ಕುಳಿತು ಕಳ್ಳತನ ಮಾಡಿರುದವರನ್ನು‌ ಪೊಲೀಸರಿಗೆ ಒಪ್ಪಿಸಿದರು.ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ‌‌.

ಗುತ್ತಿಗಾರು : ಅಡಿಕೆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಊರವರು Read More »

ಅಡ್ತಲೆ : ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಆಡ್ತಲೆ ಗ್ರಾಮದ ವಿವಿಧೆಡೆ ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಹಾಗೂ ಕಿರ್ಲಾಯ ಶಾಲೆಯ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಕೇಶವ ಆಡ್ತಳೆ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ,ಪ್ರಮುಖರಾದ ಶೇಖರ ಚೋಡಿಪಣೆ, ಭಾರತಿ ಉಳುವಾರು,ಬೂತ್ ಸಮಿತಿ ಅಧ್ಯಕ್ಷರಾದ ವಿಶ್ವನಾಥ ,ಮಣಿಪ್ರಸಾದ,ACF ಪ್ರಶಾಂತ್ ಪೈ, ಸಿಬ್ಬಂದಿಗಳಾದ ದೀಪಕ್.ಶಿವಕುಮಾರ್ ಜಿ.ಪಿ. ಜಯಪ್ರಕಾಶ್ , ವಿನಾಯಕ್,ಅಭಿಲಾಶ, ಉಪಸ್ಥಿತರಿದ್ದರು.

ಅಡ್ತಲೆ : ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಗುತ್ತಿಗಾರು : ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನ ಶವ ಶೌಚಾಲಯದೊಳಗೆ ಪತ್ತೆ!

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಡ್ಡನಪಾರೆ ಎಂಬಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನೋರ್ವನ ಮೃತದೇಹ ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಫೆ.12ರಂದು ಸಂಜೆ ವರದಿಯಾಗಿದೆ.ಅಡ್ಡನಪಾರೆ ನಿವಾಸಿ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ (27 ವರ್ಷ) ಎಂಬವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.ಮಹಾಬಲ ಫೆ.4ರಂದು ರಾತ್ರಿಮದ್ಯ ಸೇವಿಸಿ ಬಂದು ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದರೆನ್ನಲಾಗಿದೆ‌.ನಾಪತ್ತೆಯಾಗಿದ್ದ ಮಹಾಬಲ ಅವರ ಮೃತದೇಹ ಅವರ ಮನೆಯ ಬಳಿಯ ವಾಸವಿಲ್ಲದ ಮನೆಯೊಂದರ ಶೌಚಾಲಯದ ಒಳಗೆ ಪತ್ತೆಯಾಗಿತ್ತು.ಸ್ಥಳೀಯ ಮನೆಯವರು ವಾಸನೆ

ಗುತ್ತಿಗಾರು : ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನ ಶವ ಶೌಚಾಲಯದೊಳಗೆ ಪತ್ತೆ! Read More »

ಮನೆಮದ್ದು

ತೆಂಗಿನ ತುರಿಯನ್ನು ಎಳನೀ-ರಿನೊಂದಿಗೆ ರುಬ್ಬಿ ಅದಕ್ಕೆ ಕಲ್ಲುಸಕ್ಕರೆ, ಏಲಕ್ಕಿ ಸೇರಿಸಿ ದಿನಕ್ಕೆ ಒಂದು ಬಾರಿ ಸೇವಿಸಿದರೆ ಎದೆನೋವು, ಹೊಟ್ಟೆ ಹುಣ್ಣು ಗುಣವಾಗುವುದು ಅಗಸೆ ಸೊಪ್ಪಿನ ಪಲ್ಯ ಮಾಡಿಕೊಂಡು ತಿಂದರೆ ಮೂಳೆಗಳ ಬೆಳವಣಿಗೆ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಕಣ್ಣುಗಳ ಆರೋಗ್ಯದಲ್ಲಿ ರಕ್ಷಣೆ ನೀಡುತ್ತದೆ. ಸಂಧಿವಾತದಿಂದ ಊದಿಕೊಂಡಿರುವ ಭಾಗಕ್ಕೆ ಉಪ್ಪಿನ ಕಾವು ಕೊಟ್ಟರೆ ನೋವು ಕಡಿಮೆಯಾಗಿ, ಊತ ಇಳಿಯುತ್ತದೆ. ಅಲೋವೆರಾ ರಸಕ್ಕೆ ಅರಿಶಿನ ಹುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.

ಮನೆಮದ್ದು Read More »

ಸುಳ್ಯ : ಸಂಭ್ರಮ ಸಡಗರದಿಂದ ನಡೆದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವರ್ಷದ ವಾರ್ಷಿಕೋತ್ಸವ “ಉತ್ಕರ್ಷ್ 2026

ಸುಳ್ಯದಲ್ಲಿರುವ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026” ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಅವರು ಭಾಗವಹಿಸಿ ಶಾಲಾ ಪೋಷಕರಿಗೆ ಉತ್ತಮವಾದ ಸಂದೇಶವನ್ನು ನೀಡಿದರು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು ಗೌರವಾನ್ವಿತ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ, ವೆಂಕಟರಮಣ ಸಹಕಾರಿ ಸಂಘ ಸುಳ್ಯದ ಸಿಇಒ ಶ್ರೀ ಕೆ.ಟಿ. ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಶ್ರೀ ಶುಭಕರ

ಸುಳ್ಯ : ಸಂಭ್ರಮ ಸಡಗರದಿಂದ ನಡೆದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವರ್ಷದ ವಾರ್ಷಿಕೋತ್ಸವ “ಉತ್ಕರ್ಷ್ 2026 Read More »

ಕಾರ್ಮಿಕ ಸಂಹಿತೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದ ಖಂಡಿಸಿ ಕಾರ್ಮಿಕ, ರೈತ ಸಂಘಟನೆಗಳಿಂದ ನಾಳೆ ಭಾರತ್‌ ಬಂದ್‌ಗೆ ಕರೆ

ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳು ಭಾರತದಾದ್ಯಂತ ಫೆ.12ರಂದು ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಭಟಿಸಿ ಈ ಬಂದ್‌ ನಡೆಯುತ್ತಿದೆ. ಹೊಸ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಪ್ರತಿಭಟನಾ ಒಕ್ಕೂಟಗಳು ಹೇಳಿದೆ. ಪ್ರಮುಖ ಬ್ಯಾಂಕಿಂಗ್ ಒಕ್ಕೂಟಗಳು ಬಂದ್‌ಗೆ ಬೆಂಬಲ ನೀಡಿದ್ದು, ಸಾರ್ವಜನಿಕ ವಲಯದ ಬ್ಯಾಂಕ್ ಸೇವೆಗಳ ಮೇಲೆ ಬಂದ್‌ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಾರ್ಮಿಕ ಸಂಹಿತೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದ ಖಂಡಿಸಿ ಕಾರ್ಮಿಕ, ರೈತ ಸಂಘಟನೆಗಳಿಂದ ನಾಳೆ ಭಾರತ್‌ ಬಂದ್‌ಗೆ ಕರೆ Read More »

error: Content is protected !!
Scroll to Top