February 2026

ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಸುಳ್ಯ ಇದರ ವತಿಯಿಂದ ಸುಳ್ಯ ಭಾಗದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯ ವ್ಯವಸ್ಥೆಗಳ ಮತ್ತು ಬೇಡಿಕೆಗಳ ಬಗ್ಗೆ ಗಮನಿಸಲಾಯಿತು.ಹಾಗೂ ಹೊಸ ಕಟ್ಟಡದ ಬೇಡಿಕೆಯನ್ನು ಮುಂದಿಟ್ಟಿರುವ ಕಾರಣ ಮಾನ್ಯ ಶಾಸಕರ ಜೊತೆ ಮತ್ತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವೆವು ಎಂಬ ಭರವಸೆ ನೀಡಲಾಯಿತು.ಈ ಸಂಧರ್ಭ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ, ಪ್ರಧಾನ ಕಾರ್ಯದರ್ಶಿ ಶಶಿಕಲಾ […]

ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ Read More »

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ, ಸವಲತ್ತುಗಳ ವಿತರಣೆ

ಗ್ರಾಮಗಳ ಅಭಿವೃದ್ಧಿ ಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿ ಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಹೇಳಿದರುಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ರವರ ವಿಶೇಷ ಮುತುವರ್ಜಿ ಯಿಂದ ಮುಖ್ಯ ಮಂತ್ರಿಯವರ ವಿಶೇಷ ಅನುದಾನ ದಲ್ಲಿ ನಿರ್ಮಿಸಿದ ಸರ್ವ ಋ ತು ಕಾಂಕ್ರೀಟ್ ರಸ್ತೆ

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ, ಸವಲತ್ತುಗಳ ವಿತರಣೆ Read More »

ಕರ್ನಾಟಕದಲ್ಲಿ ಮೂರು ಸಾವಿರದ ಆರುನೂರ ಹದಿನೇಳು ಸರಕಾರಿ ಶಾಲೆಗಳಿಗೆ ಬೀಗ

ಕರ್ನಾಟದಲ್ಲಿ 2021 ರಿಂದ 2026 ರ ವರೆಗೆ ನಾಲ್ಕು ವರ್ಷಗಳಲ್ಲಿ ಒಟ್ಟು 3,617 ಸರ್ಕಾರಿ ಶಾಲೆಗಳು ಮುಚ್ಚಿವೆ.ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯಸಭೆಯಲ್ಲಿ ಮಂಡಿಸಿದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 20-21 ರಿಂದ 24-25 ರ ಅವಧಿಯಲ್ಲಿ 947 ಮುಚ್ಚಿದ್ದವು. ಶಾಲಾ ಶಿಕ್ಷಣ ಇಲಾಖೆಯು ಅಕ್ಟೋಬರ್ 15-2025 ರ ಆದೇಶದ ಪ್ರಕಾರ 2025-26 ನೇ ಸಾಲಿನಲ್ಲಿ 2,670 ಶಾಲೆಗಳು ಮುಚ್ಚಿವೆ. ಎಲ್ಲವೂ ಸೇರಿ ಒಟ್ಟು 3.617 ಶಾಲೆಗಳಿಗೆ ಬೀಗ ಹಾಕಲಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ದಾಖಲೆಯು 47.1 ಲಕ್ಷ

ಕರ್ನಾಟಕದಲ್ಲಿ ಮೂರು ಸಾವಿರದ ಆರುನೂರ ಹದಿನೇಳು ಸರಕಾರಿ ಶಾಲೆಗಳಿಗೆ ಬೀಗ Read More »

ಪುತ್ತೂರು ಪೇಟೆಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷ !

ಪುತ್ತೂರು ಪೇಟೆಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಿಸಿದ ಘಟನೆ ನಡೆದಿದೆ. ಪುತ್ತೂರು ಬ್ಲಡ್ ಬ್ಯಾಂಕ್ ಬಳಿ ಮುಳ್ಳುಹಂದಿ ಕಾಣಿಸಿಕೊಂಡಿದ್ದು, ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿತ್ತು ಎನ್ನಲಾಗಿದೆ. ಸ್ಥಳಕ್ಕೆ ಸ್ನೇಕ್ ತೇಜಸ್‌ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಮುಳ್ಳುಹಂದಿಯ ರಕ್ಷಣೆ ಮಾಡಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ಅವರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು.

ಪುತ್ತೂರು ಪೇಟೆಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷ ! Read More »

ರಾಜ್ಯದಲ್ಲಿ ಅವಧಿಗೆ ಮುನ್ನವೇ ಬೇಸಿಗೆ ಆರಂಭ; ಹವಾಮಾನ ಇಲಾಖೆ ಮಾಹಿತಿ

ರಾಜ್ಯದಲ್ಲಿ ಚಳಿಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಯ ಅನುಭವ ಜನರಿಗೆ ಎದುರಾಗುತ್ತಿದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ ಎರಡು ದಿನಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇನ್ನಷ್ಟು ಹೆಚ್ಚಾಗಲಿದೆ. ಮುಂಜಾನೆ ಮತ್ತು ಸಂಜೆಯ ವೇಳೆ ಮಾತ್ರ ಚಳಿ ಇರಲಿದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿಯಷ್ಟು ಹೆಚ್ಚಳವಾಗುವ ಸಂಭವ ಇದೆ. ಶಾಖದ ಅಲೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಅವಧಿಗೆ ಮುನ್ನವೇ ಬೇಸಿಗೆ ಆರಂಭ; ಹವಾಮಾನ ಇಲಾಖೆ ಮಾಹಿತಿ Read More »

ಅಡ್ಕಾರು ಅಂಜನಾದ್ರಿಯಲ್ಲಿ ಅಖಂಡ ಭಜನಾ ಮಹಾ ಮಂಗಲೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾಯಿಲಕೋಟೆ ಶಿಖರದ ಪುಣ್ಯ ನೆಲದಲ್ಲಿ ರಾಮದಾಸ ಭಕ್ತಾಗ್ರೇಸರ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜನ ಪುಣ್ಯ ಕ್ಷೇತ್ರವಿದೆ. ಹಸಿರ ಹೊದಿಕೆಯ ಪ್ರಕೃತಿ ರಮಣೀಯ ಸಿರಿಯ ಸೊಬಗಿನಿಂದ ಕಂಗೊಳಿಸುವ ಈ ಬೆಟ್ಟವೂ ಇಂದು ಎಲ್ಲೆಡೆ ಅಂಜನಾದ್ರಿಯೆಂದೇ ಕರೆಯಲ್ಪಡುತ್ತಿದೆ. ಈ ಕ್ಷೇತ್ರದಲ್ಲಿ ವರುಷದ ಪ್ರತೀ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಅಪರೂಪವೆನಿಸುವಂತೆ ಪ್ರತೀ ಜಾತ್ರೆಗೆ ಶ್ರೀ ಹನುಮ ನೇಮ ಸೇವೆಯು ನಡೆಯುತ್ತಿರುವುದು

ಅಡ್ಕಾರು ಅಂಜನಾದ್ರಿಯಲ್ಲಿ ಅಖಂಡ ಭಜನಾ ಮಹಾ ಮಂಗಲೋತ್ಸವ Read More »

ಸಂಪಾಜೆ : ಫೆ.11ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಫೆ. 11ರಂದು ನಡೆಯಲಿದೆ ಎಂದು ಮಾಜಿ ಗ್ರಾ. ಪಂ. ಅಧ್ಯಕ್ಷ ಹಾಲಿ ಸದಸ್ಯ ಜಿ. ಕೆ.ಹಮೀದ್ ತಿಳಿಸಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ಸಜ್ಜನ ಸಮುದಾಯಭವನದಲ್ಲಿ ನಡೆಯಲಿದೆ. ವಿಧಾನ ಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ,

ಸಂಪಾಜೆ : ಫೆ.11ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ Read More »

ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ

ಅರಂತೋಡು, ಫೆ‌ 10 : ಆರಂತೋಡು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಅಮೃತ ಸಭಾಂಗಣದಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಪಂಚಾಯತ್ ಆಡಳಿತ ಸಮಿತಿ 5ವರ್ಷದಲ್ಲಿ ಮಾಡಿದ ಕೆಲಸ ಕಾರ್ಯಗಳ.ಸಾಧನೆಯ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯ.ಎಂ. ಸಿ. ಭಾಗವಹಿಸಿದ್ದರು.ಸಭೆ ಪ್ರಮುಖವಾಗಿ ಆರಂತೋಡು ಗ್ರಾಮದಲ್ಲಿ

ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ Read More »

ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತ ಠಾಣೆಯ ಪೋಲೀಸರು ಫೆ.10ರಂದು ದಾಳಿ ನಡೆಸಿದ ಘಟನೆ ವರದಿಯಾಗಿದೆ.ಕೆಡ್ಡಸದ ಹಿನ್ನಲೆಯಲ್ಲಿ ಚೆಂಬು ಗ್ರಾಮದಲ್ಲಿ ಕೆಲವರು ಸೇರಿಕೊಂಡು ಗದ್ದೆಯೊಂದರಲ್ಲಿ ಕೋಳಿ ಅಂಕ ಆಯೋಜಿಸಿದ್ದರು.ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಹಾಕಿದ್ದರು.ಆ ವೇಳೆಗೆ ಸ್ಥಳದಲ್ಲಿದ್ದ ಜನರು ಓಡಿ ತಪ್ಪಿಸಿಕೊಂಡರು. ಕೋಳಿ ಅಂಕ ನಡೆಸಲು ಗದ್ದೆಯಲ್ಲಿ ಇರಿಸಿದ್ದ ಕಬ್ಬಿಣದ ಬೇಲಿಯನ್ನು ಪೊಲೀಸರು ವಶಕ್ಕೆ ಪಡೆದರು. ಕೋಳಿಯಾಗಲೀ, ಜನರಾಗಲಿ ಅವರಿಗೆ ಸಿಗಲಿಲ್ಲವೆಂದು ತಿಳಿದುಬಂದಿದೆ.

ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಭೂಮಿಯ ಜೊತೆಗೆ ಸೈಟ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಭೂಮಿ ಖರೀದಿ ಮಾಡಿ ಸೈಟ್ ನೀಡಲು ವಿಶೇಷ ಅನುದಾನ ನೀಡಿದ್ದು, ಮುಖ್ಯಮಂತ್ರಿ ಅನುಮೋದನೆ ಬಳಿಕ 30 – 40 ಸೈಟ್‌ಗಳನ್ನು ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಲಾಗುವುದು ಎಂದು ಹೇಳಿದರು.

ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ! Read More »

error: Content is protected !!
Scroll to Top