February 2026

ಅರಂತೋಡು : ಫೆ.12ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 12-02-2026 ರ ಕುಂಭ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದುಸಂಪರ್ಕಿಸಿ:7022077809

ಅರಂತೋಡು : ಫೆ.12ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸುಳ್ಯ : ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಪ್ರಾರಂಭವಾಗಿ 28 ವರ್ಷ ಆಗಿರುವ ಹಿನ್ನಲೆಯಲ್ಲಿ ಫೆ. 9 ರಂದು ಸೊಸೈಟಿ ಸಭಾಂಗಣದಲ್ಲಿ ಸ್ಥಾಪನಾ ದಿನಾಚರಣೆಯ ಸಮಾರಂಭ ನಡೆಯಿತು.ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಿಲಿಯಂ ಲಸ್ರಾದೋ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವೆಂಕಟ್ರಮಣ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ.ಜಯರಾಮ್, ಮಾಜಿ

ಸುಳ್ಯ : ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ Read More »

ಅಡ್ಯಡ್ಕ : ಸಿ.ಆರ್.ಸಿ ಕಾಲೋನಿ ನಿವಾಸಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ ನಿವಾಸಿ ಸದಾಶಿವರವರು ಫೆ. ೮ರಂದು ತನ್ನ ಮಗಳ ಮನೆ ತಮಿಳುನಾಡಿನಲ್ಲಿ ಹೃದಯಾಘಾತದಿಂದ ನಿಧನರಾರು. ಅವರಿಗೆ ಸುಮಾರು ೭೦ ವರ್ಷ ಪ್ರಾಯವಾಗಿತ್ತು.ಸದಾಶಿವರು ಒಂದು ವಾರದ ಹಿಂದೆ ತನ್ನ ಮಗಳ ಮನೆ ತಮಿಳುನಾಡಿಗೆ ತೆರಳಿದ್ದರ.ಅವರ ಪಾರ್ಥಿವ ಶರೀರ ಫೆ.,9ರಂದು ರಾತ್ರಿ ಸುಮಾರು 8 ಗಂಟೆಗೆ ಅಡ್ಯಡ್ಕಕ್ಕೆ ತಲುಪಲಿದೆ. ಬಳಿಕ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ‌.ಮೃತರು ಪುತ್ರ ರಾಮಕೃಷ್ಣ, ಮಗಳು, ಮೊಮ್ಮಕ್ಕಳನ್ನು ಬಂಧುಗಳನ್ನು ಅಗಲಿದ್ದಾರೆ.

ಅಡ್ಯಡ್ಕ : ಸಿ.ಆರ್.ಸಿ ಕಾಲೋನಿ ನಿವಾಸಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು Read More »

ಸುಳ್ಯ : ಕಾಂಗ್ರೆಸ್ ನಿಂದ ಸುಳ್ಯದಲ್ಲಿ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಗೆ ಚಾಲನೆ

ಕೇಂದ್ರ ಸರಕಾರವು ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮತ್ತು ನಿಯಮಗಳನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ ೪ ದಿನಗಳ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಆಯೋಜನೆಗೊಂಡಿರುವ ಹಿನ್ನಲೆಯಲ್ಲಿ ಫೆ.9ರಂದು ಸುಳ್ಯದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಸುಳ್ಯದ ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾ‌ರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ,

ಸುಳ್ಯ : ಕಾಂಗ್ರೆಸ್ ನಿಂದ ಸುಳ್ಯದಲ್ಲಿ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಗೆ ಚಾಲನೆ Read More »

ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವಾರ್ಷೀ ಜಾತ್ರೋತ್ಸವದ ಪ್ರಯುಕ್ತ ಫೆ.7.ರಂದು ರಾತ್ರಿ ಶ್ರೀ ದೇವರ ಶ್ರೀ ಕಾಚುಕುಜುಂಬ ದೈವದ ನೇಮ ಮತ್ತು ಶ್ರೀ ಉಳ್ಳಾಕುಲು ದೈವದ ನೇಮ ಮೂಲಸ್ಥಾನ ಪಂಬೆತ್ತಾಡಿ ಗ್ರಾಮದ ಗರಡಿ ಬೈಲಿನಲ್ಲಿ ನಡೆಯಿತು.ಫೆ. 7 ರಂದು ಪೂರ್ವಾಹ್ನ ಗರಡಿ ಬೈಲು ಮೂಲನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವನೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿದೇವಳದ

ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ Read More »

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸಾರ್ವಜನಿಕ ಸಮಾಲೋಚನಾ ಸಭೆ

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ವತಿಯಿಂದ ನೊಂದ ಕೃಷಿಕರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆ ಇಂದು (ಫೆ. 8) ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಅಡ್ತಲೆ ವಠಾರದಲ್ಲಿ ನಡೆಯಿತು. ಆನೆ ದಾಳಿಯಿಂದ ನೊಂದ ಹಲವಾರು ಕೃಷಿಕರು ತಮ್ಮ ಬೆಳೆ ನಾಶವಾದ ಕುರಿತು ಹಾಗೂ ಅರಂತೋಡು-ಅಡ್ತಲೆ ರಸ್ತೆಯಲ್ಲಿ ಸಂಚರಿಸುವಾಗ ಆನೆಗಳಿಂದಾದ ಭಯದ ವಾತಾವರಣವನ್ನು ಸಭೆಯಲ್ಲಿ ತಿಳಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸಾರ್ವಜನಿಕ ಸಮಾಲೋಚನಾ ಸಭೆ Read More »

ಉಬರಡ್ಕ ಮಿತ್ತೂರು ಸೊಸೈಟಿ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಇಂದು(ಫೆ.8) ಚುನಾವಣೆ ನಡೆದು ಸಹಕಾರ ಭಾರತಿಯ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.9 ಮಂದಿ ಸಹಕಾರ ಭಾರತೀಯವ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ ಕೇವಲ 3 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ.ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳದಲ್ಲಿದ್ದರು.ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರಿ ಬಳಗದ ಮಧ್ಯೆ ನೇರ

ಉಬರಡ್ಕ ಮಿತ್ತೂರು ಸೊಸೈಟಿ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು Read More »

ಭಜನೆ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕೆಲಸ ನಡೆಯಬೇಕು : ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿ

ಭಜನೆ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಹೇಳಿದರು.ಸುಳ್ಯ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್, ಕುಕ್ಕೇಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ, ಮಂಜುನಾಥೇಶ್ವರ ಭಜನಾ ಪರಿಷತ್‌, ಭಜನೋತ್ಸವ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಭಜಕರ ಸಹಯೋಗದಲ್ಲಿ ಫೆ.8 ರಂದು ಕುಕ್ಕೆ ಶ್ರೀಸುಬ್ರಹ್ಮಣೇಶ್ವರ ದೇವಸ್ಥಾನದ ರಥಿಬೀದಿ ಸಭಾಂಗಣದಲ್ಲಿ ತಾಲೂಕು ಭಜನೋತ್ಸವ‌ನ್ನು ಉದ್ಘಾಟಿಸಿ ಅವರು ಮಾತ‌ನಾಡಿದರು.ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು

ಭಜನೆ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕೆಲಸ ನಡೆಯಬೇಕು : ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿ Read More »

ವೈಭವದಿಂದ ನಡೆದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವ

ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವ ಪ್ರಯುಕ್ತ ಬ್ರಹ್ಮ ರಥೋತ್ಸವವು ಫೆ.6 ರಂದು ರಾತ್ರಿ ವೈಭವದಿಂದ ನಡೆಯಿತು.ಫೆ. 6.ರಂದು ಪೂರ್ವಾಹ್ನ ಮಹಾ ಪೂಜೆ, ಶ್ರೀ ದೇವರ ಉತ್ಸವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ದೇವರ ಉತ್ಸವ, ರಾತ್ರಿ ಬ್ರಹ್ಮ ರಥೋತ್ಸವ, ಕಾಚುಕುಜುಂಬ ದೈವದ ನರ್ತನ ಸೇವೆ. ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂ‌ರ್, ಶಾಸಕಿ ಕು. ಭಾಗೀರಥಿ ಮುರುಳ್ಯ,

ವೈಭವದಿಂದ ನಡೆದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವ Read More »

ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಕ್ರಮಕ್ಕೆ ಒತ್ತಾಯಿಸಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆಗೆ ನಿರ್ಧಾರ

ಅಡ್ತಲೆ ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳಿಂದ ಇತ್ತೀಚಿಗೆ ವಿಪರೀತವಾಗಿ ಆಗುತ್ತಿರುವ ದಾಳಿಯ ಕುರಿತಂತೆ ಶಾಶ್ವತವಾಗಿ ಪರಿಹಾರ ಮಾಡಿಸುವಂತೆ ಇಲ್ಲಿಯವರೆಗೆ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಆಸಕ್ತಿ ತೋರಿಸದೇ ಇರುವುದನ್ನು ಮನಗಂಡು, ಇಲಾಖೆಯನ್ನು ಹಾಗೂ ಸರಕಾರವನ್ನು ಎಚ್ಚರಿಸುವ ಸಲುವಾಗಿ, ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ,ನೊಂದ ಕೃಷಿಕರ ಕೆಲವು ಬೇಡಿಕೆ ಈಡೇರಿಕೆಗಾಗಿ ಉಗ್ರ ಪ್ರತಿಭಟನೆ ಮಾಡುವ ಮೂಲಕ ಸಂವಿಧಾನ ಬದ್ದ ಹಾಗೂ ಕಾನೂನು ಬದ್ದ ಸೌಲಭ್ಯ ಪಡೆಯಲು ಉದ್ದೇಶಿಸಿದ್ದು ಅದಕ್ಕಾಗಿ ನಾಳೆ ಆದಿತ್ಯವಾರ(08/02.2026) ಸಂಜೆ 3:30

ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಕ್ರಮಕ್ಕೆ ಒತ್ತಾಯಿಸಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆಗೆ ನಿರ್ಧಾರ Read More »

error: Content is protected !!
Scroll to Top