March 6, 2026

ಸಂಪಾಜೆ : ಕಾಡಾನೆಗಳಿಂದ ಬೆಳೆ ನಾಶ

ಸಂಪಾಜೆ ಗ್ರಾಮದ ಕರುಣಾಕರ ಎಸ್.ಪಿ ಅವರ ತೋಟಕ್ಕೆ ದಾಳಿ ಮಾಡಿದ ಆನೆಗಳ ಹಿಂಡು ಅಪಾರ ಪ್ರಮಾಣದ ಕ್ರಷಿಯನ್ನು ನಾಶಪಡಿಸಿದ ಘಟನೆ ವರದಿಯಾಗಿದೆ.ಅಡಿಕೆ,ತೆಂಗು,ಬಾಳೆ ಇತರ ಬೆಳೆಗಳ‌ನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿದೆ.ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿವೆ.

ಸಂಪಾಜೆ : ಕಾಡಾನೆಗಳಿಂದ ಬೆಳೆ ನಾಶ Read More »

ನಾಳೆ ಬಳ್ಪ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿಮೂರ್ತ

ಬಲ್ಪ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ದಲ್ಲಿ ನಾಳೆ 7-3-26 ಶನಿವಾರ ಪೂರ್ವಹ್ನ 10 ರಿಂದ ಕೊಳ್ಳಿ ಮುಹೂರ್ತ ನಡೆಯಲಿದೆ ಒತ್ತೆಕೋಲ ಏಪ್ರಿಲ್ 27,28 ರಂದು ನಡೆಯಲಿದೆ ನಾಳೆ ನಡೆಯುವ ಕೊಳ್ಳಿ ಮುಹೂರ್ತಕ್ಕೆ ಭಕ್ತದಿಗಳೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.

ನಾಳೆ ಬಳ್ಪ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿಮೂರ್ತ Read More »

ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿದ ಯುವಕನ ಬಂಧನ

ಪುತ್ತೂರಿನ ರಿಲಯನ್ಸ್ ಮಾಲ್ ಬಳಿ ಕಾರು ಚಾಲಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ, ಗುಂಡು ಹಾರಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಯುವಕನೊಬ್ಬನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫೀಕ್‌ (19) ಎಂದು ಎಂದು ತಿಳಿದು ಬಂದಿದೆ.ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ನೀಡಿದ ದೂರಿನ ಪ್ರಕಾರ, ಈ ಘಟನೆಯು ಮಾರ್ಚ್ 2ರ ಮಧ್ಯಾಹ್ನ ಸಂಭವಿಸಿದೆ. ಹಕೀಂ ಅವರು ಪುತ್ತೂರಿನಿಂದ ಕೂರ್ನಡ್ಕಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಹೆಲ್ಮೆಟ್ ಧರಿಸದ ಸುಮಾರು ೩೦ ವರ್ಷದ

ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿದ ಯುವಕನ ಬಂಧನ Read More »

ಹೆಚ್ .ಪಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಆದೇಶ

ಸುಳ್ಯ : ಹೆಚ್ .ಪಿ ಗ್ಯಾಸ್ ಬಳಕೆದಾರರು ಇನ್ನು ಮುಂದೆ ತಮ್ಮ ಇಚ್ಛೆಯಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ.ಗ್ರಾಹಕರ ಬಳಿ ಇರುವ ಸಿಲಿಂಡರ್ ಗಳ ಸಂಖ್ಯೆಗೆ ಅನುಗುಣವಾಗಿ ಬುಕ್ಕಿಂಗ್ ಅವಧಿಯನ್ನು ನಿಗದಿ ಮಾಡಿದೆ.ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ವಿತರಣೆ 21 ದಿನಗಳ ನಂತರ ಮುಂದಿನ ರೀಫಿಲ್ ಬುಕ್ ಮಾಡಲು ಅವಕಾಶವಿರುತ್ತದೆ.ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ಖಾಲಿಯಾದ ನಂತರ ಮುಂದಿನ ಬುಕ್ಕಿಂಗ್ ಮಾಡಲು ಕನಿಷ್ಠ 30 ದಿನಗಳ ಅಂತರವಿರಬೇಕು* .ಜೊತೆಗೆ ಬಯೋಮೆಟ್ರಿಕ್ ಇ -ಕೆವೈಸಿ

ಹೆಚ್ .ಪಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಆದೇಶ Read More »

error: Content is protected !!
Scroll to Top