March 13, 2026

ದೊಡ್ಡೇರಿ : ಉಚಿತ ಹೊಲಿಗೆ ತರಬೇತಿ ತರಗತಿ ಸಮಾರೋಪ

ಸ್ವಾವಲಂಬಿ ಬದುಕು ವ್ಯಕ್ತಿಯನ್ನು ಬಲಿಷ್ಠನಾಗಿಸುತ್ತದೆ. ತನ್ನ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಬದುಕುವ ವ್ಯಕ್ತಿ ಸಮಾಜಕ್ಕೆ ಮಾದರಿಯಾಗುತ್ತಾನೆ. ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರು, ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯಪಟ್ಟರು. ಅವರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ .ಸುಳ್ಯ ತಾಲೂಕಿನ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ಅಮೃತ ಜ್ಞಾನವಿಕಾಸ ಕೇಂದ್ರದಲ್ಲಿ ಮೂರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ […]

ದೊಡ್ಡೇರಿ : ಉಚಿತ ಹೊಲಿಗೆ ತರಬೇತಿ ತರಗತಿ ಸಮಾರೋಪ Read More »

ಅರೆಭಾಷೆ ರಾಜ ಭಾಷೆಯಾಗಿ ಮೆರೆಯುತ್ತಿದ್ದು ,ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ : ಸುಶ್ಮಿತಾ ಆದಿತ್ಯ ಚಿದ್ಗಲು

ಐನೂರು ವರ್ಷಗಳ ಇತಿಹಾಸದ ಹಿನ್ನೆಲೆ ನಮ್ಮ ಅರೆಭಾಷೆಗಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿರುವ ಈ ಭಾಷೆ ದಕ್ಷಿಣ ಕನ್ನಡ ಕೆಲವು ಭಾಗ ಮತ್ತು ಕೊಡಗಿನ ಕೆಲವು ಪ್ರದೇಶಗಳಲ್ಲಿ ರಾಜ ಭಾಷೆಯಾಗಿ ಮೆರೆಯುತ್ತಿದೆ. ಇದನ್ನು ಉಳಿಸಿ ಬೆಳೆಸುವ ಮೂಲಕ ಅರೆಭಾಷೆ ಜನಾಂಗವನ್ನು ಬೆಳೆಸಿದಂತೆ ಎಂದೂ ಬೆಳ್ತಂಗಡಿ ಪ್ರಸನ್ನ ಕಾಲೇಜು ಉಪನ್ಯಾಸಕಿ ಸುಶ್ಮಿತಾ ಆದಿತ್ಯ ಚಿದ್ಗಲು ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಮಡಪ್ಪಾಡಿ ಗ್ರಾಮ ಗೌಡ ಸಮಿತಿ ಹಾಗೂ ಮಹಿಳಾ ಘಟಕಗಳ ಆಶ್ರಯದಲ್ಲಿ ಮಾರ್ಚ್ 08

ಅರೆಭಾಷೆ ರಾಜ ಭಾಷೆಯಾಗಿ ಮೆರೆಯುತ್ತಿದ್ದು ,ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ : ಸುಶ್ಮಿತಾ ಆದಿತ್ಯ ಚಿದ್ಗಲು Read More »

ತನ್ನ ಹುಟ್ಟೂರಿನಲ್ಲಿ ಸಂಘಟಕ ದಿನೇಶ್ ಮಡಪ್ಪಾಡಿಯವರಿಗೆ ಸನ್ಮಾನ

ಮಾರ್ಚ್ 8 ರಂದು ಕರ್ನಾಟಕ ಸರ್ಕಾರ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ. ಗ್ರಾಮ ಗೌಡ ಸಮಿತಿ ಮತ್ತು ಗ್ರಾಮ ಗೌಡ ಮಹಿಳಾ ಘಟಕ ಮಡಪ್ಪಾಡಿ ಇವರ ಆಶ್ರಯದಲ್ಲಿ ಮಡಪ್ಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೊಳ್ಳಾಡಿ ತಮ್ಮಯ್ಯ ಗೌಡ ರಂಗಮಂದಿರದಲ್ಲಿ ನಡೆದ “ಅರೆಬಾಸೆ ಗ್ರಾಮೋತ್ಸವ – 2026” ರ ಅದ್ದೂರಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಂಘಟಕ, ಮಾರ್ಗದರ್ಶಕ ನ್ಯಾಯವಾದಿ ದಿನೇಶ್ ಮಡಪ್ಪಾಡಿಯವರನ್ನು ಸನ್ಮಾನಿಸಲಾಯಿತು.ಸಕ್ರಿಯ ಸಾಮಾಜಿಕ ಕಾರ್ಯಕರ್ತನಾಗಿ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ

ತನ್ನ ಹುಟ್ಟೂರಿನಲ್ಲಿ ಸಂಘಟಕ ದಿನೇಶ್ ಮಡಪ್ಪಾಡಿಯವರಿಗೆ ಸನ್ಮಾನ Read More »

ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ತರಬೇತಿ

ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ನೀಡುವ ತರಬೇತಿಯ ಅಂಗವಾಗಿ ತಂಡವು ಸುಳ್ಯದ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಜೇನು ಸಂಸ್ಕರಣಾ ಘಟಕಕ್ಕೆ ಮಾ. 12 ರಂದು ಭೇಟಿ ನೀಡಿದರು.ನಬಾರ್ಡ್‌ನ ತರಬೇತಿ ಸಂಸ್ಥೆಯಾದ ಬಿಐಆರ್‌ಡಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ‘ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹಸಿರು ಹಣಕಾಸು’ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು,ಈ ತರಬೇತಿ ಕಾರ್ಯಕ್ರಮವು ಕೃಷಿ ಕ್ಷೇತ್ರದಲ್ಲಿ

ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ತರಬೇತಿ Read More »

ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು

ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕಾರಿನ ನಡುವೆ ಮಾ.13ರಂದು ಕಡಬ ತಾಲೂಕಿನ ಗುಂಡ್ಯ ಸಮೀಪ ಅಪಘಾತ ಸಂಭವಿಸಿ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಗುಂಡ್ಯ ಗಡಿ ದೇವಸ್ಥಾನದ ಸಮೀಪ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.ಕಾರಿನಲ್ಲಿದ್ದವರು ಬೆಳ್ತಂಗಡಿ ಕೊಕ್ಕಡ ನಿವಾಸಿಗಳು ಎಂದು ತಿಳಿದು ಬಂದಿದೆ.

ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು Read More »

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು? !!!

ರಾಜ್ಯದಲ್ಲಿ 2026ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ.ಈ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ನೀಡಬೇಕು ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ.ಈ. ಪ್ರಶ್ನೆಗೆ ವಿದ್ಯಾರ್ಥಿಗಳು ಗಮನಿಸ ಬೇಕಾದ  ಅಂಶಗಳು ಅಂದರೆ- ಸಾಮಾನ್ಯವಾಗಿ ಹತ್ತು ವರ್ಷಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕೆ ಹಾಗೂ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಅಗತ್ಯವಾದ ಪ್ರಮುಖ ಹಂತವೇ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ. ಆದ್ದರಿಂದ ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ.ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಶಾಲಾ ಶಿಕ್ಷಣದ ಅಂತಿಮ

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು? !!! Read More »

error: Content is protected !!
Scroll to Top