March 14, 2026

ಕಲ್ಲುಗುಂಡಿ : ಒತ್ತೆಕೋಲಕ್ಕೆ ಕೊಳ್ಳಿ ಮೂಹೂರ್ತ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಮಾ.14ರಂದು ಕೊಳ್ಳಿ ಮೂಹೂರ್ತ ನಡೆಯಿತು. ಒತ್ತೆಕೋಲ ಮಾ. 28 ರಿಂದ 30 ರವರೆಗೆ ನಡೆಯಲಿದೆ.ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಕ್ಕೆ ವಿಶೇಷ ಪೂಜೆಯನ್ನು ಮಾಡಿ ಬಳಿಕ ಕೆ. ಬಿ ಕೇಶವ ಆಚಾರ್ಯ ಕೀಲಾರು ಬೈಲು ಮುಹೂರ್ತದ ಕೊಳ್ಳಿಯನ್ನು ಕಡಿದರು.ಬಳಿಕ ವಾದ್ಯ ಘೋಷದೊಂದಿಗೆ ಒತ್ತೆಕೋಲ ಗದ್ದೆಗೆ ಸಾಗಿ ಬರಲಾಯಿತು. ಬಳಿಕ ಗದ್ದೆಯ ವಿಷ್ಣುಮೂರ್ತಿ ಕಟ್ಟೆಗೆ ವಿಶೇಷ ಪೂಜೆ ಪ್ರಾರ್ಥನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಒತ್ತೆಕೋಲ ಉತ್ಸವ […]

ಕಲ್ಲುಗುಂಡಿ : ಒತ್ತೆಕೋಲಕ್ಕೆ ಕೊಳ್ಳಿ ಮೂಹೂರ್ತ Read More »

ಸುಳ್ಯದಲ್ಲಿ ಯುವಕನಿಗೆ ಚೂರಿ ಇರಿತ

ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಬಾರೊಂದರ ಎದುರುಗಡೆ ನಿಂತಿದ್ದ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಮಾ.14ರಂದು ರಾತ್ರಿ ವರದಿಯಾಗಿದೆ.ಚೂರಿಯಿಂದ ಇರಿತಕೊಳಗಾದ ಯುವಕನನ್ನು ಬೀರಮಂಗಲದ ಹರೀಶ್ ಎಂದು ಗುರುತಿಸಲಾಗಿದೆ.ಆತನ ಮಿತ್ರ ನೀತು ಎಂಬವರಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ಸುಳ್ಯದಲ್ಲಿ ಯುವಕನಿಗೆ ಚೂರಿ ಇರಿತ Read More »

ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ವತಿಯಿಂದ ಬಹುಮಾನ ವಿತರಣೆ

ಸುಳ್ಯ ನಗರದ ರಥ ಬೀದಿಯ ವಿನಾಯಕ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಮಾರ್ಚ್ 02 ರಿಂದ 14 ರವರೆಗೆ  ಠೇವಣಿಗಳ ಮೇಲೆ ವಿಶೇಷ ಬಡ್ಡಿ ದರವನ್ನು ಪ್ರಕಟಿಸಿ ಠೇವಣಿ ಅಭಿಯಾನವನ್ನು ಕೈಗೊಂಡಿತ್ತು. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಗಳನ್ನು ಹಾಕಿ 100ಕ್ಕಿಂತ ಅಧಿಕ views ಬಂದವರು Screen Shot ಕಳುಹಿಸುವಂತೆ ವಿನಂತಿಸಲಾಗಿತ್ತು. ಮತ್ತು ಅದರಲ್ಲಿ ಒಬ್ಬ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ನೀಡುವುದೆಂದು ಘೋಷಿಸಲಾಗಿತ್ತು.  ಇದರಲ್ಲಿ ವಿಜೇತರಾದ

ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ವತಿಯಿಂದ ಬಹುಮಾನ ವಿತರಣೆ Read More »

ಮಾನವೀಯ ಧರ್ಮವನ್ನು ಪಾಲಿಸಿ – ಶ್ರೀ ಶ್ರೀ ಯೋಗರೇಶ್ವರಾನಂದ ಸರಸ್ವತಿ ಸ್ವಾಮೀಜಿ

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ವತಿಯಿಂದ 21 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾರ್ಚ್ 13 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು.ಸೌಹಾರ್ದ ಸಂದೇಶ ನೀಡಿ ಮಾತನಾಡಿದ ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಜಾತಿಮತ

ಮಾನವೀಯ ಧರ್ಮವನ್ನು ಪಾಲಿಸಿ – ಶ್ರೀ ಶ್ರೀ ಯೋಗರೇಶ್ವರಾನಂದ ಸರಸ್ವತಿ ಸ್ವಾಮೀಜಿ Read More »

ಸುಳ್ಯ : ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2 ನೇ ವರ್ಷದ ಗ್ರಾಜುವೇಶನ್ ಡೇ ಆಚರಣೆ

ಸುಳ್ಯದ ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2 ನೇ ವರ್ಷದ ಗ್ರಾಜುವೇಶನ್ ಡೇ ಯನ್ನು ಮಾ.14ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪಿ. ಎ. ಮೇದಪ್ಪ ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಶಾಲೆಯ ಕಾರ್ಯವನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಮೇದಪ್ಪರವರನ್ನು ಶಾಲಾ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.ಅಂಜಲಿ ಮಾಂಟೆಸ್ಸೋರಿ ಶಾಲೆಯ ಅಧ್ಯಕ್ಷರಾದ ಶುಭಕರ್ ಬಿ. ಸಿ. ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ಸಂಚಾಲಕಿ ಗೀತಾಂಜಲಿ ಟಿ. ಜಿ. ಉಪಸ್ಥಿತರಿದ್ದರು., ಪುಟ್ಟ ಪದವೀಧರ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು.ಪದವಿ ವೇಷಭೂಷಣ ಧರಿಸಿದ ಪುಟ್ಟ ಮಕ್ಕಳು ಸಂತೋಷದಿಂದ

ಸುಳ್ಯ : ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2 ನೇ ವರ್ಷದ ಗ್ರಾಜುವೇಶನ್ ಡೇ ಆಚರಣೆ Read More »

ಮಾ.15ರಿಂದ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!

ನಿರಂತರ ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನತೆ ಮಾರ್ಚ್ 15ರಿಂದ ಹವಾಮಾನದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು. ಮುಂದಿನ 2 ದಿನಗಳಲ್ಲಿ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಾರ್ಚ್ 15ರಂದು ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. 16ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.

ಮಾ.15ರಿಂದ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ! Read More »

error: Content is protected !!
Scroll to Top